ಹತ್ತು ವರ್ಷ ಅಲ್ಲ, ಹತ್ತು ತಿಂಗಳು ಅಧಿಕಾರದಲ್ಲಿ ಮುಂದುವರಿಯಿರಿ ನೋಡೋಣ. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ನಾವು ರೆಡಿಯಾಗಿದ್ದೇವೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಬೆಂಗಳೂರು (ಆ.3): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ವೇಳೆ ಆಸೆ ಆಮಿಷೆ ತೋರಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು, ಭ್ರಷ್ಟಾಚಾರ ಹಿಂದೆಂದೂ ಕಂಡಿರದಂತಹ ರೀತಿ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್‌ಡಿಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜನವಿರೋಧಿ ಸರ್ಕಾರವಾಗಿದ್ದು ಈ ಸರ್ಕಾರವನ್ನ ಕಿತ್ತೊಗೆಯಲು ತಾಯಿ ಕೆಂಪಮ್ಮ ದೇವಿಗೆ ಪೂಜೆ ಸಲ್ಲಿಸಿ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮೈಸೂರು ಪಾದಯಾತ್ರೆ ಮಾಡುತ್ತಿದ್ದೇವೆ. ನಾಡಿನ ಜನತೆಯ ಅಭಿಪ್ರಾಯ ಏನಿದೆ ಅದರ ಪರವಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ನಮ್ಮ ಕಾರ್ಯಕ್ರಮ ತಡೆಯಲು ಕಾಂಗ್ರೆಸ್ ನಾಯಕರು ಬಿಡದಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ದೇವೇಗೌಡರು ರಾಮನಗರಕ್ಕೆ ಬಂದಾಗ ಆಸ್ತಿ ಎಷ್ಟಿತ್ತು, ನಂತರ ಎಷ್ಟು ಮಾಡಿದ್ದಾರೆ ಎಂದು ಕೇಳಿದ್ದಾರೆ ಅವರ ಪ್ರಶ್ನೆಗೆ ರಾಮನಗರದಲ್ಲಿ ಉತ್ತರ ಕೊಡುತ್ತೇನೆ ಎಂದರು.
undefined
ಇವನ ಬಳಿ ದೇಶ ಸುಧಾರಿಸುವ ಐಡಿಯಾಗಳಿವೆಯಂತೆ; ಜಿಲ್ಲಾಧಿಕಾರಿ ಹುದ್ದೆಗೆ ಬೇಡಿಕೆ ಇಟ್ಟ ವಿಚಿತ್ರ ಯುವಕ!
ನನ್ನ(ಡಿಕೆಶಿ) ಹಾಗೂ ಸಿಎಂ ಅವರ ದಾಖಲೆ ಪತ್ರಗಳನ್ನ ಕೇಂದ್ರಕ್ಕೆ ಕೊಟ್ಟಿದ್ದಾರೆ. ನಮ್ಮನ್ನು ಬಂಧನ ಮಾಡಲು ಬರ್ತಾರೆ. ನಾವು ಬಂಧನಕ್ಕೂ ಸಿದ್ದವಿದ್ದೇವೆ ಅಂತ ಹೇಳಿಕೊಂಡಿದ್ದಾರೆ. ಹಿಂದುಳಿದ ವರ್ಗಗಳ ನಾಯಕರು ಎರಡನೇ ಬಾರಿ ಮುಖ್ಯ ಮಂತ್ರಿ ಯಾಗಿರುವುದಕ್ಕೆ ಹೊಟ್ಟೆಉರಿಯಿಂದ ಹೋಗಿದ್ದಾರೆ ಅಂತಾ ಹೇಳ್ಕೊಂಡು ತಿರುಗಾಡ್ತಾರೆ. ಗೃಹಸಚಿವ ಡಾ ಪರಮೇಶ್ವರ್ ನನಗೆ ನೂರಾರು ಪ್ರಶ್ನೆ ಕೇಳ್ತಾರೆ. ನನ್ನ ಒಂದು ಪ್ರಶ್ನೆಗೆ ಉತ್ತರ ಕೊಡಲಿ ನೋಡೋಣ. ಯಾದಗಿರಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಅನುಮಾನಸ್ಪಾದವಾಗಿ ಮೃತಪಟ್ಟಿದ್ದಾರೆ. ನಿಮ್ಮ ಸಮಾಜದ ಅಧಿಕಾರಿಯೊಬ್ಬರು ಶಾಸಕರ ಒತ್ತಡದಿಂದ ಮೃತಪಟ್ಟ ಬಗ್ಗೆ ಮಾಧ್ಯಮಗಳು ಹೇಳಿವೆ. ಅವರ ಪತ್ನಿ ಹೇಳ್ತಾರೆ ಯಾದಗಿರಿ ಕಾಂಗ್ರೆಸ್ ಶಾಸಕ ಪೋಸ್ಟಿಂಗ್‌ಗಾಗಿ 25-30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರಂತೆ. ಕೊಡಲು ನಿರಾಕರಿಸಿದ್ದಕ್ಕೆ ಕಾನೂನು ಬಾಹಿರವಾಗಿ ಸೈಬರ್ ಕ್ರೈಂಗೆ ವರ್ಗಾವಣೆ ಮಾಡಲಾಗಿದೆ. ಶಾಸಕರ ಕಿರುಕುಳಕ್ಕೆ ಮೃತರಾಗಿದ್ದಾರೆ. ನೀವು ಬಾಬಾ ಸಾಹೇಬರಿಗೆ ಕೊಡುವ ಗೌರವ ಇದೇನಾ? ಇಡೀ ದಲಿತ ಸಂಘಟನೆಗಳು ಹೋರಾಟಕ್ಕೆ ಇಳಿದಿದ್ದರೂ ಯಾಕೆ ಕೇಸ್ ದಾಖಲಿಸಿಕೊಳ್ಳುತ್ತಿಲ್ಲ? ನಿಮ್ಮದೆ ಸಮಾಜದ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಗೃಹಸಚಿವರಾಗಿ ತಡೆಯುವ ಶಕ್ತಿ ನಿಮಗಿಲ್ಲವಾ? ಎಂದು ಗೃಹಸಚಿವರ ವಿರುದ್ಧ ಹರಿಹಾಯ್ದರು.
ಇನ್ನು ಸಿದ್ದರಾಮಯ್ಯರ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವರು, ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಹಕ್ಕಿದೆ ಅದನ್ನ ಎತ್ತಿಹಿಡಿಯುವ ಕೆಲಸ ಮಾಡ್ತೀವಿ. ಮುಡಾ ಹಗರಣದಲ್ಲಿ ನಿಮ್ಮ ಹೆಸರು ಬಂದಿದೆ. ನೀವು ತಗೊಂಡಿರೋದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಸರ್ಕಾರದ ಜಮೀನು ನಿಮ್ಮ ಬಾಮೈದನ ಹೆಸರಿಗೆ ಖರೀದಿಸಿ ನಂತರ ಸಹೋದರಿಗೆ ಕೊಡ್ತಾರೆ. ಇದು ಹೇಗೆ ರವಾನೆಯಾಗಿದೆ ಅನ್ನೊದು ನಿಮಗೆ ಗೊತ್ತಿಲ್ವಾ ಸಿದ್ದರಾಮಯ್ಯ ನವರೇ. ವಾಲ್ಮೀಕಿ ನಿಗಮ ಅಭಿವೃದ್ಧಿ ಬಗ್ಗೆ ಮಾತಾಡ್ತೀರಿ ನಾವು ಯಡಿಯೂರಪ್ಪನವರು ಸೇರಿ ಈ ನಿಗಮ ಮಾಡಿದ್ದು. ನಿಗಮದಲ್ಲಿ ಮೊದಲು ಹಗರಣ ನಡೆದೇ ಇಲ್ಲ ಅಂತಾ ಹೇಳ್ಕೊಂಡು ಬಂದಿದ್ರಿ. ಯಾವಾಗ ನಾಗೇಂದ್ರ ಬಂಧನಕ್ಕೆ ಒಳಗಾದರೋ ಆಗ ಉಲ್ಟಾ ಹೊಡೆದ್ರಿ. ಈಗ ನಿಗಮದಲ್ಲಿ 89 ಕೋಟಿ ಹಗರಣ ಆಗಿರೋದು ಅಂತ ಒಪ್ಕೊಂಡಿದಿರಿ.
ಕೊಡಲಿಯಿಂದ ತಾಯಿ ಮೇಲೆಯೇ ಮಗನಿಂದ ಹಲ್ಲೆ! ಮಾನಸಿಕ ಅಸ್ವಸ್ಥನ ಹಿಡಿಯಲು ಪೊಲೀಸರು ಹರಸಾಹಸ!
ವಿಜೇಂದ್ರ ಅವರಿಗೆ ಏಕವಚನದಲ್ಲಿ ಮಾತಾಡ್ತೀರಾ ನೀವು(ಡಿಕೆಶಿ), 10 ವರ್ಷ ನಮ್ಮದೇ ಸರ್ಕಾರ ಅಂತೀರಿ. ಒಂದು ತಿಳ್ಕೊಳ್ಳಿ ಹತ್ತು ವರ್ಷ ಅಲ್ಲ, ಹತ್ತು ತಿಂಗಳು ಮುಂದುವರಿಯಿರಿ ನೋಡೋಣ. ಭ್ರಷ್ಟ ಸರಕಾರವನ್ನು ಬುಡಸಮೇತ ಕಿತ್ತೊಗೆಯಲು ನಾನು ರೆಡಿಯಾಗಿದ್ದೇವೆ ಎಂದು ಸವಾಲು ಹಾಕಿದರು.