ಸಚಿವ ಎಂಬಿ ಪಾಟೀಲ್ ಅವರು ಹನಿಟ್ರ್ಯಾಪ್ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜಣ್ಣ ಅವರು ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹನಿಟ್ರ್ಯಾಪ್ ಒಂದು ಕೆಟ್ಟ ಚಾಳಿ ಎಂದು ಅವರು ಹೇಳಿದ್ದಾರೆ.
ಬೆಂಗಳೂರು (ಮಾ.22): ಹನಿಟ್ರ್ಯಾಪ್ ವಿಚಾರದಲ್ಲಿ ರಾಜಣ್ಣ ಅವರು ಮುಖ್ಯಮಂತ್ರಿಗಳಿಗೆ ಬ್ರೀಫ್ ಮಾಡಿದ್ದಾರೆ. ಅದು ಏನೇನು ಅನ್ನೋದು ಸಿಎಂ ಬಳಿ ಹೇಳಿದ್ದಾರೆ. ಆದರೆ ನಮ್ಮ ಕಾಂಗ್ರೆಸ್ ನವರೇ ಮಾಡಿದ್ದಾರೆ ಅಂತಾ ರಾಜಣ್ಣ ಹೇಳಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು.
ಹನಿಟ್ರ್ಯಾಪ್ ವಿಚಾರವಾಗಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಮ್ಮ ಜಿಲ್ಲೆಯವರೇ ಆದ ಯತ್ನಾಳ್ ಏನೇನೋ ಹೇಳ್ತಾರೆ. ಅದರ ಉಸಾಬರಿಗೆ ನಾವು ಹೋಗಲ್ಲ. ಆದ್ರೆ ಹನಿಟ್ರ್ಯಾಪ್ ಅನ್ನೋದು ಒಂದು ಕೆಟ್ಟ ಚಾಳಿ. ಉದ್ದೇಶ ಪೂರ್ವಕವಾಗಿ ಮಾಡೋದು ತಪ್ಪು. ರಾಜಣ್ಣ ಏನೂ ಹೇಳಿದ್ದಾರೋ ಗೊತ್ತಿಲ್ಲ. ಸಿಎಂ, ಹೋಮ್ ಮಿನಿಸ್ಟರ್ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ: ಸಿಎಂ ಪರ ಮಾತಾಡಿದ್ರೆ ಕೆಲವರಿಗೆ ಹೊಟ್ಟೆ ಕಿಚ್ಚು, 'ಹನಿಟ್ರ್ಯಾಪ್' ಕುರಿತು ಹೆಚ್‌ಸಿ ಮಹದೇವಪ್ಪ ಸ್ಫೋಟಕ ಹೇಳಿಕೆ!
ಡಿಕೆಶಿಗೆ ತಿರುಗೇಟು:
ರಾಜಣ್ಣ ಸ್ವಭಾವ ಏನು ಅನ್ನೋದು ನಮಗೆ ಗೊತ್ತಿದೆ, ರಾಜಣ್ಣ ಹಾಯ್ ಅಂದ್ರೆ ಹಲೋ ಅನ್ನಲ್ಲ ವಾಟ್ ಅಂತಾರೆ ಎಂದು ರಾಜಣ್ಣ ಹನಿಟ್ರ್ಯಾಪ್ ಬಗ್ಗೆ ಡಿಕೆಶಿ ಹೇಳಿಕೆಗೆ ಎಂಬಿ ಪಾಟೀಲ್ ತಿರುಗೇಟು ನೀಡಿದರು. ಮೈ ಮೇಲೆ ಬಿದ್ದಾಗ ಬೀಳಿಸಿಕೊಂಡ್ರೇ ಬೇರೆ ಆಗುತ್ತೆ. ಕೆಲವರು ಬಂದೂ ಸುಮ್ಮ ಸುಮ್ಮನೇ ಟ್ರ್ಯಾಪ್ ಮಾಡೋ ಉದ್ದೇಶ ಇರುತ್ತೆ. ರಾಜಣ್ಣರಿಗೆ ಹಲೋ ಗಿಲೋ ನಡೆಯಲ್ಲ. ಅವರು ಹಿರಿಯ ಸದಸ್ಯರು ಇದ್ದಾರೆ. ಅವರ ಸ್ವಭಾವ ನನಗೆ ಗೊತ್ತಿದೆ. ಹಂಗೆಲ್ಲಾ ರಾಜಣ್ಣ ಮಾಡೋಕೆ ಸಾಧ್ಯವಿಲ್ಲ. ಈ ರೀತಿ ಯಾರ ಮೇಲೆ ಹನಿಟ್ರ್ಯಾಪ್ ಆದ್ರೂ ಅದು ತಪ್ಪು. ಬಿಜೆಪಿಯವರ ಮೇಲೆ ಹನಿಟ್ರ್ಯಾಪ್ ಆದ್ರು ತಪ್ಪು. ಇದ್ರ ಹಿಂದೆ ಯಾರೇ ಇದ್ರೂ ಕ್ರಮ ಆಗಬೇಕು. ಈ ಟ್ರ್ಯಾಪ್‌ನಲ್ಲಿ ಯಾರೇ ಕ್ಯಾಮರಾಮನ್, ಡೈರೆಕ್ಟರ್, ಪ್ರಡ್ಯೂಸರ್.. ಹನಿಟ್ರ್ಯಾಪ್ ವಿಚಾರವಾಗಿ ಯಾರೇ ಓನರ್ ಆಗಿರಲಿ ಕ್ರಮ ಆಗಬೇಕು. ಹನಿಟ್ರ್ಯಾಪ್ ನಮಗ್ಯಾಕೆ ಮುಜುಗರ ಆಗುತ್ತೆ? ತನಿಖೆ ಆಗಲಿ ಎಂದರು.