Union Budget 2022 ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ಲೇಷಿಸಿದ್ದು ಹೀಗೆ

By Suvarna NewsFirst Published Feb 1, 2022, 8:19 PM IST
Highlights

* ಕೇಂದ್ರ ಬಜೆಟ್ 2022 ಮಂಡಿಸಿದ ಸಚಿವ ನಿರ್ಮಲಾ ಸೀತಾರಾಮನ್ 
* ಈ ವರ್ಷ 39.45 ಲಕ್ಷ ಕೋಟಿ ಮೊತ್ತದ ಬಜೆಟ್...
* ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ಲೇಷಿಸಿದ್ದು ಹೀಗೆ

ಮೈಸೂರು, (ಫೆ.01): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ 2022-23ನೇ ಸಾಲಿನ ಕೇಂದ್ರ ಬಜೆಟ್ (Union Budget 2022)  ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah0 ಅವರು ಪ್ರತಿಕ್ರಿಯೆ ನೀಡಿದ್ದು, ಜನರ ನಿರೀಕ್ಷೆ ಈಡೇರಿಲ್ಲ ಎಂದಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ಲಾಡ್ಜ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2022-23 ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ನಾನು ಬಹಳ ನಿರೀಕ್ಷೆ ಇಟ್ಟಿರಲಿಲ್ಲ,ಆದರೆ ರೈತರು, ಯುವಕರು, ಮಹಿಳೆಯರು ತುಂಬಾ ನಿರೀಕ್ಷೆ ಇಟ್ಟಿದ್ದರು.ಆ ನಿರೀಕ್ಷೆ ಈಡೇರಿಲ್ಲ ಎಂದು ಅಸಮಾಧಾನ ಹೊರಹಾಕಿದರು.

Budget 2022 LIVE: ಯಾವ ಕ್ಷೇತ್ರಕ್ಕೆ, ದಕ್ಕಿದ್ದೆಷ್ಟು? ಹೀಗಿದೆ ನಿರ್ಮಲಾ, ಮೋದಿ ಲೆಕ್ಕಾಚಾರ

ಆರೋಗ್ಯ, ಶಿಕ್ಷಣ, ಕೃಷಿ ಈ ಕ್ಷೇತ್ರದ ಉತ್ತೇಜನ ನೀಡುವ ಯೋಜನೆ ಘೋಷಣೆಯಾಗುತ್ತವೆ ಎಂಬ ನಿರೀಕ್ಷೆ ಇತ್ತು. ಕಳೆದ ವರ್ಷ 34 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಸೈಜ್ ಮಂಡಿಸಿದ್ದರು.ಈ ವರ್ಷ 39.45 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. 4ಲಕ್ಷದ 61 ಸಾವಿರ ಕೋಟಿ ರೂಪಾಯಿ ಹೆಚ್ಚಳದ ಬಜೆಟ್ ಘೋಷಣೆ ಮಾಡಿದ್ದಾರೆ.ವರ್ಷಕ್ಕೆ 11ಲಕ್ಷದ 87 ಸಾವಿರದ 180 ಕೋಟಿ ರೂಪಾಯಿಗಳನ್ನ ಸಾಲ ಮಾಡುತ್ತಿದ್ದಾರೆ. ಅಸಲು ಮತ್ತು ಬಡ್ಡಿ ಬಜೆಟ್ ಭಾಗ, ಸಾಲಕ್ಕೆ ಬಡ್ಡಿಗೆ ಹೋಗುತ್ತದೆ.ವಾರ್ಷಿಕವಾಗಿ 9 ಲಕ್ಷದ 40 ಸಾವಿರದ 651 ಕೋಟಿ ಬಡ್ಡಿ ಕಟ್ಟಬೇಕಾಗುತ್ತದೆ ಎಂದರು.

ನರೇಗಾ ಇಲ್ಲದೆ ಇದ್ದಿದ್ದರೆ ಹಳ್ಳಿಗಳಿಗೆ ಬಹಳ ಕಷ್ಟ ಆಗುತ್ತಿತ್ತು.ಆ ಯೋಜನೆ ಡಾ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಜಾರಿ ಮಾಡಿದ್ದರು. ಈ ಬಜೆಟ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 38,169 ಸಾವಿರ ಕೋಟಿ ಕಡಿಮೆ ಮಾಡಿದ್ದಾರೆ. ಗ್ರಾಮೀಣ ಜನರಿಗೆ ಉದ್ಯೋಗ ಕೊಡಬೇಕಾದರೆ ನರೇಗಾ ಅನುದಾನ ಹೆಚ್ಚು ಮಾಡಬೇಕಿತ್ತು.ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಕೆ ಮಾಡಿದರೆ ಕೇವಲ 80 ಕೋಟಿ ಅಷ್ಟೇ ಹೆಚ್ಚು ಮಾಡಿದ್ದಾರೆ. ಅಹಾರ ಮತ್ತು ನಾಗರೀಕ ಸರಬರಾಜು ಕ್ಷೇತ್ರ ಸಬ್ಸಿಡಿ 79638 ಕೋಟಿ ಕಡಿಮೆಯಾಗಿದೆ.ಫುಡ್ ಸಬ್ಸಿಡಿ ಕಡಿಮೆ ಮಾಡಿದ್ದಾರೆ.ಇದು ಉಚಿತ ಅಕ್ಕಿ ಮೇಲೆ ಪರಿಣಾಮ ಬೀರಲಿದೆ‌ ಎಂದು ಹೇಳಿದರು.

ಜಿಡಿಪಿ ಮಹನೋನ್ ಸಿಂಗ್ ಕಾಲದಲ್ಲಿ 46 % ಇದ್ದರೆ ಈವಾಗ 62 % ಆಗಿದೆ.ನರೇಂದ್ರ ಮೋದಿ ಕಾಲ ಸುಭೀಕ್ಷವಾಗಿದೆ ಅನ್ನುವುದು ಸುಳ್ಳು ಎಂದರು.

ಉನ್ನತ ಶಿಕ್ಷಣಕ್ಕೆ ನ್ಯಾಷನಲ್ ಎಜುಕೇಶನಲ್ ಪಾಲಿಸಿ ಬೇರೆ ತಂದಿದ್ದಾರೆ. 4779 ಕೋಟಿ ರೂಪಾಯಿ ಗಳನ್ನ ಉನ್ನತ ಶಿಕ್ಷಣಕ್ಕೆ ಹೆಚ್ಚು ಮಾಡಿದ್ದಾರೆ. ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿಮೆ ಮಾಡಿದ್ದಾರೆ. 35 ಸಾವಿರ ಕೋಟಿ ರೂಪಾಯಿ ಗೊಬ್ಬರದ ಸಬ್ಸಿಡಿ ಕಡಿಮೆಯಾಗಿದೆ‌. ಮುಂದೆ ಗೊಬ್ಬರದ ಬೆಲೆ ಏರಿಕೆಯಾಗಲಿದೆ ಎಂದು ಜೆಟ್ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಡಿಕೆಶಿ ಅಭಿಪ್ರಾಯ
ಕರ್ನಾಟಕದ 25 ಸಂಸದರು ಹಾಗೂ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಬಜೆಟ್​ನಲ್ಲಿ ರಾಜ್ಯಕ್ಕೆ ಸುರಿಮಳೆಯನ್ನೇ ಸುರಿಸಿದ್ದಾರೆ. ರಾಜ್ಯಕ್ಕೆ ಹೆಸರೇ ಇಲ್ಲದಂತ ಬಜೆಟ್ ಕೊಡಿಸಿದ್ದಾರೆ ಅದಕ್ಕೆ ನಾವು ಅವರನ್ನ ಅಭಿನಂದಿಸ್ತೇನೆ ಎಂದು ಲೇವಡಿ ಮಾಡಿದರು.

ನಿರ್ಮಲಾ ಸೀತಾರಾಮ್ ನಮ್ಮ ರಾಜ್ಯದಿಂದ ಹೋಗಿದ್ದಾರೆ. ಇಲ್ಲಿನ ಋಣ ತೀರಿಸಬೇಕೆಂದು ಕಾರ್ಯಕ್ರಮ ಕೊಡಬೇಕಿತ್ತು. ಇದು ಕೇಂದ್ರದ ಬಜೆಟ್ ಅಲ್ಲ. ಇದೊಂದು ಕೋವಿಡ್ ಬಜೆಟ್ ಆಗಿದೆ. ಕೋವಿಡ್ ನಿಂದ ಜನಸಾಮಾನ್ಯರು ನರಳುತ್ತಿದ್ದಾರೆ. ಈ ಬಜೆಟ್​ ಕೂಡ ಇದೇ ರೀತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನರೇಗಾ ಹಣವನ್ನೂ ಕಡಿಮೆ ಮಾಡಿದರು. 2ಕೋಟಿ ಉದ್ಯೋಗ ಕೊಡ್ತೇವೆ ಎಂದಿದ್ದರು. ಅದನ್ನು ಈಗ 60 ಲಕ್ಷಕ್ಕೆ ಇಳಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ರೈತರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಬಜೆಟ್​ನಿಂದ ರೈತರಿಗೆ ಏನಾದರೂ ಸಹಾಯವಾಗಿದೆಯಾ.?ವೇತನದವರಿಗೂ ರಿಲೀಫ್ ಇಲ್ಲ. 40 ವರ್ಷದಿಂದ ಇಂತಹ ರೋಗಿಷ್ಟ ಬಜೆಟ್ ನೋಡಿಲ್ಲ ಎಂದು ಕಿಡಿಕಾರಿದರು.

ಇನ್ನು ಬಡ್ಡಿ‌ರಹಿತ ಸಾಲ ರಾಜ್ಯಕ್ಕೆ ಕೊಟ್ಟಿದ್ದಾರೆ. ಬಡ್ಡಿ ರಹಿತ ಸಾಲ ಜನರಿಗೆ ಕೊಡುತ್ತಿದ್ದಾರಾ..? ಡಿಜಿಟಲ್ ವಿವಿ ರಾಜ್ಯದಲ್ಲಿ ಮಾಡಿಬಿಡಲಿ. ಜಮೀನನ್ನು ನಾವೇ ಕೊಡಿಸುತ್ತೇವೆ ಮಾಡಿಸಿ. ಸಿಎಂ ಡಿಜಿಟಲ್ ವಿವಿ ರಾಜ್ಯಕ್ಕೆ ತರಲಿ. ಇನ್ನು ಸರ್ಕಾರದಲ್ಲಿ ಮೆಂಟಲ್ ಕೇಸ್ ಜಾಸ್ತಿ ಇವೆ ಹೀಗಾಗಿ ನಿಮ್ಹಾನ್ಸ್​ಗೆ ನೂಡಲ್ ಏಜೆನ್ಸಿ ಕೊಟ್ಟಿದ್ದಾರೆ. ಈ ಬಜೆಟ್​ ವಿಚಾರದಲ್ಲಿ ಬಿಜೆಪಿಯವರಿಗೆ ಸನ್ಮಾನ ಮಾಡಬೇಕು ಎಂದು ಲೇವಡಿ ಮಾಡಿದರು.

ಯಡಿಯೂರಪ್ಪ ಪ್ರತಿಕ್ರಿಯೆ
ಭಾರತ ಸರ್ಕಾರದ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಮಂಡಿಸಿದ 2022-23ನೇ ಸಾಲಿನ ಆಯವ್ಯಯವು ಕೋವಿಡ್-19ರಿಂದ ಉಂಟಾದ ಆರ್ಥಿಕ ಹಿಂಜರಿತವನ್ನು ಸರಿಪಡಿಸುವ ದೃಷ್ಟಿಯಲ್ಲಿ ಹಾಗೂ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿದೆ. ಡಿಜಿಟಲೀಕರಣ ಮತ್ತು ಸ್ವಾವಲಂಬನೆಗೆ ಒತ್ತು ನೀಡಿದ್ದು, ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದೆ ಎಂದಿದ್ದಾರೆ.

ಪ್ರತಿ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಒದಗಿಸುವುದು, ನಗರ ಪ್ರದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬ್ಯಾಟರಿ ಸ್ವಾಪಿಂಗ್ ಕೇಂದ್ರ ಸ್ಥಾಪನೆ ಉದ್ದೇಶಿಸಿರುವುದು ಸ್ವಾಗತಾರ್ಹ ವಿಷಯ.

ದೇಶದ ಪ್ರಮುಖ ನದಿಗಳ ಜೋಡಣೆ, ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವುದು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಒತ್ತು ನೀಡಿರುವುದು, 2023ರ ವರ್ಷವನ್ನು "ಅಂತರಾಷ್ಟ್ರೀಯ ಸಿರಿಧಾನ್ಯ" ವರ್ಷವೆಂದು ಘೋಷಣೆ ಮಾಡಿದ್ದು, ಒಟ್ಟಾರೆಯಾಗಿ ಜನಪರವಾದ ಆಯವ್ಯಯ ಮಂಡಿಸಿರುವ ವಿತ್ತ ಸಚಿವರನ್ನು ಹಾಗೂ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

click me!