Athani Election Result 2023 : ಲಕ್ಷ್ಮಣ ಸವದಿಗೆ ಭರ್ಜರಿ ಗೆಲುವು, ಬಿಜೆಪಿಗೆ ಭಾರೀ ಮುಖಭಂಗ

By Girish Goudar  |  First Published May 13, 2023, 12:34 PM IST

ಅಥಣಿ ಮತದಾರ ಪ್ರಭು ಸವದಿ ಅವರನ್ನ ಕೈಹಿಡಿದಿದ್ದಾರೆ. ಈ ಮೂಲಕ ಬಿಜೆಪಿ ಭಾರೀ ಮುಖಭಂಗವಾಗಿದೆ. ಲಕ್ಷ್ಮಣ ಸವದಿ ಅವರು 55,144 ಮತಗಳನ್ನ ಪಡೆಯವ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದಾರೆ.     


ಬೆಳಗಾವಿ(ಮೇ.13): ರಾಜ್ಯದ ಗಮನ ಸೆಳೆದಿದ್ದ ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.  ಬಿಜೆಪಿಯಲ್ಲಿ ಟಿಕೆಟ್‌ ಸಿಗದಿದ್ದರಿಂದ ಕಾಂಗ್ರೆಸ್‌ನಿಂದ ಲಕ್ಷ್ಮಣ ಸವದಿ ಸ್ಪರ್ಧಿಸಿದ್ದರು. ಲಕ್ಷ್ಮಣ ಸವದಿ  ಯಾವುದೇ ಕಾರಣಕ್ಕೂ ಗೆಲ್ಲಬಾರದು ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವತಃ ಪ್ರಚಾರದಲ್ಲಿ ಹೇಳಿದ್ದರು. ಆದರೆ, ಅಥಣಿ ಮತದಾರ ಪ್ರಭು ಸವದಿ ಅವರನ್ನ ಕೈಹಿಡಿದಿದ್ದಾರೆ. ಈ ಮೂಲಕ ಬಿಜೆಪಿ ಭಾರೀ ಮುಖಭಂಗವಾಗಿದೆ. ಲಕ್ಷ್ಮಣ ಸವದಿ ಅವರು 55,144 ಮತಗಳನ್ನ ಪಡೆಯವ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದಾರೆ.     

ಬಿಜೆಪಿಯಿಂದ ಸ್ಪರ್ಧಿಸಿದ್ದ ಮಹೇಶ ಕುಮಟ್ಟಳ್ಳಿ 22495 ಮತಗಳನ್ನ ಪಡೆಯುವ ಮೂಲಕ ಪರಾಭವ ಹೊಂದಿದ್ದಾರೆ. ರಮೇಶ ಜಾರಕಿಹೊಳಿ ಅವರು ಅಥಣಿಯಿಂದ ಮಹೇಶ ಕುಮಟ್ಟಳ್ಳಿಗೆ ಬಿಜೆಪಿ ಟಿಕೆಟ್‌ ಕೊಡಿಸುವಲ್ಲ ಸಫಲಾರಾಗಿದ್ದರು. ಆದರೆ, ಅಥಣಿ ಜನ ಮಾತ್ರ ಲಕ್ಷ್ಮಣ ಸವದಿಗೆ ಕೈ ಎಂದಿದ್ದಾರೆ.  

Tap to resize

Latest Videos

BELLARY B SRIRAMULU ELECTION RESULTS 2023 LIVE: ಬಳ್ಳಾರಿಯಲ್ಲಿ ರಾಮುಲು ಹೀನಾಯ, ನಾಗೇಂದ್ರನಿಗೆ ಜನರ ನ್ಯಾಯ!

ಇನ್ನು ಜಿಲ್ಲೆತ ಮತ್ತೊಂದು ಕ್ಷೇತ್ರ ಯಮಕನಮರಡಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು 79922 ಪಡೆದು ಜಯ ದಾಖಲಿಸಿದ್ದಾರೆ.  ಯಮಕನಮರಡಿಯಲ್ಲಿ ಬಿಜೆಪಿಯಿಂದ ಬಸವರಾಜ ಹುಂದ್ರಿ ಅವರು 34089 ಪಡೆದು ಸೋಲು ಅನುಭವಿಸಿದ್ದಾರೆ.  

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು. 

click me!