ಲೋಕಸಭಾ ಚುನಾವಣೆ 2024 ಫಲಿತಾಂಶ: ಕೇಂದ್ರ ಮಂತ್ರಿಯನ್ನೇ ಸೋಲಿಸಿದ ಜೂನಿಯರ್‌ ಖಂಡ್ರೆ..!

By Girish GoudarFirst Published Jun 4, 2024, 12:57 PM IST
Highlights

ಆರಂಭಿಕ ಕೆಲವು ಸುತ್ತುಗಳಲ್ಲಿ ಕೇಂದ್ರ ಸಚಿವ  ಭಗವಂತ ಖೂಬಾ ಮುನ್ನಡೆ ಸಾಧಿಸಿದ್ರೂ ಕೂಡ ನಂತರದ ಸುತ್ತುಗಳಲ್ಲಿ ಸಾಗರ್ ಖಂಡ್ರೆ ಮುನ್ನಡೆ ಸಾಧಿಸುತ್ತಾ ಬಂದಿದ್ದರು. ಕೊನೆಗೆ ಸಾಗರ್ ಖಂಡ್ರೆ ಅವರು ಕೇಂದ್ರ ಸಚಿವ  ಭಗವಂತ ಖೂಬಾ ಅವರ ವಿರುದ್ಧ ಒಂದು ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಜಯದ ನಗೆ ಬೀರಿದ್ದಾರೆ. 

ಬೀದರ್(ಜೂ.4): ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಗೆಲುವು ಕಂಡಿದ್ದು, ಈ ಮೂಲಕ ಲೋಕಸಭೆಗೆ ಆಯ್ಕೆಯಾದ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. 

ಆರಂಭಿಕ ಕೆಲವು ಸುತ್ತುಗಳಲ್ಲಿ ಕೇಂದ್ರ ಸಚಿವ  ಭಗವಂತ ಖೂಬಾ ಮುನ್ನಡೆ ಸಾಧಿಸಿದ್ರೂ ಕೂಡ ನಂತರದ ಸುತ್ತುಗಳಲ್ಲಿ ಸಾಗರ್ ಖಂಡ್ರೆ ಮುನ್ನಡೆ ಸಾಧಿಸುತ್ತಾ ಬಂದಿದ್ದರು. ಕೊನೆಗೆ ಸಾಗರ್ ಖಂಡ್ರೆ ಅವರು ಕೇಂದ್ರ ಸಚಿವ  ಭಗವಂತ ಖೂಬಾ ಅವರ ವಿರುದ್ಧ ಒಂದು ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಜಯದ ನಗೆ ಬೀರಿದ್ದಾರೆ. 

Latest Videos

Live Blog: ಪೆನ್ ಡ್ರೈವ್ ಕಮಾಲ್, ಹಾಸನದಲ್ಲಿ ಪ್ರಜ್ವಲ್ ರೇವಣ್ಣಂಗೆ ಸೋಲು

ಈ ಮೂಲಕ ಸಾಗರ್‌ ಖಂಡ್ರೆ ಅವರು ಲೋಕಸಭೆ ಸ್ಪರ್ಧಿಸಿ ಮೊದಲ ಯತ್ನದಲ್ಲೇ ಹಿರಿಯ ಬಿಜೆಪಿ ನಾಯಕ ಭಗವಂತ ಖೂಬಾ ಅವರಗೆ ಸೋಲಿನ ರುಚಿ ತೋರಿಸಿದ್ದಾರೆ. ಕಳೆದ ಬಾರಿ ಬಿಜೆಪಿಗೆ ಜೈ ಎಂದಿದ್ದ ಬೀದರ್‌ ಜನತೆ ಈ ಬಾರಿ ಕಾಂಗ್ರೆಸ್‌ ಜೈ ಎಂದಿದ್ದಾರೆ. ಈ ಸೋಲಿನ ಮೂಲಕ ಭಗವಂತ ಖೂಬಾ ಅವರಿಗೆ ಭಾರೀ ಮುಖಭಂಗವಾಗಿದೆ. 

2014ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಸಿಎಂ ದಿ.ಧರಂಸಿಂಗ್‌ ವಿರುದ್ಧ 92,222 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದ ಬಿಜೆಪಿ ಭಗವಂತ ಖೂಬಾ, 2019ರ ಚುನಾವಣೆಯಲ್ಲೂ ಅಂದು ಈಶ್ವರ ಖಂಡ್ರೆ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದರು. ಇದೀಗ ಹ್ಯಾಟ್ರಿಕ್‌ ಬಾರಿಸೋ ತವಕದಲ್ಲಿದ್ದ ಖೂಬಾ ಅವರಿಗೆ ಸಾಗರ್‌ ಖಂಡ್ರೆ ಸೋಲಿನ ರುಚಿ ತೋರಿಸಿದ್ದಾರೆ. 

Live Blog: ಎನ್‌ಡಿಎ ಮೈತ್ರಿಕೂಟಕ್ಕೆ ಈ ಬಾರಿ ಸರಳ ಬಹುಮತ

ಈ ಹಿಂದಿನ 2014 ಮತ್ತು 2019ರ ಚುನಾವಣೆಗಿಂತಲೂ ಹೆಚ್ಚಿನ ಪ್ರಮಾಣದ ಮತದಾನ ಈ ಬಾರಿ ನಡೆದು ಚುನಾವಣಾ ಅಖಾಡ ಸಾಕಷ್ಟು ರಂಗೇರುವಂತೆ ಮಾಡಿದ್ದಂತೂ ನಿಜ. ಮತದಾನ ಮುಗಿದ ದಿನದಿಂದ ಇಲ್ಲಿಯವರೆಗೆ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ಎಲ್ಲೆಡೆ ನಡೆದಿತ್ತು. ಅಂತಿಮವಾಗಿ ಸಾಗರ್‌ ಖಂಡ್ರೆ ಗೆಲುವು ದಾಖಲಿಸಿದ್ದಾರೆ. 

ಕ್ಷೇತ್ರ ಪುನರ್‌ವಿಂಗಡಣೆಗೂ ಮುನ್ನ ಬಿಜೆಪಿ ಭದ್ರ ಕೋಟೆಯಾಗಿದ್ದ ಈ ಕ್ಷೇತ್ರ 2008ರಲ್ಲಿ ಸಾಮಾನ್ಯ ಕ್ಷೇತ್ರವಾದ ನಂತರ ಕಾಂಗ್ರೆಸ್ ಅಧಿಪತ್ಯ ಸಾಧಿಸಿತ್ತಾದರೆ, ಕಳೆದ 2014 ಮತ್ತು 2019ರ ಚುನಾವಣೆಯಲ್ಲಿ ಈ ಕೋಟೆಯನ್ನು ಪುನಃ ವಶಕ್ಕೆ ತೆಗೆದುಕೊಳ್ಳಲು ಬಿಜೆಪಿ ಸಫಲವಾಗಿತ್ತು. ಆದ್ರೆ ಈ ಬಾರಿ ಬಿಜೆಪಿ ಲೆಕ್ಕಾಚಾರವನ್ನ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಬುಡಮೇಲು ಮಾಡಿದ್ದಾರೆ. 

click me!