
ಬೆಂಗಳೂರು (ಸೆ.2): ಸಿದ್ದರಾಮಯ್ಯ ಅವರ ಬಳಿ ನಾಲ್ಕ್ ಜೊತೆ ಬಟ್ಟೆನೂ ಇಲ್ಲ. ಇಂಥವರ ಮೇಲೆ ಹಗರಣದ ಆರೋಪ ಮಾಡೋದು ಎಷ್ಟು ಸರಿ ಎಂದು ಕಾಂಗ್ರೆಸ್ ನಾಯಕ ಯೂಸುಫ್ ಶರೀಫ್ ಅಲಿಯಾಸ್ ಕೆಜೆಎಫ್ ಬಾಬು ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಅವರ ಮೇಲೆ ಬಂದಿರುವ ಮುಡಾ ಅಕ್ರಮದಲ್ಲಿ ದೂರುದಾರನಾಗಿರುವ ಟಿಜೆ ಅಬ್ರಾಹಂ ವಿರುದ್ಧ ಕಿಡಿಕಾರಿರುವ ಕೆಜಿಎಫ್ ಬಾಬು, 'ಟಿಜೆ ಅಬ್ರಾಹಂ ಒಬ್ಬ ಬ್ಲಾಕ್ ಮೇಲರ್ , ರೌಡಿ, ಅಫಿಷಿಯಲ್ ಗುಂಡಾ ಎಂದು ಹೇಳಿದ್ದಾರೆ. ಈತನ ಹೆಸರು ಕೇಳಿದರೆ ಡಿಸಿಗಳು ಕೂಡ ಭಯ ಬೀಳ್ತಾರೆ. ಅಧಿಕಾರಿಗಳಿಗೆ ಭಯ ಬೀಳಿಸೋದು, ಧಮ್ಕಿ ಹಾಕೋದಕ್ಕೆ ಟಿಜೆ ಅಬ್ರಾಹಂ ಫೇಮಸ್. ನನಗೆ ಎಲೆಕ್ಷನ್ ಟೈಮ್ ನಲ್ಲಿ ಖಾಸಗಿ ಭೂಮಿ ವಿಚಾರವಾಗಿ ಧಮ್ಕಿ ಹಾಕಿದ್ದರು. ಶ್ರೀನಿವಾಸ್ ಪುರ ಕೋಗಿಲು ಕ್ರಾಸ್‌ನಲ್ಲಿಯೇ ಧಮ್ಕಿ ಹಾಕಿದ್ದ ಎಂದು ಹೇಳಿದ್ದಾರೆ.
2008 ರಲ್ಲಿ ನಾನು ಬಿಡ್‌ನಲ್ಲಿ ಆಸ್ತಿ ತೆಗೆದುಕೊಂಡಿದ್ದೆ. 2012 ರಲ್ಲಿ ಇದು ನನ್ನ ವಶಕ್ಕೆ ಬಂದಿತ್ತು. ಒಟ್ಟು 7.5 ಎಕರೆ ಆಸ್ತಿ ವಿಚಾರವಾಗಿ ನನಗೆ ಬ್ಲಾಕ್‌ಮೇಲ್ ಮಾಡಿದ್ದರು. ಐದು ಕೋಟಿ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದರು. ಕೊಡದೇ ಇದ್ದಲ್ಲಿ ಈ ವಿಚಾರವಾಗಿ ಮೀಡಿಯಾ ಮುಂದೆ ಹೋಗ್ತಿನಿ ಎಂದಿದ್ದರು. ಅದಲ್ಲದೆ, ನಿಮ್ಮದು ಒಂದು ನೇಕೆಡ್ ವಿಡಿಯೋ ಇದೆ ಅದನ್ನು ರಿಲೀಸ್ ಮಾಡ್ತೀನಿ ಅಂತ ಬ್ಲಾಕ್ ಮೇಲ್ ಮಾಡಿದ್ದರು. ಯಾವುದಪ್ಪ ನನ್ನ ನೇಕೆಡ್ ಫೋಟೋ ಅಂತ ನನಗೆ ಭಯ ಆಗಿತ್ತು ಎಂದು ಕೆಜಿಎಫ್ ಬಾಬು ಹೇಳಿದ್ದಾರೆ.
ನಾನು ಚುನಾವಣೆಯ ಬ್ಯುಸಿಯಲ್ಲಿದ್ದೇನೆ. ನೀವು ಯಾರು ಅಂತ ಗೊತ್ತಿಲ್ಲ ನನಗೆ ತೊಂದರೆ ಕೊಡ ಬೇಡಿ ಅಂತ ಮನವಿ ಮಾಡಿದೆ. ಆದರೆ. ಅವರು ಅದನ್ನು ಕೇಳೋದಕ್ಕೆ ರೆಡಿ ಇರಲಿಲ್ಲ. ಐದು ಕೋಟಿ ಕೊಡಲಿಲ್ಲವಾದಲ್ಲಿ ನಿಮ್ಮ ಮರ್ಯಾದೆ ಕಳೆಯುತ್ತೇನೆ ಅಂತ ಬೆದರಿಕೆ ಹಾಕಿದ್ದರು. ಮೀಡಿಯಾಗಳ ಮುಂದೆ ಹೋಗಿ ನನಗೆ ಮರ್ಯಾದೆ ಕಳೆಯೋ ಕೆಲಸ ಮಾಡಿದ್ದರು. ಈ ತರಹದ ವ್ಯಕ್ತಿ ಸಿದ್ದರಾಮಯ್ಯ ಅಂತ ಉತ್ತಮ ರಾಜಕಾರಣಿ ಬಗ್ಗೆ ಮಾತನಾಡುತ್ತಾನೆ. ಸಿದ್ದರಾಮಯ್ಯ ಅವರ ಹತ್ರ ನಾಲ್ಕು ಜೊತೆ ಹೆಚ್ಚಗಿನ ಬಟ್ಟೆ ಇಲ್ಲ ಅಂತಹ ಮುಖ್ಯಮಂತ್ರಿ ವಿರುದ್ದ ಬ್ಲಾಕ್ ಮೇಲ್ ಗೆ ಇಳಿದಿದ್ದಾನೆ. ಪಬ್ಲಿಕ್ ಗೆ ಏನ್ ಒಳ್ಳೆಯದು ಮಾಡಿದ್ದಾನೆ ಈ ಮನುಷ್ಯ. ಅವನು ದುಬೈ ನಲ್ಲಿ ಆಸ್ತಿ ಮಾಡ್ತಾ ಇದ್ದಾನೆ. ಟಿಜೆ ಅಬ್ರಾಹಂ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇಮೆ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಟ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ತಪ್ಪು ಮಾಡಿಲ್ಲ ಅಂದ್ರೆ ಸಿದ್ದರಾಮಯ್ಯಗೆ ಭಯ ಏಕೆ?: ಸಿಎಂ ವಿರುದ್ಧ ಹರಿಹಾಯ್ದ ಸಚಿವ ಪ್ರಹ್ಲಾದ್ ಜೋಶಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.