ಬಿಕ್ಕಟ್ಟಿಗೆ ಪರಿಹಾರ ಸೂಚಿಸಿ: ರೆಸಾರ್ಟ್ ಮಾಲೀಕರಿಗೆ ರಾಜ್ಯಪಾಲರ ಮನವಿ?

By Web Desk  |  First Published Jan 19, 2019, 6:23 PM IST

ಜನಪ್ರತಿನಿಧಿಗಳ ರೆಸಾರ್ಟ್ ರಾಜಕಾರಣಕ್ಕೆ ಬೇಸತ್ತ ರಾಜ್ಯದ ಜನ| ಕೀಳು ರಾಜಕಾರಣ ಕಂಡು ಆಕ್ರೋಶ ವ್ಯಕ್ತಪಡಿಸಿದ ಜನ| ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿರುವ ಮತದಾರ ಪ್ರಭು| ವ್ಯಂಗ್ಯದ ಬಾಣಗಳು ಜನಪ್ರತಿನಿಧಿಗಳನ್ನು ತಲುಪಲಿದೆಯಾ?| ಏನೆಲ್ಲಾ ಕಮೆಂಟ್‌ಗಳು, ಎಷ್ಟೆಲ್ಲಾ ಆಕ್ರೋಶ?


ಬೆಂಗಳೂರು(ಜ.19): ಇದು ಸೋಷಿಯಲ್ ಮಿಡಿಯಾ ಜಮಾನಾ ಸ್ವಾಮಿ. ಯಾರು ಎಲ್ಲಿ, ಯಾವಾಗ, ಏನು ಮಾಡುತ್ತಾರೆ ಎಂಬುದು ಯಾರಿಂದಲೂ ಬಚ್ಚಿಡಲು ಸಾಧ್ಯವಿಲ್ಲ. ಅದರಲ್ಲೂ ಸೋಷಿಯಲ್ ಮಿಡಿಯಾ ಎಂಬ ಅಸ್ತ್ರ ಯುವಕರ ಕೈಯಲ್ಲಿ ಸಿಕ್ಕಿದ್ದೇ ತಡ ವ್ಯವಸ್ಥೆಯ ಆಳ ಅಗಲಗಳನ್ನೆಲ್ಲಾ ಜಾಲಾಡಬಲ್ಲ ತಾಕತ್ತು ಸಿಕ್ಕಿದೆ.

ಅದರಂತೆ ಸದ್ಯ ಕರ್ನಾಟಕ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕೂಡ ಇದಕ್ಕೆ ಹೊರತಲ್ಲ. ಆಡಳಿತ ಪಕ್ಷ, ವಿರೋಧ ಪಕ್ಷಗಳ ದೊಂಬರಾಟ ಕಂಡು ರಾಜ್ಯದ ಜನ ಅದರಲ್ಲೂ ಯುವ ಜನತೆ ರೊಚ್ಚಿಗೆದ್ದಿದ್ದಾರೆ.

Tap to resize

Latest Videos

ಬದುಕು ಹಸನು ಮಾಡಿಯಾರು, ದೇಶ ಕಟ್ಟಿಯಾರು ಎಂಬ ಆಸೆಯೊಂದಿಗೆ ಮತ ನೀಡಿ ಗೆಲ್ಲಿಸಿದ ನಮ್ಮ ಶಾಸಕರು ಅಧಿಕಾರಕ್ಕಾಗಿ, ಕುರ್ಚಿ ಆಸೆಗಾಗಿ ರೆಸಾರ್ಟ್ ನಲ್ಲಿ ಹೋಗಿ ತಮ್ಮ ಯೋಗ್ಯತೆ ಪ್ರದರ್ಶಿಸುತ್ತಿದ್ದಾರೆ. ಇದರಿಂದ ಸಹಜವಾಗಿ ರೊಚ್ಚಿಗೆದ್ದಿರುವ ಜನತೆ ಸಾಧ್ಯವಾದ ಎಲ್ಲಾ ಸಾಧನ ಬಳಸಿ ರಾಜಕಾರಣಿಗಳ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾ ಅಂತಹ ಪ್ರಮುಖ ಸಾಧನಗಳಲ್ಲಿ ಒಂದು.

ರೆಸಾರ್ಟ್ ರಾಜಕಾರಣಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಈ ಅಸಹ್ಯವನ್ನು ಕಂಡು ವ್ಯಂಗ್ಯದ ಬಾಣ ಬಿಡುತ್ತಿದ್ದಾರೆ. ಈ ಬಾಣಗಳು ರೆಸಾರ್ಟ್ ನಲ್ಲಿರುವ ನಮ್ಮ ಜನಪ್ರತಿನಿಧಿಗಳತ್ತ ತಲುಪಲಿ ಎಂಬ ಉದ್ದೇಶ ನಮ್ಮದು.

ಅದರಂತೆ ರೆಸಾರ್ಟ್ ರಾಜಕಾರಣ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವ್ಯಂಗ್ಯದ ಕಮೆಂಟ್‌ಗಳತ್ತ ಗಮನಹರಿಸಿದರೆ...

1. ಈಗಲ್ಟನ್ ರೆಸಾರ್ಟ್ ಗೆ ಕಾಂಗ್ರೆಸ್ ಶಾಸಕರು:
ಕಮೆಂಟ್: ರಾಜ್ಯಪಾಲರ ಭೇಟಿಗಾಗಿ ಸಮಯಾವಕಾಶ ಕೇಳಿದ ಈಗಲ್ಟನ್ ರೆಸಾರ್ಟ್ ಮಾಲೀಕ. ಸರ್ಕಾರ ರಚನೆಗೆ ಹಕ್ಕೊತ್ತಾಯ ಮಂಡನೆ.
ಕಾಂಗ್ರೆಸ್ ಶಾಸಕರ ಮೋಜು ಮಸ್ತಿ ಕಂಡು ಪಕ್ಷದ ವಿರುದ್ಧ ಬಂಡಾಯವೇಳುವ ತವಕದಲ್ಲಿ ಜೆಡಿಎಸ್ ಶಾಸಕರು. ತಮಗೂ ರೆಸಾರ್ಟ್ ಭಾಗ್ಯ ಕರುಣಿಸುವಂತೆ ದೊಡ್ಡ ಗೌಡರಿಗೆ ದುಂಬಾಲು.

2. ಹರಿಯಾಣ 7 ಸ್ಟಾರ್ ಹೋಟೆಲ್‌ನಲ್ಲಿ ಬಿಜೆಪಿ ಶಾಸಕರು:
ಕಮೆಂಟ್: ಕರ್ನಾಟಕದ ಶಾಸಕರ ಸಿರಿವಂತಿಕೆ, ಜಾಲಿ ಮೂಡ್ ಕಂಡು ದಂಗಾದ ರೆಸಾರ್ಟ್ ಮಾಲೀಕ. ವರ್ಷದ 24/7 ರೂಮ್ ಫಿಕ್ಸ್ ಎಂಬ ಭರವಸೆ.

3. ಈಗಲ್ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರ ಗಂಭೀರ ಚರ್ಚೆ:
ಕಮೆಂಟ್: ಸಾಂವಿಧಾನಿಕ ಬಿಕ್ಕಟ್ಟಿಗೆ ಪರಿಹಾರ ಸೂಚಿಸಲು ರೆಸಾರ್ಟ್ ಮಾಲೀಕರಿಗೆ ರಾಜ್ಯಪಾಲರ ಆಹ್ವಾನ. ರೆಸಾರ್ಟ್ ಮಾಲೀಕರಿಗೆ ಬಹುಮತ ಸಾಬೀತುಪಡಿಸಲು ವಾರದ ಗಡುವು.    

ಹೀಗೆ ಜನಪ್ರತಿನಿಧಿಗಳ ರೆಸಾರ್ಟ್ ರಾಜಕಾರಣಕ್ಕೆ ರಾಜ್ಯದ ಜನತೆ ತಮ್ಮದೇ ಶೈಲಿಯಲ್ಲಿ ತಪರಾಕಿ ನೀಡುತ್ತಿದ್ದು, ಇನ್ನಾದರೂ ಜನಪ್ರತಿನಿಧಗಳು ಈ ಕೀಳು ರಾಜಕಾರಣವನ್ನು ಬಿಟ್ಟು ಜನರ ಸಮಸ್ಯೆಯನ್ನು ಪರಿಹರಿಸುವ ಶುದ್ಧ ರಾಜಕಾರಣ ಮಾಡಲಿ ಎಂಬುದು ಎಲ್ಲ ಕನ್ನಡಿಗರ ಬಯಕೆಯಾಗಿದೆ.

ಸರ್ಕಾರ ಪತನಕ್ಕೆ ರೆಡಿಯಾಗಿದೆ ಬಿಜೆಪಿ ಮಾಸ್ಟರ್ ಪ್ಲಾನ್ ?

ಕಾಂಗ್ರೆಸ್ ಗೆ ಕೈ ಕೊಡ್ತಾರ 11 ಶಾಸಕರು ..? ಇಬ್ಬರು ಬಿಜೆಪಿ ತೆಕ್ಕೆಗೆ

‘ವಿರೋಧ ಪಕ್ಷ ದಿಲ್ಲಿಯಲ್ಲಿ, ಆಡಳಿತ ಪಕ್ಷ ಬಿಡದಿಯಲ್ಲಿ, ಜನತೆ ಬೀದಿಯಲ್ಲಿ!’

ರಾಜ್ಯ ರಾಜಕಾರಣದಲ್ಲಿ ಹೈಡ್ರಾಮಾ; ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್!

ಬಿಜೆಪಿ ಶಾಸಕರು ತಂಗಿದ್ದ ದಂಗುಪಡಿಸುವ ಕೋಟಿ ಕೋಟಿ ರೆಸಾರ್ಟ್

 

click me!