Published : Apr 26, 2024, 07:02 AM ISTUpdated : Apr 26, 2024, 07:21 PM IST

ಕರ್ನಾಟಕ Election 2024 Live: ಕರ್ನಾಟಕದ ಮೊದಲ ಹಂತದ ಮತಯುದ್ಧಕ್ಕೆ ಶಾಂತಿಯುತ ತೆರೆ

ಸಾರಾಂಶ

ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ, ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಇದುವರಿಗಿನ ಮಾಹಿತಿಯಂತೆ ಶೇ.70 ಮತದಾನವಾಗಿದ್ದು, ಸ್ಪಷ್ಟ ಚಿತ್ರಣವಿನ್ನೂ ಸಿಕ್ಕಿಲ್ಲ. ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಮಂಡ್ಯ, ಮೈಸೂರು, ಹಾಸನ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಚುನಾವಣೆ ನಡೆದಿದೆ. 2.88 ಕೋಟಿ ಮತದಾರರಿಗೆ, 30602 ಮತಗಟ್ಟೆ ತೆರೆಯಲಾಗಿತ್ತು. ಚುನಾವಣಾ ಕಾರ್ಯಕ್ಕೆ 1.4 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಶುಕ್ರವಾರ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಕಚೇರಿ, ಶಾಲೆ, ಕಾಲೇಜು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಿಗೆ ವೇತನ ಸಹಿತ ರಜೆ ಘೋಷಿಸಲಾಗಿತ್ತು ಉತ್ತರ ಕರ್ನಾಟಕದ ಉಳಿದ 14 ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ. 

ಕರ್ನಾಟಕ Election 2024 Live: ಕರ್ನಾಟಕದ ಮೊದಲ ಹಂತದ ಮತಯುದ್ಧಕ್ಕೆ ಶಾಂತಿಯುತ ತೆರೆ

05:41 PM (IST) Apr 26

ಮಂಡ್ಯದಲ್ಲಿ ಹೈಯೆಸ್ಟ್, ಬೆಂಗಳೂರು ಕೇಂದ್ರದಲ್ಲಿ ಕಡಿಮೆ ಮತದಾನ

ಉಡುಪಿ ಚಿಕ್ಕಮಗಳೂರು- 72.13
ಹಾಸನ- 72.13
ದಕ್ಷಿಣ ಕನ್ನಡ 71.83
ಚಿತ್ರದುರ್ಗ 67
ತುಮಕೂರು- 72.10
ಮಂಡ್ಯ- 74.87
ಮೈಸೂರು- 65.85
ಚಾಮರಾಜನಗರ- 69.60
ಬೆಂಗಳೂರು ಗ್ರಾಮಾಂತರ- 61.78
ಬೆಂಗಳೂರು ಉತ್ತರ 50.04
ಬೆಂಗಳೂರು ಕೇಂದ್ರ- 48.61
ಚಿಕ್ಕಬಳ್ಳಾಪುರ 70.97
ಕೋಲಾರ- 71.26

05:30 PM (IST) Apr 26

ಧರ್ಮದ ಆಧಾರದ ಮೇಲೆ ಮತಯಾಚಿಸಿದ್ದಕ್ಕೆ ತೇಜಸ್ವಿ ಸೂರ್ಯ ಮೇಲೆ ಕೇಸ್

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮೇಲೆ ರಾಜ್ಯ ಚುನಾವಣಾ ಆಯೋಗ ಕೇಸ್ ದಾಖಲಿಸಿದೆ. ಧರ್ಮದ ಆಧಾರದ ಮೇಲೆ ಮತ ಯಾಚನೆ ಮಾಡಿದ್ದಕ್ಕಾಗಿ ಈ ಕೇಸ್‌ ದಾಖಲಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ.

 



ಸುದ್ದಿ ಇಲ್ಲಿದೆ

04:54 PM (IST) Apr 26

ಆಸ್ಪತ್ರೆಯಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ ನಾರಾಯಣ ಮೂರ್ತಿ!

ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಡಿಸ್ಚಾರ್ಜ್ ಮಾಡಿಸಿಕೊಂಡು ಬಂದುತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 

 

 


ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

04:48 PM (IST) Apr 26

ಮತ ಚಲಾಯಿಸಿದ ಜಾವಗಲ್‌ ಶ್ರೀನಾಥ್‌

ಟೀಮ್‌ ಇಂಡಿಯಾ ಮಾಜಿ ಆಟಗಾರ ಜಾವಗಲ್‌ ಶ್ರೀನಾಥ್‌ ಮೈಸೂರಿನಲ್ಲಿ ಮತ ಚಲಾಯಿಸಿದ್ದಾರೆ.

04:37 PM (IST) Apr 26

ಸ್ಟ್ರೆಚರ್‌ನಲ್ಲಿ ಮತಗಟ್ಟೆಗೆ ಬಂದು ವೋಟ್‌ ಮಾಡಿದ ಬೆಂಗಳೂರಿನ ವೃದ್ಧೆ!

ನ್ಯುಮೋನಿಯಾದಿಂದ ಬಳಲುತ್ತಿದ್ದ 78 ವರ್ಷದ ಮಹಿಳೆಯೊಬ್ಬರು ಇಂದು ಕರ್ನಾಟಕದಲ್ಲಿ ಆಕ್ಸಿಜನ್‌ ಸಪೋರ್ಟ್‌ನಲ್ಲಿಯೇ ಬಂದು ಮತದಾನ ಮಾಡಿದರು. 

ಆಕ್ಸಿಜನ್‌ ಸಪೋರ್ಟ್‌ನೊಂದಿಗೆ ಸ್ಟ್ರೆಚರ್‌ನಲ್ಲಿ ಬಂದು ವೋಟ್‌ ಮಾಡಿದ ಬೆಂಗಳೂರು ಮಹಿಳೆ!
 

04:01 PM (IST) Apr 26

ದೇಶದಲ್ಲಿ ಶೇ. 50.3ರಷ್ಟು ಮತದಾನ

ದೇಶದಲ್ಲಿ ಮತದಾನ ನಡೆಯುತ್ತಿರುವ 88 ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 50.3ರಷ್ಟು ಮತದಾನವಾಗಿದೆ.

03:53 PM (IST) Apr 26

ಮಧ್ಯಾಹ್ನ 3 ಗಂಟೆಯ ವೇಳೆಗೆ ಕರ್ನಾಟಕದಲ್ಲಿ ಮತ ಪ್ರಮಾಣ

ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 50.93ರಷ್ಟು ಮತದಾನವಾಗಿದೆ.

 

03:12 PM (IST) Apr 26

113 ವರ್ಷದ ಸಾಲಮರದ ತಿಮ್ಮಕ್ಕನಿಂದ ಮತದಾನ

113 ವರ್ಷದ ಸಾಲಮರದ ತಿಮ್ಮಕ್ಕನಿಂದ ಮತದಾನ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ಮತದಾನ. ತನ್ನ ಸಾಕು ಮಗ ಉಮೇಶ್ ಜೊತೆ ತೆರಳಿ ಮತದಾನ ಮಾಡಿದ ಸಾಲುಮರದ ತಿಮ್ಮಕ್ಕ. 113 ವರ್ಷದ ವಯಸ್ಸಿನಲ್ಲೂ ಮತಗಟ್ಟೆ ಖುದ್ದು ತೆರಳಿ ಮತದಾನ ಮಾಡಿದ ಸಾಲು ಮರದತಿಮ್ಮಕ್ಕ. 

 

 

03:07 PM (IST) Apr 26

Kolara Lok Sabha Elections 2024: ಬಂಗಾರದ ನಾಡಲ್ಲಿ ಮಲ್ಲೇಶ್-ಗೌತಮ್ ಹಣಾಹಣಿ

ಬೆಂಗಳೂರು ಸನಿಹದ ಮತ್ತೊಂದು ಜಿಲ್ಲೆಯಾಗಿರುವ ಕೋಲಾರದಲ್ಲಿ ಮಧ್ಯಾಹ್ನದ ವೇಳೆಗೆ ಮತದಾನದ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೋಲಾರದಲ್ಲಿ ವ್ಯಕ್ತಿಯೊಬ್ಬ ದುಬೈನಿಂದ ಬಂದು ಮತದಾನ ಮಾಡಿದ್ದಾರೆ.

ಕೋಲಾರ ಚುನಾವಣಾ ಸುದ್ದಿ ಅಪ್ಡೇಡ್‌‌ಗಾಗಿ ಇಲ್ಲಿ ಕ್ಲಿಕ್ಕಿಸ್

02:13 PM (IST) Apr 26

ಮತ ಚಲಾಯಿಸಿದ ಡಿಕೆ ಬ್ರದರ್ಸ್

ಕನಕಪುರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ತಮ್ಮೂರಿನ ಮತಗಟ್ಟೆ ಹೋಗಿ ಮತ ಚಲಾಯಿಸಿದರು. 

 

02:04 PM (IST) Apr 26

ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ಮತದಾನ ಮಾಡಿದ ವರ!

ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ವರ ಮತದಾನ ಮಾಡಿದ್ದಾರೆ. ಈ ಘಟನೆ ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ನಡೆದಿದೆ.

01:58 PM (IST) Apr 26

ದೇವೇಗೌಡರ ಹೇಳಿಕೆಯಿಂದ ಬೇಸರವಾಗಿದೆ: ಸುಮಲತಾ

ಜೆಡಿಎಸ್ ನಾಯಕರು ಯಾವುದೇ ಸಭೆ, ಪ್ರಚಾರಕ್ಕೆ ಆಹ್ವಾನಿಸಿಲ್ಲ. ಅವರು ಕರೆದು ನಾನು ಬರದೇ ಇದ್ದರೆ ತಪ್ಪಾಗುತ್ತೆ. ಆದ್ರೆ ಅವರು ನನ್ನ‌ ಕರೆದೇ ಇಲ್ಲ ಕುಮಾರಸ್ವಾಮಿ ಒಂದು ಕರೆ ಸಹ ಮಾಡಿಲ್ಲ ಎಂದು ಸುಮಲತಾ ಅಂಬರೀಶ್ ಅಸಮಾಧಾನ ಹೊರಹಾಕಿದ್ದಾರೆ.

 



ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

01:44 PM (IST) Apr 26

ಬಿರುಸು ತಗ್ಗಿಸಿಕೊಂಡ ಮತದಾನ, ಶೇ.38ರಷ್ಟು ಟರ್ನ್ ಔಟ್

ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ ಮತದಾನ ಸ್ವಲ್ಪ ಸ್ಲೋ ಆಗುತ್ತಿದ್ದು, ಕಳೆದ ಸಾರಿಗೆ ಹೋಲಿಸಿದಲ್ಲಿ ಮತದಾರರು ತಮ್ಮ ನಿರಾಸಕ್ತಿ ತೋರಿಸುತ್ತಿರುವಂತೆ ಕಾಣಿಸುತ್ತಿದೆ. ಮೊದ ಸ್ಥಾನದಲ್ಲಿಯೇ ಇರುವ ದಕ್ಷಿಣ ಕನ್ನಡದಲ್ಲಿ ಮತದಾನ ಜೋರಾಗುತ್ತಿದೆ. 


 

01:25 PM (IST) Apr 26

ಚಿತ್ರದುರ್ಗ ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿ ಕುಸಿದು ಸಾವು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಕ್ಕೆಂದು ತೆರಳಿದ್ದ ಚುನಾವಣಾ ಸಿಬ್ಬಂದಿ ಯಶೋಧಮ್ಮ ಎನ್ನುವವರು ಕಾರ್ಯ ನಿರ್ವಹಿಸುತ್ತಲೇ ಲೋ ಬಿಪಿಯಿಂದಾಗಿ ತಲೆ ಸುತ್ತು ಬಂದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲು ಮುಂದಾದರೂ ಅಷ್ಟರೊಳಗೆ ಚುನಾವಣಾ ಸಿಬ್ಬಂದಿಯ ಜೀವ ಹೊರಟೇ ಹೋಗಿತ್ತು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

01:15 PM (IST) Apr 26

Indian General Elections 2024: ಮತ ಚಲಾಯಿಸಿದ ಕರ್ನಾಟಕದ ಅಭ್ಯರ್ಥಿಗಳು

ಕರ್ನಾಟಕದ 14 ಲೋಕ ಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಲ್ಲಿವೆ ಫೋಟೋಸ್

 

 



ಇಲ್ಲಿವೆ ಉಳಿದ ಅಭ್ಯರ್ಥಿಗಳು ಫೋಟೋಸ್

12:58 PM (IST) Apr 26

ಎರಡೂ ಕೈ ಇಲ್ಲದ ರಾಷ್ಟ್ರೀಯ ಈಜು ಪಟು ವಿಶ್ವಾಸ ಕಾಲಿನಿಂದ ಮತದಾನ

ತಮ್ಮ ಕಾಲಿನಿಂದಲೇ ತಮ್ಮ ಸಾಮರ್ಥ್ಯ ಏನು ತೋರಿಸಿದ ವಿಶ್ವಾಸ್ ಅವರು ಕಾಲಲ್ಲೇ ಮತದಾನ ಮಾಡಿದ್ದಾರೆ. 

 

 

12:45 PM (IST) Apr 26

Chikkaballapura Lok sabha Elections 2024 Live Updates: ಡಿ.ಸುಧಾಕರ್, ರಕ್ಷಾ ರಾಮಯ್ಯ ನಡುವೆ ಫೈಟ್

ಚಿಕ್ಕಬಳ್ಳಾಪುರ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಮಂತ್ರಿ ಡಿ.ಸುಧಾಕರ್ ಹಾಗೂ ಕಾಂಗ್ರೆಸ್ ಯುವ ನೇತರ ರಕ್ಷಾ ರಾಮಯ್ಯ ನಡುವೆ ಬಿಗ್ ಫೈಟ್ ನಡೆಯುತ್ತಿದ್ದು, ಕ್ಷೇತ್ರದ ಮತದಾನ ವಿವರ ಇಲ್ಲಿದೆ. 

 



ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

12:35 PM (IST) Apr 26

Tumakuru Lok Sabha Election s2024 Live: ಸೋಮಣ್ಣ ಮುದ್ದಹನುಮೇಗೌಡ ಹೋರಾಟ

ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿ.ಸೋಮಣ್ಣ ಹಾಗೂ ಕಾಂಗ್ರೆಸ್‌ನಿಂದ ಎಸ್‌ಪಿ ಮುದ್ದಹನುಮೇಗೌಡ ತಮ್ಮ ಅದೃಷ್ಟ ಪರೀಕ್ಷಿಸಿ ಕಣಕ್ಕಳಿದಿದ್ದು, ಜಿಲ್ಲೆಯಲ್ಲೆಡೆ ಬಿರುಸಿನಿಂದ ಮತದಾನವಾಗುತ್ತಿದೆ. 

 

 



ತುಮಕೂರು ಲೈವ್ ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ

12:20 PM (IST) Apr 26

Dakshina Kannada Lok Sabha Elections 2024 Live: ಓದಿನಲ್ಲಿ ಮಾತ್ರವಲ್ಲ, ಮತದಾನಕ್ಕೂ ಸೈ

11 ಗಂಟೆ ಹೊತ್ತಿಗೆ ರಾಜ್ಯದಲ್ಲಿ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡದಲ್ಲಿ ಶೇ.31ರಷ್ಟು ಮತದಾನವಾಗಿದ್ದು, ಬಿಸಿಲನ್ನೂ ಲೆಕ್ಕಿಸದೇ ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಈ ಲೋಕ ಸಭಾ ಕ್ಷೇತ್ರದ ಅಪ್‌ಡೇಟ್ಸ್‌ಗೆ ಕೆಳಗೆ ಕ್ಲಿಕ್ಕಿಸಿ.

 



ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಅಪ್‌ಡೇಟ್ಸ್ 

12:17 PM (IST) Apr 26

Bengaluru Rural Lok Sabha Elections 2024: ಡಾಕ್ಟರ್ Vs ಡಿಕೆಸು ರಾಜಕಾರಣ

ಬೆಂಗಳೂರು ಗ್ರಾಮಾಂತರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಡಿ.ಕೆ.ಸುರೇಶ್ ವಿರುದ್ದ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಹೆಸರು ಮಾಡಿದ ಡಾ.ಸಿ.ಎನ್.ಮಂಜುನಾಥ್ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದು, ಜಿದ್ದಾಜಿದ್ದಿಯ ಹೋರಾಟ ನಡೆಯುತ್ತಿದೆ. 

 



ಈ ಕ್ಷೇತ್ರದ ಚುನಾವಣೆ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

12:08 PM (IST) Apr 26

Hassan Lok Sabha Elections 2024 Live: ಬೆಂಬಲಿಗರಿಲ್ಲದೇ ವೋಟ್ ಮಾಡಿದ ಪ್ರಜ್ವಲ್ ರೇವಣ್ಣ

ಹಾಸನ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಏಕಾಂಗಿಯಾಗಿ ಬಂದು, ತಮ್ಮ ಹಕ್ಕು ಚಲಾಯಿಸಿದರು. ತಾಯಿ ಭವಾನಿ ರೇವಣ್ಣ ಮಗನ ಗೆಲುವಿಗಾಗಿ ತಮ್ಮ ಪ್ರಚಾರ ಮುಂದುವರಿಸಿದ್ದು, ಮತಗಟ್ಟೆಗೆ ಆಗಮಿಸಿದ ಅತ್ತೆ-ಮಾವ ಎಚ್.ಡಿ.ದೇವೇಗೌಡ ಹಾಗೂ ಚನ್ನಮ್ಮ ಅವರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದರು. 

 

 



ಹಾಸನ ಚುನಾವಣೆಯ ಲೈವ್ ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ

12:01 PM (IST) Apr 26

ಮತ ಚಲಾಯಿಸಿದ ಮಠಾಧೀಶರು

ರಾಜ್ಯದ ವಿವಿಧ ಮತಗಟ್ಟೆಯಲ್ಲಿ ಹಲವು ಮಠಾಧೀಶರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದು, ಇಲ್ಲಿವೆ ಫೋಟೋಸ್. 

ಮಠಾಧೀಶರಿಂದ ಮತದಾನ

11:54 AM (IST) Apr 26

ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಸ್!

ಭಾರತದ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ದೇಶಾದ್ಯಂತ ನಡೆಯುತ್ತಿದ್ದು, ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೂ ಬಿರುಸಿನ ಮತದಾನ ನಡೆಯುತ್ತಿದೆ. ಎಲ್ಲೆಡೆ ಸಿನಿ ತಾರೆಯರೂ ಕುಟುಂಬದೊಂದಿಗೆ ಆಗಮಿಸಿ, ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಇಲ್ಲಿವೆ ಫೋಟೋಸ್


 

 

 



ಇಲ್ಲಿ ಕ್ಲಿಕ್ಕಿಸಿ

11:48 AM (IST) Apr 26

ಬೆಳಗ್ಗೆ ಸರಾಸರಿ ಶೇ.22ರಷ್ಟು ಮತದಾನ, ದಕ್ಷಿಣ ಕನ್ನಡದಲ್ಲಿ ಹೆಚ್ಚು ಟರ್ನೌಟ್

ರಾಜ್ಯದೆಲ್ಲೆಡೆ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಮತದಾರರು ಸರತಿ ಸಾಲಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡದಲ್ಲಿ ಹೆಚ್ಚು ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ನಲ್ಲಿ ಕಡಿಮೆ ಮತದಾನವಾಗಿದೆ. 

 

 

11:38 AM (IST) Apr 26

ಸಿದ್ಧರಾಮನಹುಂಡಿಯಲ್ಲಿ ಸಿಎಂ, ಮೈಸೂರಲ್ಲಿ ಯದುವೀರ್ ಮತದಾನ

ತಮ್ಮ ಹುಟ್ಟೂರು ಸಿದ್ದರಾಮಯ್ಯನ ಹುಂಡಿಗೆ ಮತ ಚಲಾಯಿಸಲು ತೆರಳಿದ ಸಿದ್ಧರಾಮಯ್ಯ ಅವರಿಗೆ ಅಭಿಮಾನಿಗಳು ಹಾರ, ತುರಾಯಿ ಹಾಕಿ ಸ್ವಾಗತಿಸಿದರು. ಸಿಎಂ ವಾಹನ ಮುಂದೆ ಹೋಗದಂತೆ ಅಡ್ಡ ಹಾಕಿ ಜೈ ಕಾರ ಕೂಗಿದರೆ. ಅಲ್ಲಿಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು ಸಿಎಂ. ಇದೇ ವೇಳೆ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ತಮ್ಮ ಮತ ಹಾಕಿದರು. 

 



11:06 AM (IST) Apr 26

ಕೋಲಾರದಲ್ಲಿ ಕೈಗೆ ಮತ ಹಾಕಿ ವೀಡಿಯೋ ಮಾಡಿದ ಮತದಾರ

ವೋಟ್ ಮಾಡಿದ ವೀಡಿಯೋ ಮಾಡ್ಕೊಂಡಿದ್ದಲ್ಲದೇ, ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿರುವ ಮೂರು ಪ್ರಕರಣಗಳು ರಾಜ್ಯದ ಕೋಲಾರ, ಬೆಂಗಳೂರು ದಕ್ಷಿಣ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ದಾಖಲಾಗಿವೆ. 

 



 

10:58 AM (IST) Apr 26

ರಾಮಲಲ್ಲಾ ಮೂರ್ತಿ ಕೆತ್ತಿದ ಯೋಗಿರಾಜ್ ಮತದಾನ

ಮೈಸೂರು ಮೂಲದ ಯೋಗರಾಜ್, ಅಯೋಧ್ಯೆಯ ಬಾಲ ರಾಮನ ಮೂರ್ತಿ ಕೆತ್ತಿದ್ದರಿಂದ ಜಗದ್ವಿಖ್ಯಾತರಾದವರು. ತಮ್ಮ ಕುಟುಂಬದೊಡನೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರ.ೆ 

 

10:49 AM (IST) Apr 26

ವೋಟ್ ಹಾಕಿದವರಿಗೆ ಫ್ರೀ ತಿಂಡಿ: ನಿಸರ್ಗ ಗ್ರ್ಯಾಂಡಲ್ಲಿ ಕ್ಯೂ

ಕೆಲವು ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳು ಮತ ಹಾಕಿ ಬಂದವರಿಗೆ ಫ್ರೀ ತಿಂಡ ಕೊಡುತ್ತಿದ್ದು, ನಿಸರ್ಗ್ ಗ್ರ್ಯಾಂಡ್ ಮುಂದೆ ಜನರು ಕ್ಯೂ ನಿಂತಿದ್ದಾರೆ. 

 

10:37 AM (IST) Apr 26

ಮತ ಹಾಕಿ ಭವಿಷ್ಯ ನಿರ್ಧರಿಸೋಣ: ಶ್ವೇತಾ ಶ್ರೀವಾತ್ಸವ್

ಕರ್ನಾಟಕದ ಮೊದಲ ಹಂತದ, ದೇಶದ 2ನೇ ಹಂತದ ಪ್ರಚಾರ ಬಿರುಸಿನಿಂದ ಸಾಗಿದ್ದು, ಸಿನಿ ತಾರೆಯರು ತಮ್ಮ ಹಕ್ಕು ಚಲಾಯಿಸಿ, ಎಲ್ಲರಿಗೂ ಮತ ಹಾಕುವಂತೆ ಸೋಷಿಯಲ್ ಮೀಡಿಯಾ ಮೂಲಕ ಆಗ್ರಹಿಸುತ್ತಿದ್ದಾರೆ. 

 

10:13 AM (IST) Apr 26

ಬಿಸಿಲಿನ ಧಗೆ: ಬೆಳ್ಳಂ ಬೆಳಗ್ಗೆ ಮತದಾನಕ್ಕೆ ಸರತಿ ಸಾಲಲ್ಲಿ ನಿಂತ ಮತದಾರರು

ಬೆಂಗಳೂರು ಸೇರಿ ಹಲವೆಡೆ ಮತದಾರರು ಬಿಸಿಲಿನ ಧಗೆ ಏರುವ ಹೆಚ್ಚುವ ಮುಂಚೆ ಮತ ಚಲಾಯಿಸಲು ಉತ್ಸುಕರಾಗಿದ್ದು, ಎಲ್ಲೆಡೆ ಸರತಿ ಕ್ಯೂನಲ್ಲಿ ಜನರು ಸರತಿ ಸಾಲಲ್ಲಿ ನಿಂತಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ತೋರಿಸುವ ಚುನಾವಣೆಯಲ್ಲಿ ಎಲ್ಲರೂ ತೆರಳಿ, ಮತ ಚಲಾಯಿಸು ಸುಭದ್ರ ಭಾರತ ಕಟ್ಟಲು ಸೆಲೆಬ್ರಿಟಿಗಳು ಕರೆ ನೀಡಿದ್ದಾರೆ. 

101 ವರ್ಷದ ಹಿರಿಯ ನಾಗರಿಕರಾದ ತಿಮ್ಮಮ್ಮ ಮೈಸೂರು ಲೋಕಸಭೆಯ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾದರು.

 

10:06 AM (IST) Apr 26

ಬೆಂಗಳೂರ ದಕ್ಷಿಣದಲ್ಲಿ ಹೆಚ್ಚು 9.8 ರಷ್ಟು ಮತದಾನ

ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯ ಮತದಾನದ ಶೇಖಡಾವಾರು ಪ್ರಮಾಣ:
ಬೆಳಗ್ಗೆ 7.00 ರಿಂದ 9.00ರ ವರದಿ
ಬೆಂಗಳೂರು ಕೇಂದ್ರ: 8.14 %
ಬೆಂಗಳೂರು ದಕ್ಷಿಣ: 9.8 %
ಬೆಂಗಳೂರು ಉತ್ತರ:  8.64 %

ಬೆಂಗಳೂರು ದಕ್ಷಣದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ತಮ್ಮ ಚಿಕ್ಕಪ್ಪ, ಬಸವನಗುಡು ಶಾಸಕ ರವಿ ಸುಬ್ರಹ್ಮಣ್ಯ ಸೇರಿ ಕುಟುಂಬದ ಇತೆರೆ ಸದಸ್ಯರೊಂದಿಗೆ ಆಗಮಿಸಿದ ಮತ ಚಲಾಯಿಸಿದರು. 

 

10:03 AM (IST) Apr 26

ಮತ ಹಾಕಿ ಎಲ್ಲರಿಗೂ ವೋಟ್ ಮಾಡುವಂತೆ ಕರೆ ನೀಡಿದ ಸಿನಿ ತಾರೆಯರು

ಬೆಂಗಳೂರಿನ ಹಲವೆಡೆ ಕನ್ನಡ ಸಿನಿ ತಾರಾ ಕುಟುಂಬ ಮತದಾನ ಮಾಡಿ, ಎಲ್ಲರಿಗೂ ಮತ ಹಾಕುವಂತೆ ಆಗ್ರಹಿಸಿದರೆ. ಡಾ.ರಾಜ್ ಕುಮಾರ್ ಕುಟುಂಬ, ನಟಿಯರಾದ ಪ್ರೇಮಾ, ತಾರಾ, ಕಾಂತಾರದ ಸಪ್ತಮಿ ಗೌಡ ಸೇರಿ ಹಲವು ತಮ್ಮ ಮತ ಹಕ್ಕು ಚಲಾಯಿಸಿದ್ದಾರೆ. 

09:47 AM (IST) Apr 26

ಸಂಪ್ರಾದಾಯಿಕ ಉಡುಗೆಯಲ್ಲಿ ಮತಗಟ್ಟೆ ಅಧಿಕಾರಿಗಳು

ಮೈಸೂರಿನ ವರುಣಾದಲ್ಲಿರುವ ತಾಂಡವಪುರ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಮತದಾರರನ್ನು ಸ್ವಾಗತಿಸಿದರು

09:41 AM (IST) Apr 26

ಮತದಾನ ಮಾಡಿದ ವಿಪಕ್ಷ ನಾಯಕ ಆರ್‌. ಅಶೋಕ್‌

ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಬರುವ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಆರ್‌ ಅಶೋಕ್‌ ಮತ ಚಲಾವಣೆ ಮಾಡಿದರು.

 

09:41 AM (IST) Apr 26

ಮತದಾನ ಮಾಡಿದ ವಿಪಕ್ಷ ನಾಯಕ ಆರ್‌. ಅಶೋಕ್‌

ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಬರುವ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಆರ್‌ ಅಶೋಕ್‌ ಮತ ಚಲಾವಣೆ ಮಾಡಿದರು.

 

09:38 AM (IST) Apr 26

ರಾಜ್ಯಾದ್ಯಂತ ಶೇ. 9.21ರಷ್ಟು ಮತದಾನ..

ರಾಜ್ಯಾದ್ಯಂತ ಬೆಳಗ್ಗೆ 9 ಗಂಟೆಯ ವೇಳೆಗೆ ಶೆ. 9.21ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ದಕ್ಷಿಣ ಕನ್ನಡದಲ್ಲಿ ಗರಿಷ್ಠ ಶೇ. 14.33ರಷ್ಟು ಮತದಾನವಾಗಿದೆ. ಚಿತ್ರದುರ್ಗ,ಮಂಡ್ಯ ಹಾಗೂ ಚಾಮರಾಜನಗರದಲ್ಲಿ ಅತೀ ಕಡಿಮೆ ಮತದಾನವಾಗಿದೆ.

09:20 AM (IST) Apr 26

ಚಕ್ರವರ್ತಿ ಸೂಲಿಬೆಲೆ ಮತದಾನ

ಲೇಖಕ, ಚಿಂತಕ ಚಕ್ರವರ್ತಿ ಸೂಲಿಬೆಲೆ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ..

09:13 AM (IST) Apr 26

Chamarajanagara Live: ಚಾಮರಾಜನಗರ ಚುನಾವಣೆ ಲೈವ್‌ ರಿಪೋರ್ಟ್‌..

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲ ಮತದಾನ ಚುರುಕುಗೊಂಡಿದೆ. ಡಿಸಿ ಶಿಲ್ಪಾ ನಾಗ್‌ ಚುನಾವಣಾ ಜಾಗೃತಿ ಸಾರುವ ಸೀರೆ ಧರಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು.

LIVE: ಚಾಮರಾಜನಗರ 2024 Elections: 'ಚುನಾವಣೆ ಪರ್ವ ದೇಶದ ಗರ್ವ' ಸೀರೆ ಧರಿಸಿ ಡಿಸಿ ಮತದಾನ

09:11 AM (IST) Apr 26

Bengaluru North: ಒಕ್ಕಲಿಗರ ಭದ್ರಕೋಟೆಯಲ್ಲಿ ಗೆಲ್ಲುವವರು ಯಾರು?

ಬೆಂಗಳೂರು ಉತ್ತರದಲ್ಲಿ ಬೆಳಗಿನಿಂದಲೂ ಉತ್ತಮವಾಗಿ ಮತದಾನವಾಗುತ್ತಿದೆ. ಕಾಂಗ್ರೆಸ್‌ನ ರಾಜೀವ್‌ ಗೌಡಗೆ ಬಿಜೆಪಿಯ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.

LIVE: ಒಕ್ಕಲಿಗರ ಭದ್ರಕೋಟೆ ಬೆಂಗಳೂರು ಉತ್ತರದಲ್ಲಿ ಗೆಲ್ಲೋರಾರು; ಸಚಿವೆ ಶೋಭಾ ಕರಂದ್ಲಾಜೆಗೆ ಪ್ರೊಫೆಸರ್ ಸವಾಲು

09:05 AM (IST) Apr 26

ಇನ್ಫೋಸಿಸ್‌ ನಾರಾಯಣ ಮೂರ್ತಿ, ಸುಧಾಮೂರ್ತಿ ಮತದಾನ

ಬೆಂಗಳೂರಿನ ಜಯನಗರದಲ್ಲಿ ಇನ್ಫೋಸಿಸ್‌ ಸಹಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಮತದಾನ ಮಾಡಿದ್ದಾರೆ.

 


More Trending News