ಸಿದ್ದರಾಮಯ್ಯ ಜೊತೆಗಿರುವಾಗ ದಲಿತ ಸಿಎಂ ಕೂಗು ಬರಲ್ಲ: ಹೆಚ್.ಸಿ. ಮಹದೇವಪ್ಪ

By Sathish Kumar KH  |  First Published Aug 25, 2024, 12:37 PM IST

ಸಚಿವ ಹೆಚ್.ಸಿ. ಮಹದೇವಪ್ಪ ಅವರು ಸಿಎಂ ಸಿದ್ದರಾಮಯ್ಯ ನಾಯಕತ್ವವನ್ನು ಬೆಂಬಲಿಸಿದ್ದಾರೆ ಮತ್ತು ನಾಯಕತ್ವ ಬದಲಾವಣೆಯ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. 


ಬೆಂಗಳೂರು (ಆ.25): ರಾಜ್ಯದಲ್ಲಿರುವ ಪ್ರತಿಯೊಂದು ಸಮುದಾಯದ ನಾಯಕರಿಗೂ ಮುಖ್ಯಮಂತ್ರಿಯಾಗಲು ಅವಕಾಶ ಸಿಗಬೇಕು. ಆದರೆ, ಈಗ ಸಿದ್ದರಾಮಯ್ಯ ಜೊತೆಗೆ ನಿಂತಾಗ ಸದ್ಯಕ್ಕೆ ದಲಿತ ಸಿಎಂ ಕೂಗು ಬರಲ್ಲ ಎಂದು ಸಮಾಜ ಕಲ್ಯಾಣ ಇಲಾಕೆ ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದರು.

ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಜೊತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ಅಧ್ಯಕ್ಷರೊಂದಿಗೆ ಪ್ರತ್ಯೇಕವಾಗಿ ಚರ್ಚೆ ಮಾಡಿದ್ದಾರೆ. ರಾಜ್ಯದ ಎಲ್ಲ ವಿದ್ಯಮಾನಗಳ ವಿವರವಾಗಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ರಾಜ್ಯದ ನಾಯಕರು ಸರ್ಕಾರದ ವಿರುದ್ಧ ಹೇಗೆ ಷಡ್ಯಂತ್ರ ನಡೆಯುತ್ತಿದೆ,  ಹೇಗೆ ಸರ್ಕಾರ ಅಸ್ಥಿರ ಮಾಡಲಾಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ. ಸಿದ್ದರಾಮಯ್ಯ ನಾಯಕತ್ವದ ಪರವಾಗಿ ನಾವಿದ್ದೇವೆ ಎಂಬುದನ್ನು ಹೈಕಮಾಂಡ್ ಹೇಳಿದೆ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Tap to resize

Latest Videos

ಮುಡಾ ಹಗರಣ ಕೋಮುವಾದಿಗಳ ಸೃಷ್ಟಿ; ಸಿಎಂ ತಪ್ಪೇ ಮಾಡಿಲ್ಲ: ಸಚಿವ ಮಹದೇವಪ್ಪ 

ಮಂತ್ರಿ ಮಂಡಲ, ಎಐಸಿಸಿ, ಕೆಪಿಸಿಸಿ ಎಲ್ಲವೂ ಸಿದ್ದರಾಮಯ್ಯ ನಾಯಕತ್ವದ ಬೆಂಬಲಕ್ಕೆ ನಿಂತಿದೆ. ಆ ಪ್ರಶ್ನೆಗೆ ಸ್ಕೋಪ್ ಇಲ್ಲವೇ ಇಲ್ಲ, ಪಕ್ಷದ ವಲಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯೇ ನಡೆಯುತ್ತಿಲ್ಲ. ಷಡ್ಯಂತ್ರ ಪಿತೂರಿಗಳನ್ನು ಭಗ್ನಗೊಳಿಸಬೇಕು ಎಂದು ನಿಂತಿದ್ದೇವೆ. ಸಿದ್ದರಾಮಯ್ಯ ಆರೋಗ್ಯಕರವಾಗಿದ್ದಾರೆ. ಒಂದು ದಿನವೂ ರೆಸ್ಟ್ ತೆಗೆದುಕೊಳ್ಳದೇ ಕೆಲಸ ಮಾಡ್ತಿದ್ದಾರೆ. ಎಲ್ಲಿಯೂ ಕೂಡ ಬೇರೆ ಉದ್ದೇಶ ಇಟ್ಟುಕೊಂಡು ಸಭೆ ನಡೆಯುತ್ತಿಲ್ಲ, ನಡೆದಿಲ್ಲ. ಸ್ವತಃ ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಲ್ಲೇ ದೆಹಲಿಯಲ್ಲಿ ಸಭೆ ನಡೆದಿದೆ. ನಾಯಕತ್ವ ಬದಲಾವಣೆ ಎಲ್ಲವೂ ಊಹಾಪೋಹಗಳು ಎಂದು ತಿಳಿಸಿದರು.

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಬೇಕು ಎನ್ನುವ ವಿಚಾರದ ಬಗ್ಗೆ ಮಾತನಾಡಿ, ರಾಜ್ಯದ ಪ್ರತಿಯೊಂದು ಸಮುದಾಯಕ್ಕೆ ಸಿಎಂ ಅವಕಾಶ ಸಿಗಬೇಕು. ಆದರೆ, ಈಗ ಸಿದ್ದರಾಮಯ್ಯ ಜೊತೆಗೆ ನಿಂತಾಗ ಸದ್ಯಕ್ಕೆ ದಲಿತ ಸಿಎಂ ಕೂಗು ಬರಲ್ಲ. ಕೆಲವು ಕಡೆ ಸಭೆ ನಡೆಯುತ್ತಿರಬಹುದು. ಆದರೆ‌, ಸಿಎಂ ಸಿದ್ದರಾಮಯ್ಯ ಬದಲಾವಣೆ ಬಗ್ಗೆ ಎಲ್ಲೂ ಸಭೆ ನಡೆಯುತ್ತಿಲ್ಲ. ಹೆಚ್.ಡಿ. ಮಹಾದೇವಪ್ಪ ಯಾವಾಗಲೂ ಸಿದ್ದರಾಮಯ್ಯ ಜೊತೆಗೆ ಇರ್ತಾರೆ. ಇದೇನು ಹೊಸದೇನಲ್ಲಾ. ಯಾಕೆಂದರೆ ನಮ್ಮಿಬ್ಬರ ಐಡಿಯಾ ಒಂದೇ ಇದೆ. ಹೀಗಾಗಿ, ನಾನು ಯಾವಾಗಲೂ ಸಿದ್ದರಾಮಯ್ಯ ಜೊತೆಗೆ ಇರ್ತೆನೆ. ರಾಜ್ಯದಲ್ಲಿ ವಿಧೇಯಕ ಮಾಡುವುದು ಶಾಸಕರ ಆದ್ಯ ಕರ್ತವ್ಯವಾಗಿದೆ. SC, ST  ಬಗ್ಗೆ ಒಂದು ಬಿಲ್ ವಾಪಸ್ ಕಳುಹಿಸಿದ್ದಾರೆ. ಆದರೆ, ಶಾಸಕರು ಕೆಲಸ ಮಾಡುವುದು ಬೇಡ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಿಯಾಂಕಾನೂ ಅಲ್ಲ ರಾಹುಲ್‌ ಕೂಡ ಅಲ್ಲ ಹಾಗಿದ್ರೆ ಸೋನಿಯಾ ಗಾಂಧಿ ಫೇವರೇಟ್ ಚೈಲ್ಡ್‌ ಯಾರು?

ಬಿಜೆಪಿ, ಕಾಂಗ್ರೆಸ್ ಶಾಸಕರ ಖರೀದಿ ಮಾಡ್ತಿದ್ದಾರೆ ಎಂಬ ಶಾಸಕ ರವಿ ಗಣಿಗ ಆರೋಪ ವಿಚಾರದ ಬಗ್ಗೆ ಮಾತನಾಡಿ, ಇದು ಹೊಸ ಸಂಗತಿಯಾ? ಇದುವರೆಗೂ ಬಿಜೆಪಿ ಹಾಗೂ ಜೆಡಿಎಸ್ ಗೆ ಬಹುಮತ ಕೊಟ್ಟಿದ್ರಾ.? ಅವರ ರಾಜಕೀಯ ಹೊಸ ಪ್ರಯೋಗವೇ ಆಪರೇಷನ್ ಆಗಿದೆ. ಹೀಗಾಗಿ ಶಾಸಕರನ್ನು ಖರೀದಿ ಮಾಡುವುದು ಕೆಲಸ ಬಿಜೆಪಿ ಜೆಡಿಎಸ್ ಮಾಡುತ್ತಿದೆ. ಜನರ ಮತಕ್ಕೆ ಬೆಲೆ ಕೊಡಬೇಕು, ಜನರು ಕೊಟ್ಟ ಬಹುಮತಕ್ಕೆ ರೆಸ್ಪೆಕ್ಟ್ ಕೊಡಬೇಕು. ಆದರೆ, ಏಕಾಏಕಿ ಸರ್ಕಾರ ರಚನೆ ಮಾಡಲು ರಾಜ್ಯಪಾಲರು ಬಳಕೆ ಮಾಡ್ಕೋತ್ತಾರೆ. ಆದರೆ ಸಿದ್ದರಾಮಯ್ಯ ದೊಡ್ಡ ಲೀಡರ್. ಹೀಗಾಗಿ, ಅಡ್ಡದಾರಿಯಿಂದ ಶಾಸಕರನ್ನ ಖರೀದಿ ಮಾಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

click me!