ಹವಾಮಾನ ವೈಪರಿತ್ಯ, ಬೆಳಗಾವಿ ಬದಲು ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆದ ಸಿದ್ದರಾಮಯ್ಯ ಹೆಲಿಕಾಪ್ಟರ್!

By Suvarna News  |  First Published Apr 14, 2023, 6:35 PM IST

ಚುನಾವಣಾ ಆಖಾಡದಲ್ಲಿ ಸಿದ್ದರಾಮಯ್ಯ ಸಕ್ರಿಯರಾಗಿದ್ದಾರೆ. ವರುಣಾದಲ್ಲಿ ನಿರಾಯಾಸ ಗೆಲುವು ಎಂದುಕೊಂಡಿದ್ದ ಸಿದ್ದುಗೆ ಬಿಡೆಪಿ ವಿ ಸೋಮಣ್ಣ ಪ್ಲೇ ಕಾರ್ಡ್ ಪ್ರಯೋಗಿಸಿದ್ದಾರೆ. ಈ ಸಂಕಷ್ಟದ ನಡುವೆ ಸಿದ್ದರಾಮಯ್ಯ ಹೆಲಿಕಾಪ್ಟರ್ ಬೆಳಗಾವಿ ಬದಲು ಹುಬ್ಬಳ್ಳಿಯಲ್ಲೇ ಲ್ಯಾಂಡ್ ಆಗಿ ಕಿರಿಕಿರಿ ಅನುಭವಿಸಿದ್ದಾರೆ.


ಹುಬ್ಬಳ್ಳಿ(ಏ.14): ಕರ್ನಾಟಕ ವಿಧಾನಸಭಾ ಚುನಾವಣೆ ಭರ್ಜರಿ ತಯಾರಿ ನಡಸುತ್ತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಇದೀಗ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಕ್ಷೇತ್ರ ಕ್ಷೇತ್ರಕ್ಕೆ ತೆರಳಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಯ್ಯ ಆತಂಕ ಹೆಚ್ಚಾಗಿದೆ. ಒಂದಂಡೆ ವರುಣಾ ಕ್ಷೇತ್ರದಿಂದ ಬಿಜೆಪಿ ವಿ ಸೋಮಣ್ಣ ಕಣಕ್ಕಿಳಿಸಿದೆ. ಇತ್ತ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದ ಸಿದ್ದರಾಮಯ್ಯ ಹೆಲಿಕಾಪ್ಟರ್  ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆದ ಘಟನೆ ನಡೆದಿದೆ. ಹವಾಮಾನ ವೈಪರಿತ್ಯ ಹಿನ್ನಲೆಯಲ್ಲಿ ಹೆಲಿಕಾಪ್ಟರ್ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಮಾಡಲಾಗಿದೆ.

ಬೆಳಗಾವಿಯಯಲ್ಲಿ ಸತೀಶ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಹೆಲಿಕಾಪ್ಟರ್ ಮೂಲಕ ತೆರಳಿದ್ದರು. ಆದರೆ  ಹವಾಮಾನ ವೈಪರಿತ್ಯ ಕಾರಣ ಬೆಳಗಾವಿಗೆ ಹೆಲಿಕಾಪ್ಟರ್‌ ಮೂಲಕ ತೆರಳುವುದು ಸೂಕ್ತವಲ್ಲ ಎಂದು ಪೈಲೆಟ್ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲಾಗಿದೆ. ಬಳಿಕ ಸಿದ್ದರಾಮ್ಯ ಹುಬ್ಬಳ್ಳಿಯಿಂದ ಕಾರಿನ ಮೂಲಕ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದಾರೆ.

Latest Videos

undefined

ಸಿದ್ದು-ಡಿಕೆಶಿ ಕಟ್ಟಿ ಹಾಕಲು ಕಮಲಾಧಿಪತಿಗಳ ಮೆಗಾ ಪ್ಲಾನ್! ಬಿಜೆಪಿಗೆ ಬ್ರಹ್ಮಾಸ್ತ್ರ ಸಿದ್ಧಪಡಿಸಿದ ಕಾಂಗ್ರೆಸ್

ಸಿದ್ದರಾಮಯ್ಯ ಈ ಬಾರಿ ಪುತ್ರ ಡಾ.ಯತೀಂದ್ರ ಅವರ ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಯತೀಂದ್ರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದೇ ವೇಳೆ ಬಿಜೆಪಿ ವಿ ಸೋಮಣ್ಣಗೆ ವರುಣಾದಿಂದ ಟಿಕೆಟ್ ನೀಡಿದೆ.ಈ ಕುರಿತು ಈಗಾಗಲೇ ಸಿದ್ದು ಪ್ರತಿಕ್ರಿಯೆ ನೀಡಿದ್ದಾರೆ. ಎದುರಾಳಿ ಯಾರು ಅಂತ ನಾನು ನೋಡಲ್ಲ. ಮತದಾರರ ಮೇಲೆ ನಾನು ವಿಶ್ವಾಸ ಇಟ್ಟಿದ್ದೇನೆ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಬೇಕೆಂದು ಮತದಾರರು, ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ. ಅವನು (ಸೋಮಣ್ಣ) ಈಗ ಬಂದಿದ್ದಾನೆ. ಪ್ರಚಾರ ಮಾಡಲಿ. ನಮ್ಮ ಹುಡುಗ (ಡಾ.ಯತೀಂದ್ರ) ಈಗಾಗಲೇ ಪ್ರಚಾರ ಮಾಡಿ ಮುಗಿಸಿದ್ದಾನೆ ಎಂದಿದ್ದರು.

ಬಿಜೆಪಿ, ಜೆಡಿಎಸ್‌ಗೆ ನಾನೇ ಟಾರ್ಗೆಟ್‌. ಆದರೆ ಜನರ ಆಶೀರ್ವಾದ ಇರುವವರೆಗೆ ಯಾರೂ ನನ್ನನ್ನು ರಾಜಕೀಯವಾಗಿ ಮುಗಿಸಲಾಗದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಎರಡು ಪಕ್ಷದವರೂ ಸೇರಿಕೊಂಡು ನನ್ನನ್ನೇ ರಾಜಕೀಯವಾಗಿ ಮುಗಿಸಬೇಕೆಂದು ಹೊರಟಿದ್ದಾರೆ. ನಾನು ಈ ನಾಡಿಗೆ ಮಾಡಿರುವ ಅನ್ಯಾಯವಾದರೂ ಏನು? ಎಂದು ಪ್ರಶ್ನಿಸಿದ್ದರು.

ವರುಣಾ- ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ತಾರಾ, ಸೋಲ್ತಾರಾ? ಸ್ಪೆಷಲ್‌ ಟಾಸ್ಕ್‌ ಸೀಕ್ರೆಟ್‌ ಹೀಗಿದೆ..

ಈ ಚುನಾವಣೆ ರಾಜ್ಯದ ಹಿತದೃಷ್ಟಿಯಿಂದ ಬಹಳ ಪ್ರಾಮುಖ್ಯವಾಗಿದ್ದು ಯಾರೂ ಕೂಡಾ ಈ ಚುನಾವಣೆಯನ್ನು ಲಘುವಾಗಿ ಪರಿಗಣಿಸಬೇಡಿ. ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಕಾಂಗ್ರೆಸ್‌ ಅಭ್ಯರ್ಥಿ ಸಿದ್ದೇಗೌಡರನ್ನು ಗೆಲ್ಲಿಸಬೇಕು. ಕಳೆದ ಚುನಾವಣೆಯಲ್ಲಿ ಬೇರೆ ಬೇರೆ ರಾಜಕೀಯ ಬೆಳವಣಿಗೆಗಳಿಂದಾಗಿ ನಾನು ಸೋತಿದ್ದೇನೆ. ಈ ಬಾರಿ ಅಂತಹ ಬೆಳವಣಿಗೆಗಳು ಆಗಿಲ್ಲ. ನಾನು 5 ವರ್ಷ ಮುಖ್ಯಮಂತ್ರಿಯಾಗಿ ಸಾಕಷ್ಟುಒಳ್ಳೆಯ ಕೆಲಸಗಳನ್ನು ಮಾಡಿದ್ದರೂ ಸಹ ಚಾಮುಂಡೇಶ್ವರಿಯ ಜನ ನನ್ನನ್ನು ಸೋಲಿಸಿದರು ಎಂದು ಸಿದ್ದು ಹೇಳಿದ್ದರು. ಈ ಮೂಲಕ ಮತಾದರರ ಮನಗೆಲ್ಲುವ ಪ್ರಯತ್ನ ಮಾಡಿದ್ದರು.
 

click me!