
ಕೋಲಾರ, [ಅ.23]: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿಜೆಪಿ ಮುಖಂಡರು ಹಣದ ಆಮಿಷವೊಡ್ಡಿ 5 ಕೋಟಿ ರೂ. ಅಡ್ವಾನ್ಸ್ ನೀಡಿದ್ದರು ಎಂದು ಹೇಳಿದ್ದ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಮತ್ತೆ ಸುದ್ದಿಯಲ್ಲಿದ್ದಾರೆ.
ಸಚಿವ ಎಚ್. ನಾಗೇಶ್ ಸಮ್ಮುಖದಲ್ಲಿಯೇ ಶ್ರೀನಿವಾಸಗೌಡ ಅವರು ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ. ಇಂದು [ಬುಧವಾರ] ಕೋಲಾರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜಕೀಯ ನಿಂತ ನೀರಲ್ಲ. ಯಾರು ಅಡ್ಡ ಹಾಕೋಕೆ ಆಗಲ್ಲ. ಲೋಕಸಭೆ ಚುನಾವಣೆಯಲ್ಲೂ ನಾನು ಬಿಜೆಪಿಗೆ ಬೆಂಬಲ ಸೂಚಿಸಿದ್ದೇನೆ. ಓಪನ್ ಆಗಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದೇನೆ ಎಂದು ಅಚ್ಚರಿ ಹೇಳಿಕೆ ನೀಡಿದರು.
ಜೆಡಿಎಸ್‌ಗೆ ಶಾಕ್?: ಬಾಡೂಟಕ್ಕೆಂದು ರೆಸಾರ್ಟ್ ಬಿಟ್ಟ ಶಾಸಕ ದೆಹಲಿ ವಿಮಾನ ಹತ್ತಿದ್ರು!
4 ಬಾರಿ, ನಾಲ್ಕು ಪಕ್ಷಗಳಿಂದ ಗೆದ್ದಿದ್ದೇನೆ. ಮುಂದೆ ಏನಾಗುತ್ತೋ ಗೊತ್ತಿಲ್ಲ. ರಾಜಕಾರಣ ಹರಿಯುವ ನೀರಿದ್ದಂಗೆ. ಯಾರೂ ಅಡ್ಡಿ ಪಡಿಸಲು ಸಾಧ್ಯವಿಲ್ಲ. ಅದು ಹರಿಯುತ್ತಲೇ ಇರುತ್ತೆ ಎಂದು ಹೇಳುವ ಮೂಲಕ ಜೆಡಿಎಸ್ ತೊರೆಯುವ ಸುಳಿವು ನೀಡಿದರು.
ಈ ಹಿಂದೆಯೂ ಬಿಜೆಪಿಗೆ ಸೇರುತ್ತಾರೆ ಎನ್ನುವ ಮಾತುಗಳು ರಾಜ್ಯ ರಾಜಕಾರಣದಲ್ಲಿ ಕೇಳಿಬಂದಿದ್ದವು. ಇದೀಗ ಶ್ರೀನಿವಾಸಗೌಡ ಅವರು ಈ ಮಾತುಗಳನ್ನು ಗಮನಿಸಿದರೆ ಜೆಡಿಎಸ್ ತೊರೆಯುವ ಮನಸ್ಸು ಮಾಡಿದಂತಿದೆ.
ಉಲ್ಟಾ ಹೊಡೆದ ಆಪರೇಷನ್ ಕಮಲವಿಲ್ಲವೆಂದ ಜೆಡಿಎಸ್ ಶಾಸಕ
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಶ್ರೀನಿವಾಸಗೌಡ ಅವರಿಗೆ ಬಿಜೆಪಿ ಆಪರೇಷನ್ ಕಮಲದ ಮೂಲಕ ಆಫರ್ ನೀಡಲಾಗಿತ್ತು. ಇದನ್ನು ಸ್ವತಃ ಶ್ರೀನಿವಾಸಗೌಡ ಅವರೇ ಬಹಿರಂಗಪಡಿಸಿದ್ದರು.
ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿಜೆಪಿ ಮುಖಂಡರು ಹಣದ ಆಮಿಷವೊಡ್ಡಿ 5 ಕೋಟಿ ರೂ. ಅಡ್ವಾನ್ಸ್ ನೀಡಿದ್ದರನ್ನು ಎನ್ನುವ ಗಂಭೀರ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.