Chamarajanagara: ಸಾವರ್ಕರ್‌ ಫೋಟೋ ಅಳವಡಿಕೆ ಕಾಂಗ್ರೆಸ್‌ ಟೀಕೆಗೆ ಕಟೀಲ್‌ ಕೆಂಡಾಮಂಡಲ

By Sathish Kumar KH  |  First Published Dec 29, 2022, 6:39 PM IST

ಸುವರ್ಣಸೌಧದಲ್ಲಿ ಸಾವರ್ಕರ್ ಫೊಟೋ ಅಲ್ಲದೇ ಭಯೋತ್ಪಾದಕರ ಫೋಟೊ ಹಾಕಬೇಕಿತ್ತಾ? ಎಂದು ಕಾಂಗ್ರೆಸ್ ಟೀಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಚಾಮರಾಜನಗರ (ಡಿ.29): ಸುವರ್ಣಸೌಧದಲ್ಲಿ ಸಾವರ್ಕರ್ ಫೊಟೋ ಅಲ್ಲದೇ ಭಯೋತ್ಪಾದಕರ ಫೋಟೊ ಹಾಕಬೇಕಿತ್ತಾ? ಎಂದು ಕಾಂಗ್ರೆಸ್ ಟೀಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ವಿಧಾನಸೌಧ ಮತ್ತು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ವೀರ್‌ ಸಾವರ್ಕರ್ ಫೋಟೊ ಹಾಕಿದ್ದನ್ನು ಕಟೀಲ್ ಸಮರ್ಥಿಸಿಕೊಂಡರು. ಸಾವರ್ಕರ್ ದೇಶಭಕ್ತರು ಆಗಿದ್ದಾರೆ. ನಾವು ರಾಷ್ಟ್ರಭಕ್ತರ ಪರವಾಗಿ ವಾದ ಮಾಡುತ್ತೇವೆ‌. ಆದರೆ ಕಾಂಗ್ರೆಸ್‌ನವರು ರಾಷ್ಟ್ರ ವಿರೋಧಿಗಳ ಪರವಾಗಿ ವಾದ ಮಾಡ್ತಾರೆ. ಕುಕ್ಕರ್ ಹಿಡಿದುಕೊಂಡು ಬಂದವನ ಪರವಾಗಿ ವಾದ ಮಾಡುತ್ತಾರೆ. 

Tap to resize

Latest Videos

undefined

ಇನ್ನು ರಾಜ್ಯದಲ್ಲಿ ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮಂಡ್ಯದಲ್ಲಿ ಬಿಜೆಪಿ ಫ್ಲೆಕ್ಸ್‌ಗಳಲ್ಲಿ ಸುಮಲತಾ ಪೋಟೊವನ್ನು ಅವರ ಹಿತೈಷಿಗಳು ಹಾಕಿಸಿರಬಹುದು. ಇದರಿಂದ ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂದು ನಾನು ಹೇಳುವುದಿಲ್ಲ. ಇನ್ನು ರಾಜ್ಯದಲ್ಲಿ ಕಳೆದ 4 ವರ್ಷದಿಂದ ಯಾವ ಜನಪರ ಹೋರಾಟ ಮಾಡಿದ್ದಾರೆ. ಅವಕಾಶ ಸಿಕ್ಕಾಗ ಚರ್ಚೆ ಮಾಡದೇ ಕಾಂಗ್ರೆಸ್‌ನವರು ಪಲಾಯನವಾದ ಮಾಡ್ತಿದ್ದಾರೆ ಎಂದು ತಿಳಿಸಿದರು.

ಸತೀಶ್‌ ಜಾರಕಿಹೊಳಿಯವರು ನಮ್ಮ ಸಮಾಜದ ವಿರೋಧಿ ಅಲ್ಲ: ಮರಾಠಾ ಸಮಾಜದ ಮುಖಂಡರ ಬೆಂಬಲ

ಅವಕಾಶ ಸಿಕ್ಕಾಗ ಮಾತನಾಡುವುದಿಲ್ಲ: ಉತ್ತರ ಕರ್ನಾಟಕದ ಬಗ್ಗೆ ವಿಧಾನಸಭೆಯಲ್ಲಿ ಕಡೆಗಣನೆ ಬಗ್ಗೆ ಸತೀಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ. ಆದರೆ, ಚರ್ಚೆಗೆ ಅವರೇ ಅವಕಾಶ ಕೊಡಬೇಕು. ಹೊರಗಡೆ ನಿಂತು ಮಾತನಾಡುವುದಲ್ಲ. ಸತೀಶ್ ಜಾರಕಿಹೊಳಿ ಒಬ್ಬ ಜವಬ್ದಾರಿಯುತ ಶಾಸಕ. ಸತೀಶ್ ಜಾರಕಿಹೊಳಿ ಉತ್ತರ ಕರ್ನಾಟಕದ ಬಗ್ಗೆ ಏನು ಮಾತನಾಡಿದ್ದಾರೆ. ಅವರು ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಬಗ್ಗೆ ಮಾತನಾಡಬೇಕು. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಬೇಕು ಅವರು ಅವಕಾಶ ಕೇಳಿಲ್ಲ. ಅವಕಾಶ ಸಿಕ್ಕಾಗ ಕಾಂಗ್ರೆಸ್‌ ನವರು ಬೀದಿಯಲ್ಲಿ ಹೋರಾಟ ಮಾಡುತ್ತಾರೆ. ವಿಧಾನಸಬೆಯಲ್ಲಿ ಅವಕಾಶ ಸಿಕ್ಕಾಗ ಅವರು ಮಾತನಾಡಲ್ಲ ಎಂದು ಹೇಳಿದರು. 

click me!