ಡಿನೋಟಿಫಿಕೇಶನ್ ಕುರಿತು ಸಚಿವ ಕೃಷ್ಣ ಬೈರೇಗೌಡರ ಆರೋಪ ಮಾಡಿದ್ದಾರೆ. ಅದಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು 2006-07 ರಲ್ಲಿ ಸಿಎಂ ಆಗಿದ್ರು. ಯಡಿಯೂರಪ್ಪ ಅವರ ಮೇಲೆಯೂ ಆರೋಪ ಮಾಡಿದ್ದಾರೆ. ಹಾಗಾದ್ರೆ ನೀವೇ ಯಾಕೆ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಹೋಗಿ ಸಿಂ ಮಾಡಿದ್ರೀ.. ನಿಮ್ಮದೆ ಅಧಿಕಾರ ಇದ್ದಾಗ ಯಾಕೆ ಸುಮ್ಮನೆ ಇದ್ರೀ..?. ಇದು ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ಸಿಗರ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ(ಸೆ.21): ರಾಜ್ಯದಲ್ಲಿ 100 ಪರ್ಸೆಂಟ್ ದ್ವೇಷದ ರಾಜಕಾರಣ ನಡೆದಿದೆ. ಎಲ್ಲರನ್ನು ಹುಡುಕಿ ಹುಡುಕಿ FIR ಹಾಕೋ ಕೆಲಸ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ಡಿನೋಟಿಫಿಕೇಶನ್ ಕುರಿತು ಸಚಿವ ಕೃಷ್ಣ ಬೈರೇಗೌಡರ ಆರೋಪ ಮಾಡಿದ್ದಾರೆ. ಅದಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು 2006-07 ರಲ್ಲಿ ಸಿಎಂ ಆಗಿದ್ರು. ಯಡಿಯೂರಪ್ಪ ಅವರ ಮೇಲೆಯೂ ಆರೋಪ ಮಾಡಿದ್ದಾರೆ. ಹಾಗಾದ್ರೆ ನೀವೇ ಯಾಕೆ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಹೋಗಿ ಸಿಂ ಮಾಡಿದ್ರೀ.. ನಿಮ್ಮದೆ ಅಧಿಕಾರ ಇದ್ದಾಗ ಯಾಕೆ ಸುಮ್ಮನೆ ಇದ್ರೀ..?. ಇದು ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ಸಿಗರ ವಿರುದ್ಧ ಕಿಡಿಕಾರಿದ್ದಾರೆ.
undefined
ತಿರುಪತಿ ಲಡ್ಡು ವಿವಾದ: ಕರ್ನಾಟಕದ ಎಲ್ಲಾ ದೇಗುಲಗಳ ಪ್ರಸಾದ ಪರೀಕ್ಷೆಗೆ ಒಳಪಡಿಸಿ, ಕೇಂದ್ರ ಸಚಿವ ಜೋಶಿ
ಕಳ್ಳರು ಅಂತಾ ಗೊತ್ತಾದಾಗ ಬೇರೆದವರು ಕಳ್ಳರು ಅನ್ನೋ ಪ್ರಯತ್ನ. ರಾಹುಲ್ ಗಾಂಧಿ ಅವರು ಮೊಹಬತ್ ಕಾ ದುಖಾನ್ ಅಂತಾರೆ. ನಾನು ಅವರಿಗೆ ಅಹ್ವಾನ ಕೊಡ್ತೀನಿ, ಕರ್ನಾಟಕಕ್ಕೆ ಬಂದು ಮೊಹಬ್ಬತ್ ದುಖಾನ್ ನೋಡಿ. ನಿಮ್ಮ ಸಿಎಂ ಸಿಕ್ಕಿಹಾಕಿಕೊಂಡಿದ್ದಾರೆ. ಹೊರ ದೇಶಕ್ಕೆ ಹೋಗಿ ಮಾತಾಡ್ತೀರಿ. ಕರ್ನಾಟಕಕ್ಕೆ ಬಂದು ನೋಡಿ ಎಂದು ರಾಹುಲ್ ಗಾಂಧಿಗೆ ಆಹ್ವಾನ ಕೊಟ್ಟಿದ್ದಾರೆ.
ರಾಹುಲ್ ಗಾಂಧಿ ಕೂಡಾ ದ್ವೇಷದ ರಾಜಕಾರಣ ಮಾಡಿದ್ರೆ, ಇಲ್ಲಿ ರಾಜಕಾರಣ ಹಗೆತನ ಸಾಧಿಸುತ್ತಿದ್ದಾರೆ. ಗಣಪತಿ ವಿಸರ್ಜನೆಯಲ್ಲಿ ಲಾಂಗ್ ಮಚ್ಚು ತಂದಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಇನ್ನು ಅರೆಸ್ಟ್ ಮಾಡಿಲ್ಲ ಎಂದು ಹೇಳಿದ್ದಾರೆ.