
ನವದೆಹಲಿ(ಏ.25): ನಮ್ಮ ಪಕ್ಷದ ಗ್ಯಾರಂಟಿಗೂ ಮತ್ತು ಮೋದಿಯ ಗ್ಯಾರಂಟಿ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಹೀಗಾಗಿಯೇ ಈ ಈ ಬಾರಿಯ ಚುನಾವಣೆ ನನ್ನ ಕೈತಪ್ಪಿದೆ ಎಂಬ ಅಂಶ ಪ್ರಧಾನಿ ಮೋದಿಗೂ ಅರಿವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ರಾಹುಲ್, 'ನರೇಂದ್ರ ಮೋದಿ ಗ್ಯಾರಂಟಿ ಮತ್ತು ನಮ್ಮ ಗ್ಯಾರಂಟಿ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಕಾಂಗ್ರೆಸ್ ಗ್ಯಾರಂಟಿ ಎನ್ನುವುದು ಭಾರತೀಯರ ಸರ್ಕಾರ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರು ಮಾಸಿಕ 8,500 ರು ಧನ ಸಹಾಯ ಪಡೆಯುತ್ತಾರೆ. 30 ಲಕ್ಷ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ. ಯುವಕರಿಗೆ ಲಕ್ಷ ಸಂಬಳವಿರುವ ಉದ್ಯೋಗ ಸಿಗಲಿದೆ. ಅಲ್ಲದೇ ರೈತರಿಗೆ ನ್ಯಾಯಯುತವಾಗಿಯೇ ಬೆಂಬಲ ಬೆಲೆ ಸಿಗಲಿದೆ. ಆದರೆ ಮೋದಿ ಗ್ಯಾರಂಟಿಯೆಂದರೆ ಅದಾನಿ ಸರ್ಕಾರ, ಕೋಟ್ಯಧಿಪತಿಗಳ ಜೇಬಿನಲ್ಲಿ ದೇಶದ ಸಂಪತ್ತು ತುಂಬಿಸುವುದು. ಸುಲಿಗೆ ಮಾಡುವವರಿಗೆ ದೇಶದ ಆಸ್ತಿ ನೀಡುವುದು ಎಂದರ್ಥ' ಎಂದು ವಾಗ್ದಾಳಿ ನಡೆಸಿದ್ದಾರೆ.
ಅಮೇಠಿಯಲ್ಲಿ ರಾಹುಲ್ ಗಾಂಧಿ ಮನೆ ನವೀಕರಣ: ಸ್ಪರ್ಧೆ ಖಚಿತ?
ಇದೇ ವೇಳೆ ಈ ಬಾರಿ ಇಂಡಿಯಾ ಮಹಾಮೈತ್ರಿ ಕೂಟ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಹುಲ್ 'ಮೋದಿಯ 10 ವರ್ಷದ ಆಡಳಿತದಲ್ಲಿ 22-25 ಜನರು ಶತಕೋಟ್ಯಧಿಪತಿಗ ಳಾಗಿದ್ದಾರೆ. ಆದರೆ ಒಂದು ವೇಳೆ ದೇಶದಲ್ಲಿ ಇಂಡಿಯಾ ಮಹಾಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ, ಕೋಟ್ಯಂತರ ಜನರು ಲಕ್ಷಾಧಿಪತಿಗಳಾ ಗಲಿದ್ದಾರೆ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಕೋಟ್ಯಂತರ ಜನರನ್ನು ತಲುಪಿದೆ. ಇದರಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣೆ ತಮ್ಮ ಕೈಯಿಂದ ಜಾರಿದೆ ಎನ್ನುವುದು ಗೊತ್ತಾಗಿದೆ ' ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.