ರಾಜ್ಯ ರಾಜಕಾರಣದ ಬಗ್ಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ ಬೇಸರ. ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂಬ ಭಾವುಕ ಮಾತುಗಳನ್ನಾಡಿದ್ದಾರೆ. ಆಮೂಲಕ ಸಕ್ರಿಯ ರಾಜಕಾರಣದಿಂದ ದೂರವಾಗುವ ಮುನ್ಸೂಚನೆ ನೀಡಿದ್ರಾ ಸ್ಪೀಕರ್?. ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆ ತೆಲುಗಿನಲ್ಲೇ ಮಾತನಾಡಿದ ರಮೇಶ್ ಕುಮಾರ್.
ಕೋಲಾರ (ಏ.7):ರಾಜ್ಯ ರಾಜಕಾರಣದ ಬಗ್ಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ ಬೇಸರ ವ್ಯಕ್ತಪಡಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂಬ ರೀತಿ ಭಾವುಕ ಮಾತುಗಳನ್ನಾಡಿರುವ ಅವರು, ಸಕ್ರಿಯ ರಾಜಕಾರಣದಿಂದ ದೂರವಾಗುವ ಮುನ್ಸೂಚನೆ ನೀಡಿದ್ರಾ?. ರಮೇಶ್ ಕುಮಾರ ಮಾತು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇಂದು ಹುಟ್ಟೂರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರವಾಗಿ ನಡೆದ ಸಭೆಯಲ್ಲಿ ಭಾಷಣ ಮಾಡುತ್ತಾ ರಾಜಕೀಯ ನಿವೃತ್ತಿ ಪಡೆಯುವಂತಹ ಮಾತಗಳನ್ನಾಡಿರುವ ರಮೇಶ್ ಕುಮಾರ.
ಕಾಂಗ್ರೆಸ್ ತಂಟೆಗೆ ಬಂದ್ರೆ ಬಿಡೊಲ್ಲ: ಶ್ರೀರಾಮುಲು ವಿರುದ್ಧ ಸಚಿವ ನಾಗೇಂದ್ರ ಕಿಡಿ
ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆಯೇ ಕಲುಷಿತಗೊಂಡಿದೆ, ರಾಜಕಾರಣದಲ್ಲಿ ಮೌಲ್ಯಗಳೀಗ ಉಳಿದಿಲ್ಲ. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ನಾನು ನ್ಯಾಯಯುತವಾಗಿ ಬದುಕಿದ್ದೇನೆ. ಹಣ ಪಡೆದು ರಾಜಕೀಯ ಮಾಡಿಲ್ಲ, ಪಕ್ಷದ ಕೆಲವರು ಹಣಕ್ಕೆ ತಲೆ ಮಾರಿಕೊಂಡು ನನೆಗೆ ಮೋಸ ಮಾಡಿ ಸೋಲಿಸಿದರು. ತಾಯಿಯಂತಿರುವ ಪಕ್ಷಕ್ಕೆ ದ್ರೋಹ ಮಾಡಿದರು. ಅಧಿಕಾರದಾಸೆಗೆ ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ. ಅವರು ಸರ್ವನಾಶವಾಗುತ್ತಾರೆ. ನನಗೆ ಮೋಸ ಮಾಡಿದವರಿಗೆ ಎಂತಹ ಸ್ಥಿತಿ ಬರಲಿದೆ ಕಾದು ನೋಡಿ ಎಂದು ಕ್ಷಣಕಾಲ ಭಾವುಕರಾದರು.
ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಗೌತಮ್.ಕೆ.ವಿ ರವರ ಆಸ್ತಿ ವಿವರ ಘೋಷಣೆ; ಆಸ್ತಿ ಎಷ್ಟು? ಇಲ್ಲಿದೆ ವಿವರ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮತ ಕೇಳಲು ನಿಮ್ಮ ಮುಂದೆ ಬರುವುದಿಲ್ಲ. ನನ್ನ ಉತ್ತರಾಧಿಕಾರಿಯಾಗಿ ನನ್ನ ಮಗ ಹರ್ಷ ಕೂಡ ಮತ ಕೇಳಲು ಬರುವುದಿಲ್ಲ. ಕೋಲಾರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರವೂ ನಾನು ಮತ ಕೇಳಲು ಬರುವುದಿಲ್ಲ. ಆದರೆ ನಾನು ಮಾಡಿರುವ ಅಭಿವೃದ್ಧಿ ಕೆಲಸ ನೋಡಿ ಅವರಿಗೆ ಮತ ಹಾಕಲಿ ಎಂದರು. ಸಭೆಯಲ್ಲಿ ಅಭ್ಯರ್ಥಿ ಗೌತಮ್, MLC ಅನಿಲ್ ಸೇರಿದಂತೆ ಸ್ಥಳೀಯರು ಮುಖಂಡರು ಭಾಗಿಯಾಗಿದ್ದರು.