ಬೆಂಗಳೂರು ಬಿಟ್ಟು ವರುಣ ಹಾಗೂ ಚಾಮರಾಜನಗರಲ್ಲಿ ಸ್ಪರ್ಧಿಸಿದ ಬಿಜೆಪಿ ಪ್ರಬಲ ಲಿಂಗಾಯಿತ ನಾಯಕ ವಿ ಸೋಮಣ್ಣಗೆ ತೀವ್ರ ಹಿನ್ನಡೆಯಾಗಿದೆ. ಸಿದ್ದರಾಮಯ್ಯ ಅಬ್ಬಕಕ್ಕೆ ವರುಣಾದಲ್ಲಿ ಮುಗ್ಗರಿಸಿದ ಸೋಮಣ್ಣ, ಚಾಮರಾಜನಗರದಲ್ಲೂ ಸೋಲುಂಡಿದ್ದಾರೆ. ಇತ್ತ ತಮ್ಮ ಸ್ವಕ್ಷೇತ್ರ ಗೋವಿಂದರಾಜನಗರವೂ ಕೈತಪ್ಪಿದೆ.
ಬೆಂಗಳೂರು(ಮೇ.13): ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಅಬ್ಬರಕ್ಕೆ ಬಿಜೆಪಿಯ ಘಟಾನುಘಟಿ ನಾಯಕರು ಮಕಾಡೆ ಮಲಗಿದ್ದಾರೆ. ಬಿಜೆಪಿ ಪ್ರಬಲ ಲಿಂಗಾಯಿತ ನಾಯಕ ವಿ ಸೋಮಣ್ಣಗೆ ಮೂರುು ಕ್ಷೇತ್ರಗಳೂ ಕೈತಪ್ಪಿದೆ. ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸ್ಪರ್ಧಿಸಿದ್ದ ವಿ ಸೋವಣ್ಣ ಸೋಲು ಕಂಡಿದ್ದಾರೆ. ಇತ್ತ ಚಾಮರಾಜನಗರದಲ್ಲೂ ಅದೃಷ್ಠ ಪರೀಕ್ಷೆಗಿಳಿದ ವಿ ಸೋಮಣ್ಣ ಸೋಲು ಕಂಡಿದ್ದಾರೆ. ಇತ್ತ ವಿ ಸೋಮಣ್ಣ ಸ್ವಕ್ಷೇತ್ರವಾಗಿದ್ದ ಗೋವಿಂದರಾಜನಗರವೂ ಕೈತಪ್ಪಿದೆ.
ಈ ಬಾರಿ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ ವಿ ಸೋವಣ್ಣ ಹೀನಾಯ ಸೋಲಿನತ್ತ ಮುಖಮಾಡಿದ್ದಾರೆ. ಇದರಿಂದ ವಿ ಸೋಮಣ್ಣ ರಾಜಕೀಯ ಭವಿಷ್ಯವೂ ಅತಂತ್ರವಾಗಿದೆ.ವರುಣಾದಲ್ಲಿ ಸಿದ್ದರಾಮಯ್ಯ ಭರ್ಜರಿ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ. ಸಿದ್ದರಾಮಯ್ಯ 38731 ಮತಗಳನ್ನು ಪಡೆದು ಭರ್ಜರಿ ಮುನ್ನಡೆ ಸಾಧಿಸಿದ್ದರೆ, ಇತ್ತ ಸೋಮಣ್ಣ 22816 ಮತಗಳನ್ನು ಪಡೆದಿದ್ದಾರೆ.
undefined
Karnataka Election 2023 Live: 130 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಭಾರಿ ಮುನ್ನಡೆ, ಸಂಭ್ರಮ ಎಲ್ಲೆಡೆ ಸಂಭ್ರಮ
ಚಾಮರಾಜನಗರ ಕ್ಷೇತ್ರದಲ್ಲೂ ವಿ ಸೋವಣ್ಣ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಕಾಂಗರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ 83136 ಮತಗಳನ್ನು ಪಡೆದು ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ. ವಿ ಸೋಮಣ್ಣ 75753 ಮತಗಳನ್ನು ಪಡೆದಿದ್ದಾರೆ. ಬರೋಬ್ಬರಿ 8 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪುಟ್ಟರಂಗಶೆಟ್ಟಿ ಮುನ್ನಡೆಯಲ್ಲಿದ್ದಾರೆ.
ವಿ ಸೋಮಣ್ಣ ಅವರ ಸ್ವಕ್ಷೇತ್ರವಾಗಿದ್ದ ಗೋವಿಂಜರಾಜನಗರ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೆ ವಿ ಸೋಮಣ್ಣ ನಿರ್ಗಮನದಿಂದ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ 26908 ಮತಗಳನ್ನು ಪಡೆದಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿ ಉಮೇಶ್ ಶೆಟ್ಟಿ 20790 ಮತಗಳನ್ನು ಪಡೆದಿದ್ದಾರೆ.
BELLARY B SRIRAMULU ELECTION RESULTS 2023 LIVE: ಬಳ್ಳಾರಿಯಲ್ಲಿ ರಾಮುಲು ಹೀನಾಯ, ನಾಗೇಂದ್ರನಿಗೆ ಜನರ ನ್ಯಾಯ!
16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.