ನಮ್ಮ ಪಾರ್ಟಿ ಲೀಡರ್ಸ್ ಭೇಟಿ ಮಾಡದೇ ಇನ್ ಯಾವ ಅಧ್ಯಕ್ಷರನ್ನ ಭೇಟಿ ಮಾಡ್ತಾರೆ. ನಾನು ದೆಹಲಿಗೆ ಹೋದಾಗೆಲ್ಲ ಅಧ್ಯಕ್ಷರನ್ನ, ನಮ್ಮ ನಾಯಕರನ್ನ ಭೇಟಿ ಮಾಡ್ತೇನೆ. ದಿನಾ ಭೇಟಿ ಮಾಡುತ್ತಿರುತ್ತೇನೆ. ಇಲ್ಲಿ ಏನೇನೂ ಆಗುತ್ತದೆ ಅದರ ವರದಿ ದೆಹಲಿಗೆ ಹೋಗಲಿದೆ. ಅದಕ್ಕಾಗಿ ಪ್ರತ್ಯೇಕ ಸಂಶೋಧನಾ ತಂಡವಿದೆ. ಮಾಧ್ಯಮಗಳಲ್ಲಿ ಏನೇನು ಬರುತ್ತದೆ ಅದನ್ನ ಕಳಿಸುತ್ತಾರೆ: ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು(ಅ.05): ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ FIR ದಾಖಲಾಗಿದ್ದರ ಬಗ್ಗೆ ನನಗೆ ಗೊತ್ತಿಲ್ಲ, ನಾನು ಹೋಮ್ ಮಿನಿಸ್ಟರ್ ಅಲ್ಲ. ಅವರ ವೈಯಕ್ತಿಕ ವಿಚಾರದಲ್ಲಿ ಇಂಟರ್ ಫೇರ್ ಆಗುವುದಿಲ್ಲ. ಯಾವ ವಿಚಾರಗಳೂ ನನಗೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಚನ್ನಪಟ್ಟಣದಲ್ಲಿ ಕೆಲಸ ಮಾಡಿಸುತ್ತಿದ್ದೇನೆ. ಸಿ.ಎಸ್.ಆರ್ ನಲ್ಲಿ ಶಾಲೆಗಳ ಕೆಲಸ ಮಾಡಿಸಿದ್ದೇನೆ. ಭೂಮಿ ಪೂಜೆ ಮಾಡಿಸಿದ್ದೇನೆ, ಅದು ಬಿಟ್ರೆ ಏನು ಗೊತ್ತಿಲ್ಲ ಎಂದು ಹೇಳಿದ್ದಾರೆ. ಕೆ.ಸಿ. ವೇಣುಗೋಪಾಲ್ ಬರುವ ಮಾಹಿತಿ ನನಗಿಲ್ಲ, ಸದ್ಯಕ್ಕೆ ದೆಹಲಿಗೆ ಹೋಗುವ ಅವಶ್ಯಕತೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
undefined
ಚನ್ನಪಟ್ಟಣ ಉಪಚುನಾವಣೆ: ನಾನೇ ಅಭ್ಯರ್ಥಿ, ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ, ಡಿಕೆಶಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ- ಜಾರಕಿಹೊಳಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ನಮ್ಮ ಪಾರ್ಟಿ ಲೀಡರ್ಸ್ ಭೇಟಿ ಮಾಡದೇ ಇನ್ ಯಾವ ಅಧ್ಯಕ್ಷರನ್ನ ಭೇಟಿ ಮಾಡ್ತಾರೆ. ನಾನು ದೆಹಲಿಗೆ ಹೋದಾಗೆಲ್ಲ ಅಧ್ಯಕ್ಷರನ್ನ, ನಮ್ಮ ನಾಯಕರನ್ನ ಭೇಟಿ ಮಾಡ್ತೇನೆ. ದಿನಾ ಭೇಟಿ ಮಾಡುತ್ತಿರುತ್ತೇನೆ. ಇಲ್ಲಿ ಏನೇನೂ ಆಗುತ್ತದೆ ಅದರ ವರದಿ ದೆಹಲಿಗೆ ಹೋಗಲಿದೆ. ಅದಕ್ಕಾಗಿ ಪ್ರತ್ಯೇಕ ಸಂಶೋಧನಾ ತಂಡವಿದೆ. ಮಾಧ್ಯಮಗಳಲ್ಲಿ ಏನೇನು ಬರುತ್ತದೆ ಅದನ್ನ ಕಳಿಸುತ್ತಾರೆ. ಯಾವ ಭೇಟಿನೋ, ಪಕ್ಷದ ಕಾರ್ಯಕರ್ತರ, ಶಾಸಕರು, ಸಚಿವ ಭೇಟಿ ಸಹಜವಾಗಿ ಮಾಡ್ತಾರೆ. ಪೊಲಿಟಿಕಲ್ ಪ್ರಾಬ್ಲಮ್, ಆಡಳಿತ ಸಮಸ್ಯೆಗಳ ಇರ್ತಾವೆ, ಅಭಿವೃದ್ಧಿ ಸಮಸ್ಯೆಗಳು ಇರ್ತಾವೆ. ಅದೇ ರೀತಿ ಖರ್ಗೆ- ಜಾರಕಿಹೊಳಿ ಭೇಟಿ ಸಹಜ ಎಂದ ಹೇಳಿದ್ದಾರೆ.
ಲೋಕಸಭಾ ಕ್ಷೇತ್ರವಾರು ಸತ್ಯಶೋಧನಾ ಸಮಿತಿ ವರದಿ ಸಲ್ಲಿಕೆ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, ಪಕ್ಷದ ವತಿಯಿಂದ ಗೆಲುವು, ಸೋಲಿನ ಬಗ್ಗೆ ಪರಾಮರ್ಶೆಗೆ ಸಮಿತಿ ರಚನೆ ಮಾಡಿದ್ದೆ, ಹಾಸನ, ಮಂಡ್ಯ, ಕೊಡಗು, ಚಾಮರಾಜನಗರ ಭಾಗದ ವರದಿ ಕೊಟ್ಟಿದ್ದಾರೆ. ನಾವು ಇದರ ಬಗ್ಗೆ ಸ್ಟಡಿ ಮಾಡುತ್ತೇವೆ. ವಾರದೊಳಗೆ ಲೋಕಸಭಾ ಕ್ಷೇತ್ರವಾರು ವರದಿ ಸಿಗಲಿದೆ. ಈಗ ಸಲ್ಲಿಸಿರುವ ವರದಿಯೇ ಸರಿಸುಮಾರು 150 ಪುಟ ಇದೆ. ವರದಿ ಬಳಿಕ ಖಂಡಿತ ಕ್ರಮ ಆಗಲಿದೆ ಎಂದು ತಿಳಿಸಿದ್ದಾರೆ.
ನಾನು ಮಾತನಾಡಿದ್ದು ಅಭಿವೃದ್ಧಿ ಬಗ್ಗೆ, ಸಿಎಂ ಹುದ್ದೆ ಬಗ್ಗೆ ಅಲ್ಲ: ಡಿ.ಕೆ. ಶಿವಕುಮಾರ್
ಜಾತಿಗಣತಿ ಜಾರಿ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಆಯ್ತು, ನೋಡೋಣ. ನಾನು ಪಾರ್ಟಿಯ ಲೈನ್ ನಲ್ಲಿ ಇರೋನು. ವೈಯಕ್ತಿಕ ವಿಚಾರಗಳೇ ಬೇರೆ, ಪಕ್ಷದಲ್ಲಿ ಕೆಲವು ಪಾಲಿಸಿ ವಿಚಾರ ಬರುತ್ತೆ. ರಾಹುಲ್ ಗಾಂಧಿ ನಮಗೆಲ್ಲ ಮಾರ್ಗದರ್ಶನ ನೀಡಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಕೆಲವು ಅಂಶಗಳು ಇದ್ದವು. ಪಕ್ಷದಲ್ಲಿ ಜಾತಿಗಣತಿ ಚರ್ಚೆ ಮಾಡುತ್ತೇವೆ. ಜಾತಿಗಣತಿ ವಿಚಾರವಾಗಿ ಡಿ.ಕೆ. ಸುರೇಶ್ ಏನು ಹೇಳಿದ್ದಾರೊ ಗೊತ್ತಿಲ್ಲ. ಕ್ಯಾಬಿನೆಟ್ ನಲ್ಲಿ ಬಂದಾಗ ಆ ವಿಚಾರ ನೋಡ್ತೀವಿ ಎಂದಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ. ದೆಹಲಿಗೆ ಹೋಗ್ತಾರೆ ಭೇಟಿ, ಇಲ್ಲಿಗೂ ಬರುತ್ತಾರೆ. ನಮ್ಮ ನಾಯಕರು ಇರುತ್ತಾರೆ, ಹೀಗಾಗಿ ಭೇಟಿ ಮಾಡಲು ಹೋಗ್ತಾರೆ. ನೀವು ಹೋಗಿ ಭೇಟಿ ಮಾಡಿ ಎಂದಷ್ಟೇ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.