ಹಣಕಾಸು ಇಲಾಖೆ ಇಟ್ಟುಕೊಂಡಿರುವ ನಿಮ್ಮ ಸಿಎಂ ಮೂಗಿನ ನೇರಕ್ಕೆ ನಡೆದ ವಾಲ್ಮೀಕಿ ಹಗರಣದಲ್ಲಿ ಎಷ್ಟು ನುಂಗಿರಬೇಕು ನೀವು? ವಾಲ್ಮೀಕಿ ಹೆಸರಿಟ್ಟು ಮಹರ್ಷಿ ವಾಲ್ಮೀಕಿ ಹೆಸರಿಗೇ ಕಪ್ಪುಮಸಿ ಬಳಿದು, ಕಲೆಗಳಿಗೆ ವೈಟ್ನರ್ ಉಜ್ಜುತ್ತಿರುವ ನಿಮ್ಮ ಕಿರಾತಕತನಕ್ಕೆ ಮಹರ್ಷಿ ವಾಲ್ಮೀಕಿ ಅವರ ಶಾಪ ತಟ್ಟದೇ ಇರುತ್ತದೆಯೇ?: ಜೆಡಿಎಸ್
ಬೆಂಗಳೂರು(ಅ.05): 21ನೇ ಶತಮಾನದಲ್ಲಿಯೂ ಪಳಿಯುಳಿಕೆ ಪಾಲಿಟಿಕ್ಸ್ ಮಾಡುತ್ತಿರುವ ತಗುಡಾತಿ ತಗಡು ಪಾರ್ಟಿ ಕಾಂಗ್ರೆಸ್ ಹಳೆಯ ವಿಷಯ ಇಟ್ಟುಕೊಂಡು ಮುಖ ಉಳಿಸಿಕೊಳ್ಳುವ ದೈನೇಸಿ ಸ್ಥಿತಿಗೆ ಬಂದು ಮುಟ್ಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕೆಂಡಕಾರಿದೆ.
21ನೇ ಶತಮಾನದಲ್ಲಿಯೂ ಪಳಿಯುಳಿಕೆ ಪಾಲಿಟಿಕ್ಸ್ ಮಾಡುತ್ತಿರುವ ತಗುಡಾತಿ ತಗಡು ಪಾರ್ಟಿ , ಹಳೆಯ ವಿಷಯ ಇಟ್ಟುಕೊಂಡು ಮುಖ ಉಳಿಸಿಕೊಳ್ಳುವ ದೈನೇಸಿ ಸ್ಥಿತಿಗೆ ಬಂದು ಮುಟ್ಟಿದೆ !
ವರ್ಗಾವಣೆ ದಂಧೆಕೋರ, ಮೂಡಾಸುರನನ್ನು ತಲೆ ಮೇಲೆ ಕೂರಿಸಿಕೊಂಡು ಮೆರೆಯುತ್ತಿರುವ ನಿಮ್ಮ ಗತಿಕೆಟ್ಟ ಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ಕ್ಯಾಶ್…
undefined
ಇಂದು(ಶನಿವಾರ) ಎಕ್ಸ್‌ನಲ್ಲಿ ಬರೆದುಕೊಂಡಿರುವ ಜೆಡಿಎಸ್, ವರ್ಗಾವಣೆ ದಂಧೆಕೋರ, ಮೂಡಾಸುರನನ್ನು ತಲೆ ಮೇಲೆ ಕೂರಿಸಿಕೊಂಡು ಮೆರೆಯುತ್ತಿರುವ ನಿಮ್ಮ ಗತಿಕೆಟ್ಟ ಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ಕ್ಯಾಶ್ ಫಾರ್ ಪೋಸ್ಟಿಂಗ್, ಮೂಡಾ ಹಗರಣ, ಅರ್ಕಾವತಿ ರೀಡು, ಕದ್ದಮಾಲು ಹ್ಯೂಬ್ಲೆಟ್ ವಾಚು.. ಹೀಗೆ ಸರಣಿ ಹಗರಣಗಳ ಸರದಾರ ಸಿದ್ದರಾಮಯ್ಯ ಮೇಲೆ ಎಷ್ಟು FIR ಹಾಕಬೇಕು? ಎಂದು ಪ್ರಶ್ನಿಸಿದೆ.
ಕುರಿ ಕಾಯೋನ ಮಗ 2ನೇ ಬಾರಿಗೆ ಸಿಎಂ ಆಗಿಬಿಟ್ನಲ್ಲ ಅಂತ ಹೊಟ್ಟೆ ಉರಿ: ವಿಪಕ್ಷಗಳ ವಿರುದ್ಧ ಹರಿಹಾಯ್ದ ಸಿದ್ದು
ಸೂಟುಕೇಸು ಸಂಸ್ಕೃತಿಯ ಪಿತಾಮಹನೇ ನಿಮ್ಮ ಡೂಪ್ಲಿಕೇಟ್ ಸಿಎಂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ಗೆ ನೀವು ಒಪ್ಪಿಸುತ್ತಿರುವ ಕಪ್ಪದ ಬಗ್ಗೆ ಸರಣಿ ಕಥೆಗಳೇ ಇವೆ. ಪರಿಶಿಷ್ಟರ ಹಣವನ್ನು ಗಂಟಲಿಗಂಟ ನುಂಗಿ ತೆಲಂಗಾಣಕ್ಕೆ ಸಪ್ಲೇ ಮಾಡಿದ ನಿಮ್ಮ ಸಪ್ಲೇಶಿ ಮೇಲೆ ಎಷ್ಟು FIR ಮಾಡಬೇಕು ? ಎಂದು ಕಿಡಿ ಕಾರಿದೆ.
ಹಣಕಾಸು ಇಲಾಖೆ ಇಟ್ಟುಕೊಂಡಿರುವ ನಿಮ್ಮ ಸಿಎಂ ಮೂಗಿನ ನೇರಕ್ಕೆ ನಡೆದ ವಾಲ್ಮೀಕಿ ಹಗರಣದಲ್ಲಿ ಎಷ್ಟು ನುಂಗಿರಬೇಕು ನೀವು? ವಾಲ್ಮೀಕಿ ಹೆಸರಿಟ್ಟು ಮಹರ್ಷಿ ವಾಲ್ಮೀಕಿ ಹೆಸರಿಗೇ ಕಪ್ಪುಮಸಿ ಬಳಿದು, ಕಲೆಗಳಿಗೆ ವೈಟ್ನರ್ ಉಜ್ಜುತ್ತಿರುವ ನಿಮ್ಮ ಕಿರಾತಕತನಕ್ಕೆ ಮಹರ್ಷಿ ವಾಲ್ಮೀಕಿ ಅವರ ಶಾಪ ತಟ್ಟದೇ ಇರುತ್ತದೆಯೇ ? ಎಂದಿದೆ.
ದೇವದಾರಿ ಗಣಿ ಯೋಜನೆಗೆ ಮೊತ್ತಮೊದಲು ಒಪ್ಪಿಗೆ ಕೊಟ್ಟ ನಿಮ್ಮ ಗಿರಾಕಿ ಬಗ್ಗೆ ಗೊತ್ತಿಲ್ಲವೇ? ಇದೇ ಮೂಡಾಸುರ!! ಅವರೆಷ್ಟು ಸೂಟ್ ಕೇಸ್ ಪಡೆದಿದ್ದರು? ಅದಕ್ಕೆ ನಾವು "ಕಾಮಾಲೆ ಕಾಂಗ್ರೆಸ್" ಅನ್ನೋದು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಹರಿಹಾಯ್ದಿದೆ.
ಕರ್ನಾಟಕದ ಹೆಮ್ಮೆಯ ಸಂಸ್ಥೆಗಳಲ್ಲಿ ಒಂದಾಗಿರುವ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (KIOCL) ಉಳಿಸಲು ಹೆಚ್.ಡಿ.ಕುಮಾರಸ್ವಾಮಿ ಅವರು ಹಣಕಾಸು ಖಾತರಿ ನೀಡುವ ಕಡತವನ್ನು ಕೇಂದ್ರದ ಹಣಕಾಸು ಸಚಿವರ ಕಚೇರಿಗೆ ಕಳಿಸಿದ್ದರು. ಅಷ್ಟನ್ನೇ ಮಾಡಿದ್ದರು ಕುಮಾರಸ್ವಾಮಿ ಅವರು. ಕರ್ನಾಟಕ ಸರ್ಕಾರ, ಕೇಂದ್ರ ಪರಿಸರ ಸಚಿವಾಲಯದ ಒಪ್ಪಿಗೆಯನ್ನು ಈಗಾಗಲೇ ಪಡೆದಿದ್ದು, ಯೋಜನೆಗೆ ಒತ್ತಾಸೆ ಕೊಟ್ಟಿದ್ದರು. ಅದೂ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು. ಇವತ್ತು ಕುಮಾರಸ್ವಾಮಿ ಅವರ ಮೇಲಿನ ಅಸೂಯೆಯಿಂದ ಸಿದ್ದರಾಮಯ್ಯ ಮತ್ತು ಪಟಾಲಂ ನಡೆಸುತ್ತಿರುವ ಷಡ್ಯಂತ್ರದಿಂದ ಕಾರ್ಮಿಕರು ಬೀದಿ ಪಾಲಾಗುವ ಅಪಾಯ ಎದುರಾಗಿದೆ. ಇದಕ್ಕೆ ಯಾರು ಹೊಣೆ ಕಾಂಗ್ರೆಸ್ಸಿಗರೇ ? ಎಂದು ಗರಂ ಆಗಿದೆ.