ಕೊನೆಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಎಂಬುದು ಖಚಿತವಾಗುತ್ತಿದ್ದಂತೆ, ಇತ್ತ ಧಾರವಾಡ ಜಿಲ್ಲೆಯಿಂದ ಯಾರಾರಯರಿಗೆ ಸಚಿವಗಿರಿ ದೊರೆಯಲಿದೆ ಎಂಬ ಲೆಕ್ಕಾಚಾರವೂ ಶುರುವಾಗಿದೆ. ಜತೆ ಜತೆಗೆ ಆಯಾ ಶಾಸಕರ ಬೆಂಬಲಿಗರು ಕೂಡ ತಮ್ಮ ನಾಯಕರಿಗೆ ಮಂತ್ರಿ ಮಾಡಿ ಎಂಬ ಬೇಡಿಕೆ ಮುಂದಿಡುತ್ತಿದ್ದಾರೆ.
ಹುಬ್ಬಳ್ಳಿ (ಮೇ.19) : ಕೊನೆಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಎಂಬುದು ಖಚಿತವಾಗುತ್ತಿದ್ದಂತೆ, ಇತ್ತ ಧಾರವಾಡ ಜಿಲ್ಲೆಯಿಂದ ಯಾರಾರಯರಿಗೆ ಸಚಿವಗಿರಿ ದೊರೆಯಲಿದೆ ಎಂಬ ಲೆಕ್ಕಾಚಾರವೂ ಶುರುವಾಗಿದೆ. ಜತೆ ಜತೆಗೆ ಆಯಾ ಶಾಸಕರ ಬೆಂಬಲಿಗರು ಕೂಡ ತಮ್ಮ ನಾಯಕರಿಗೆ ಮಂತ್ರಿ ಮಾಡಿ ಎಂಬ ಬೇಡಿಕೆ ಮುಂದಿಡುತ್ತಿದ್ದಾರೆ.
ಕಲಘಟಗಿಯಿಂದ ಮೂರನೆಯ ಬಾರಿಗೆ ಆಯ್ಕೆಯಾಗಿರುವ ಸಂತೋಷ ಲಾಡ್(Santosh lad) ಹೆಸರು ಮುಂಚೂಣಿಗೆ ಬಂದಿದೆ. ಹಿಂದೆ ಸಿದ್ದರಾಮಯ್ಯ(Siddaramaiah) ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಮರಾಠಾ ಸಮುದಾಯಕ್ಕೆ ಸೇರಿದ ಇವರನ್ನು ಮತ್ತೆ ಮಂತ್ರಿ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಇನ್ನೂ ವಿನಯ್ ಕುಲಕರ್ಣಿ ಹೆಸರು ಚಾಲ್ತಿಯಲ್ಲಿದೆ. ಆದರೆ ಕುಲಕರ್ಣಿ ಇನ್ನೂ ಆರೋಪ ಮುಕ್ತವಾಗಿಲ್ಲ. ಹೀಗಾಗಿ ಹೈಕಮಾಂಡ್ ಕೊಂಚ ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಬೆಂಬಲಿಗರು ಮಾತ್ರ ಜಿಲ್ಲೆಯಿಂದ ಹೊರಗಿದ್ದುಕೊಂಡೇ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಆದಕಾರಣ ಇವರನ್ನು ಸಚಿವರನ್ನಾಗಿ ಮಾಡಲೇಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡಿದ್ದಾರೆ. ಹೈಕಮಾಂಡ್ ಈ ವಿಷಯದಲ್ಲಿ ಇನ್ನು ಚರ್ಚೆ ನಡೆಸುತ್ತಿದೆ.
undefined
Govt formation in Karnataka: ಹೊಸ ಸರ್ಕಾರಕ್ಕೆ ನೂರೆಂಟು ಸವಾಲು!
ಇನ್ನೂ ಪ್ರಸಾದ ಅಬ್ಬಯ್ಯ ಕೂಡ ಮೂರು ಬಾರಿ ಗೆದ್ದವರು. ಪ್ರತಿಬಾರಿಯೂ ಮತಗಳಿಕೆ ಹೆಚ್ಚಿಸುತ್ತಲೇ ಹೋಗಿದ್ದಾರೆ. ಆದಕಾರಣ ಇವರನ್ನೂ ಮಂತ್ರಿ ಮಾಡಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ. ಈ ಮೂವರಲ್ಲಿ ಯಾರಿಗೆ ಸಿಗುತ್ತದೆ ಎಂಬುದನ್ನು ಕಾಯ್ದು ನೋಡಬೇಕು.
ಶೆಟ್ಟರ್:
ಇನ್ನು ಇತ್ತೀಚಿಗಷ್ಟೇ ಪಕ್ಷಕ್ಕೆ ಬಂದಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್(Jagadish shettar) ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಅವರು ಕಾಂಗ್ರೆಸ್‌ಗೆ ಬಂದಿರುವುದರಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಲ ಬಂದಿದೆ. ಲಿಂಗಾಯತರೆಲ್ಲರೂ ಒಟ್ಟಾಗಿ ಕಾಂಗ್ರೆಸ್‌ಗೆ ಬೆಂಬಲಿಸಿರುವುದರಲ್ಲಿ ಇವರ ಪಾತ್ರವೂ ಇದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಜತೆಗೆ ಲೋಕಸಭೆ ಚುನಾವಣೆ ಹತ್ತಿರವೇ ಇರುವುದರಿಂದ ಇವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಿದರೆ ಲಿಂಗಾಯತ ಮತಗಳನ್ನು ಪಡೆಯಲು ಅನುಕೂಲವಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಶಕ್ತಿ ಪಕ್ಷಕ್ಕೆ ದೊರೆಯಲಿದೆ. ಆದಕಾರಣ ಇವರನ್ನು ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡಬೇಕೆಂಬ ಇರಾದೆ ಕಾಂಗ್ರೆಸ್‌ನಲ್ಲಿದೆ. ಹೀಗಾಗಿ, ಶೆಟ್ಟರ್ ಕೂಡ ಸಚಿವರಾಗುವ ಸಾಧ್ಯತೆ ಇದೆ.
ಸಚಿವ ಸಂಪುಟ ರಚನೆಯಲ್ಲೂ ಪೈಪೋಟಿ: ಸಿದ್ದು ಬಣದ ಎಷ್ಟು ನಾಯಕರಿಗೆ ಸಿಗಲಿದೆ ಸಚಿವ ಸ್ಥಾನ ?
ಒಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಯಾರಾರಯರು ಸಚಿವರಾಗಲಿದ್ದಾರೆ ಎಂಬುದಕ್ಕೆ ಸಂಪುಟ ರಚನೆಯವರೆಗೂ ಕಾಯ್ದು ನೋಡಬೇಕಿದೆ ಅಷ್ಟೇ!