ಬೆಂಗಳೂರು ಸಂವಿಧಾನ ಬದಲಾವಣೆ ಕುರಿತು ನಾನು ಎಲ್ಲೂ ಹೇಳಿಲ್ಲ, ಬಿಜೆಪಿ ನನ್ನ ಹೇಳಿಕೆ ತಿರುಚಿ ಅಪ ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದು, ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ-ಸಂವಿಧಾನ ಕುರಿತು ತಾವು ನೀಡಿದ ಹೇಳಿಕೆ ಸಂಸತ್ತಿನಲ್ಲಿ ಭಾರೀ ಗದ್ದಲಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಸದಾಶಿವ ನಗರದ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ದೃಶ್ಯ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯನ್ನು ಬಿಜೆಪಿ ತಿರುಚಿದೆ. 36 ವರ್ಷಗಳಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ನನಗೂ ಸಾಮಾನ್ಯ ಜ್ಞಾನವಿದೆ ಎಂದು ಹೇಳಿದ್ದಾರೆ.

10:33 PM (IST) Mar 25
ಕಬಡ್ಡಿ ಆಟಗಾರ ದೀಪಕ್ ಹೂಡಾ ಮತ್ತು ಬಾಕ್ಸರ್ ಸ್ವೀಟಿ ಬೋರಾ ನಡುವೆ ವಿಚ್ಛೇದನ ನಡೆಯುವ ಸಾಧ್ಯತೆ ಇದೆ. ಇತ್ತೀಚೆಗೆ ಪೊಲೀಸ್ ಠಾಣೆಯಲ್ಲಿ ಸ್ವೀಟಿ ಬೋರಾ, ದೀಪಕ್ ಹೂಡಾ ಮೇಲೆ ಹಲ್ಲೆ ನಡೆಸಿದ್ದಾರೆ.
ಪೂರ್ತಿ ಓದಿ09:44 PM (IST) Mar 25
ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ಸೇನೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಗೂಢಚಾರನನ್ನು ಬಂಧಿಸಲಾಗಿದೆ. ಆರೋಪಿ ಪಠಾಣ್ ಖಾನ್ ಹಲವು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿದ್ದನೆಂದು ತಿಳಿದುಬಂದಿದೆ.
ಪೂರ್ತಿ ಓದಿ09:14 PM (IST) Mar 25
ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯಂತೆ, 'ಸೌಗತ್-ಎ-ಮೋದಿ' ಕಿಟ್ ವಿತರಣೆಯು ಮಂಗಳವಾರ ರಾಜಧಾನಿ ದೆಹಲಿಯ ನಿಜಾಮುದ್ದೀನ್‌ನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಪ್ರಾರಂಭವಾಗಿದೆ.
ಪೂರ್ತಿ ಓದಿ08:50 PM (IST) Mar 25
ದೆಹಲಿ ವಿವಿಯಲ್ಲಿ ಸೋನು ನಿಗಮ್ ಸಂಗೀತ ಕಾರ್ಯಕ್ರಮದ ವೇಳೆ ಕಲ್ಲು ತೂರಾಟ ನಡೆದಿದೆ. ಉದ್ರಿಕ್ತ ಗುಂಪೊಂದು ವೇದಿಕೆಯತ್ತ ಬಾಟಲಿ, ಕಲ್ಲುಗಳನ್ನು ಎಸೆದಿದೆ.
ಪೂರ್ತಿ ಓದಿ08:10 PM (IST) Mar 25
ಕರ್ನಾಟಕ ಲೋಕಸೇವಾ ಆಯೋಗವು ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರಕಟಿಸಿದೆ. 134 ಹುದ್ದೆಗಳಿಗೆ 11 ಇಲಾಖೆಗಳಿಂದ ಸ್ವೀಕೃತವಾದ ಪ್ರಸ್ತಾವನೆಗಳ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಪೂರ್ತಿ ಓದಿ07:55 PM (IST) Mar 25
Rahul gandhi citizenship case: ರಾಹುಲ್ ಗಾಂಧಿ (Rahul Gandhi) ಅವರ ಪೌರತ್ವದ ಬಗ್ಗೆ ಹೈಕೋರ್ಟ್ (Allahabad HC) ವಿಚಾರಣೆ. ಗೃಹ ಸಚಿವಾಲಯಕ್ಕೆ (MHA) 4 ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಸೂಚನೆ. ದೆಹಲಿ ಹೈಕೋರ್ಟ್‌ನಲ್ಲಿಯೂ (Delhi HC) ಅರ್ಜಿ ಬಾಕಿ ಇದೆ. ಸಂಪೂರ್ಣ ವಿಷಯ ತಿಳಿಯಿರಿ.
ಪೂರ್ತಿ ಓದಿ
07:40 PM (IST) Mar 25
ಶಾಸಕ ಕೃಷ್ಣನಾಯ್ಕ ಅವರು ಫೋನ್ ಟ್ಯಾಪಿಂಗ್ ಮತ್ತು ಹನಿಟ್ರ್ಯಾಪ್ ವಿಚಾರಗಳನ್ನು ಸರ್ಕಾರವು ಅಧಿಕಾರ ಉಳಿಸಿಕೊಳ್ಳಲು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಜನವಿರೋಧಿಯಾಗಿದ್ದು, ಆಡಳಿತದಲ್ಲಿ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಪೂರ್ತಿ ಓದಿ06:57 PM (IST) Mar 25
ಪಾಕಿಸ್ತಾನದಲ್ಲಿ ಕಾಶ್ಮೀರಕ್ಕೆ ಹೋಗಿ ಹಿಂದೂಗಳನ್ನು ಕೊಲ್ಲುವುದರಿಂದ ಸ್ವರ್ಗ ಸಿಗುತ್ತದೆ ಎಂದು ಯುವಕನೊಬ್ಬ ಹೇಳಿಕೆ ನೀಡಿದ್ದಾನೆ. ಹಣದುಬ್ಬರದಿಂದ ತತ್ತರಿಸಿರುವ ಪಾಕಿಸ್ತಾನದ ಪರಿಸ್ಥಿತಿ ಬಗ್ಗೆಯೂ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ06:54 PM (IST) Mar 25
ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯಜುವೇಂದ್ರ ಚಾಹಲ್ ಪತ್ನಿಗೆ ಪರಿಹಾರ ನೀಡಿದ್ದಾರೆ. ಆದರೆ, ಕಿರುತೆರೆ ನಟಿ ಶ್ವೇತಾ ತಿವಾರಿ ವಿಚ್ಛೇದನದಲ್ಲಿ ಪತಿಗೆ ಜೀವನಾಂಶ ನೀಡಿ ಸುದ್ದಿಯಾಗಿದ್ದರು.
ಪೂರ್ತಿ ಓದಿ06:50 PM (IST) Mar 25
ಮದುವೆಯಾದ ಮೇಲೆ ಅನುಭವಿಸಿದ ನೋವುಗಳ ಸರಮಾಲೆಯನ್ನೇ ತೆರೆದಿಟ್ಟು ಪಾಲಕರಿಗೆ ವಾಟ್ಸ್ಆ್ಯಪ್ ಸಂದೇಶ ಮಾಡಿ, ಶಿಕ್ಷಕಿಯೊಬ್ಬರು ಬದುಕನ್ನು ಅಂತ್ಯಗೊಳಿಸಿದ್ದಾರೆ!
06:22 PM (IST) Mar 25
ಲಖನೌ ಸೂಪರ್ ಜೈಂಟ್ಸ್ ವೇಗದ ಬೌಲರ್ ಮಯಾಂಕ್ ಯಾದವ್ ಗಾಯಗೊಂಡಿದ್ದಾರೆ. ಸಿಟ್ಟಿನಲ್ಲಿ ಮಂಚಕ್ಕೆ ಒದ್ದು ಕಾಲುಬೆರಳು ಮುರಿದುಕೊಂಡಿದ್ದಾರೆ. ಇದರಿಂದಾಗಿ ತಂಡಕ್ಕೆ ಹಿನ್ನಡೆಯಾಗಿದೆ.
ಪೂರ್ತಿ ಓದಿ06:20 PM (IST) Mar 25
ಕಳೆದ ಎರಡು ವಾರಗಳಿಂದ ಕರ್ನಾಟಕದಲ್ಲಿ ಪೂರ್ವ ಮುಂಗಾರು ಅಬ್ಬರಿಸುತ್ತಿದ್ದು, ಹಲವೆಡೆ ಮಳೆಯಾಗಿದೆ. ಇದರಿಂದ ರೈತರಿಗೆ ಮಾವು ಬೆಳೆ ನಾಶವಾಗುವ ಆತಂಕ ಎದುರಾಗಿದೆ.
ಪೂರ್ತಿ ಓದಿ06:07 PM (IST) Mar 25
ಗಂಡ-ಹೆಂಡತಿ ಸಂಬಂಧ ಚೆನ್ನಾಗಿರಬೇಕು ಎಂದರೆ, ಒಬ್ಬರ ಮೇಲೆ ಒಬ್ಬರು ಡೌಟ್ ಪಡಬಾರದು ಎಂದರೆ ಯಾರನ್ನು ಮದುವೆಯಾಗಬೇಕು ಎಂದಿರುವ ಟೆಕ್ಕಿಯ ಮಾತೀಗ ಭಾರಿ ಚರ್ಚೆ ಹುಟ್ಟುಹಾಕಿದೆ.
05:38 PM (IST) Mar 25
ಕೊಡಗಿನಲ್ಲಿ ಸಚಿವ ಭೋಸರಾಜ್ ಅವರು ಆರ್. ಅಶೋಕ್ ಅವರ ಮೌನದ ಬಗ್ಗೆ ಪ್ರಶ್ನಿಸಿದ್ದಾರೆ. ಹನಿಟ್ರ್ಯಾಪ್ ವಿಷಯದಲ್ಲಿ ಅಶೋಕ್ ಮತ್ತು ವಿಜಯೇಂದ್ರ ಅವರ ಹೇಳಿಕೆಗಳನ್ನು ಟೀಕಿಸಿದ್ದಾರೆ, ಹಾಗೂ ಡಿಕೆಶಿ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.
ಪೂರ್ತಿ ಓದಿ05:37 PM (IST) Mar 25
ಸ್ಮಾರ್ಟ್ ಮೀಟರ್ ಅಡಿಯಲ್ಲಿ ರಾಜ್ಯ ಸರ್ಕಾರ ಹಣ ಲೂಟಿ ಮಾಡ್ತಿದೆ ಎಂದು ನಟ ನಿಖಿಲ್ ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ.
ಪೂರ್ತಿ ಓದಿ04:56 PM (IST) Mar 25
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಬದಲಾವಣೆಯ ಬಗ್ಗೆ ಎಂ.ಎಸ್.ಧೋನಿ ಮೌನ ಮುರಿದಿದ್ದಾರೆ. ಋತುರಾಜ್ ಗಾಯಕ್ವಾಡ್ ಅವರ ಶಾಂತ ಸ್ವಭಾವ ಮತ್ತು ಸಾಮರ್ಥ್ಯದ ಬಗ್ಗೆ ತಂಡಕ್ಕೆ ನಂಬಿಕೆಯಿದೆ ಎಂದು ಅವರು ಹೇಳಿದ್ದಾರೆ.
ಪೂರ್ತಿ ಓದಿ04:55 PM (IST) Mar 25
ಸಚಿವ ಕೆ.ಎನ್. ರಾಜಣ್ಣ ಹನಿಟ್ರ್ಯಾಪ್ ಕುರಿತು ಗೃಹ ಸಚಿವರಿಗೆ ದೂರು ನೀಡಲು ಸಿದ್ಧರಾಗಿದ್ದಾರೆ. ತನಿಖೆಯ ಸ್ವರೂಪ ಮತ್ತು ಹೈಕಮಾಂಡ್‌ನ ಪ್ರತಿಕ್ರಿಯೆಯ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಪೂರ್ತಿ ಓದಿ04:53 PM (IST) Mar 25
ಹನಿಟ್ರ್ಯಾಪ್ ಬಗ್ಗೆ ಸಚಿವ ಕೆಎನ್ ರಾಜಣ್ಣ ಅವರು ಹೇಳಿಕೆ ನೀಡಿದ್ದು ಈಗ ಭಾರೀ ಚರ್ಚೆ ಆಗ್ತಿದೆ. ನಟ ಚೇತನ್ ಅಹಿಂಸ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
04:44 PM (IST) Mar 25
ಏಪ್ರಿಲ್ 1 ರಿಂದ ಹೊಸ ಟೋಲ್ ಪಾಲಿಸಿ ಜಾರಿಯಾಗುತ್ತಿದೆ. ನೂತನ ಟೋಲ್ ಪಾಲಿಸಿ ವಾಹನ ಮಾಲೀಕರಿಗೆ ಹೆಚ್ಚಿನ ವಿನಾಯಿತಿ ಸಿಗಲಿದೆ. ನಿತಿನ್ ಗಡ್ಕರ್ ಘೋಷಿಸಿದ ಹೊಸ ಟೋಲ್ ಪಾಲಿಸಿ ಏನು?
ಪೂರ್ತಿ ಓದಿ04:20 PM (IST) Mar 25
ಜೆಸ್ಸಿಕಾ ಲಾಲ್ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ ಮನು ಶರ್ಮ ಈಗ ಸಿದ್ಧಾರ್ಥ್ ಶರ್ಮ ಆಗಿ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಯ ಮಾಲೀಕರಾಗಿದ್ದಾರೆ. ಈ ವಿಸ್ಕಿ ಹಲವು ಪ್ರಶಸ್ತಿಗಳನ್ನು ಗೆದ್ದಿದೆ, ಆದರೆ ಇದರ ಮಾಲೀಕನ ಹಿನ್ನೆಲೆ ಆಶ್ಚರ್ಯಕರವಾಗಿದೆ.
ಪೂರ್ತಿ ಓದಿ04:06 PM (IST) Mar 25
ರುಚೆಂದೂರಿನ ಮುರುಗನ್ ದೇವಸ್ಥಾನದಲ್ಲಿನ ಶೌಚಾಲಯಗಳ ಗುಣಮಟ್ಟದ ಬಗ್ಗೆ ಬಿಜೆಪಿ ನಾಯಕರೊಬ್ಬರು ವಿಡಿಯೋ ಬಿಡುಗಡೆ ಮಾಡಿದ ನಂತರ, ಡಿಎಂಕೆ ಸರ್ಕಾರ ಬೆಳಿಗ್ಗೆ 4 ಗಂಟೆಗೆ ಪೊಲೀಸರ ಮೂಲಕ ಅವರಿಗೆ ಬೆದರಿಕೆ ಹಾಕಿರುವ ಹಿನ್ನೆಲೆ ಅಣ್ಣಾಮಲೈ ಡಿಎಂಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪೂರ್ತಿ ಓದಿ03:47 PM (IST) Mar 25
ಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಭಾಗ್ಯ ಹೊಸ ಹೆಜ್ಜೆ ಇಟ್ಟರೆ, ತಾಂಡವ್ ಮಾತ್ರ ಒಳ್ಳೆಯ ಕೆಲಸ ಮಾಡಿದ್ದಾನೆ. ಏನದು?
ಪೂರ್ತಿ ಓದಿ03:38 PM (IST) Mar 25
Uyghur Muslims : ಚೀನಾದ ವಾಯುವ್ಯ ಪ್ರದೇಶದ ಕ್ಸಿನ್‌ಜಿಯಾಂಗ್‌ನಲ್ಲಿ, ಉಯಿಘರ್ ಮುಸ್ಲಿಮರು ರಂಜಾನ್ ತಿಂಗಳಲ್ಲಿ ಉಪವಾಸ ಮತ್ತು ಪ್ರಾರ್ಥನೆ ಮಾಡದಂತೆ ಅಧಿಕಾರಿಗಳು ಬಲವಂತವಾಗಿ ಕೆಲಸ ಮಾಡಿಸುತ್ತಿದ್ದಾರೆ ಎಂದು ರೇಡಿಯೋ ಫ್ರೀ ಏಷ್ಯಾ (RFA) ವರದಿ ಮಾಡಿದೆ. ಈ ವಿಷಯ ಈಗ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಚೀನಾದಲ್ಲಿ ಏನಾಗುತ್ತಿದೆ ಗೊತ್ತಾ?
ಪೂರ್ತಿ ಓದಿ03:10 PM (IST) Mar 25
ಇಲ್ಲೊಂದು ಕಡೆ ವಧು ಮದುವೆಗೆ ಮೊದಲೇ ಹೈಕೋರ್ಟ್ ಕದ ತಟ್ಟಿ ಭಾರಿ ಭದ್ರತೆಯ ಮಧ್ಯೆ ಮದ್ವೆಯಾಗಿದ್ದಾರೆ. ಈ ಮದುವೆಯಲ್ಲಿ ನೆಂಟರು ಬಂಧುಗಳಿಗಿಂತ ಹೆಚ್ಚು ಪೊಲೀಸರೇ ಇದ್ದರಂತೆ. ಅದು ಏಕೆ ಅಂತ ಇಲ್ಲಿದೆ ನೋಡಿ ಸ್ಟೋರಿ..
ಪೂರ್ತಿ ಓದಿ03:07 PM (IST) Mar 25
ಧೋನಿ ಮತ್ತು ಕೊಹ್ಲಿ ನಡುವಿನ ಸ್ನೇಹದ ಬಗ್ಗೆ ಧೋನಿ ಮಾತನಾಡಿದ್ದಾರೆ. ಕೊಹ್ಲಿ ಅವರ ಬ್ಯಾಟಿಂಗ್ ಕೌಶಲ್ಯ ಮತ್ತು ಫಿಟ್ನೆಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಶಾನ್ ಕಿಶನ್ ಅವರ ಕಮ್‌ಬ್ಯಾಕ್ ಕುರಿತು ವರದಿಯಿದೆ.
ಪೂರ್ತಿ ಓದಿ03:05 PM (IST) Mar 25
ಸೂರ್ಯ ಮತ್ತು ಬುಧ ಪರಸ್ಪರ ಶೂನ್ಯ ಡಿಗ್ರಿಯಲ್ಲಿ ಇರುವುದರಿಂದ ಸಂಪೂರ್ಣ ಯುತಿ ಯೋಗವನ್ನು ರೂಪಿಸಿಕೊಂಡಿದ್ದಾರೆ, ಇದರಿಂದಾಗಿ 3 ರಾಶಿಚಕ್ರ ಚಿಹ್ನೆಗಳ ಜನರ ಅದೃಷ್ಟವು ಬೆಳಗಬಹುದು.
02:58 PM (IST) Mar 25
ಅರೆರೆ... ಇದೇನಿದು? ಬೋಟ್ಮ್ಯಾನ್ ಜೊತೆ ಮದುಮಗನ ಪ್ರೀ ವೆಡ್ಡಿಂಗ್ ಶೂಟ್ ನಡೀತಿದೆ... ವೇಟ್.. ವೇಟ್.. ಅಸಲಿಯತ್ತು ಏನೆಂದು ಇಲ್ಲಿದೆ ನೋಡಿ...
02:07 PM (IST) Mar 25
ಎಲೆಕ್ಟ್ರಿಕ್ ಸ್ಕೂಟರ್ ಬೇಕು, ಜಾಸ್ತಿ ರೇಂಜ್ ಇರಬೇಕು ಅಂತ ಆಶಿಸುವರಿಗೆ ಅಂತಲೇ ಟಿವಿಎಸ್‌ನವರು ಬಿಟ್ಟಿರುವ ಎಲೆಕ್ಟ್ರಿಕ್ ಸ್ಕೂಟರ್ ಹೆಸರು ಟಿವಿಎಸ್ ಐಕ್ಯೂಬ್ ಎಸ್‌ಟಿ.
ಪೂರ್ತಿ ಓದಿ02:01 PM (IST) Mar 25
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಸ್ಲಿಂ ಮೀಸಲು ವಿಚಾರವಾಗಿ ‘ಸಂವಿಧಾನ ಬದಲು’ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ01:40 PM (IST) Mar 25
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸ್ವೀಕರಿಸದೆ, ಅರ್ಹರ ಸಾಧನೆ ಗುರುತಿಸಿ ಪ್ರಶಸ್ತಿಯನ್ನು ಮನೆಬಾಗಿಲಿಗೆ ಕೊಂಡೊಯ್ದು ನೀಡುವಂತಹ ಹೊಸ ಅಧ್ಯಾಯ ಆರಂಭಿಸುವ ಚಿಂತನೆಯಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
01:35 PM (IST) Mar 25
ಯುಗಾದಿ ಹಬ್ಬ ಹೊಸ್ತಿಲಲ್ಲಿಯೇ ಇರುವ ಹೊತ್ತಲ್ಲೇ ಚಿನ್ನ-ಬೆಳ್ಳಿ ದರದಲ್ಲಿ ಕುಸಿತವಾಗಿದ್ದು, ಎಲ್ಲೆಲ್ಲಿ ದರ ಎಷ್ಟೆಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ...
12:50 PM (IST) Mar 25
ಪತ್ನಿ ಹಾಗೂ ಮಗನನ್ನು ಬಸ್ ಹತ್ತಿಸಿದ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. ವ್ಯಕ್ತಿಯೊಬ್ಬರ ಪ್ರಯತ್ನ ಹಾಗೂ ಶೈಲಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ಇಲ್ಲಿದೆ.
ಪೂರ್ತಿ ಓದಿ12:46 PM (IST) Mar 25
ಬಿಗ್ ಬಾಸ್ ಖ್ಯಾತಿಯ ರಜತ್ ಮತ್ತು ವಿನಯ್, ಕಾಟೇರ ಸಿನಿಮಾದ ಮಚ್ಚು ಹಿಡಿದು ರೀಲ್ಸ್ ಮಾಡಿ ವಿವಾದಕ್ಕೆ ಸಿಲುಕಿದ್ದರು. ಪೊಲೀಸರಿಗೆ ನಕಲಿ ಮಚ್ಚು ಒಪ್ಪಿಸಿದ್ದರಿಂದ ಸಾಕ್ಷ್ಯ ನಾಶದ ಕೇಸ್ ದಾಖಲಾಗುವ ಬಂಧನವಾಗುವ ಭೀತಿಯಿಂದ ಪರಾರಿ ಆಗಿದ್ದಾರೆ.
ಪೂರ್ತಿ ಓದಿ12:31 PM (IST) Mar 25
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಖಲೀಲ್ ಅಹಮದ್ ಜೊತೆಗೂಡಿ ಚೆಂಡಿನ ವಿರೂಪಕ್ಕೆ ಯತ್ನಿಸಿದ್ದಾರೆಂದು ನೆಟ್ಟಿಗರು ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ಪೂರ್ತಿ ಓದಿ12:26 PM (IST) Mar 25
ಇದು ಕೋಳಿಯಂತೆ ಕಾಣುವ ಗಿಳಿ. ಬೆಳಿಗ್ಗೆ ಚಿಂವ್ ಚಿಂವ್ ಎನ್ನೋ ಬದಲು ಕೊಕ್ಕೊಕ್ಕೋ ಎನ್ನುತ್ತೆ. ಬೆಲೆ ಕೇವಲ 6,500 ರೂಪಾಯಿ! ಆಫರ್ ಇದೆ... ಹೀಗೊಂದು ಜಾಹೀರಾತು ಕಾಣಿಸಿಕೊಳ್ತಿದೆ. ಏನಿದರ ವಿಶೇಷತೆ?
12:06 PM (IST) Mar 25
ಮದ್ಯ ಕುಡಿಯೋಕೆ ಶುರು ಮಾಡೋ ಮುಂಚೆ ಕೆಲವರು ಎರಡ್ಮೂರು ಹನಿ ಮದ್ಯ ನೆಲಕ್ಕೆ ಚೆಲ್ತಾರೆ. ಯಾಕೆ ಅಂತ ಗೊತ್ತಾ?
ಪೂರ್ತಿ ಓದಿ12:04 PM (IST) Mar 25
ಸಹಕಾರ ಸಚಿವ ಕೆ.ಎನ್. ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದ ಬಗ್ಗೆ ಗೃಹ ಸಚಿವರಿಗೆ ದೂರು ನೀಡಲಿದ್ದಾರೆ. ಒಬ್ಬನೇ ವ್ಯಕ್ತಿ ಎರಡು ಬಾರಿ ಬೇರೆ ಬೇರೆ ಹುಡುಗಿಯರೊಂದಿಗೆ ಬಂದಿದ್ದನು ಎಂದು ರಹಸ್ಯ ಬಿಚ್ಚಿಟ್ಟಿದ್ದಾರೆ.
ಪೂರ್ತಿ ಓದಿ11:58 AM (IST) Mar 25
ಸಿಕಂದರ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಲಿಪ್ ಸಿಂಕ್ ಒಂದಿಷ್ಟು ಸರಿಯಾಗಿಲ್ಲ, ಇನ್ನು ಸ್ಕ್ರೀನ್ ಮೇಲೆ ಸಲ್ಮಾನ್ ಖಾನ್ ರಶ್ಮಿಕಾ ಮಂದಣ್ಣ ಜೋಡಿ ತಂದೆ ಮಗಳಂತಿದೆ ಎಂದು ರೆಡ್ಡಿಟ್ ಬಕೆದಾರರು ಕಮೆಂಟ್ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡಿರುವ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.
ಪೂರ್ತಿ ಓದಿ11:08 AM (IST) Mar 25
ಮುಕೇಶ್ ಅಂಬಾನಿ ಘೋಷಣೆಗೆ ಗೂಗಲ್, ಮೈಕ್ರೋಸಾಫ್ಟ್, ಆ್ಯಪಲ್ ನಡುಗಿದೆ. ಕಾರಣ ಇದೀಗ ಮುಕೇಶ್ ಅಂಬಾನಿ ಜಿಯೋ ಗ್ರಾಹಕರಿಗೆ ಬರೋಬ್ಬರಿ 50 ಜಿಬಿ ಉಚಿತ ಕ್ಲೌಡ್ ಸ್ಟೋರೇಜ್ ಘೋಷಿಸಿದೆ.