ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರು ನೀವು  ಕೈಹಿಡಿದ್ರಿ: ಬದುಕಿರೋತನಕ ಬಾದಾಮಿ ಜನರನ್ನ ಮರೆಯೊಲ್ಲ: ಸಿದ್ದು ಭಾವನಾತ್ಮಕ ಮಾತು

By Ravi Janekal  |  First Published Mar 25, 2023, 12:26 PM IST

ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರೂ ನೀವು  ನನ್ನ ಕೈ ಹಿಡಿದಿದ್ದೀರಿ ನಾನು ಇರೋತನಕ ಬಾದಾಮಿ ಜನರನ್ನ ಮರೆಯೋಲ್ಲ ಎಂದು ಹೇಳಿ ಕೈಮುಗಿದಿದ್ದಾರೆ. ಅಲ್ಲದೇ, ಬಾದಾಮಿ ಕ್ಷೇತ್ರದ ಕೈ ನಾಯಕರು, ಅಧಿಕಾರಿಗಳು, ಸಾರ್ವಜನಿಕರು ಒಳ್ಳೆಯ ಸ್ಫಂದನೆ ನೀಡಿದ್ದೀರಿ ಎಂದು ತಮ್ಮ ಕೊನೆಯ ಭಾಷಣದಲ್ಲಿ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ


ಬಾಗಲಕೋಟೆ (ಮಾ.25) : ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಗೆ ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 

ವರುಣಾ ಕ್ಷೇತ್ರ(Varuna assembly constituency)ದಿಂದ ಸಿದ್ದರಾಮಯ್ಯ(Siddaramaiah) ಸ್ಫರ್ಧೆ ಬಹುತೇಕ ಫಿಕ್ಸ್ ಆದ ಬೆನ್ನಲ್ಲೆ ಇದೀಗ ಹೊಸದೊಂದು ಕೂಗು ಎದ್ದಿದೆ. ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋದಾದರೆ ಬಾದಾಮಿಗೆ ಬರಲಿ ಎಂಬ ಕೂಗು ಕೇಳಿಬಂದಿದೆ. 

Tap to resize

Latest Videos

undefined

ರಾಹುಲ್‌ ಗಾಂಧಿ ಅನರ್ಹತೆಯಿಂದ ಮೋದಿ ಹೇಡಿತನ ಸಾಬೀತು: ಸಿದ್ದರಾಮಯ್ಯ

ಹೌದು, ನಿನ್ನೆ ಸಿದ್ದರಾಮಯ್ಯ ಬಾದಾಮಿಯಲ್ಲಿ ರೋಡ್ ಶೋ(Road show)ಬಳಿಕ ವಿದಾಯದ ಭಾಷಣ ಮಾಡಿದ್ದಾರೆ. ಈ ವೇಳೆ ಹೈಕಮಾಂಡ್ ಎಲ್ಲಿ ಸೂಚಿಸುತ್ತದೊ ಅಲ್ಲಿಂದ ಸ್ಪರ್ಧೆ ಮಾಡುವುದಾಗಿ ಹೇಳುವ ಮೂಲಕ ಹೈಕಮಾಂಡ್ ಕಡೆಗೆ ಬೊಟ್ಟು ಮಾಡಿದ್ದಾರೆ. ಅಂದ್ರೆ ಹೈಕಮಾಂಡ್ ಹೇಳಿದ್ರೆ ಬಾದಾಮಿ ಎರಡನೇ ಕ್ಷೇತ್ರ(Badami assembly constituency)ವಾಗಿ ಸಿದ್ದರಾಮಯ್ಯ ನಿಲ್ತಾರೆ ಎಂಬ ಆಶಯ. ಹೀಗಾಗಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸುವುದಾದರೆ ಬಾದಾಮಿಯಿಂದಲೂ ಸ್ಪರ್ಧಿಸಿ ಎಂಬ ಕೂಗು ಕೇಳಿಬಂದಿದೆ. 

ಆದರೆ ಬಾದಾಮಿಯಿಂದ ಯಾರೇ ನಿಂತರೂ ಕಾಂಗ್ರೆಸ್(Congress) ಗೆ ಮತ ನೀಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಗೆ ನೀವು ನೀಡುವ ಮತ ಸಿದ್ದರಾಮಯ್ಯಗೆ ಹಾಕಿದಂತಾಗುತ್ತೆ ಎನ್ನುವ ಮೂಲಕ  ಬಾದಾಮಿಯಿಂದ ಮತ್ತೇ ನಿಲ್ಲದಿರುವ ಬಗ್ಗೆ ಕೊನೆಯ ಭಾಷಣದಲ್ಲಿ ಸೂಚನೆ ನೀಡಿದ್ರಾ ಸಿದ್ದರಾಮಯ್ಯ?

ಆದರೂ ಪಟ್ಟು ಬಿಡದ ಬಾದಾಮಿ ಮತಕ್ಷೇತ್ರದ ಸಿದ್ದು ಅಭಿಮಾನಿಗಳು. ಎರಡನೇ ಕ್ಷೇತ್ರವಾಗಿ ಬಾದಾಮಿಯಲ್ಲಿ ಸ್ಪರ್ಧಿಸುಂತ ಒತ್ತಾಯಿಸಿದ್ದಾರೆ. 

Ticket fight: ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬೆಳ್ತಂಗಡಿ ಕ್ಷೇತ್ರದಲ್ಲಿ ಭುಗಿಲೆದ್ದ ಅಸಮಾಧಾನ!

ಬದುಕಿರೋತನಕ ಬಾದಾಮಿ ಜನರನ್ನ ಮರೆಯೊಲ್ಲ:  

ಆಡಳಿತ ಅವಧಿಯ ಕೊನೆಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಬಾದಾಮಿ ಜನರ ಕುರಿತು ಭಾವನಾತ್ಮಕ ಭಾಷಣ ಮಾಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರೂ ನೀವು  ನನ್ನ ಕೈ ಹಿಡಿದಿದ್ದೀರಿ ನಾನು ಇರೋತನಕ ಬಾದಾಮಿ ಜನರನ್ನ ಮರೆಯೋಲ್ಲ ಎಂದು ಹೇಳಿ ಕೈಮುಗಿದಿದ್ದಾರೆ. ಅಲ್ಲದೇ, ಬಾದಾಮಿ ಕ್ಷೇತ್ರದ ಕೈ ನಾಯಕರು, ಅಧಿಕಾರಿಗಳು, ಸಾರ್ವಜನಿಕರು ಒಳ್ಳೆಯ ಸ್ಫಂದನೆ ನೀಡಿದ್ದೀರಿ. ನಿಮ್ಮೆಲ್ಲರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿದೆ. ನಾನು ಬಾದಾಮಿ ಜನರಿಗೆ ಸದಾ ಋಣಿಯಾಗಿರುತ್ತೇನೆಂದು ಕೈಮುಗಿದು ಸಿದ್ದರಾಮಯ್ಯನವರು ಭಾವುಕರಾದ ಘಟನೆ ನಡೆಯಿತು.

click me!