ಲೋಕಸಭಾ ಚುನಾವಣೆ 2024: ಮೋದಿ ಅಭಿವೃದ್ಧಿ-ಕಾಂಗ್ರೆಸ್‌ ದುರಾಡಳಿತದ ಮಧ್ಯೆ ಯುದ್ಧ, ಶ್ರೀರಾಮುಲು

By Kannadaprabha NewsFirst Published Apr 7, 2024, 3:29 PM IST
Highlights

ರಾಜ್ಯದಲ್ಲಿರುವ ಶಾಸಕರಿಗೆ ₹2 ಕೋಟಿ ಅನುದಾನ ನೀಡಬೇಕಿತ್ತು. ಆದರೆ ಕೇವಲ ₹50 ಲಕ್ಷ ಅನುದಾನ ನೀಡಿದ್ದಾರೆ. ಇದರಿಂದ ಯಾವ ಅಭಿವೃದ್ಧಿ ಮಾಡಲು ಸಾಧ್ಯವಿದೆ? ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು ಡಿಎಂಎಫ್ ಯೋಜನೆಯ ಸುಮಾರು ₹90 ಕೋಟಿ ಅನುದಾನ ತಂದು ಹೂವಿನಹಡಗಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ: ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು 

ಹೂವಿನಹಡಗಲಿ(ಏ.07):  ಈ ಬಾರಿಯ ಲೋಕಸಭಾ ಚುನಾವಣೆ ದೇಶದಲ್ಲಿ ಮೋದಿಯವರ ಪ್ರಧಾನಿ ಅಭಿವೃದ್ಧಿ ಹಾಗೂಕಾಂಗ್ರೆಸ್‌ದುರಾಡಳಿತದ ಮಧ್ಯೆ ಯುದ್ಧ ನಡೆಯಲಿದೆ. ಇದರಲ್ಲಿ ಬಿಜೆಪಿಯೇ 400ಕ್ಕೂ ಹೆಚ್ಚ ಸ್ಥಾನಗಳನ್ನು ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು. ನರೇಂದ್ರ ತಾಲೂಕಿನ ಮೈಲಾರ, ಹರವಿ, ಹೊಳಲು ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರಚಾರ ಕಾರ್ಯಕ್ರಮದ ನಂತರ, ಕತ್ತೆಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿರುವ ಶಾಸಕರಿಗೆ ₹2 ಕೋಟಿ ಅನುದಾನ ನೀಡಬೇಕಿತ್ತು. ಆದರೆ ಕೇವಲ ₹50 ಲಕ್ಷ ಅನುದಾನ ನೀಡಿದ್ದಾರೆ. ಇದರಿಂದ ಯಾವ ಅಭಿವೃದ್ಧಿ ಮಾಡಲು ಸಾಧ್ಯವಿದೆ? ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು ಡಿಎಂಎಫ್ ಯೋಜನೆಯ ಸುಮಾರು ₹90 ಕೋಟಿ ಅನುದಾನ ತಂದು ಹೂವಿನಹಡಗಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ ಎಂದು ದೂರಿದರು.

Lok Sabha Election 2024: ಬಿಜೆಪಿಯಲ್ಲಿ ಮೋದಿ ಬಿಟ್ಟರೆ ಬೇರೆ ನಾಯಕರಿಲ್ಲ: ನಾಡಗೌಡ

ರಾಜ್ಯದ 28 ಕ್ಷೇತ್ರಗಳಲ್ಲಿ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲವು ಸಾಧಿಸುತ್ತೇವೆ. ದೇಶದ ತುಂಬೆಲ್ಲ ಮೋದಿ ಅಲೆ ಇದೆ. ದೇಶದಲ್ಲಿ ಶಾಶ್ವತ ಯೋಜನೆಗಳನ್ನು ತಂದು ಮೋದಿಯವರು ನವ ಭಾರತ ನಿರ್ಮಾಣ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಕುಟುಂಬ ರಾಜಕಾರಣವನ್ನು ಕೊನೆಗಾಣಿಸಲು ಶ್ರಮಿಸುತ್ತಿದ್ದಾರೆ. 2 ಬಾರಿ ಪ್ರಧಾನಿಯಾದರೂ ಭ್ರಷ್ಟಾಚಾರ ಇಲ್ಲದಂತೆ ಸರ್ಕಾರ ನಡೆಸಿರುವ ಮೋದಿ, ಮತ್ತೊಮ್ಮ ಪ್ರಧಾನಿಯಾಗುವ ಮೂಲಕ ಹ್ಯಾಟ್ರಿಕ್ ಪ್ರಧಾನ ಮಂತ್ರಿಗಳಾಗುತ್ತಾರೆ ಎಂದರು.

ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿಯವರು ರಾಜ್ಯದ ಪರವಾಗಿದ್ದಾರೆ, ಈ ಹಿಂದಿನ ಬಿಜೆಪಿ ಸರ್ಕಾರ ಅದಕ್ಕೆ ಅಗತ್ಯ ಅನುದಾನ ನೀಡಿತ್ತು. ಆದರೆ ಸಚಿವ ಸಂತೋಷ ಆರೋಪದಲ್ಲಿ ಲಾಡ್ ಯಾವುದೇ ಹುರುಳಿಲ್ಲ, ಹೋರಾಟಗಾರರಿಗೆ ಸುಳ್ಳು ನೆಪಗಳನ್ನು ಹೇಳುತ್ತಾ, ಅವರ ಬೆಂಬಲ ಪಡೆಯುತ್ತಿದ್ದಾರೆ, ಜತೆಗೆ ಈಗಿನ ರಾಜ್ಯ ಸರ್ಕಾರಕ್ಕೆ ಮಹದಾಯಿ ಯೋಜನೆ ಇಚ್ಛಾಸಕ್ತಿ ಇಲ್ಲ, ಇದರ ಮೇಲೆ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿದರು.
ಮಹದಾಯಿ ಯೋಜನೆಯ ಪರವಾಗಿ ನಾವು ಇದ್ದೇವೆ, ಕಾಂಗ್ರೆಸ್‌ ಅಧಿನಾಯಕಿ ಗೋವಾ ರಾಜ್ಯದಲ್ಲಿ ಹೋಗಿ ಮಹದಾಯಿ ಯೋಜನೆಯಿಂದ ಕರ್ನಾಟಕಕ್ಕೆ ಹನಿ ನೀರು ಕೊಡಬೇಡಿ ಎಂದು ಹೇಳಿಕೆ ನೀಡಿದ್ದರು. ಆದರೆ ನಾವು ಹಾಗಲ್ಲ, ನೀರಿನ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್ ಸರ್ಕಾರದಿಂದ ಹಿಂದೂಗಳಿಗೆ ಉಳಿಗಾಲವಿಲ್ಲ: ಯತ್ನಾಳ್‌

ಬಳ್ಳಾರಿಯಲ್ಲಿ ಬಿಜೆಪಿ ಲೀಡ್ ತೆಗೆದುಕೊಳ್ಳಲು ಆಗಲ್ಲ, ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ ಎಂದು ಸಚಿವ ನಾಗೇಂದ್ರ ರವರ ಹೇಳಿಕೆಗೆ ಉತ್ತರಿಸಿದ ಶ್ರೀರಾಮುಲು, ಇವರೆಲ್ಲಾ ಮಧ್ಯರಾತ್ರಿ ನಾಯಕರು, ರಾಜಕಾರಣದಲ್ಲಿ ಇಂತಹ ಸಾಕಷ್ಟು ಮಂದಿಯನ್ನು ನೋಡಿದ್ದೇನೆ, ಇದಕ್ಕೆ ಅಖಂಡ ಬಳ್ಳಾರಿ ಜಿಲ್ಲೆಯ ಮತದಾರರು ತಕ್ಕ ಉತ್ತರ ನೀಡುತ್ತಾರೆಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಕೃಷ್ಣನಾಯ್ಕ, ಜಿಲ್ಲಾಧ್ಯಕ್ಷಸಿ. ಚನ್ನಬಸವನಗೌಡ, ಕಾರ್ಯ ದರ್ಶಿ ಎಸ್.ಸಂಜೀವರೆಡ್ಡಿ, ತಾಲೂಕ ಅಧ್ಯಕ್ಷ ಹಣ್ಣಿ ಶಶಿಧರ, ಮುಖಂಡರಾದ ಓದೋ ಗಂಗಪ್ಪ, ತೋಟನಾಯ್ಕ ಸೇರಿದಂತೆ ಮತ್ತಿತರ ನಾಯಕರು ಉಪಸ್ಥಿತರಿದ್ದರು. 

click me!