
ರಾಜ್ಯದಲ್ಲಿ ಪವರ್ ಶೇರಿಂಗ್ ಪಾಲಿಟಿಕ್ಸ್ ಕಿಚ್ಚು ಜೋರಾಗಿದೆ. ತೆರೆಮರೆಯಲ್ಲಿ ಸಿಎಂ ಕುರ್ಚಿ ಕದನ ತಾರಕಕ್ಕೇರಿದೆ. ಇದರ ಬೆನ್ನಲ್ಲೇ ಡಿಕೆಶಿ ಸಿಎಂ ಆಗ್ತಾರೆ, ಅದು ಇದೇ ಅವಧಿಯಲ್ಲಿ ಸಿಎಂ ಆಗ್ತಾರೆ ಎಂದು ಭೈರವಿ ಅಮ್ಮ ಭವಿಷ್ಯ ನುಡಿದಿದ್ದಾರೆ. ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇದೀಗ ಕೋಡಿಹಳ್ಳಿ ಶ್ರೀಗಳು ಹೇಳಿದ ಭವಿಷ್ಯ ಶಾಕ್ ಕೊಟ್ಟಿದೆ.
ನಿಜವಾಯ್ತು ಕೋಡಿಶ್ರೀಗಳು ನುಡಿದಿದ್ದ 'ಮಾಜಿ ಪ್ರಧಾನಿ ಸಾವು' ಭವಿಷ್ಯ!
ಸಿದ್ದು-ಡಿಕೆಶಿ ಬಗ್ಗೆ ಕೋಡಿಹಳ್ಳಿ ಶ್ರೀ ಸ್ಫೋಟಕ ಭವಿಷ್ಯ:
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 20 ತಿಂಗಳು ಕಳೆದಿವೆ. ಅಧಿಕಾರಕ್ಕೆ ಬಂದಾಗಿನಿಂದಲೂ ಸಿದ್ದು-ಡಿಕೆಶಿ ಬಣಗಳ ವಾಗ್ಯುದ್ಧ ನಡೀತಾನೇ ಇದೆ. ಇತ್ತೀಚಿನ ದಿನಗಳಲ್ಲಿ ಸಿಎಂ ಬದಲಾವಣೆ ಕೂಗು ಜೋರಾಗಿ ಕೇಳಿ ಬರ್ತಿದೆ. ಡಿಕೆಶಿ ಸಿಎಂ ಆಗಲೇಬೇಕೆಂದು ನಾನಾ ತಂತ್ರ ಹೆಣೆಯುತ್ತಿದ್ದಾರೆ. ಅದರಲ್ಲೂ ಡಿಕೆಶಿ ಒಂದೊಂದು ನಡೆ-ನುಡಿಯೂ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಮೊನ್ನೆ ಮಹಾಶಿವರಾತ್ರಿ ದಿನ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ, ಅಮಿತ್ ಶಾ ಜೊತೆ ಡಿಕೆಶಿ ವೇದಿಕೆ ಹಂಚಿಕೊಂಡಿದ್ರು. ಈ ಬಗ್ಗೆ ಕಾಂಗ್ರೆಸ್ ಮನೆಯಲ್ಲೂ ಸಂಚಲನವನ್ನೇ ಹುಟ್ಟು ಹಾಕಿತ್ತು. ಇದೀಗ ಸಿಎಂ ಬದಲಾವಣೆ ಬಗ್ಗೆ ಕೋಡಿಹಳ್ಳಿ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಹಾಲುಮತದವರಿಂದ ಅಧಿಕಾರ ಬಿಡಿಸಿಕೊಳ್ಳಲಾಗುವುದಿಲ್ಲ:
ಪವರ್ ಶೇರಿಂಗ್ ಬಗ್ಗೆ ಯಾದಗಿರಿಯಲ್ಲಿ ಮಾತನಾಡಿರೋ ಕೋಡಿಹಳ್ಳಿ ಸ್ವಾಮೀಜಿಗಳು, ಹಾಲಮತ ಸಮಾಜದವರ ಕೈಯಲ್ಲಿ ರಾಜ್ಯದ ಅಧಿಕಾರವಿದೆ. ಬಿಡಿಸಿಕೊಳ್ಳೋದು ಅಷ್ಟು ಸುಲಭವಲ್ಲ, ಅವರಾಗೇ ಬಿಡಬೇಕು. ನೀವು ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಎಲ್ಲಾ ಸಮುದಾಯದ ಎಲ್ಲಾ ಜಾತಿ ಎಲ್ಲಾ ವರ್ಗದವರು ಈ ಭೂಮಿ ಮೇಲೆ ವಾಸವಿದ್ದಾರೆ. ಪ್ರಾಚೀನ ಕಾಲದಿಂದಲೂ ಹಾಲುಮತ ಸಮಾಜವಿದೆ. ಹಾಲುಮತ ಸಮಾಜ ಅಡವಿಯಲ್ಲಿದ್ದು ಕುರಿಗಳನ್ನ ಸಾಕೋದು ಮಾಡ್ತಾರೆ. ಕುರಿಯ ಇಕ್ಕಿಯಲ್ಲಿ ಲಿಂಗವನ್ನ ಕಂಡವರು. ಪ್ರಕೃತಿ ಮೇಲೆ ಗಾಳಿಯ ಮೇಲೆ ಭೂಮಿಯ ಮೇಲೆ ಅವರು ಅಡವಿಯಲ್ಲಿ ಇದ್ದು ಕಂಡದ್ದು ನೋಡಿದ್ದ ಅನುಭವಸಿದ್ದನ್ನ ಹೇಳ್ತಾ ಬಂದಿದ್ದಾರೆ, ಅದು ಕುರುವಿನ ರಟ್ಟು. ಹಾಲು ಕೆಟ್ಟರು ಹಾಲುಮತ ಸಮಾಜ ಕೆಡುವುದಿಲ್ಲ ಅಂತ ಹೇಳ್ತಾರೆ. ಮುಂದೆ ಏನಾಗುತ್ತೆ ಎಂದು ಯುಗಾದಿ ಮೇಲೆ ಹೇಳುತ್ತೇನೆ ಎಂದಿದ್ದಾರೆ. ಈ ಮೂಲಕ ಕೋಡಿಹಳ್ಳಿ ಶ್ರೀ ಪರೋಕ್ಷವಾಗಿ ಸದ್ಯ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.
'ಮಾಡಿದ ಪಾಪ ಅನುಭವಿಸಲೇಬೇಕು' ಸಿಎಂ ಸಿದ್ದರಾಮಯ್ಯ, ದರ್ಶನ್ ಬಗ್ಗೆ ಮಾರ್ಮಿಕ ಭವಿಷ್ಯ ನುಡಿದ ಕೊಡಿಶ್ರೀ
ಕರ್ನಾಟಕಕ್ಕೆ ಯಾವುದೇ ತೊಂದರೆ ತಾಪತ್ರಯಗಳಿಲ್ಲ:
ನಮ್ಮ ಪ್ರಕಾರ ಬರುವಂತ ದಿನಗಳಲ್ಲಿ ಕರ್ನಾಟಕಕ್ಕೆ ತೊಂದರೆ ತಾಪತ್ರೆಗಳಿಲ್ಲ. ಮಳೆ-ಬೆಳೆ ಚೆನ್ನಾಗಿಯಿದೆ ಸುಭಿಕ್ಷಿತೆ ಇರುತ್ತೆ ಯಾವುದೇ ತೊಂದರೆಗಳು ಕಾಣುತ್ತಿಲ್ಲ. ಯುಗಾದಿಯ ಬಳಿಕ ಮತ್ತೆ ಜಾಗತಿಕ ಬಗ್ಗೆ ಬಹಳ ಅಜಾಗರೂಕತೆಯಿದೆ. ಹೋದ ವರ್ಷಕ್ಕಿಂತ ಈ ವರ್ಷ ಭೀಕರಕತೆ ಕಾಡುವ ಲಕ್ಷಣಗಳಿವೆ. ಇಲ್ಲಿವರೆಗೆ ಬರಿ ಜಲ ಸುನಾಮಿ ಆಗುತ್ತಿತ್ತು. ಈ ಬಾರಿ ಭುಸುನಾಮಿ ಕೂಡ ಆಗುತ್ತೆ ಎಂದು ಕೋಡಿಹಳ್ಳಿ ಶ್ರೀ ಸ್ಫೋಟಕ ಭವಿಷ್ಯ ನುಡಿದಿದ್ದು, ಜೊತೆಗೆ ಭಾಹ್ಯಕಾಶದಲ್ಲೂ ಸುನಾಮಿ ಆಗುತ್ತೆ ಎಂದ್ರು.
ಅಧಿಕಾರ ಹಂಚಿಕೆ ಗುಟ್ಟು ಏನಿದೆಯೋ ಅಂತ ಯಾರಿಗೂ ಗೊತ್ತಿಲ್ಲ. ಎರಡೂ ಬಣದ ಮಧ್ಯೆ ಕುರ್ಚಿ ಕದನ.. ಮಾತಿನ ವಾಗ್ಬಾಣ ನಡೆಯುತ್ತಲೇ ಇದೆ. ಇದ್ರ ಮಧ್ಯೆ ಕೋಡಿಹಳ್ಳಿ ಶ್ರೀಗಳು ನುಡಿದ ಭವಿಷ್ಯ ತೀವ್ರ ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.