ಬಿಜೆಪಿ ಸೇರ್ತಾರಾ ಗಾಲಿ ಜನಾರ್ಧನ ರೆಡ್ಡಿ? ರಾಯಚೂರು ಪ್ರಭಾವಿ ನಾಯಕ ಭೇಟಿ, ಗೌಪ್ಯಸಭೆ!

By Ravi JanekalFirst Published Jan 11, 2024, 12:57 PM IST
Highlights

ಗಂಗಾವತಿ ಶಾಸಕ ಹಾಗೂ ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನರೆಡ್ಡಿ ಅವರನ್ನು ರಾಯಚೂರಿನ ಪ್ರಭಾವಿ ಬಿಜೆಪಿ ನಾಯಕ ಮಾಜಿ ಸಚಿವ ಶಿವನಗೌಡ ನಾಯಕ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಕೊಪ್ಪಳ (ಜ.11): ಗಂಗಾವತಿ ಶಾಸಕ ಹಾಗೂ ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನರೆಡ್ಡಿ ಅವರನ್ನು ರಾಯಚೂರಿನ ಪ್ರಭಾವಿ ಬಿಜೆಪಿ ನಾಯಕ ಮಾಜಿ ಸಚಿವ ಶಿವನಗೌಡ ನಾಯಕ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ನಿನ್ನೆ ಸಂಜೆ ಶಾಸಕ ಜನಾರ್ದನರೆಡ್ಡಿಯನ್ನ ಭೇಟಿ ಮಾಡಿರುವ ಮಾಜಿ ಶಾಸಕ ಶಿವನಗೌಡ ನಾಯಕ. ಭೇಟಿ ವೇಳೆ ಉಭಯ ನಾಯಕರ ಮಧ್ಯೆ ಸುಮಾರು ಒಂದು ತಾಸು ಗೌಪ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ನಾಯಕರ ಚರ್ಚೆಯಿಂದ ರಾಜಕೀಯದಲ್ಲಿ ಅನುಮಾನ ಹೆಚ್ಚಳವಾಗಿದೆ. ಹಿಂದಿನಿಂದಲೂ ಗಾಲಿ ಜನಾರ್ದನ ರೆಡ್ಡಿಯವರನ್ನ ಮರಳಿ ಬಿಜೆಪಿ ಕರೆತರುವ ಪ್ರಯತ್ನ ನಡೆಯುತ್ತಿದೆ. ಆದರೆ ಬಿಜೆಪಿ ಸೇರುವ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸದ ಜನಾರ್ದನರೆಡ್ಡಿ. ಕೆಆರ್‌ಪಿಪಿ ಪಕ್ಷದಲ್ಲೇ ಮುಂದುವರಿಯುವೆ ಎಂದು ಹೇಳಿದ್ದಾರೆ ಅದ್ಯಾಗೂ ಜನರ್ದಾನರೆಡ್ಡಿಯವರನ್ನು ಬಿಜೆಪಿ ಸೇರಿಸುವ ಪ್ರಯತ್ನ ಮುಂದುವರಿಸಿರುವ ಬಿಜೆಪಿ. 

ಶಾಸಕ ಜನಾರ್ದನರೆಡ್ಡಿ ಕುಟೀರಕ್ಕೆ ಬೆಂಕಿ ಇಟ್ಟವರಾರು ? ಜನಪ್ರಿಯತೆ ಸಹಿಸದೆ ಬಿಜೆಪಿ ಕಾರ್ಯಕರ್ತರೇ ಹಚ್ಚಿದ್ರಾ ಕಿಡಿ?!

ಶ್ರೀರಾಮ ಮಂದಿರ ಉದ್ಘಾಟನೆಯ ಮಂತ್ರಾಕ್ಷತೆ ಮನೆಮನೆಗೆ ಹಂಚುತ್ತಿರುವ ಶಾಸಕ ಜನಾರ್ದನರೆಡ್ಡಿ. ಈ ವೇಳೆ ಹಿಂದುಪರ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಮುಖಂಡರು ಜನಾರ್ದನರೆಡ್ಡಿಯವರೊಂದಿಗೆ ಸಾಥ್ ನೀಡುತ್ತಿರುವುದು ಬಿಜೆಪಿ ಸೇರುವ ವದಂತಿಗೆ ಪುಷ್ಠಿ ನೀಡಿದಂತಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ತೊಟ್ಟಿರುವ ಬಿಜೆಪಿ. ಹಳೆಯ ದೋಸ್ತಿಗಳನ್ನು ಮತ್ತೆ ಬಿಜೆಪಿ ಕರೆತಂದು ಪಕ್ಷ ಬಲಪಡಿಸುವ ಯತ್ನದಲ್ಲಿರುವ ನಾಯಕರು. ಜನರ್ದಾನರೆಡ್ಡಿ ಕೆಆರ್‌ಪಿಪಿ ಪಕ್ಷದಿಂದ ಬಿಜೆಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಹಿನ್ನೆಲೆ ಲೋಕಸಭಾ ಚುನಾವಣೆ ವೇಳೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ  ನಡೆದಿದೆ ಎನ್ನಲಾಗುತ್ತಿದೆ. ಅದಕ್ಕೆ ಪುಷ್ಠಿ ಕೊಡುವಂತೆ ಇದೀಗ ರಾಯಚೂರು ಭಾಗದ ಪ್ರಭಾವಿ ನಾಯಕರೊಬ್ಬರು ಗಾಲಿ ಜನರ್ದಾನರೆಡ್ಡಿಯವರನ್ನ ಭೇಟಿ ಮಾಡಿ ಗೌಪ್ಯ ಸಬೆ ನಡೆಸಿರುವುದು ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

ಅಯೋಧ್ಯೆ ರೀತಿ ಅಂಜನಾದ್ರಿ ಅಭಿವೃದ್ಧಿಪಡಿಸುವೆ; ಶಾಸಕ ಜನಾರ್ದನ ರೆಡ್ಡಿ ಭರವಸೆ

click me!