ಕರ್ನಾಟಕದಲ್ಲಿ ನಿನ್ನೆ ಬೆಂಗಳೂರು, ಹಾವೇರಿ, ತುಮಕೂರು, ರಾಮನಗರ ಸೇರಿದಂತೆ ಭಾರೀ ಮಳೆಯಾಗಿದ್ದು, ಇಂದೂ ಕೂಡ ದಕ್ಷಿಣದ ಕೆಲವು ಜಿಲ್ಲೆಗಳಲ್ಲಿ ಮಳೆಯಾಲಗಲಿದೆ. ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವೆಡೆ ಆಲಿಕಲ್ಲು ಮಳೆ ಸುರಿದಿದ್ದು, ಮರ ಬಿದ್ದು ಮಗು ಸಾವನ್ನಪ್ಪಿದೆ. ಕೆಲವು ತಗ್ಗು ಪ್ರದೇಶಗಳ ಮನೆಗೆ ನೀರು ನುಗ್ಗಿದೆ. ಬೆಂಗಳೂರಿನಲ್ಲಿ ಇನ್ನೂ ಮೂರ್ನಾಲ್ಕು ದಿನಗಳು ಕೆಲವು ಭಾಗದಲ್ಲಿ ಭಾರೀ ಮಳೆಯಾಗಲಿದೆ. ರಾಜ್ಯ, ಕೇಂದ್ರ, ಸ್ಥಳೀಯ ರಾಜಕಾರಣ, ಅಪರಾಧ, ಮಳೆ, ಹವಾಮಾನ ಮುನ್ಸೂಚನೆಗಾಗಿ ನಿರಂತರವಾಗಿ ಭೇಟಿ ನೀಡಿ..

10:07 PM (IST) Mar 23
ಮಂಗಳೂರಿನಿಂದ ಮುಂಬೈಗೆ ಇದೀಗ ರೈಲು ಪ್ರಯಾಣ ಕನಿಷ್ಠ 15 ಗಂಟೆ ಬೇಕು. ಇದೀಗ ಕೇಂದ್ರ ಸರ್ಕಾರ ಮುಂಬೈ-ಮಂಗಳೂರು ವಂದೇ ಭಾರತ್ ರೈಲು ಸೇವೆ ಆರಂಭಗೊಳ್ಳುತ್ತಿದೆ.
ಪೂರ್ತಿ ಓದಿ09:17 PM (IST) Mar 23
ಎಲಾನ್ ಮಸ್ಕ್ ಏಲಿಯನ್ ಅನ್ನೋದಕ್ಕೆ ವಿಡಿಯೋ ಸಾಕ್ಷಿ ಲಭ್ಯವಾಗಿದೆ. ಡೋನಾಲ್ಡ್ ಟ್ರಂಪ್ ಆಯೋಜಿಸಿದ ಡಿನ್ನರ್ ಪಾರ್ಟಿಯಲ್ಲಿ ಎಲಾನ್ ಮಸ್ಕ್ ಕಸರತ್ತು ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಟ್ರಂಪ್ ಮುಂದೆ ಎಲಾನ್ ಮಸ್ಕ್ ಮಾಡಿದ್ದೇನು?
ಪೂರ್ತಿ ಓದಿ09:15 PM (IST) Mar 23
ಪಕ್ಷದ ಒಳಿತಿಗಾಗಿ ವೈಯಕ್ತಿಕ ದ್ವೇಷ ಬದಿಗಿಟ್ಟು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು. ತಳಮಟ್ಟದಿಂದ ಪಕ್ಷವನ್ನು ಬಲಬಡಿಸಬೇಕು. ಆಗ ಮಾತ್ರ ಚುನಾವಣೆಯನ್ನು ಗೆಲ್ಲಲು ಸಾಧ್ಯ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಪೂರ್ತಿ ಓದಿ08:57 PM (IST) Mar 23
ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ನಟಿ ನೇಹಾ ಗೌಡ, ಅಂತರಪಟ ಧಾರಾವಾಹಿ ಖ್ಯಾತಿಯ ನಟ ಚಂದನ್ ಗೌಡ ಅವರು ಕೆಲ ತಿಂಗಳುಗಳ ಹಿಂದೆ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ಈಗ ಈ ಜೋಡಿ ಮಗಳ ನಾಮಕರಣ ಮಾಡಿದೆ.
ಪೂರ್ತಿ ಓದಿ08:17 PM (IST) Mar 23
ಸಿಕಂದರ್ ಸಿನಿಮಾದ ಹೀರೋ ಸಲ್ಮಾನ್ ಖಾನ್ ಹಾಗೂ ನಾಯಕಿ ರಶ್ಮಿಕಾ ಮಂದಣ್ಣ ವಯಸ್ಸಿನ ಅಂತರ 31 ವರ್ಷ. ಈ ಕುರಿತು ಎದುರಾದ ಪ್ರಶ್ನೆಗೆ ಸಲ್ಮಾನ್ ಖಾನ್ ನೀಡಿದ ಉತ್ತರ ಇದೀಗ ಭಾರಿ ಚರ್ಚೆಯಾಗುತ್ತಿದೆ.
07:55 PM (IST) Mar 23
ನಮ್ಮನ್ನಾಳುವ ಸರ್ಕಾರಗಳು ಹಸಿರು ಟಾವೆಲ್ ಹಾಕಿ ರೈತಪರ ಎಂದು ಹೇಳಿ ರೈತವಿರೋಧಿ ಕಾನೂನುಗಳನ್ನು ಜಾರಿಗೊಳಿಸುತ್ತಿರುವುದಲ್ಲದೇ ರೈತ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿರುವುದು ತೀವ್ರ ಅನ್ಯಾಯ ಎಂದು ನಟ, ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.
ಪೂರ್ತಿ ಓದಿ07:46 PM (IST) Mar 23
ಪ್ರತಿಯೊಬ್ಬ ಮನುಷ್ಯ ಕೂಡ ಆರ್ಥಿಕವಾಗಿ ಸದೃಢ ಆಗಿರಬೇಕು. ಎಷ್ಟೇ ದುಡಿದರೂ ಕೂಡ ಒಮ್ಮೊಮ್ಮೆ ಸಮಸ್ಯೆಗಳು ನಮ್ಮನ್ನು ಆರ್ಥಿಕವಾಗಿ ಕೆಳಗಡೆ ನೂಕುತ್ತವೆ. ಇನ್ನು ಕೆಲವೊಮ್ಮೆ ದೇಶದಲ್ಲಿ ಇರುವ ಸೌಲಭ್ಯಗಳಿಂದ ವಂಚಿತರಾಗುತ್ತೇವೆ. ಮಾರ್ಚ್ ತಿಂಗಳು ಮುಗಿಯುತ್ತ ಬಂದು. ಈ ಐದು ಕೆಲಸಗಳನ್ನು ಮಾಡಿದ್ರೆ ಮಾತ್ರ ನಿಮ್ಮ ದುಡ್ಡು ಉಳಿಯತ್ತೆ. ಹಾಗಾದರೆ ಏನೇನು ಮಾಡಬೇಕು?
ಪೂರ್ತಿ ಓದಿ07:38 PM (IST) Mar 23
ಕ್ಯಾಬ್ಗಳಲ್ಲಿ ರೊಮಾನ್ಸ್ ಮಾಡುವುದನ್ನು ನೋಡಿ ನೋಡಿ ಸುಸ್ತಾಗಿ ಹೋದ ಚಾಲಕನೊಬ್ಬ ತಮ್ಮ ಕ್ಯಾಬ್ನಲ್ಲಿ ಬರೆದಿರುವ ಬರವಣಿಗೆ ಈಗ ಸಕತ್ ವೈರಲ್ ಆಗುತ್ತಿದೆ.
07:35 PM (IST) Mar 23
ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆಯಲ್ಲಿ ಜನಸಂಖ್ಯೆಯನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಬಾರದು. ಇದಕ್ಕೆ ಭೌಗೋಳಿಕ ಅಂಶಗಳನ್ನು ಪರಿಗಣಿಸದೇ ಇದ್ದಲ್ಲಿ ದೇಶದ ಸಮಗ್ರತೆಗೆ ಭಂಗ ತರುವ ಸಾಧ್ಯತೆಗಳಿವೆ.
ಪೂರ್ತಿ ಓದಿ07:27 PM (IST) Mar 23
ಹನಿಟ್ರ್ಯಾಪ್ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಲ್ಲ, ಅವಶ್ಯಕತೆ ಬಿದ್ದರೆ ಭೇಟಿಯಾಗುವುದಾಗಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಪೂರ್ತಿ ಓದಿ07:18 PM (IST) Mar 23
ನೆಲ್ಲಿಕಾಯಿ ಮತ್ತು ಬೀಟ್ರೂಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳನ್ನು ತಿನ್ನುವುದರಿಂದ ದೇಹವು ಹಲವು ರೋಗಗಳಿಂದ ದೂರವಿರುತ್ತದೆ. ಆದರೆ ಇವುಗಳ ಜ್ಯೂಸ್ ಅನ್ನು ಒಟ್ಟಿಗೆ ಕುಡಿದಾಗ ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.
ಪೂರ್ತಿ ಓದಿ
07:15 PM (IST) Mar 23
ಝೆರೋಧ ಖಾತೆ ಈಗಲೇ ಕ್ಲೋಸ್ ಮಾಡಿ, ಪತಿ ಕೆಲಸಕ್ಕೆ ಸೇರಲು ಈ ಸೂಚನೆ ಪಾಲಿಸುವುದು ಅನಿವಾರ್ಯವಾಗಿತ್ತು ಎಂದು ಗ್ರಾಹಕನ ಇಮೇಲ್‌ಗೆ ಝೆರೋದಾ ಸಿಇಒ ನಿತಿನ್ ಕಾಮತ್ ತಕ್ಷಣ ಸ್ಪಂದಿಸಿದ್ದಾರೆ. ಮುಂದೇನಾಯ್ತು?
ಪೂರ್ತಿ ಓದಿ07:05 PM (IST) Mar 23
ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಒಂದು ವಿಸ್ಕಿ ಬ್ರ್ಯಾಂಡ್ 1.5 ಕೋಟಿ ರೂಪಾಯಿ ಡೀಲ್‌ಗಾಗಿ ಬಂದಿದೆ. ಫೌಂಡರ್ ಕಂಪನಿಯ ಬೆಲೆ 300 ಕೋಟಿ ಎಂದು ಹೇಳಿದರು, ಆದರೆ ಶಾರ್ಕ್ ಹೂಡಿಕೆ ಮಾಡಿದ್ರಾ?
ಪೂರ್ತಿ ಓದಿ06:22 PM (IST) Mar 23
ಲೈಂಗಿಕ ಕಿರುಕುಳ ಆರೋಪಿ, ಸ್ವಯಂಘೋಷಿತ ಕ್ರೈಸ್ತ ಪಾದ್ರಿ ಬಜಿಂದರ್ ಸಿಂಗ್ ಅಸಲಿ ಮುಖ ಬಯಲಾಗಿದೆ. ಮಹಿಳೆ ಮೇಲೆ ಹಲ್ಲೆ, ಉದ್ಯೋಗಿಗಳ ಮೇಲೆ ಹಲ್ಲೆ ನಡೆಸುತ್ತಿರುವ ಸಿಸಿಟಿವಿ ದೃಶ್ಯಗಳು ಬಹಿರಂಗವಾಗಿದೆ. ಇದೀಗ ಈ ಸ್ವಯಂಘೋಷಿತ ಕ್ರೈಸ್ತ ಪಾದ್ರಿಯ ಕರಾಳ ಮುಖ ಬಟಾ ಬಯಲಾಗಿದೆ.
ಪೂರ್ತಿ ಓದಿ06:15 PM (IST) Mar 23
ಪ್ರಪಂಚದಲ್ಲಿ ಕಸದ ಬುಟ್ಟಿಯೇ ಇಲ್ಲದ ಒಂದು ದೇಶವಿದೆ. ಅದು ಯಾವ ದೇಶ? ಕಸದ ಬುಟ್ಟಿ ಇಡದ ಕಾರಣದ ಬಗ್ಗೆ ವಿವರವಾಗಿ ನೋಡೋಣ.
ಪೂರ್ತಿ ಓದಿ06:13 PM (IST) Mar 23
ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನಿಂದ ಆರ್‌ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆರ್‌ಸಿಬಿ ಸೋಲಿನ ಸರಪಳಿಯನ್ನು ಕಳಚಿಕೊಂಡಿದೆ.
ಪೂರ್ತಿ ಓದಿ05:42 PM (IST) Mar 23
ಇಶಾನ್ ಕಿಶನ್ ಅವರ ಸ್ಪೋಟಕ ಶತಕ ಮತ್ತು ಟ್ರ್ಯಾವಿಸ್ ಹೆಡ್ ಅವರ ಅರ್ಧಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 286 ರನ್ ಗಳಿಸಿದೆ. ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ ಎರಡನೇ ಗರಿಷ್ಠ ಸ್ಕೋರ್ ಆಗಿದೆ.
ಪೂರ್ತಿ ಓದಿ05:41 PM (IST) Mar 23
ಐಪಿಎಲ್ ವೀಕ್ಷಿಸಲು ಜಿಯೋ ಹಾಟ್‌ಸ್ಟಾರ್ ಉಚಿತ ಸಬ್‌ಸ್ಕ್ರಿಪ್ಶನ್, ಉಚಿತ ಡೇಟಾ, ಅನ್‌ಲಿಮಿಟೆಡ್ ಕಾಲ್ ಸೇರಿದಂತೆ ಹಲವು ಸೌಲಭ್ಯಗಳನ್ನೊಳಗೊಂಡ ಪ್ಲಾನ್ ವಿಐ ಘೋಷಿಸಿದೆ. 101 ರೂಪಾಯಿಯಿಂದ ಈ ಪ್ಲಾನ್ ಆರಂಭಗೊಳ್ಳುತ್ತಿದೆ.
ಪೂರ್ತಿ ಓದಿ04:44 PM (IST) Mar 23
ಇಂಗ್ಲೆಂಡ್‌ನಲ್ಲಿ ಅಪರೂಪದ ದುಂಡಗಿನ ಮೊಟ್ಟೆಯೊಂದು 46000 ರೂಪಾಯಿಗೆ ಹರಾಜಾಗಿದೆ. ಅಲಿಸನ್ ಗ್ರೀನ್ ಎಂಬುವವರಿಗೆ ಸಿಕ್ಕ ಈ ಮೊಟ್ಟೆಯನ್ನು ಹರಾಜಿನ ಮೂಲಕ ಬಂದ ಹಣವನ್ನು ಚಾರಿಟಿಗೆ ನೀಡಲಾಗಿದೆ.
ಪೂರ್ತಿ ಓದಿ04:42 PM (IST) Mar 23
ಎಂಜಿ ಮೋಟಾರ್ಸ್ ಇದೀಗ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರು ಮಾರಾಟ ಕುರಿತು ಮಾಹಿತಿ ನೀಡಿದೆ. ವಿಶೇಷ ಅಂದರೆ ಎಂಜಿ ಮೋಟಾರ್ಸ್ ಎಲೆಕ್ಟ್ರಿಕ್ ಕಾರನ್ನು ಹೆಚ್ಚು ಖರೀದಿ ಮಾಡಿದ್ದು ಉತ್ತರ ಭಾರತವೋ, ದಕ್ಷಿಣ ಭಾರತವೋ? ಇದಕ್ಕೆ ಉತ್ತರ ಸಿಕ್ಕಿದೆ.
ಪೂರ್ತಿ ಓದಿ04:10 PM (IST) Mar 23
9 ವರ್ಷದ ಮಗನ ಬಿಟ್ಟು ತಾಯಿ ದಿಢೀರ್ ಬಾಯ್‌ಫ್ರೆಂಡ್ ಜೊತೆ ಓಡಿ ಹೋಗಿದ್ದಾಳೆ. ಇತ್ತ ಅಪಾರ್ಟ್‌ಮೆಂಟ್‌ನಲ್ಲಿ ಮಗ ಬರೋಬ್ಬರಿ 2 ವರ್ಷ ಏಕಾಂಗಿಯಾಗಿ ಕಳೆದಿದ್ದಾನೆ. ಶಾಲೆಗೂ ಹೋಗಿದ್ದಾನೆ. ಕೊನೆಗೆ ಪೊಲೀಸರು ಈ ಬಾಲಕನ ರಕ್ಷಣೆ ಮಾಡಿದ ಭಯಾನಕ ಘಟನೆ ನಡೆದಿದೆ.
ಪೂರ್ತಿ ಓದಿ03:47 PM (IST) Mar 23
ಉರಗ ತಜ್ಞ ಡಾ.ಪಿ.ಗೌರಿ ಶಂಕರ್, ಹಲ್ಲಿ ಬಿದ್ದ ಆಹಾರ ವಿಷಕಾರಕವಲ್ಲ ಎಂದು ಸಾಬೀತುಪಡಿಸಲು ಸ್ವತಃ ಹಲ್ಲಿ ಬಿದ್ದ ಆಹಾರ ಸೇವನೆ ಮಾಡಿದ್ದಾರೆ. ಇದಾದ ನಂತರ 3 ದಿನಗಳು ನಾಪತ್ತೆ ಆಗಿದ್ದು, ಅವರು ಬದುಕಿದ್ದಾರಾ? ಅಥವಾ ಸತ್ತಿದ್ದಾರಾ? ಎಂಬುದನ್ನು ನೀವೇ ನೋಡಿ...
ಪೂರ್ತಿ ಓದಿ03:18 PM (IST) Mar 23
ಗೋಲಿ ಸೋಡಾ ಭಾರತದ ಸಂಪ್ರಾದಾಯಿಕ ಡ್ರಿಂಕ್. ಆದರೆ ಭಾರತೀಯರು ಮರತೇ ಹೋಗಿದ್ದಾರೆ. ಇದೀಗ ಗೋಲಿ ಸೋಡಾಗೆ ಅಮೆರಿಕಾ, ಯುರೋಪ್, ಗಲ್ಫ್ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಪೂರ್ತಿ ಓದಿ03:15 PM (IST) Mar 23
2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಕೆಕೆಆರ್ ಸೋತಿದೆ. ನಾಯಕ ರಹಾನೆ ಬ್ಯಾಟಿಂಗ್‌ನಲ್ಲಿ ಮಿಂಚಿದರೂ, ಬೌಲಿಂಗ್ ತಂತ್ರಗಳಿಂದ ತಂಡಕ್ಕೆ ಮುಳುವಾದರು.
ಪೂರ್ತಿ ಓದಿ02:42 PM (IST) Mar 23
ಮಗನ ಸಿನಿಮಾ ಸೋಲು ಕಂಡರೆ ಬೇಸರ ಮಾಡಿಕೊಳ್ಳುವವರೂ ಇದ್ದಾರೆ. ಆದರೆ ಜುನೈದ್ ಖಾನ್ ಸೋಲು ನೋಡಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರು ಒಳ್ಳೆಯದಾಯ್ತು ಎಂದಿದ್ದಾರೆ.
ಪೂರ್ತಿ ಓದಿ01:23 PM (IST) Mar 23
ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯರ ಮುಖಕ್ಕೆ ಸಿಗರೇಟ್ ಹೊಗೆ ಬಿಟ್ಟ ಪುಂಡರನ್ನು ಮಹಿಳೆಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂರ್ತಿ ಓದಿ01:00 PM (IST) Mar 23
ಬೆಂಗಳೂರಿನ ಆನೇಕಲ್‌ನಲ್ಲಿ ರಥೋತ್ಸವದ ವೇಳೆ ನೂರು ಅಡಿ ಎತ್ತರದ ರಥ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮದ್ದೂರಮ್ಮ ಜಾತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿವೆ.
ಪೂರ್ತಿ ಓದಿ12:50 PM (IST) Mar 23
ಗ್ರಹಚಾರ ಕೆಟ್ಟರೆ ಏನಾಗುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿದೆ ಈ ಘಟನೆ. ಲೇಡಿ ಸಬ್-ಇನ್ಸ್‌ಪೆಕ್ಟರ್ ಒಬ್ಬರು ಕೊಟ್ಟ ರಜೆ ಚೀಟಿಯಲ್ಲಿನ ಕಾಗುಣಿತ ದೋಷದಿಂದ ಆಕೆ ಕೆಲಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಏನಿದು ಸ್ಟೋರಿ?
12:42 PM (IST) Mar 23
2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಕೆಕೆಆರ್ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದಿದೆ. 2019ರ ಬಳಿಕ ಈಡನ್ ಗಾರ್ಡನ್ಸ್‌ನಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ನರೈನ್ ಬ್ಯಾಟ್ ವಿಕೆಟ್‌ಗೆ ತಾಗಿದರೂ ಔಟ್ ನೀಡದ ಅಂಪೈರ್ ನಿರ್ಧಾರ ಚರ್ಚೆಗೆ ಗ್ರಾಸವಾಗಿದೆ.
ಪೂರ್ತಿ ಓದಿ12:30 PM (IST) Mar 23
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಆರ್‌ಎಸ್‌ಎಸ್ ಕಳವಳ ವ್ಯಕ್ತಪಡಿಸಿದೆ. ಹಿಂದೂ ಸಮುದಾಯವನ್ನು ಬೆಂಬಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ವಿಶ್ವಸಂಸ್ಥೆ ಈ ಬಗ್ಗೆ ಗಮನಹರಿಸುವಂತೆ ಆಗ್ರಹಿಸಲಾಗಿದೆ.
ಪೂರ್ತಿ ಓದಿ10:51 AM (IST) Mar 23
ನಾಗತಿಹಳ್ಳಿ ಚಂದ್ರಶೇಖರ್ ಅವರ ಹುಟ್ಟೂರಿನ ಪ್ರೀತಿ ಮತ್ತು ಅಲ್ಲಿ ನಡೆಯುವ ಸಂಸ್ಕೃತಿ ಹಬ್ಬದ ಕುರಿತಾದ ಲೇಖನವಿದು. 21 ವರ್ಷಗಳಿಂದ ನಡೆಯುತ್ತಿರುವ ಈ ಹಬ್ಬ, ಗ್ರಾಮದ ಸ್ವಾವಲಂಬನೆಗೆ ಮೇಷ್ಟ್ರು ಹಾಕಿರುವ ಕನಸು.
ಪೂರ್ತಿ ಓದಿ10:29 AM (IST) Mar 23
ಗ್ರಾಪಂ ವತಿಯಿಂದ ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಮೊದಲ ಹಂತವಾಗಿ ಕಲಬುರಗಿ ಮತ್ತು ಮಾಲೂರಿನಲ್ಲಿ ಪ್ರಾಯೋಗಿಕವಾಗಿ ಸೋಲಾರ್ ಪ್ಲಾಂಟ್ ನಿರ್ಮಿಸಲಾಗುವುದು.
ಪೂರ್ತಿ ಓದಿ10:16 AM (IST) Mar 23
ಟೀ ಕುಡಿಯಲು ಹೋದ ಮಹಿಳೆ ಚಾಯ್‌ವಾಲಾಗೆ ಅಂಕಲ್ ಎಂದು ಕರೆದಿದ್ದಕ್ಕೆ ಆತ ಕೋಪಗೊಂಡಿದ್ದಾನೆ. ಇದರಿಂದ ಗೊಂದಲಕ್ಕೊಳಗಾದ ಮಹಿಳೆ, ಚಾಯ್‌ವಾಲಾಗೆ ಏನೆಂದು ಕರೆಯಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾಳೆ.
ಪೂರ್ತಿ ಓದಿ10:03 AM (IST) Mar 23
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಲ್ಲಿ ಆರ್‌ಎಸ್ಎಸ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅರುಣ್ ಕುಮಾರ್ ಹೇಳಿದ್ದಾರೆ. ಬಿಜೆಪಿ ಸ್ವತಂತ್ರ ಪಕ್ಷವಾಗಿದ್ದು, ಅಧ್ಯಕ್ಷರ ಆಯ್ಕೆ ಅವರ ಆಂತರಿಕ ವಿಚಾರ ಎಂದಿದ್ದಾರೆ. ಗಡಿ-ಭಾಷೆ ಸಮಸ್ಯೆಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಪೂರ್ತಿ ಓದಿ09:35 AM (IST) Mar 23
ಹುಣಸೂರು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಎಲ್ಲಾ 12 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಶಾಸಕ ಜಿ.ಡಿ. ಹರೀಶ್ ಗೌಡ ಅವರ ರಾಜಕೀಯ ತಂತ್ರಗಾರಿಕೆ ಜೆಡಿಎಸ್ ಗೆಲುವಿಗೆ ಕಾರಣವಾಗಿದೆ.
ಪೂರ್ತಿ ಓದಿ09:09 AM (IST) Mar 23
ಸಚಿವ ರಾಜಣ್ಣ ಹಲೋ ಅಂದ್ರೆ ವಾಟ್ ಅಂತಾರೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ಹನಿಟ್ರ್ಯಾಪ್ ಬಗ್ಗೆ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಹನಿಟ್ರ್ಯಾಪ್ ತನಿಖೆಗೆ ಆಗ್ರಹಿಸಿದ್ದಾರೆ.
ಪೂರ್ತಿ ಓದಿ09:07 AM (IST) Mar 23
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸಲ್ಲಿ ಸಿಬಿಐ ಕ್ಲೋಸರ್ ರಿಪೋರ್ಟ್ ಸಲ್ಲಿಸಿದೆ. ಅವರ ಸಾವಿಗೆ ಯಾರೂ ಕಾರಣ ಅಲ್ಲ ಅಂತ ಹೇಳಿದೆ. ನಟಿ ರಿಯಾ ಚಕ್ರವರ್ತಿಗೆ ಕ್ಲೀನ್ ಚಿಟ್ ಸಿಕ್ಕಿದೆ.
ಪೂರ್ತಿ ಓದಿ08:41 AM (IST) Mar 23
ಬೆಂಗಳೂರಿನಲ್ಲಿ ಮಳೆಯಿಂದ ಹಾನಿಯಾದಲ್ಲಿ ಬಿಬಿಎಂಪಿ ಸಹಾಯವಾಣಿ 1533ಗೆ ಕರೆ ಮಾಡಿ ಎಂದು ಆಯುಕ್ತರು ತಿಳಿಸಿದ್ದಾರೆ. ಯಲಹಂಕದಲ್ಲಿ ಹೆಚ್ಚು ಮಳೆಯಾಗಿದ್ದು, ಮರ ಬಿದ್ದು ಮಗು ಸಾವನ್ನಪ್ಪಿದೆ. ತಕ್ಷಣವೇ ದೂರುಗಳನ್ನು ಸ್ವೀಕರಿಸಲು ಸೂಚನೆ ನೀಡಲಾಗಿದೆ.
ಪೂರ್ತಿ ಓದಿ08:41 AM (IST) Mar 23
ಸತೀಶ್ ಜಾರಕಿಹೊಳಿ ಅವರು ಘರ್ಜಿಸುವ ಹುಲಿಗಳ ಮೇಲೆ ಹನಿಟ್ರ್ಯಾಪ್ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಹನಿಟ್ರ್ಯಾಪ್ ಪ್ರಕರಣದಲ್ಲಿ ದೂರು ನೀಡುವಂತೆ ರಾಜಣ್ಣ ಅವರಿಗೆ ಸಲಹೆ ನೀಡಿದ್ದು, ಸಿಬಿಐ ತನಿಖೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಪೂರ್ತಿ ಓದಿ08:19 AM (IST) Mar 23
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರಗಳು ಧರೆಗುರುಳಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇನ್ನೂ ನಾಲ್ಕೈದು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.