MLC Election : ಜೆಡಿಎಸ್ 7 ಅಭ್ಯರ್ಥಿಗಳ ಪಟ್ಟಿ ರಿಲೀಸ್ : ಸಂದೇಶ್ ಅತಂತ್ರ

Suvarna News   | Asianet News
Published : Nov 23, 2021, 09:27 AM ISTUpdated : Nov 23, 2021, 09:54 AM IST
MLC Election : ಜೆಡಿಎಸ್ 7 ಅಭ್ಯರ್ಥಿಗಳ ಪಟ್ಟಿ ರಿಲೀಸ್ : ಸಂದೇಶ್ ಅತಂತ್ರ

ಸಾರಾಂಶ

ರಾಜ್ಯದಲ್ಲಿ ರಂಗೇರಿದ ವಿಧಾನ ಪರಿಷತ್ ಚುನಾವಣಾ ಕಣ ಜೆಡಿಎಸ್‌ನಿಂದ 7 ಅಭ್ಯರ್ಥಿಗಳ ಪಟ್ಟಿ ರಿಲೀಸ್ 

ಮೈಸೂರು (ನ.23):  ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ (MLC Election) ಕಣ ರಂಗೇರಿದೆ. ಈ ನಡುವೆ ಬಿಜೆಪಿ (BJP) ಪಟ್ಟಿ ರಿಲೀಸ್ ಆಗಿದ್ದು ಬೆನ್ನಲ್ಲೇ ಜೆಡಿಎಸ್ (JDS) ಅಭ್ಯರ್ಥಿಗಳ ಪಟ್ಟಿಯೂ ಬಿಡುಗಡೆಯಾಗಿದೆ.  ಮೈಸೂರಿನ (Mysuru) ಟಿಕೆಟ್ ವಿಚಾರದಲ್ಲಿ  ಕೊನೆಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ಹಠವೇ ಗೆದ್ದಿದೆ. ಯಾರ ಮಾತಿಗೂ ಸೊಪ್ಪು ಹಾಕದ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಟಿಕೆಟ್‌ ಸಿಗದೇ ಅತೃಪ್ತಿಗೊಂಡ ಮುಖಂಡ ಮಂಜೇಗೌಡರಿಗೆ ಟಿಕೆಟ್ ನೀಡಿದ್ದಾರೆ. ಅತ್ತ ಹಾಸನದಲ್ಲಿ ಕುಟುಂಬದ ಕುಡಿ ಸೂರಜ್ ರೇವಣ್ಣ (Suraj Revanna) ಕಣಕ್ಕೆ ಇಳಿದಿದ್ದಾರೆ. ಈ ಮೂಲಕ ಗೌಡರ ಕುಟುಂಬದ ಮತ್ತೊಬ್ಬ ಮುಖಂಡ ರಾಜಕೀಯ ರಂಗವನ್ನು ಅಧಿಕೃತವಾಗಿ ಪ್ರವೇಶಿಸಿದಂತಾಗಿದೆ. 

ಜೆಡಿಎಸ್ ಪರಿಷತ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಿದೆ. ಒಟ್ಟು 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕಲಾಗಿದ್ದು, ಉಳಿದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿದೆ. 

ಅಭ್ಯರ್ಥಿಗಳು ಪಟ್ಟಿ  

 ಮಂಡ್ಯ  -  ಅಪ್ಪಾಜಿ ಗೌಡ
 ತುಮಕೂರು -  ಅನಿಲ್ ಕುಮಾರ್
 ಮೈಸೂರು  - ಮಂಜೇಗೌಡ
 ಕೋಲಾರ - ವಕ್ಕಲೇರಿ ರಾಮು
 ಬೆಂ.ಗ್ರಾಮಾಂತರ - ರಮೇಶ್ ಗೌಡ
 ಕೊಡಗು - ಇಸಾಕ್ ಖಾನ್
 ಹಾಸನ - ಸೂರಜ್ ರೇವಣ್ಣ

"

ಬಿಜೆಪಿ ಸೇರಲಿಚ್ಚಿಸಿ ಅಲ್ಲಿಂದ ಕೊನೆಗಳಿಗೆಯಲ್ಲಿ ಟಿಕೆಟ್ (Ticket) ಸಿಗದೇ ವಂಚಿತರಾದ ಸಂದೇಶ್ ನಾಗರಾಜ್ (Sandesh Nagaraj) ಜೆಡಿಎಸ್ ಟಿಕೆಟ್‌ಗೆ ಯತ್ನಿಸಿ ಅಲ್ಲಿಯೂ ವಿಫಲರಾಗಿದ್ದಾರೆ. ಆದರೆ ಹಾಕಿಸಿದ್ದ ಒತ್ತಡಕ್ಕೆ ಬಗ್ಗದೇ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ತಮ್ಮ  ಹಠ ಸಾಧಿಸಿದ್ದಾರೆ.  ಪರಿಷತ್ ಟಿಕೆಟ್ ನೀಡುವಂತೆ ದೇವೇಗೌಡರ (HD Devegowda) ಮೂಲಕ ಒತ್ತಡ ಹಾಕಿಸಿದ್ದ ಸಂದೇಶ್ ನಾಗರಾಜ್ ಯತ್ನಕ್ಕೆ ಸೋಲಾಯಿತು. 

 ಪಕ್ಷದ ವಿರುದ್ಧ ಮಾತನಾಡಿದ್ದವರಿಗೆ ಟಿಕೆಟ್ ಕೊಡಲು ಸುತಾರಾಂ ಒಪ್ಪದ ಎಚ್ಡಿಕೆ ಈ ಹಿಂದೆಯೇ ಪಕ್ಷಕ್ಕೆ ದ್ರೋಹ ಮಾಡಿದವರ ಸೋಲಿಗೆ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆನ್ನಲಾಗಿತ್ತು.  ದೇವೇಗೌಡರೇ ಹೇಳಿದರೂ ಒಪ್ಪದ ಕುಮಾರಸ್ವಾಮಿ ಅವರನ್ನು ಕೊನೆಗೆ ಖುದ್ದು ಸಂದೇಶ್ ನಾಗರಾಜ್ ಬಂದು ಭೇಟಿ ಮಾಡಿದ್ದರು. ಆದರೂ ಹಠಕ್ಕೆ ಬಿದ್ದ ಕುಮಾರಸ್ವಾಮಿ ಕೊನೆಗೂ ಸಂದೇಶ್ ನಾಗರಾಜ್  ಗೆ ಟಿಕೆಟ್ ತಪ್ಪಸಿ  ಮಂಜೇಗೌಡರಿಗೆ ಟಿಕೆಟ್ ನೀಡಿದ್ದಾರೆ. 

ಈ ಮೂಲಕ ಪಕ್ಷದ ವಿರುದ್ಧ ಮಾತನಾಡಿದವರಿಗೆ ಸ್ಪಷ್ಟ 'ಸಂದೇಶ ರವಾನಿಸಿದ್ದು, ಅನುಕೂಲಕ್ಕೆ ತಕ್ಕಂತೆ ವರ್ತಿಸುವವರಿಗೆ ನಮ್ಮಲ್ಲಿ ಸ್ಥಾನವಿಲ್ಲ ಎಂಬ ಸಂದೇಶ ಕೊಟ್ಟಿದ್ದಾರೆ.  ಅಲ್ಲಿಯೂ ಇಲ್ಲ,ಇಲ್ಲಿಯೂ ಇಲ್ಲದಂತೆ ಸಂದೇಶ್ ನಾಗರಾಜ್ ಸ್ಥಿತಿಯಾಗಿದೆ. 

ನಡೆದಿತ್ತು ಜಿಟಿಡಿ ಮನ ಒಲಿಕೆ ಯತ್ನ  :   ಮೈಸೂರು (Mysuru ),ಚಾಮರಾಜನಗರ (Chamarajanagar) ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ತಾಪಂ ಮಾಜಿ ಅಧ್ಯಕ್ಷ ಸಿ.ಎನ್‌. ಮಂಜೇ ಗೌಡರಿಗೆ (Manjegowda) ಜೆಡಿಎಸ್‌ ಟಿಕೆಟ್‌ (JDS Ticket) ನೀಡಿದೆ.  ಹಾಲಿ ಜೆಡಿಎಸ್‌ (JDS) ಸದಸ್ಯರಾಗಿರುವ ಸಂದೇಶ್‌ ನಾಗರಾಜ್‌ (Sandesh nagaraj) ಬಿಜೆಪಿ (BJP) ಟಿಕೆಟ್‌ಗಾಗಿ ಕಾದು ಕುಳಿತಿದ್ದರು. ಅದು ಆರ್‌. ರಘು (R Raghu) ಅವರ ಪಾಲಾಗಿದೆ. ಹೀಗಾಗಿ ಅವರು ಮತ್ತೆ ತಮ್ಮ ಪುತ್ರನ ಮೂಲಕ ಶಾಸಕ ಸಾ.ರಾ. ಮಹೇಶ್‌ (Sa Ra Mahesh) ಅವರನ್ನು ಸಂಪರ್ಕಿಸಿ, ಜೆಡಿಎಸ್‌ ಟಿಕೆಟ್‌ ಕೇಳಿದಾರಾದರೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಮಂಜೇಗೌಡರ ಪರ ಒಲವು ಹೊಂದಿದ್ದರು.  ಶನಿವಾರ ಮಂಜೇಗೌಡರು ಜಿಲ್ಲಾಧ್ಯಕ್ಷ ಎನ್‌. ನರಸಿಂಹಸ್ವಾಮಿ ಅವರೊಂದಿಗೆ ತೆರಳಿ, ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರನ್ನು(GT Devegowda)  ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನವಾಗಿ ಅವರ ಕುಟುಂಬದವರಿಗೆ ಟಿಕೆಟ್‌ ನೀಡುವುದಕ್ಕೆ ಮನವೊಲಿಸುವ ಪ್ರಯತ್ನ ಸಫಲವಾಗಿಲ್ಲ. ಹೀಗಾಗಿ ಮಂಜೇ ಗೌಡರಿಗೆ ಟಿಕೆಟ್‌ ಸಿಕ್ಕಿದೆ.

ಮಂಜೇಗೌಡ 2008 ರಲ್ಲಿ ಚಾಮುಂಡೇಶ್ವರಿ (Chamundeshwari) ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎರಡನೇ ಸ್ಥಾನ ಪಡೆದಿದ್ದರು. ನಂತರ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಾಲಿ ಕಾಂಗ್ರೆಸ್‌ (congress) ಟಿಕೆಟ್‌ ಆಕಾಂಕ್ಷಿಯಾಗಿದ್ದರು.

ಕಾಂಗ್ರೆಸ್‌ನಲ್ಲಿ ದಲಿತರಲ್ಲಿ ಎಡಗೈಗೆ ಸೇರಿರುವ ಹಾಲಿ ಸದಸ್ಯ ಆರ್‌. ಧರ್ಮಸೇನ ಬದಲು ಆರೋಗ್ಯ ಇಲಾಖೆ (Health Department) ನಿವೃತ್ತ ಯೋಜನಾ ನಿರ್ದೇಶಕ ಡಾ.ಡಿ. ತಿಮಯ್ಯ ಅವರಿಗೆ ಟಿಕೆಟ್‌ (Ticket) ನೀಡುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ