ವರುಣಾದಲ್ಲಿ ಸೋಮಣ್ಣ ಪ್ರಚಾರಕ್ಕೆ ಯುವಕರಿಂದ ಅಡ್ಡಿ: ಸಿದ್ದರಾಮಯ್ಯ ಪರ ಘೋಷಣೆ

By Sathish Kumar KH  |  First Published Apr 23, 2023, 11:36 AM IST

ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ವಿ. ಸೋಮಣ್ಣ ಪ್ರಚಾರ ಕಾರ್ಯಕ್ಕೆ ತೆರಳಿದ್ದ ವೇಳೆ ಸಿದ್ದರಾಮಯ್ಯ ಬೆಂಬಲಿಗರು ಪ್ರಚಾರ ಕಾರ್ಯಕ್ಕೆ ಅಡ್ಡಿಪಡಿಸಿ ಘೇರಾವ್‌ ಮಾಡಿದ್ದಾರೆ.


ಮೈಸೂರು (ಏ.23): ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ಸಿದ್ದರಾಮಯ್ಯ ಅವರ ವಿರುದ್ಧ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದು ತೊಡೆ ತಟ್ಟಿರುವ ಸಚಿವ ವಿ. ಸೋಮಣ್ಣ ಅವರ ಪ್ರಚಾರ ಕಾರ್ಯಕ್ಕೆ ಸ್ಥಳೀಯ ಕಾಂಗ್ರೆಸ್‌ ನಾಯಕರು ಹಾಗೂ ಸಿದ್ದರಾಮಯ್ಯ ಬೆಂಬಲಿಗರು ಅಡ್ಡಿಪಡಿಸಿದ್ದಾರೆ. 

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ವಿ. ಸೋಮಣ್ಣ ಅವರು ಮತ್ತೊಂದು ಕಡೆ ಚಾಮರಾಜನಗರದಲ್ಲಿಯೂ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ ಅವರ ತವರು ವಿಧಾನಸಭಾ ಕ್ಷೇತ್ರ ವರುಣಾದಲ್ಲಿ ಭರ್ಜರಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಇದರಿಂದ ಸಿದ್ದರಾಮಯ್ಯ ಕೂಡ ಬೇರೆ ಕಡೆಗೆ ಪ್ರಚಾರ ಕಾರ್ಯಗಳಿಗೆ ತೆರಳದೇ ಕ್ಷೇತ್ರದಲ್ಲಿಯೇ ಇದ್ದು ಪ್ರಚಾರ ಕಾರ್ಯಗಳನ್ನು ಆರಂಭಿಸಿದ್ದಾರೆ. ಆದರೆ, ಈ ವೇಳೆ ಸಿದ್ದರಾಮಯ್ಯನ ಬೆಂಬಲಿಗರು ಸೋಮಣ್ಣ ಅವರಿಗೆ ಮುತ್ತಿಗೆ ಹಾಕಿ ಪ್ರಚಾರಕ್ಕೆ ಅಡ್ಡಿಪಡಿಸಿಸಿರುವುದು ಬೆಳಕಿಗೆ ಬಂದಿದೆ.

Tap to resize

Latest Videos

ಸಿದ್ದರಾಮಯ್ಯ V\S ವಿ ಸೋಮಣ್ಣ, ಸಿದ್ದರಾಮನ ಹುಂಡಿ ಮತದಾರರ ಮನದಾಳದ ಏನು.?

ಮೈಸೂರು ತಾಲ್ಲೂಕು ವರುಣಾ ವಿಧಾನಸಭಾ ಕ್ಷೇತ್ರದ ಭುಗತಗಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ವಿ.ಸೋಮಣ್ಣ ಪ್ರಚಾರ ತಡೆಯಲು ಯತ್ನಸಿದ ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಯುವಕರು. ಸೋಮಣ್ಣಗೆ ಮುತ್ತಿಗೆ ಹಾಕಿ ಸಿದ್ದರಾಮಯ್ಯ ಪರವಾಗಿ ಘೋಷಣೆ ಕೂಗಿದ್ದಾರೆ. ಈ ವೇಳೆ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಚ್ಪಾರ್ಚನೆ ಮಾಡಿದ ಸೋಮಣ್ಣ ಭಾಷಣ ಮಾಡುತ್ತಿದ್ದಾಗ, ಭಾಷಣದ ಮಧ್ಯೆ ಯುವಕ ಪ್ರಶ್ನೆ ಮಾಡಲು ಮುಂದಾಗಿದ್ದಾನೆ. ಭಾಷಣ ಮುಗಿಯುವವರೆಗೂ ಕಾಯುವಂತೆ ಮನವಿ ಮಾಡಿದ್ದಾರೆ. ನಂತರ, ಭಾಷಣ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಪರ ಘೋಷಣೆ ಕೂಗಿ ಮುತ್ತಿಗೆ ಹಾಕಿದ್ದಾರೆ.

ಮತ್ತೊಂದು ಗುಂಪು ಸೋಮಣ್ಣ ಪರವಾಗಿ ಘೋಷಣೆ: ಒಂದು ಗುಂಪು ಸೋಮಣ್ಣ ಅವರಿಗೆ ಮುತ್ತಿಗೆ ಹಾಕಿ ಸಿದ್ದರಾಮಯ್ಯ ಪರವಾಗಿ ಘೋಷಣೆ ಕೂಗುತ್ತಿದ್ದಂತೆ ಮತ್ತೊಂದು ಯುವಕರ ಗುಂಪಿನಿಂದ ಸೋಮಣ್ಣ ಹಾಗೂ ಬಿಜೆಪಿ ಪರ ಘೋಷಣೆ ಕೂಗಿದ್ದಾರೆ. ಕೂಡಲೇ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಗಲಾಟೆಯಾಗಬಹುದು ಎಂಬ ಮುನ್ಸೂಚನೆಯನ್ನು ಅರಿತ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ನಂತರ ಸಚಿವ ವಿ. ಸೋಮಣ್ಣ ಅಲ್ಲಿಂದ ವರುಣಾ ಕ್ಷೇತ್ರದ ಮತ್ತೊಂದು ಊರಿಗೆ ಪ್ರಚಾರ ಕಾರ್ಯಕ್ಕೆ ತೆರಳಿದರು. 

ರಮ್ಯಾರನ್ನು ಬಿಜೆಪಿಗೆ ಆಹ್ವಾನಿಸುವಷ್ಟು ನಮ್ಮ ಪಾರ್ಟಿ ಬರಗೆಟ್ಟಿಲ್ಲ‌: ಸಚಿವ ಅಶೋಕ್

ನಾನು ಭೂತ, ಪಿಶಾಚಿ ಅಲ್ಲವೆಂದ ಸೋಮಣ್ಣ: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು,ವರುಣದಲ್ಲಿ ನಾಯಕರ ನಡುವಿನ ಟಾಕ್‌ ಫೈಟ್‌ ಸಹ ಜೋರಾಗಿದೆ. ನಾನು ಭೂತನೂ ಅಲ್ಲ, ಪಿಶಾಚಿಯೂ ಅಲ್ಲ, ನಾನು ಮನುಷ್ಯ ಎಂದು ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೆಚ್ಚಿನ ಪ್ರಚಾರವನ್ನು ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ, ಅವರ ಕರ್ತವ್ಯ ಮಾಡುತ್ತಿದ್ದಾರೆ. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರು ನನಗಿಂತ ದೊಡ್ಡ ನಾಯಕರು. ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಎಷ್ಟು ಬಾರಿಯಾದ್ರೂ ಬರಲಿ. ಅದನ್ನು ನಾನು ಯಾಕೆ ಪ್ರಶ್ನೆ ಮಾಡಬೇಕು ಎಂದು ಸೋಮಣ್ಣ ಕೇಳಿದ್ದಾರೆ. 

click me!