ಕೂಸಿನ ತಲೆ ಗಾತ್ರ ನೋಡಿ ಸಿಎಂ ಬಗ್ಗೆ ನಿರ್ಧಾರ : ಮಲ್ಲಿಕಾರ್ಜುನ ಖರ್ಗೆ

By Kannadaprabha NewsFirst Published May 13, 2023, 1:39 AM IST
Highlights

‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುವುದು ಬೇಡ. ಶನಿವಾರ ಫಲಿತಾಂಶ ಬಂದ ಕೂಸಿನ ತಲೆ ಗಾತ್ರ ದೊಡ್ಡದಿರುತ್ತೋ ಅಥವಾ ಸಣ್ಣದಿರುತ್ತೋ ಎಂಬುದನ್ನು ನೋಡಿ ನಿರ್ಧಾರ ಮಾಡೋಣ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ

ಬೆಂಗಳೂರು (ಮೇ.13) : ‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುವುದು ಬೇಡ. ಶನಿವಾರ ಫಲಿತಾಂಶ ಬಂದ ಕೂಸಿನ ತಲೆ ಗಾತ್ರ ದೊಡ್ಡದಿರುತ್ತೋ ಅಥವಾ ಸಣ್ಣದಿರುತ್ತೋ ಎಂಬುದನ್ನು ನೋಡಿ ನಿರ್ಧಾರ ಮಾಡೋಣ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ಶನಿವಾರ ವಿಧಾನಸಭೆ ಚುನಾವಣೆ ಫಲಿತಾಂಶ(Karnataka assembly election result) ಪ್ರಕಟವಾಗುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನ ತಮ್ಮ ನಿವಾಸ ಹಾಗೂ ಖಾಸಗಿ ಹೋಟೆಲ್‌ನಲ್ಲಿ ಸರಣಿ ಸಭೆ ನಡೆಸಿದ ಅವರು ಬಳಿಕ ಮುಖ್ಯಮಂತ್ರಿ ಆಯ್ಕೆ ಕುರಿತ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.

Latest Videos

ಖರ್ಗೆ, ಸಿದ್ದು, ಡಿಕೆಶಿ ಮೂವರಲ್ಲಿ ಒಬ್ಬರು ಮುಖ್ಯಮಂತ್ರಿಯಾಗುತ್ತಾರೆ: ಸಿ.ಪುಟ್ಟರಂಗಶೆಟ್ಟಿ

ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟಬಹುಮತ ಬರಲಿದೆ. ಬಿಜೆಪಿಯವರು ಸರ್ಕಾರ ರಚನೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಿರಬಹುದು. ಆ ಬಗ್ಗೆ ನಾವು ಮಾತನಾಡುವುದಿಲ್ಲ. ನನ್ನ ವೈಯಕ್ತಿಕ ವಿಶ್ಲೇಷಣೆ ಮೇಲೆ ನಾನು ಹೇಳುತ್ತಿದ್ದೇನೆ. ನಮ್ಮ ಪಕ್ಷ ಖಚಿತವಾಗಿ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಆಯ್ಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾಳೆ (ಶನಿವಾರ) ತನಕ ಕಾಯೋಣ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುವುದು ಬೇಡ. ಕೂಸಿನ ತಲೆ ಗಾತ್ರ ದೊಡ್ಡದಿರುತ್ತೋ ಅಥವಾ ಸಣ್ಣದಿರುತ್ತೋ ಎಂಬುದನ್ನು ನೋಡಿ ನಿರ್ಧಾರ ಮಾಡೋಣ’ ಎಂದು ಸೂಚ್ಯವಾಗಿ ಹೇಳಿದರು.

ನಾವು ಜೆಡಿಎಸ್‌ ಜೊತೆ ಮಾತುಕತೆ ನಡೆಸಿಲ್ಲ: ಖರ್ಗೆ

ನವದೆಹಲಿ: ‘ಕುಮಾರಸ್ವಾಮಿ ಅವರ ಜೆಡಿಎಸ್‌(HD Kumaraswamy JDS) ಪಕ್ಷವನ್ನು ನಾವು ಸಂಪರ್ಕ ಮಾಡಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Aicc president Mallikarjun kharge) ಶುಕ್ರವಾರ ಹೇಳಿದ್ದಾರೆ. ಫಲಿತಾಂಶ ಪ್ರಕಟವಾಗುವುದಕ್ಕೆ ಒಂದು ದಿನ ಮೊದಲು ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ ಬಹುಮತದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ: ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

‘ನಮ್ಮ ಯಾವುದೇ ನಾಯಕರು ಜೆಡಿಎಸ್‌ ಜೊತೆಗೆ ಸಂಪರ್ಕ ಹೊಂದಿಲ್ಲ. ರಾಜ್ಯ ಚುನಾವಣೆಯಲ್ಲಿ ನಾವು ಗೆಲ್ಲುವ ಸ್ಥಾನಗಳು ನಾವು ಏನು ಮಾಡಬೇಕು ಎಂಬುದನ್ನು ತಿಳಿಸುತ್ತವೆ. ಫಲಿತಾಂಶದ ಬಳಿಕ ನಮ್ಮ ನಿರ್ಧಾರವನ್ನು ನಾವು ಕೈಗೊಳ್ಳುತ್ತೇವೆ’ ಎಂದು ಅವರು ಉತ್ತರಿಸಿದ್ದಾರೆ.

ಬುಧವಾರ ಬಿಡುಗಡೆಯಾದ ಮತಗಟ್ಟೆಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ಉಂಟಾಗಲಿದೆ ಎಂದು ಹೇಳಿದ ಬೆನ್ನಲ್ಲೇ ರಾಜ್ಯದಲ್ಲಿ ಜೆಡಿಎಸ್‌ ಪ್ರಮುಖ ಪಾತ್ರ ವಹಿಸಲಿದೆ ಎಂದು ವರದಿಗಳು ಹೇಳಿದ್ದವು.

click me!