ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್‌, ಬಿಜೆಪಿಗೆ ಹರಿಪ್ರಸಾದ್ ಸವಾಲು!

Published : Aug 20, 2026, 12:34 PM IST
KPCC Chief BK Hariprasad Challenges RSS BJP if you dare sing national anthem at sangh office rav

ಸಾರಾಂಶ

ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್, ವಂದೇ ಮಾತರಂ ವಿಚಾರವಾಗಿ ರಾಜಕೀಯ ಮಾಡುವ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಗೆ ತಮ್ಮ ಶಾಖೆಗಳಲ್ಲಿ ರಾಷ್ಟ್ರಗೀತೆ ಹಾಡುವಂತೆ ಸವಾಲು ಹಾಕಿದ್ದಾರೆ. ಇವರು ದೇಶದ್ರೋಹಿಗಳು ಮತ್ತು ದಲಿತ ವಿರೋಧಿಗಳು ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರು (ಆ.20): ವಂದೇ ಮಾತರಂ ಮುಂದಿಟ್ಟುಕೊಂಡು ರಾಜಕೀಯ ಮಾಡುವ ದೇಶದ್ರೋಹಿಗಳೇ ತಾಕತ್ತಿದ್ರೆ ಆರ್‌ಎಸ್‌ಎಸ್‌(RSS) ಶಾಖೆಯಲ್ಲಿ ರಾಷ್ಟ್ರಗೀತೆ ಹಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಆರೆಸ್ಸೆಸ್, ಬಿಜೆಪಿಗೆ ಸವಾಲು ಹಾಕಿದರು.

ಇಂದು ಕೆಪಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಂದೇ ಮಾತರಂ ಎರಡು ಚರಣ ಮಾತ್ರ ಹಾಡುತ್ತೇವೆ. CWC ಸರಿಯಾದ ನಿರ್ಣಯವನ್ನು ತೆಗೆದುಕೊಂಡಿದೆ. ನಾವು ಇದನ್ನ ಸ್ವಾಗತಿಸುತ್ತೇನೆ. ಬಿಜೆಪಿಯವರು ಏನೇ ಕಾನೂನು ತರಲಿ, ಇವರು ನಮ್ಮನ್ನು ಗಲ್ಲಿಗಾದರೂ ಹಾಕಲಿ, ಫಾಸಿಯಾದರೂ ಹಾಕಲಿ, ಜೈಲಿಗಾದರೂ ಹಾಕಲಿ ನಾವು ಹಾಡುವುದು ಎರಡೇ ಚರಣ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ವಂದೇ ಮಾತರಂ, ಭಾರತ್ ಮಾತಾಕೀ ಜೈ ಎಂದ ವಿದ್ಯಾರ್ಥಿಗೆ ಬೆದರಿಕೆ ಆರೋಪ, ಶಾಹೀನ್ ಶಾಲೆ ಪ್ರಾಂಶುಪಾಲ ವಿರುದ್ಧ FIR

ವಂದೇ ಮಾತರಂ ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ:

ಬಿಜೆಪಿ, ಆರೆಸ್ಸೆಸ್ ದೇಶದ್ರೋಹಿಗಳು ವಂದೇ ಮಾತರಂ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಾನು ದೇಶದ್ರೋಹಿಗಳಿಗೆ ಸವಾಲು ಹಾಕುತ್ತೇನೆ ಆರೆಸ್ಸೆಸ್ ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ. ಸಂಘದಲ್ಲಿ ರಾಷ್ಟ್ರಗೀತೆ ಹಾಡದವರು ವಂದೇ ಮಾತರಂ ಹಾಡಲು ಹೇಳಲು ಬರ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇವರೆಲ್ಲ ಕಂಗನಾ ಅಭಿಮಾನಿಗಳು

ಬಿಜೆಪಿಯವರು, ಚಡ್ಡಿ ಹಾಕುವವರು ಇವರೆಲ್ಲ ಕಂಗನಾ ರಣಾವತ್ ಅಭಿಮಾನಿಗಳು. ಇವರು ಕಂಗನಾ ಹಾಡನ್ನೇ ಬೇಕಿದ್ದರೆ ಪಾರ್ಲಿಮೆಂಟ್‌ಗೆ ತಂದು ರಾಷ್ಟ್ರಗೀತೆ ಮಾಡ್ತಾರೆ. ಈ ಬಿಜೆಪಿಯವರು ರಣಹೇಡಿಗಳು ಪಾರ್ಲಿಗೆಂಟ್‌ಗೆ ಬರುವ ಧೈರ್ಯವೂ ಇಲ್ಲದ ಹೇಡಿಗಳು. ಆದರೆ ಪ್ರತಿಪಕ್ಷಗಳು ಸದನ ನಡೆಯಲು ಬಿಡುತ್ತಿಲ್ಲ ಎಂದು ಬೊಬ್ಬೆ ಹಾಕುತ್ತಾರೆ ಎಂದು ಕಟುವಾಗಿ ವಾಗ್ವಾಳಿ ನಡೆಸಿದರು.

ಇದನ್ನೂ ಓದಿ: Vande mataram: ಗುಂಡಿಟ್ಟು ಕೊಂದ್ರೂ ಸರಿ, ವಂದೇ ಮಾತರಂ ಪೂರ್ಣ ಹಾಡಲ್ಲ: ಕೇರಳ ಸಚಿವ, ಸಂಸದ ಶಾಕಿಂಗ್ ಹೇಳಿಕೆ!

ದಲಿತ ಸಮುದಾಯ ಸಹಿಸುವುದಿಲ್ಲ

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಬಳಿಕ ಆ ಜಾಗವನ್ನು ಬಿಜೆಪಿಯವರು ಸ್ವಚ್ಛ ಮಾಡ್ತಾರೆ ಎಂದರೆ ಅಲ್ಲಿ ದಲಿತರು, ಎಸ್‌ಸಿ ಸಮುದಾಯವನ್ನ ಸಹಿಸುವುದಿಲ್ಲ ಇವರು. ವಾಲ್ಮೀಕಿ ಸಮುದಾಯವನ್ನ ಕಂಡರೂ ಬಿಜೆಪಿ ಆರೆಸ್ಸೆಸ್‌ನವರಿಗೆ ಆಗುವುದಿಲ್ಲ. ಅದಕ್ಕೆ ನಾಗೇಂದ್ರ ರಾಜೀನಾಮೆಗೆ ಪ್ರತಿಭಟನೆ ಮಾಡ್ತಾರೆ, ವಾಲ್ಮೀಕಿ ಸಮುದಾಯ ಕಂಡರೆ ಬಿಜೆಪಿಗೆ ಆಗಿಬರಲ್ಲ ಎಂದು ಕಿಡಿಕಾರಿದರು.

ವಾಲ್ಮೀಕಿ ನಿಗಮ ಹಗರಣದಲ್ಲಿ ಆರೋಪಿಯಾಗಿರುವ ಬಿ ನಾಗೇಂದ್ರ ರಾಜೀನಾಮೆ ನೀಡುವಂತೆ ಬಿಜೆಪಿ ಕಳೆದ ಮೂರು ದಿನಗಳಿಂದ ಸದನದ ಒಳಗೂ ಹೊರಗೂ ಪ್ರತಿಭಟನೆ ನಡೆಸುತ್ತಿದೆ. ಬಿ ನಾಗೇಂದ್ರನ ರಾಜೀನಾಮೆ ಪಡೆಯುವವರೆಗೂ ಬಿಜೆಪಿ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಇತ್ತ ರಾಜ್ಯ ಸರ್ಕಾರ ಬಿ ನಾಗೇಂದ್ರ ತಪ್ಪು ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Yettinahole project: ಎತ್ತಿನಹೊಳೆ ಕಾಮಗಾರಿ ಗುಣಮಟ್ಟಕ್ಕೆ ಕಾಂಗ್ರೆಸ್ಸಿಗರಿಂದಲೇ ತೀವ್ರ ಅಪಸ್ವರ!
ನಾಗೇಂದ್ರ ರಾಜೀನಾಮೆ ಪಡೆಯೋವರೆಗೆ ಹೋರಾಟ ನಿಲ್ಲಲ್ಲ: ಸತತ ಮೂರನೇ ದಿನವೂ ಬಿಜೆಪಿ ಪ್ರತಿಭಟನೆ, ಕಲಾಪದಲ್ಲೂ ಪ್ರತಿಪಕ್ಷ ಗದ್ದಲ