ಲೋಕಸಭೆಯಲ್ಲಿ ನಡೆದಿರುವ ಘಟನೆ ಭದ್ರತಾ ವೈಫಲ್ಯದಿಂದ ಆಗಿದೆ ಎಂದು ಒಪ್ಪಿಕೊಳ್ಳುತ್ತೇವೆ. ಇದು ಪ್ರಧಾನಿ ಮೋದಿಯವರ ಜನಪ್ರಿಯತೆ ಸಹಿಸಲಾರದೆ ನಡೆಸಿರುವ ಕೃತ್ಯವಾಗಿದೆ, ಉತ್ತರ ಭಾರತದ ಇತ್ತೀಚಿನ ವಿಧಾನಸಭೆ ಚುನಾವಣೆಗಳ ಫಲಿತಾಂಶ ಸಹಿಸಲು ಸಾಧ್ಯವಾಗದೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಪಿತೂರಿಯ ಭಾಗವಾಗಿದೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.
ಶ್ರೀನಿವಾಸಪುರ (ಡಿ.16): ಲೋಕಸಭೆಯಲ್ಲಿ ನಡೆದಿರುವ ಘಟನೆ ಭದ್ರತಾ ವೈಫಲ್ಯದಿಂದ ಆಗಿದೆ ಎಂದು ಒಪ್ಪಿಕೊಳ್ಳುತ್ತೇವೆ. ಇದು ಪ್ರಧಾನಿ ಮೋದಿಯವರ ಜನಪ್ರಿಯತೆ ಸಹಿಸಲಾರದೆ ನಡೆಸಿರುವ ಕೃತ್ಯವಾಗಿದೆ, ಉತ್ತರ ಭಾರತದ ಇತ್ತೀಚಿನ ವಿಧಾನಸಭೆ ಚುನಾವಣೆಗಳ ಫಲಿತಾಂಶ ಸಹಿಸಲು ಸಾಧ್ಯವಾಗದೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಪಿತೂರಿಯ ಭಾಗವಾಗಿದೆ ಎಂದು ಸಂಸದ ಮುನಿಸ್ವಾಮಿ ಹೇಳಿದರು. ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಲೋಕಸಭೆಯಲ್ಲಿ ನಡೆದ ಕೃತ್ಯಕ್ಕೆ ತನಿಖೆ ನಡೆಯುತ್ತಿದ್ದು, ಪ್ರತಾಪಸಿಂಹ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರನ್ನೂ ತನಿಖೆಗೆ ಒಳಪಡಿಸಲಾಗುತ್ತದೆ. ತಪ್ಪೆಸಗಿದ್ದರೆ ಪ್ರತಾಪ್ ಸಿಂಹ ಅವರಿಗೂ ಶಿಕ್ಷೆ ಆಗುತ್ತದೆ ಎನ್ನುವ ಮಾಹಿತಿ ಬಿಚ್ಚಿಟ್ಟರು. ಸಂಸತ್ತಿನ ಮೇಲೆ ಈ ಹಿಂದೆ ದಾಳಿ ನಡೆದ ದಿನದಂದೆ ಲೋಕಸಭೆಯೊಳಗೆ ಆಗುಂತಕರು ನುಗ್ಗಿರುವುದರ ಹಿಂದೆ ಉಗ್ರಗಾಮಿಗಳ, ನಕ್ಸಲ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಘಟನೆ ನಡೆದಾಗ ನಾನೂ ಪ್ರತ್ಯಕ್ಷದರ್ಶಿಯಾಗಿದ್ದೆ, ಒಳಗೆ ನುಗ್ಗಿದವರನ್ನು ಹಿಡಿಯಲು ಸಂಸದ ನಳಿನ್ ಕುಮಾರ್ ಕಟೀಲ್, ಆಂಧ್ರದ ಸಂಸದ ಗೋರಂಟ್ಲ ಮಾಧವ್ ಹಾಗೂ ನಾನು ಸೇರಿ ಹಿಡಿದು ಬದ್ರತಾ ಸಿಬ್ಬಂದಿಗೆ ಒಪ್ಪಿಸಿದೆವು.
undefined
ಹಿಂದು-ಮುಸ್ಲಿಂ ಗಲಾಟೆ ಮಾಡಿಸುವುದೇ ಬಿಜೆಪಿಯವರ ಕೆಲಸ: ಸಚಿವ ಜಮೀರ್
ಲೋಕಸಭೆ ಭದ್ರತೆಯಲ್ಲಿ ಇನ್ನಷ್ಟು ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಯ ಅಗತ್ಯವಿದೆ ಎಂದರು. ಈ ಘಟನೆ ನಡೆದಾಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದಿದ್ದರೆ ಆರೋಪಿಗಳನ್ನು ಬಂಧಿಸಲು ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದರು. ಈಚೆಗೆ ವಿಧಾನಸಭೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕುಳಿತು ಕಲಾಪ ವಿಕ್ಷೀಸಲಿಲ್ಲವೇ? ಆಗ ರಾಜ್ಯ ಸರ್ಕಾರ ಏನು ಮಾಡಿತು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಪ್ರಧಾನಿನಾ?: ಪ್ರತಾಪಸಿಂಹ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಎನ್ನಲು ಸಿದ್ದರಾಮಯ್ಯ ಏನು ಪ್ರಧಾನಿಮಂತ್ರಿನಾ? ಅಥವಾ ಗೃಹ ಸಚಿವರಾ? ಚೀನಾ, ಪಾಕಿಸ್ತಾನಕ್ಕೆ ದೇಶದ ಜಾಗ ಬಿಟ್ಟುಕೊಟ್ಟವರು ಕಾಂಗ್ರೆಸ್‌ನವರು, ಒಂದು ಧರ್ಮದವರನ್ನು ಮೆಚ್ಚಿಸಲು ದೇಶವನ್ನೇ ಭಾಗ ಮಾಡುತ್ತಿದ್ದಾರೆ ಎಂದು ತೀವ್ರವಾಗಿ ಟೀಕಿಸಿದರು.
ಸಂಸದ ಪ್ರತಾಪಸಿಂಹ ವಿರುದ್ದ ಹುನಾರ: ಮೈಸೂರು ಸಂಸದ ಪ್ರತಾಪಸಿಂಹ ಅವರನ್ನು ಸೋಲಿಸಲು ಹುನ್ನಾರಗಳು ನಡೆಯುತ್ತಿದ್ದು, ಪ್ರತಾಪಸಿಂಹ ಅಪ್ಪಟ ದೇಶಪ್ರೇಮಿ. ಅವರ ದೇಶ ಪ್ರೇಮ ಪ್ರಶ್ನಾತೀತ ಎಂದರು. ಇನ್ಮೂಂದೆ ಯಾರೇ ಪಾಸ್ ಕೇಳಿದರೂ ಹಿಂದೆ ಮುಂದೆ ಆಲೋಚಿಸಬೇಕಾಗುತ್ತದೆ, ಸಂಪೂರ್ಣ ಮಾಹಿತಿ ಪಡೆದುಕೊಂಡು ಕೊಡುತ್ತೇವೆ.
ಸಮಸ್ಯೆ ಕೇಳದೆ ಅಧಿವೇಶನದಲ್ಲಿ ರಾಜಕಾರಣ ಮಾಡಿದ ಬಿಜೆಪಿ: ಸಚಿವ ತಿಮ್ಮಾಪುರ ಕಿಡಿ
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವುದಕ್ಕೆ ತಮ್ಮ ವಿರೋಧ ಇರುವುದಾಗೆ ಹೇಳಿದ ಅವರು, ಆತನೊಬ್ಬ ಕ್ರೂರಿ, ಖಳನಾಯಕ, ಮತಾಂತರ ಮಾಡಲು ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಕೊಲೆಗಾರ. ಅಂಥ ಕ್ರೂರಿಯ ಹೆಸರು ಇಟ್ಟರೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು. ಐದು ಸುಳ್ಳು ಗ್ಯಾರಂಟಿಗಳನ್ನು ನೀಡಿ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಎದುರು ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.