ರಾಜಕೀಯಕ್ಕೆ ಬಂದೇ ಬರ್ತೀನಿ, ಬೆಳೆದೇ ಬೆಳೀತೀನಿ: ರೆಡ್ಡಿ ಶಪಥ

By Web Desk  |  First Published Jan 19, 2019, 5:05 PM IST

ಅಕ್ರಮ ಗಣಿ ಆರೋಪದ ಮೇಲೆ ಜೈಲುವಾಸ ಅನುಭವಿಸಿದ ಬಳಿಕ ರಾಜ್ಯ ರಾಜಕೀಯದಿಂದ ದೂರ ಉಳಿದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮರಳಿ ಪಾಲಿಟಿಕ್ಸ್ ಗೆ ಎಂಟ್ರಿ ಕೊಡುವ ಸುಳಿವು ನೀಡಿದ್ದಾರೆ.


ಬಾಗಲಕೋಟೆ, [ಜ.19]: ಸಕ್ರಿಯ ರಾಜಕಾರಣದಿಂದ ಮೂಲೆಗುಂಪಾಗಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರು ತಮ್ಮ ರೆಡ್ಡಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದು, ಮತ್ತೆ ಪಾಲಿಟಿಕ್ಸ್ ಗೆ ಎಂಟ್ರಿ ಕೊಡುವ ಹುಮ್ಮಸ್ಸಿನಲ್ಲಿದ್ದಾರೆ.

ಬಾಗಲಕೋಟೆಯ ಸಂಗಮ ಕ್ರಾಸ್​​ನಲ್ಲಿ ಇಂದು [ಶನಿವಾರ] ನಡೆದ ರೆಡ್ಡಿ ಸಮುದಾಯದ ಸಮಾರಂಭದಲ್ಲಿ ಮಾತನಾಡಿ, ರಾಜಕೀಯಕ್ಕೆ ಬಂದೇ ಬರ್ತಿನಿ, ಬೆಳೆದೇ ಬೆಳೆಯುತ್ತೇನೆ. ಒಳ್ಳೇ ರಾಜಕಾರಣಿ ಆಗಿಯೇ ಆಗುತ್ತೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ರೆಡ್ಡಿ ಕಂ ಬ್ಯಾಕ್: ಪ್ರತ್ಯೇಕ ಸಂಘ ಕಟ್ಟಲು ಜನಾರ್ದನ ರೆಡ್ಡಿ ರೆಡಿ

ಜನಾರ್ದನ ರೆಡ್ಡಿ, ನಾನು ರಾಜಕೀಯ ಉದ್ದೇಶಕ್ಕಾಗಿ ಪಾದಯಾತ್ರೆ ಮಾಡ್ತಿಲ್ಲ.  ನನಗೆ ರಾಜಕೀಯ ಬೇಕು ಅನಿಸಿದ್ರೆ ಅದಕ್ಕೆ ಕೇವಲ ಒಂದು ವರ್ಷ ಟೈಮ್ ಸಾಕು, ಆ ಕಾಲ ಬಂದೇ ಬರುತ್ತದೆ.  ನನ್ನ ಸಮಾಜವನ್ನ ಬಳಸಿಕೊಂಡು ರಾಜಕೀಯ ಮಾಡುವುದಿಲ್ಲ. ಈ ಹಿಂದೆ ಯಡಿಯೂರಪ್ಪನವರ ಜೊತೆ ಇದ್ದೇ, ಅವರ ಜೋತೆ ಸೇರಿ ಬಿಜೆಪಿ ಅಧಿಕಾರ ಬರುವುದಕ್ಕೆ ಶ್ರಮಿಸಿದ್ದೆ  ಎಂದರು.

ಪ್ರಮುಖ ಅಂಶ ಅಂದ್ರೆ ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳುತ್ತಿದೆ. ಆದ್ರೆ ಗಾಲಿ ರಾಜಕಾರಣಕ್ಕೆ ಬಂದೇ ಬರುತ್ತೇನೆ ಎಂದು ಹೇಳುತ್ತಿದ್ದಾರೆ. ಹೊಸ ಪಕ್ಷ ಕಟ್ಟುತ್ತಾರೋ ಅಥವಾ ಬಿಜೆಪಿಯಲ್ಲಿ ಸಕ್ರಿಯರಾಗುತ್ತಾರೋ ಎನ್ನುವುದು ಮಾತ್ರ ಕುತೂಹಲ ಕೆರಳಿಸಿದೆ.

click me!