ನನಗೆ ನಮ್ಮ ನಾಯಕರ ಮೇಲೆ ವಿಶ್ವಾಸವಿದೆ: ನನ್ನ ಮೇಲೆ ಅವರಿಗೂ ವಿಶ್ವಾಸ: ಶಿವರಾಮ್ ಹೆಬ್ಬಾರ್

Published : Apr 13, 2023, 11:49 AM IST
ನನಗೆ ನಮ್ಮ ನಾಯಕರ ಮೇಲೆ ವಿಶ್ವಾಸವಿದೆ: ನನ್ನ ಮೇಲೆ ಅವರಿಗೂ ವಿಶ್ವಾಸ:  ಶಿವರಾಮ್ ಹೆಬ್ಬಾರ್

ಸಾರಾಂಶ

ನನಗೆ ನಮ್ಮ ನಾಯಕರ ಮೇಲೆ ವಿಶ್ವಾಸವಿದೆ. ನಾಯಕರಿಗೂ ನಮ್ಮ ಮೇಲೆ ವಿಶ್ವಾಸವಿತ್ತು ಹೀಗಾಗಿಯೇ ಟಿಕೆಟ್‌ ತರಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಹೇಳಿದರು.

ಯಲ್ಲಾಪುರ (ಏ.13) : ನನಗೆ ನಮ್ಮ ನಾಯಕರ ಮೇಲೆ ವಿಶ್ವಾಸವಿದೆ. ನಾಯಕರಿಗೂ ನಮ್ಮ ಮೇಲೆ ವಿಶ್ವಾಸವಿತ್ತು ಹೀಗಾಗಿಯೇ ಟಿಕೆಟ್‌ ತರಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌(Shivaram Hebbar) ಹೇಳಿದರು.

ಅವರು ಬುಧವಾರ ತಾಲೂಕಿನ ಕಣ್ಣಿಗೇರಿ ಪಂಚಾಯತಿಯ ಸಾತನಕೊಪ್ಪದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಟಿಕೆಟ್ ಸಿಗದ ಹಿನ್ನೆಲೆ: ಬಿಎಸ್‌ವೈ ಆಪ್ತ ಚಿಕ್ಕನಗೌಡರ ಬಿಜೆಪಿಗೆ ಗುಡ್‌ ಬೈ: ಕಾಂಗ್ರೆಸ್‌ನತ್ತಾ?

ಕಣ್ಣಿಗೇರಿ ಪಂಚಾಯಿತಿಗೆ ಸುಮಾರು .15 ಕೋಟಿ ಅನುದಾನ ನೀಡಲಾಗಿದೆ. ಕೊಡಸೆ ರಸ್ತೆಯನ್ನು ₹9 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಲಿಂಗ್ಯಾನಕೊಪ್ಪ- ಮಾವಳ್ಳಿ ಮೂಲಕ ರಾಷ್ಟ್ರೀಯ ಹೆದ್ದಾರಿ ವರೆಗಿನ ರಸ್ತೆಯನ್ನು .10.5 ಕೋಟಿಗಳಲ್ಲಿ ನಿರ್ಮಿಸಲಾಗಿದೆ. ಈ ಭಾಗದ ಪ್ರಮುಖ ರಸ್ತೆಗಳನ್ನು ಜನರ ಬೇಡಿಕೆಯಂತೆ ಈಡೇರಿಸಲಾಗಿದೆ. 9 ದಿನದಿಂದ ಕ್ಷೇತ್ರದಲ್ಲಿ ಮಾಡಿರುವ ಪ್ರವಾಸದಲ್ಲಿ ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸುವ ಉತ್ಸಾಹದಲ್ಲಿ ಬಿಜೆಪಿ ಕಾರ್ಯಕರ್ತರು ಇರುವುದನ್ನು ಕಂಡಿದ್ದೇನೆ. ಈ ಬಾರಿ ರಾಜ್ಯದಲ್ಲಿ 113 ರ ಗಡಿ ದಾಟಬೇಕು ಎನ್ನುವ ಗುರಿ ಹೊಂದಿದ್ದೇವೆ. ಸಣ್ಣ ಪುಟ್ಟಬಿನ್ನಾಭಿಪ್ರಾಯ ಬಿಟ್ಟು ಕಾರ್ಯಕರ್ತರು ಪಕ್ಷದ ಸಂಘಟನೆಗೆ ಬದ್ದರಾಗಿರಬೇಕು ಎಂದರು.

ಕೋವಿಡ್‌(Covid) ಸಂಕಷ್ಟವನ್ನು ಕ್ಷೇತ್ರದಲ್ಲಿ ಸಮರ್ಪಕವಾಗಿ ನಿರ್ವಹಿಸಲಾಗಿದೆ. ಆ ಸಂದರ್ಭದಲ್ಲಿ ನಮ್ಮ ಕುಟುಂಬದ ವತಿಯಿಂದ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿದ್ದು, ಹಲವಾರು ಜನ ಅದರ ಪ್ರಯೋಜನ ಪಡೆದಿದ್ದಾರೆ. ಕ್ಷೇತ್ರದ 70 ಸಾವಿರ ಕುಟುಂಬಕ್ಕೆ ಪುಡ್‌ ಕಿಟ್‌ ಎರಡು ಬಾರಿ ನೀಡಿರುವುದು ತಮಗೆಲ್ಲ ಗೊತ್ತಿದೆ. ಆದರೆ, ಚುನಾವಣೆ ದೃಷ್ಟಿಯಲ್ಲಿ ಕಿಟ್‌ ನೀಡಿರುವುದಿಲ್ಲ. ಕೋವಿಡ್‌ ಅವಧಿಯಲ್ಲಿ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಿಲ್ಲ. ಈ ಸಂದರ್ಭದಲ್ಲಿ ಉತ್ತಮ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗೆ ನಮ್ಮ ಕಂಪನಿಯಿಂದ ಡಯಾಲಿಸಿಸ್‌ ಮಿಷನ್‌ ನೀಡಲಾಗಿದೆ. ಈ ಕಾರಣಕ್ಕಾಗಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುವ ಬಿಜೆಪಿ ಕಾರ್ಯಕರ್ತರು ಯಾವುದೇ ಅಳುಕಿಲ್ಲದೇ ಮತ ಕೇಳಬಹುದಾಗಿದೆ ಎಂದರು.

ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಕೈಟ್ಕರ್‌ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಬದುಕಿದರೆ ಸಾಕು ಅನ್ನುವ ಸ್ಥಿತಿಯಲ್ಲಿ ಹೆಬ್ಬಾರ್‌ ಕಿಟ್‌ ಮೂಲಕ ಎಲ್ಲ ಮನೆ ಮನೆಗಳಿಗೂ ಆಶ್ರಯವಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ನಮ್ಮ ಪಂಚಾಯಿತಿಯಲ್ಲಿ 620 ಅಧಿಕ ಮತಗಳನ್ನು ಹೆಬ್ಬಾರರಿಗೆ ನೀಡಿದ್ದೇವೆ. ಈಗ ಅವರ ಋುಣ ತೀರಿಸುವ ಸಮಯ ಬಂದಿದ್ದು ನಮ್ಮ ಪಂಚಾಯತದಿಂದ ಇನ್ನೂ ಹೆಚ್ಚಿನ ಮತ ನೀಡುವಂತೆ ಮತದಾರರ ಬಳಿ ತೆರಳಿ ಮನವರಿಕೆ ಮಾಡಿಕೊಡುತ್ತೇವೆ ಎಂದರು.

ಬಿಜೆಪಿಯ ಮತ್ತೊಂದು ವಿಕೆಟ್‌ ಪತನ: ಕಮಲಕ್ಕೆ ಗುಡ್‌ಬೈ ಹೇಳಿದ ಎಂ.ಪಿ. ಕುಮಾರಸ್ವಾಮಿ

ಕಣ್ಣಿಗೇರಿ ಗ್ರಾಪಂ ಅಧ್ಯಕ್ಷ ವಿಶ್ವೇಶ್ವರ ಹೆಗಡೆ, ಕಣ್ಣಿಗೇರಿ ಶಕ್ತಿ ಕೇಂದ್ರದ ಭಾಸ್ಕರ್‌ ಮರಾಠೆ, ಪ್ರಮುಖರಾದ ನಾಗೇಶ ಗಾವಡೆ, ವಿಶ್ವನಾಥ ಭಟ್ಟಮಾತನಾಡಿದರು. ಯುವ ನಾಯಕ ವಿವೇಕ ಹೆಬ್ಬಾರ, ಡಾ. ರವಿ ಭಟ್ಟಬರಗದ್ದೆ, ಮಹೇಶ ಕಾಸರಕರ್‌ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ