ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿ ಕೊಬ್ಬು ಬಳಸಿದ ಬಗ್ಗೆ ರಾಹುಲ್ ಗಾಂಧಿ ಯಾಕೆ ಸೈಲೆಂಟ್? ಜಗದೀಶ್ ಶೆಟ್ಟರ್ ಕಿಡಿ

By Ravi Janekal  |  First Published Sep 21, 2024, 4:12 PM IST

ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿದೆ. ಹೀಗಾಗಿ ಜನರ ಮೈಂಡ್ ಡೈವರ್ಟ್ ಮಾಡಲು ಬಿಜೆಪಿಯ ಐದಾರು ನಾಯಕರ ಮೇಲೆ ಎಫ್‌ಐಆರ್ ದಾಖಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.


ಹುಬ್ಬಳ್ಳಿ (ಸೆ.21): ಮುಡಾ ಹಾಗೂ ವಾಲ್ಮೀಕಿ ಹಗರಣದಿಂದ ಜನರನ್ನು ಡೈವರ್ಟ್ ಮಾಡಲು‌ ಬಿಜೆಪಿ ನಾಯಕರ ಮೇಲೆ ಎಫ್ಐಆರ್ ಮಾಡಲಾಗುತ್ತಿದೆ. ಎರಡು ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ. ಇದನ್ನು ಡೈವರ್ಟ್ ಮಾಡಲು ಬಿಜೆಪಿಯ ಐದಾರು ನಾಯಕರ ಮೇಲೆ ಎಫ್‌ಐಆರ್ ಮಾಡಿಸಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿಂದು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಂಸದರು, ಸಿಎಂ ಹುದ್ದೆಗಾಗಿ ಕೆಲವರು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ಜೋರಾಗಿದೆ, ಹೀಗಾಗಿ ಜನರ ಮೈಂಡ್ ಡೈವರ್ಟ್ ಮಾಡಲು ಬಿಜೆಪಿ ನಾಯಕರ ಮೇಲೆ ಎಫ್‌ಐಆರ್ ಮಾಡಲಾಗುತ್ತಿದೆ. ಯಡಿಯೂರಪ್ಪನವರ ಮೇಲಿನ ಕೇಸ್ ಹೊರ ತರೋ ಪ್ರಯತ್ನ ನಡೆದಿದೆ. ಹಳೇ ಕೇಸ್ ಹೊರಗೆ ತರೋ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಿಂದೆ ಸಿಎಂ ಇದ್ರು,ಅವಾಗ ಯಾಕೆ ಮಾಡಲಿಲ್ಲ? ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ, ಅರಾಜಕತೆ ಉಂಟಾಗಿದೆ. ಗಣೇಶ ವಿಸರ್ಜನೆ ವೇಳೆ ಚಾಕು ಇರಿತ ,ಕೊಲೆಯಾಗ್ತಿವೆ ಕಾಂಗ್ರೆಸ್ ಯಾವಾಗ ಅಧಿಕಾರಕ್ಕೆ ಬರತ್ತೆ ಆಗ ಕೋಮು ಗಲಭೆ ದಂಗೆಗಳು ಏಳುತ್ತವೆ. ರಾಜ್ಯದಲ್ಲಿ ಪ್ಯಾಲೆಸ್ತೇನ್ ಹಾರಿಸುತ್ತಾರೆ. ಧ್ವಜ ಹಾರಿಸಿದ್ರೆ ತಪ್ಪೇನು ಅಂತಾ ಕಾಂಗ್ರೆಸ್ ನವರು ಕೇಳುತ್ತಾರೆ ಎಂದು ಇವರು ವೋಟ್‌ ಬ್ಯಾಂಕ್‌ಗೆ ಯಾವ ಮಟ್ಟಕ್ಕೆ ಇಳಿದಿದ್ದಾರೆಂಬುದು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. 

Tap to resize

Latest Videos

undefined

ಜಗನ್ ಆಡಳಿತದಲ್ಲಿ ತಿರುಮಲ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬಳಸಲಾಗಿತ್ತು: ಸಂಚಲನ ಸೃಷ್ಟಿಸಿದ ಸಿಎಂ ಚಂದ್ರಬಾಬು ನಾಯ್ಡು!

ಪ್ಯಾಲೆಸ್ತೀನ್ ಧ್ವಜ ಹಿಡಿದು ಹಾರಾಡ್ತಾರೆ. ಅದಕ್ಕೂ ನಮಗೆ ಏನು ಸಂಬಂಧ? ಪಾಕಿಸ್ತಾನಕ್ಕೂ ನಮಗೂ ಏನು ಸಂಬಂಧ? ಇದಕ್ಕೆಲ್ಲ ಕಾಂಗ್ರೆಸ್ ನೀತಿ ಕಾರಣ. ಬೆಳಗಾವಿ ಅಷ್ಟೇ ಅಲ್ಲ ರಾಜ್ಯದ ಎಲ್ಲಕಡೆ ಪ್ಯಾಲೆಸ್ತೇನ್ ಧ್ವಜ ಹಾರಾಡ್ತಿವೆ. ಕಾಂಗ್ರೆಸ್ ಸರ್ಕಾರ ಇದೆ ಏನ್ ಮಾಡಿದ್ರು ನಡೆಯತ್ತೆ ಅನ್ನೋ ಕಾರಣಕ್ಕೆ ಹೀಗೆ ಮಾಡ್ತಿದ್ದಾರೆ. ರಾಹುಲ್ ಗಾಂಧಿ ರಾಜಕೀಯ ತೀಟೆ ತೀರಿಸಿಕೊಳ್ಳಲು ಭಾರತ ,ಆರ್‌ಎಸ್‌ಎಸ್‌ ಬಗ್ಗೆ ಟೀಕೆ ಮಾಡ್ತಿದ್ದಾರೆ. ತಮ್ಮ ವಯಕ್ತಿಕ ರಾಜಕೀಯ ತೀಟೆ ತೀರಿಸಲು ದೇಶದ ಗೌರವ ಹಾಳು ಮಾಡಲು ಹೊರಟಿದ್ದಾರೆ.  ದೇಶದಲ್ಲಿನ ಮೀಸಲಾತಿ, ಅಲ್ಪ ಸಂಖ್ಯಾತರಿಗೆ ರಕ್ಷಣೆ ಇಲ್ಲ ಅಂತ ವಿದೇಶದಲ್ಲಿ ಮಾತಾಡ್ತಾರೆ ಎಂದು ಹರಿಹಾಯ್ದರು.

ತಿರುಪತಿ ಲಡ್ಡುನಲ್ಲಿ ಪ್ರಾಣಿ ಕೊಬ್ಬಿಗೂ, ಕೆಎಂಫ್‌ನ ನಂದಿನಿ ತುಪ್ಪಕ್ಕೂ ಸಂಬಂಧವೇ ಇಲ್ಲ!

ಹಿಂದೂ ಧರ್ಮದ ನಂಬಿಕೆಯನ್ನು ಹಾಳು ಮಾಡೋ ಕೆಲಸ ಹಿಂದಿನ ಆಂಧ್ರ ಪ್ರದೇಶದ ಸಿಎಂ ಆಗಿದ್ದ ಜಗನ್ ರೆಡ್ಡಿ ಮಾಡಿದ್ದಾರೆ. ವೈಜ್ಞಾನಿಕವಾದ ರಿಪೋರ್ಟ್ ಹೊರಗಡೆ ಬಂದಿದೆ. ಜಗನ್ ರೆಡ್ಡಿ, ಅವರ ತಂದೆ ಕ್ರಿಶ್ಚಿಯನ್‌ ಧರ್ಮಕ್ಕೆ ಕನ್ವರ್ಟಡ್ ಆದವರು. ಹೀಗಾಗಿ ಅವರಿಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲ. ಅಂತವರಿಗೆ ಕಾಂಗ್ರೆಸ್ ಸಪೋರ್ಟ್ ಮಾಡುತ್ತೆ. ತಿರುಪತಿ ಲಡ್ಡು ಪ್ರಸಾದ ಬಗ್ಗೆ ರಾಹುಲ್ ಗಾಂಧಿ ಯಾಕೆ ಮಾತಾಡ್ತಿಲ್ಲ? ತುಷ್ಟೀಕರಣ ಪರವಾಗಿ ನಿಲ್ಲೋರಿಗೆ ಜನರೇ ಪಾಠ ಕಲಿಸ್ತಾರೆ.

click me!