ರಾಮನಗರಕ್ಕೆ ಭವ್ಯವಾದ ಇತಿಹಾಸವಿದೆ. ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯನವರ ಜನ್ಮಸ್ಥಳ ರಾಮನಗರ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು.
ಬೆಂಗಳೂರು (ಆ.3): ರಾಮನಗರಕ್ಕೆ ಭವ್ಯವಾದ ಇತಿಹಾಸವಿದೆ. ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯನವರ ಜನ್ಮಸ್ಥಳ ರಾಮನಗರ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು.
ಇಂದು ನಡೆದ ಜನಾಂದೋಲ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಇವತ್ತು ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಜನಾಂದೋಲ ಕಾರ್ಯಕ್ರಮ ಮಾಡ್ತಿದ್ದೀವಿ. ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ನೆರವು ಕೊಡ್ತಿಲ್ಲ. ನಾವು ಸುಪ್ರೀಂ ಕೋರ್ಟ ಬಾಗಿಲು ತಟ್ಟಿ ಅನುದಾನ ಪಡೆದುಕೊಂಡೆವು. ನಮಗೆ ಟ್ಯಾಕ್ಸ್ ನಲ್ಲೂ ಸರಿಯಾದ ಪಾಲು ಕೊಡ್ತಿಲ್ಲ. ಕೇಂದ್ರದ ಯೋಜನೆಗಳು ರಾಜ್ಯಕ್ಕೆ ತಲುಪುತ್ತಿಲ್ಲ. ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಒಂದು ಪೈಸೆ ಕೊಟ್ಟಿಲ್ಲ. ಕೇವಲ ಬಿಹಾರ್ ಹಾಗೂ ಆಂಧ್ರಕ್ಕೆ ಮಾತ್ರ ಅನುದಾನ ಕೊಟ್ಟಿದ್ದಾರೆ. ಅದೇ ಕಾರಣಕ್ಕೆ ಕರ್ನಾಟಕದ ಜನತೆ ಬಿಜೆಪಿ ಸರ್ಕಾರ ತೆಗೆದು ಬಡವರ ಪರವಾದ ಸರ್ಕಾರ ಕೊಟ್ಟಿದ್ದಾರೆ. 136ಸ್ಥಾನ ಗೆಲ್ಲಿಸಿ ಅಧಿಕಾರ ಕೊಟ್ಟಿದ್ದಾರೆ. ನಾವು ಅಧಿಕಾರಕ್ಕೆ ಬಂದಿರುವುದು ಸಹಿಸಲಾಗದೆ ಸರ್ಕಾರವನ್ನ ಅಸ್ತಿರಗೊಳಿಸಲು ಬಿಜೆಪಿ ಮುಂದಾಗಿದೆ. ಹೀಗಾಗಿ ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು.
undefined
ಡಿಕೆ ಶಿವಕುಮಾರ ಬಗ್ಗೆ ಮಾತಾಡದಿದ್ರೆ ಕುಮಾರಸ್ವಾಮಿಗೆ ತಿಂದಿದ್ದು ಅರಗುವುದಿಲ್ಲ: ಡಿಕೆ ಸುರೇಶ್ ಕಿಡಿ
ಮುಡಾದಲ್ಲಿ ಸಿಎಂ ಕುಟುಂಬ ಭೂಮಿ ಕಳೆದುಕೊಂಡಿದ್ದಾರೆ. ಮುಡಾ ಅದನ್ನ ಭೂಸ್ವಾಧೀನಪಡಿಸಿಕೊಂಡಿತ್ತು. ಹೀಗಾಗಿ ಅವರಿಗೆ ಪರ್ಯಾಯ ಸೈಟ್ ಕೊಟ್ಟಿದ್ದಾರೆ. ಜಿ.ಟಿ.ದೇವೇಗೌಡ, ಸಾರಾ ಮಹೇಶ್, ರಾಮದಾಸ್ ಅವರೆಲ್ಲಾ ಮೀಟಿಂಗ್ ಮಾಡಿ ಪರ್ಯಾಯ ಸೈಟ್ ಕೊಟ್ಟಿದ್ದಾರೆ. ಇದೆಲ್ಲಾ ಆಗಿದ್ದು ಬಿಜೆಪಿ ಅವಧಿಯಲ್ಲೇ. ಕಾನೂನು ಬಾಹಿರವಾಗಿ ಭೂಸ್ವಾಧೀನ ಮಾಡಿದ್ದು ಮುಡಾ. ಆದರೆ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುವ ಕೆಲಸ ಆಗ್ತಿದೆ. ಇದು ಮೋದಿ ಹಾಗೂ ಅಮಿಶ್ ಅವರ ಹುನ್ನಾರ. ಸಿಎಂ ವಿರುದ್ಧ ದೊಡ್ಡ ಷಡ್ಯಂತ್ರ ಮಾಡ್ತಿದ್ದಾರೆ. ಅದಕ್ಕಾಗಿ ಈಗ ಬಿಜೆಪಿಯವರು ಪಾದಯಾತ್ರೆ ಮಾಡ್ತಿದ್ದಾರೆ. ಕುಮಾರಸ್ವಾಮಿ ಪಾದಯಾತ್ರೆಗೆ ಬೆಂಬಲ ಇಲ್ಲ ಅಂದಿದ್ರು. ಆಮೇಲೆ ಮೋದಿ, ಅಮಿಶ್ ಶಾ ಒತ್ತಡ ಹೇರಿದ ಬಳಿಕ ಕುಮಾರಸ್ವಾಮಿ ಪಾದಯಾತ್ರೆಗೆ ಬಂದವ್ರೆ ಎಂದು ವಾಗ್ದಾಳಿ ನಡೆಸಿದರು.
ಕೊರೊನಾ ಸಂದರ್ಭದಲ್ಲಿ ಬಿಎಸ್‌ವೈ, ಸುಧಾಕರ್ ಅಕ್ರಮ ಮಾಡಿದ್ರು. ಕೋಟ್ಯಂತರ ರೂ ಲೂಟಿ ಮಾಡಿದ್ರು. ಸುಮಾರು ನಾಲ್ಕೈದು ಸಾವಿರ ಕೋಟಿ ಲೂಟಿ ಮಾಡಿದ್ರು. ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ. ಅದಕ್ಕೆ ಎಸ್ಐಟಿ ರಚನೆ ಮಾಡಿ ಸರ್ಕಾರ ತನಿಖೆ ಮಾಡಿಸ್ತಿದೆ. ನಮ್ಮ ಸಚಿವರು ಸ್ವಯಂಪ್ರೇರಿತವಾಗಿ ರಾಜಿನಾಮೆ ನೀಡಿದ್ರು. ಆದರೆ ಬಿಜೆಪಿ ಕಾಲದಲ್ಲಿ ಭೋವಿ, ಟ್ರಕ್ ಟರ್ಮಿನಲ್ ಹಗರಣ ಆಗಿದೆ. ಇಷ್ಟಿದ್ದರೂ ಈಗ ಬಿಜೆಪಿ ಪಾದಯಾತ್ರೆ ಮಾಡ್ತಿದೆ. ಬಿಎಸ್ವೈ ಹಾಗೂ ವಿಜಯೇಂದ್ರ ಮಾರಿಸಸ್ ನಲ್ಲಿ 10ಸಾವಿರ ಕೋಟಿ ಇಟ್ಟಿದ್ದಾರಂತೆ. ಇದನ್ನ ಅವರ ಪಕ್ಷದ ಯತ್ನಾಳ್ ಅವರೇ ಹೇಳಿದ್ದಾರೆ ಎಂದು ಆರೋಪಿಸಿದರು.
10 ವರ್ಷ ಅಲ್ಲ, ಹತ್ತು ತಿಂಗಳು ಅಧಿಕಾರದಲ್ಲಿ ಮುಂದುವರಿಯಿರಿ ನೋಡೋಣ: ಕೇಂದ್ರ ಸಚಿವ ಎಚ್‌ಡಿಕೆ ಸವಾಲು!
ರಾಜ್ಯಪಾಲರನ್ನ ಬಳಸಿಕೊಂಡು ಸಿದ್ದರಾಮಯ್ಯಗೆ ನೋಟಿಸ್ ಕೊಟ್ಟಿದ್ದಾರೆ. ಯಾರೋ ಅಬ್ರಹಾಂ ಅನ್ನೋರು ಮನವಿ ಕೊಟ್ಟವ್ರೆ. ಅದಕ್ಕಾಗಿ ಗವರ್ನರ್ ಸಿಎಂಗೆ ನೋಟಿಸ್ ಕೊಟ್ಟವ್ರೆ. ನಾವು ಮುಖ್ಯ ಕಾರ್ಯದರ್ಶಿ ಬಳಿ ವಿವರಣೆ ಕೊಟ್ಟಿದ್ದೇವೆ. ಅದನ್ನ ನೋಡದೇ ಸಿಎಂಗೆ ಶೋಕಾಸ್ ನೋಟಿಸ್ ಕೊಟ್ಟವ್ರೆ. ಇದು ಪೂರ್ವನಿಯೋಜಿತವಾಗಿದೆ. ರಾಜ್ಯಪಾಲರನ್ನ ಉಪಯೋಗಿಸಿಕೊಂಡು ಸರ್ಕಾರ ಅಸ್ತಿರಗೊಳಿಸಲು ತಂತ್ರ ಮಾಡಿದ್ದಾರೆ. ರಾಜ್ಯಪಾಲರು, ಮೋದಿ, ಅಮಿತ್ ಶಾ ಕೈಗೊಂಬೆಯಾಗಿದ್ದಾರೆ ಎಂದು ರಾಜ್ಯಪಾಲರ ವಿರುದ್ಧವೂ ವಾಗ್ದಾಳಿ ನಡೆಸಿದರು.