ಬೆಂಗಳೂರು ದಕ್ಷಿಣ 2024 Elections; ಸಂಜೆ 5 ಗಂಟೆಗೆ ಶೇ.49.37 ಮತದಾನ

By Sathish Kumar KH  |  First Published Apr 26, 2024, 9:56 AM IST

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಸೋಲಿಸಲು ಹಾಗೂ ತಮ್ಮ ಮಗಳು ಸೌಮ್ಯಾರೆಡ್ಡಿಯನ್ನು ಗೆಲ್ಲಿಸಿಕೊಳ್ಳಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಮಗೆ ಗೊತ್ತಿರುವ ಎಲ್ಲ ರಾಜಕೀಯ ಪಟ್ಟುಗಳನ್ನು ಬಳಸಿದ್ದಾರೆ.


ಬೆಂಗಳೂರು ದಕ್ಷಿಣ (ಏ.26): ಬಿಜೆಪಿ ಭಧ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಸೋಲಿಸಲು ಹಾಗೂ ತಮ್ಮ ಮಗಳು ಸೌಮ್ಯಾರೆಡ್ಡಿಯನ್ನು ಗೆಲ್ಲಿಸಿಕೊಳ್ಳಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಮಗೆ ಗೊತ್ತಿರುವ ಎಲ್ಲ ರಾಜಕೀಯ ಪಟ್ಟುಗಳನ್ನು ಬಳಕೆ ಮಾಡಿದ್ದಾರೆ. ಆದರೆ, ಮತದಾರರೇ ಅಂತಿಮ ತೀರ್ಪುಗಾರರಾಗಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯ ಭಧ್ರಕೋಟೆ ಎಂದೇ ಹೇಳಬಹುದಾದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಯುವ ರಾಜಕೀಯ ನೇತಾರ ತೇಜಸ್ವಿ ಸೂರ್ಯ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ. ಈ ಕ್ಷೇತ್ರದ ಹಾಲಿ ಸಂಸದರೂ ಆಗಿರುವ ತೇಜಸ್ವಿ ಸೂರ್ಯ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರೂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯ ಭದ್ರಕೋಟೆಯೆಂಬ ಖ್ಯಾತಿ ಉಳಿಸಿಕೊಳ್ಳುವುದು ಸವಾಲಾಗಿದೆ.

Latest Videos

undefined

ಕರ್ನಾಟಕ Election 2024 Live: ಬೆಳಗ್ಗೆ 9ರ ಹೊತ್ತಿಗೆ ರಾಜ್ಯಾದ್ಯಂತ ಶೇ.9.21ರಷ್ಟು ಮತದಾನ...

ಇನ್ನು ಕಾಂಗ್ರೆಸ್‌ನಿಂದ ಈ ಬಾರಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ ಸ್ಪರ್ಧೆ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕೆಲವೇ ಮತಗಳಿಂದ ಸೋತಿರುವ ಸೌಮ್ಯಾರೆಡ್ಡಿ ಅವರಿಗೆ ಈ ಚುನಾವಣೆ ರಾಜಕೀಯ ಅಧಿಕಾರದಲ್ಲಿ ಮುಂದುವರೆಯಲು ಅಗತ್ಯವಾಗಿದೆ. ಜೊತೆಗೆ, ಸಚಿವ ರಾಮಲಿಂಗಾರೆಡ್ಡಿ ಮಗಳ ಗೆಲುವಿಗಾಗಿ ಶ್ರಮ ಹಾಕುತ್ತಿದ್ದು, ತಮ್ಮ ಎಲ್ಲ ರಾಜಕೀಯ ದಾಳಗಳನ್ನು ಉರುಳಿಸುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ರೆಡ್ಡಿ ಹಾಗೂ ಒಕ್ಕಲಿಗ ಸಮುದಾಯಗಳ ಮತಗಳ ಮೇಲೆ ಕೇಂದ್ರೀಕರಣ ಮಾಡಿದ್ದರೆ, ಬಿಜೆಪಿ ಬ್ರಾಹ್ಮಣರು, ಒಕ್ಕಲಿಗ ಹಾಗೂ ಇತರೆ ಸಮುದಾಯದ ಮತಗಳ ಮೇಲೆ ಕೇಂದ್ರೀಕರಣ ಮಾಡಲಾಗಿದೆ. ಇಬ್ಬರಿಗೂ ಗೆಲುವು ಅನಿವಾರ್ಯ ಆಗಿದ್ದು, ಮತದಾರ ಯಾರ ಕೊರಳಿಗೆ ವಿಜಯಮಾಲೆ ಹಾಕುತ್ತಾರೆ ಕಾದು ನೋಡಬೇಕಿದೆ.

ಬೆಂಗಳೂರಿನಲ್ಲಿ ಅದ್ಭುತವಾಗಿ ಮತದಾನ ನಡೆಯುತ್ತಿದೆ. ಹಿರಿಯ ನಾಗರಿಕರ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡ್ತಿರೋದು ನೋಡಿದ್ರೆ ಖುಷಿಯಾಗುತ್ತದೆ. ಯುವ ಮತದಾರರರು ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡಬೇಕು. ಬೆಂಗಳೂರಿನ ಮತದಾರ ಉತ್ಸಾಹ ನೋಡಿದ್ರೆ ಹಿಂದಿನ ದಾಖಲೆ ಆಗ್ಬಹುದು ಎನಿಸುತ್ತದೆ.
- ತೇಜಸ್ವಿ ಸೂರ್ಯ, ಬಿಜೆಪಿ ಅಭ್ಯರ್ಥಿ, ಬೆಂಗಳೂರು ದಕ್ಷಿಣ

ಬೆಂಗಳೂರು ದಕ್ಷಿಣ:
ಒಟ್ಟು ಅಭ್ಯರ್ಥಿಗಳು: 22
ಮತದಾರರು : 23,41,895
ಮಧ್ಯಾಹ್ನ 3 ಗಂಟೆಗೆ ಶೇ.40.77 ಮತದಾನ
ವಿಧಾನಸಭಾ ಕ್ಷೇತ್ರವಾರು ಮತದಾನದ ವಿವರ:

ಬಿಟಿಎಂ ಲೇಔಟ್: ಶೇ.37.51
ಬಸವನಗುಡಿ: ಶೇ.43.33
ಬೊಮ್ಮನಹಳ್ಳಿ: ಶೇ.37.27
ಚಿಕ್ಕಪೇಟೆ: ಶೇ.42.50
ಗೋವಿಂದರಾಜನಗರ:ಶೇ.40.20
ಜಯನಗರ: ಶೇ.46.17
ಪದ್ಮನಾಭ ನಗರ: ಶೇ.45.55
ವಿಜಯನಗರ: ಶೇ.38.19

click me!