ಹಾಸನದಲ್ಲಿ ಪೆನ್ ಡ್ರೈವ್ ಕಮಾಲ್, ಪ್ರಜ್ವಲ್‌ಗೆ ಸೋಲು, 2 ದಶಕಗಳ ನಂತರ ಕಾಂಗ್ರೆಸ್‌ಗೆ ಭರ್ಜರಿ ಗೆಲವು!

By Gowthami K  |  First Published Jun 4, 2024, 12:52 PM IST

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್‌  ಮೈತ್ರಿ ಅಭ್ಯರ್ಥಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ತೀವ್ರ ಮುಖಭಂಗವಾಗಿದೆ.  ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ ಬರೋಬ್ಬರಿ 42 ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ


ಹಾಸನ (ಜೂ.4): ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್‌  ಮೈತ್ರಿ ಅಭ್ಯರ್ಥಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ತೀವ್ರ ಮುಖಭಂಗವಾಗಿದೆ.  ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ ಬರೋಬ್ಬರಿ 42 ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಕರ್ನಾಟಕದಲ್ಲಿ (Karnataka) ಭಾರಿ ಸದ್ದು ಮಾಡಿದ್ದ ಕ್ಷೇತ್ರಗಳಲ್ಲಿ ಪ್ರಮುಖವಾದ ಕ್ಷೇತ್ರವೆಂದರೆ ಅದು ಹಾಸನ. ಲೈಂಗಿಕ ಹಗರಣ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಸದ್ಯ ಎಸ್‌ಐಟಿ ವಶದಲ್ಲಿದ್ದಾರೆ. ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿರುವ ಪ್ರಜ್ವಲ್‌ ಗೆ ಈಗ ಸೋಲು ಕಂಡಿದ್ದಾರೆ.

Tap to resize

Latest Videos

undefined

Bengaluru Rural constituency: ಕನಕಪುರ ಬಂಡೆ ಡಿಕೆಸುಗೆ ಸರ್ಜರಿ, ಭರ್ಜರಿ ಗೆಲುವು ಕಂಡ ಡಾ. ಮಂಜುನಾಥ್! 

ವಿಶೇಷವೆಂದರೆ 1999ರಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನೇ ಮಣಿಸಿದ್ದ ಕಾಂಗ್ರೆಸ್ ನಾಯಕ ದಿವಂಗತ ಪುಟ್ಟಸ್ವಾಮಿ ಗೌಡರ ಮೊಮ್ಮಗ ಕಳೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಮಾಜಿ ಸಚಿವ ರೇವಣ್ಣ ವಿರುದ್ಧ ಅತ್ಯಲ್ಪ ಮತಗಳಲ್ಲಿ ಪರಾಜಯಗೊಂಡಿದ್ದ ಶ್ರೇಯಸ್ ಪಟೇಲ್ ಈ ಬಾರಿ ಪ್ರಜ್ವಲ್ ಗೆ ಎದುರಾಳಿಯಾಗಿ ಗೆದ್ದು ಬೀಗಿದ್ದಾರೆ.

ಕರ್ನಾಟಕ ಲೋಕಸಭಾ ಎಲೆಕ್ಷನ್ ಫಲಿತಾಂಶ ಲೈವ್

ಹಾಸನ ಲೈಂಗಿಕ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಮತದಾನ ಮಾಡಿದ ಬಳಿಕ ವಿದೇಶಕ್ಕೆ ತೆರಳಿದ್ದರು. 1 ತಿಂಗಳಿಗೂ ಹೆಚ್ಚು ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಅವರು ಮೇ 31 ರಂದು ಮರಳಿ ಭಾರತಕ್ಕೆ ಬಂದಿದ್ದು, ಅದ್ಯ ಅವರು ಎಸ್‌ಐಟಿ ವಶದಲ್ಲಿದ್ದಾರೆ.

ಒಟ್ಟು 8 ವಿಧಾನಭಾ ಕ್ಷೇತ್ರವನ್ನು ಹೊಂದಿರೋ  ಹಾಸನ ಲೋಕಸಭಾ ಕ್ಷೇತ್ರದ ಮತದಾನ   ಏಪ್ರಿಲ್ 26ರಂದು ನಡೆದಿತ್ತು. ಶೇಕಡಾ 77.42 ರಷ್ಟು ಮತದಾನ ಆಗಿದೆ. ಇಲ್ಲಿ ಜೆಡಿಎಸ್​ ನಾಲ್ಕು ಕ್ಷೇತ್ರಗಳನ್ನು ಹೊಂದಿದ್ದರೆ. ಜೆಡಿಎಸ್​​ನ ಮೈತ್ರಿ ಪಕ್ಷ ಬಿಜೆಪಿಯ 2 ಶಾಸಕರನ್ನು ಹೊಂದಿದೆ. ಹೀಗಾಗಿ 6 ಶಾಸಕರ ಬೆಂಬಲವಿತ್ತು. ಅರಸೀಕೆರೆ ಹಾಗು ಚಿಕ್ಕಮಗಳೂರಿನ ಕಡೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಹಿಡಿತದಲ್ಲಿದೆ.  ಆದರೆ ಹಾಸನದ ಜನತೆ ಮಾತ್ರ ಈ ಬಾರಿ ಶ್ರೇಯಸ್ ಪಟೇಲ್  ಅವರಿಗೆ ಬೆಂಬಲ ಸೂಚಿಸಿದ್ದಾರೆ.

click me!