ದೇಶದ ಸಂವಿಧಾನ ಉಳಿಸಲು ಬಿಜೆಪಿಯನ್ನು ಅಧಿಕಾರದಿಂದ ಓಡಿಸಿ: Sitaram Yechury

By BK AshwinFirst Published Sep 18, 2022, 7:49 PM IST
Highlights

ಹೈದರಾಬಾದ್ ವಿಮೋಚನೆಯಲ್ಲಿ ಕೇಸರಿ ಪಕ್ಷದ ಪಾತ್ರವಿಲ್ಲ ಮತ್ತು ಬಿಜೆಪಿ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದೆ ಎಂದು ಸೀತಾರಾಮ್‌ ಯೆಚೂರಿ ಹೈದರಾಬಾದ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. 

ಸಂವಿಧಾನ (Constitution) ಮತ್ತು ಜನರಿಗೆ ಖಾತರಿಪಡಿಸುವ ಹಕ್ಕುಗಳನ್ನು ರಕ್ಷಿಸಲು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಭಾನುವಾರ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್ ವಿಮೋಚನೆಯಲ್ಲಿ (Hyderabad Liberation) ಕೇಸರಿ ಪಕ್ಷದ ಪಾತ್ರವಿಲ್ಲ ಮತ್ತು ಬಿಜೆಪಿ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಅಲ್ಲದೆ,  "ನೀವು ಭಾರತವನ್ನು ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಉಳಿಸಲು ಬಯಸಿದರೆ, ನೀವು ಭಾರತೀಯ ಸಂವಿಧಾನವನ್ನು ರಕ್ಷಿಸಲು ಬಯಸಿದರೆ ಮತ್ತು ಜನರಿಗೆ ಖಾತರಿಪಡಿಸಿದ ಹಕ್ಕುಗಳನ್ನು ಒದಗಿಸಿದರೆ, ಹಾಗೂ ಅಧಿಕೃತ ಸಂಸ್ಥೆಗಳು ಆಡಳಿತಾರೂಢ ರಾಜಕೀಯ ಪಕ್ಷದ ಪಾಲುದಾರರಾಗಿ ದುರುಪಯೋಗವಾಗದಂತೆ ನಾನು ಖಚಿತಪಡಿಸಿಕೊಳ್ಳಲು ಬಯಸಿದರೆ, ನೀವು ರಾಜಕೀಯ ಅಧಿಕಾರ ಮತ್ತು ಸರ್ಕಾರದ ನಿಯಂತ್ರಣದಿಂದ ಬಿಜೆಪಿಯನ್ನು ದೂರವಿಡಬೇಕು’’ ಎಂದು ಸೀತಾರಾಮ್‌ ಯೆಚೂರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇನ್ನು, ಸೆಪ್ಟೆಂಬರ್ 25 ರಂದು ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ರ‍್ಯಾಲಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿವಿಧ ನಾಯಕರೊಂದಿಗೆ ಸಭೆಗಳನ್ನು ನಡೆಸುತ್ತಿರುವುದು ಹಾಗೂ ಸಾಮಾನ್ಯ ಕಾರ್ಯಸೂಚಿಗಾಗಿ ಜಾತ್ಯತೀತ ಪಕ್ಷಗಳನ್ನು (Secular Parties) ಒಟ್ಟಿಗೆ ತರುವುದು ಕೆಲವು ಉಪಕ್ರಮಗಳಾಗಿವೆ ಎಂದೂ ಹೈದರಾಬಾದ್‌ನಲ್ಲಿ ಸೀತಾರಾಮ್‌ ಯೆಚೂರಿ ಹೇಳಿದರು.

ಇದನ್ನು ಓದಿ: Hyderabad Liberation Day: ಕೇಂದ್ರ ಸರ್ಕಾರದಿಂದ ಅಧಿಕೃತ ಆಚರಣೆ; ಸಿಎಂ ಬೊಮ್ಮಾಯಿಗೂ ಆಹ್ವಾನ

ವಾಸ್ತವಾಂಶಗಳನ್ನು ತಿರುಚುವ ಮೂಲಕ ಹೈದರಾಬಾದ್ ರಾಜ್ಯಕ್ಕೆ ಸೇರ್ಪಡೆ ವಿಚಾರದಲ್ಲಿ ಬಿಜೆಪಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ. ತೆಲಂಗಾಣದಲ್ಲಿ (Telangana) ಬಿಜೆಪಿ ಅಧಿಕಾರಕ್ಕೆ ಬರಲು ಬಯಸಿದೆ. ಹಾಗಾಗಿ ಇತಿಹಾಸವನ್ನು (History) ತಿರುಚಿ ಕೋಮುವಾದವನ್ನು (Communalism) ಪ್ರೋತ್ಸಾಹಿಸುತ್ತಿದ್ದಾರೆ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದರು. ಅಲ್ಲದೆ, ಎಡ ರಂಗದ ನಾಯಕರ ಪ್ರಕಾರ, ಅವರು ಸೆಪ್ಟೆಂಬರ್ 17 ಅನ್ನು ನಿಜಾಮರ "ಶರಣಾಗತಿ ದಿನ" ವನ್ನು ಆಚರಿಸುವುದಾಗಿ ಹೇಳಿದ್ದಾರೆ. 

ಭಾರತ್ ಜೋಡೋ ಯತ್ರೆ ಬಗ್ಗೆ ಕಾಂಗ್ರೆಸ್‌ ವಿರುದ್ಧದ ಟೀಕೆ ಮೃದುಗೊಳಿಸಿದ ಸಿಪಿಐ (ಎಂ) 
ಇನ್ನೊಂದೆಡೆ, ಈ ಹಿಂದೆ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ವಿರುದ್ಧ ಎಡಪ್ಷಗಳು ವಾಗ್ದಾಳಿ ನಡೆಸಿದ್ದವು. ಎಡಪಕ್ಷಗಳ ಆಡಳಿತವಿರುವ ಕೇರಳದಲ್ಲಿ 18 ದಿನಗಳ ಯಾತ್ರೆ ನಿಗದಿಪಡಿಸಿದ್ದಕ್ಕಾಗಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಆರೋಪ ಮಾಡಿತ್ತು. ಆದರೆ, ಶುಕ್ರವಾರ ಕಾಂಗ್ರೆಸ್‌ನ "ಭಾರತ್ ಜೋಡೋ ಯಾತ್ರೆ" ಯ ಬಗ್ಗೆ ತಮ್ಮ ಪಕ್ಷದ ಟೀಕೆಯನ್ನು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮೃದುಗೊಳಿಸಿದ್ದಾರೆ. 

"ಜನರ ಬಳಿಗೆ ಹೋಗುವುದು" ಒಳ್ಳೆಯದು ಎಂದು ಸೀತಾರಾಮ್‌ ಯೆಚೂರಿ ಹೇಳಿದ್ದು, ಕಾಂಗ್ರೆಸ್‌ನ "ಭಾರತ್ ಜೋಡೋ ಯಾತ್ರೆ" ಯ ಬಗ್ಗೆ ತಮ್ಮ ಪಕ್ಷದ ಟೀಕೆಯನ್ನು ಮೃದುಗೊಳಿಸಿದರು. ಅಲ್ಲದೆ, ಎಡ ಪಕ್ಷವು ದೇಶದಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ ತರುವ ಪಕ್ಷಗಳ ಒಕ್ಕೂಟ ಮಾಡುವ ಪ್ರಯತ್ನದ ಭಾಗವಾಗಿದೆ ಎಂದೂ ಅವರು ಪ್ರತಿಪಾದಿಸಿದರು. 

ಇದನ್ನೂ ಓದಿ: ಜ್ಯೂ. ಎನ್‌ಟಿಆರ್ ಜೊತೆ ಅಮಿತ್ ಶಾ ಡಿನ್ನರ್: ಭೇಟಿ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?‌
 
ಈ ವೇಳೆ, ಇತ್ತೀಚೆಗೆ ಮುಕ್ತಾಯಗೊಂಡ ಪಕ್ಷದ ಪಾಲಿಟ್‌ಬ್ಯೂರೋ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಕುರಿತು ಸುದ್ದಿಗಾರರಿಗೆ ವಿವರಿಸಿದ ಸೀತಾರಾಂ ಯೆಚೂರಿ, ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರಂತಹ ನಾಯಕರ ಪ್ರಯತ್ನಗಳನ್ನು ಸಹ ಸೀತಾರಾಂ ಯೆಚೂರಿ ಶ್ಲಾಘಿಸಿದರು.

click me!