Kodagu Election Result 2023: ಕೊಡಗಿನಲ್ಲಿ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ ಕಾಂಗ್ರೆಸ್

By Gowthami K  |  First Published May 13, 2023, 12:58 PM IST

ಕೇವಲ ಎರಡೇ ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಈ ಬಾರಿ ಬಿಜೆಪಿಯನ್ನು ಕಾಂಗ್ರೆಸ್ ಗುಡಿಸಿ ಗುಂಡಾತರ ಮಾಡಿದೆ. ಕ್ಷೇತ್ರದ ಜನತೆ ಹೊಸ ಮುಖಗಳನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ.


ಕೊಡಗು (ಮೇ.13): ಕೇವಲ ಎರಡೇ ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಈ ಬಾರಿ ಬಿಜೆಪಿಯನ್ನು ಕಾಂಗ್ರೆಸ್ ಗುಡಿಸಿ ಗುಂಡಾತರ ಮಾಡಿದೆ. ಮಡಿಕೇರಿ ಮತ್ತು ವಿರಾಜಪೇಟೆ ಎರಡು ಕ್ಷೇತ್ರಗಳಿದ್ದು, ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮಂಥರ್ ಗೌಡ ಬಿಜೆಪಿಯ ಅಪ್ಪಚ್ಚು ರಂಜನ್  ಅವರನ್ನು  ಸೋಲಿಸಿ ಗೆಲುವಿನ ಪತಾಕೆ ಹಿಡಿದ್ದಾರೆ. ಬಿಜೆಪಿಯ ಕೆ. ಜಿ. ಬೋಪಯ್ಯ ಅವರನ್ನು ಕಾಂಗ್ರೆಸ್ ನ ಪೊನ್ನಣ್ಣ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.  ಕಳೆದ ನಾಲ್ಕು ಅವಧಿಯಿಂದ ಎರಡೂ ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿದ್ದು, ಈ ಬಾರಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್‌ ರಣತಂತ್ರ ಹೂಡಿತ್ತು. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಯುವ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು.

ಅಪ್ಪಚ್ಚು ರಂಜನ್‌ ಕನಸಿಗೆ ಕೊಳ್ಳಿ ಇಟ್ಟ ಕಾಂಗ್ರೆಸ್
ಮಡಿಕೇರಿ ಕ್ಷೇತ್ರದಲ್ಲಿ ಅಪ್ಪಚ್ಚು ರಂಜನ್‌  ಅವರಿಗೆ ಯುವ ನಾಯಕ್ ಮಂಥರ್ ಗೌಡ ಬಿಗ್ ಶಾಕ್ ಕೊಟ್ಟಿದ್ದಾರೆ. ಸುಮಾರು 4520 ಮತಗಳಿಂದ ಕಾಂಗ್ರೆಸ್ ಮಂತರ್ ಗೌಡ ಗೆಲುವು ಸಾಧಿಸಿದ್ದು ಮೊದಲ ಬಾರಿಗೆ ವಿಧಾನಸಭೆ ಗೆ ಆಯ್ಕೆಯಾಗಿದ್ದಾರೆ. ಅಪ್ಪಚ್ಚು ರಂಜನ್‌   7ನೇ ಬಾರಿಗೆ ಕಣಕ್ಕೆ ಇಳಿದಿದ್ದು, 6ನೇ ಬಾರಿಗೆ ಶಾಸಕರಾಗುವ ಕನಸು ಕಂಡಿದ್ದರು. ಆದರೆ ಈ ಕನಸಿಗೆ  ಕಾಂಗ್ರೆಸ್‌ ನ ಡಾ.ಮಂಥರ್‌ ಗೌಡ  ತಣ್ಣೀರು ಎರಚಿದ್ದು, ಗೆಲುವಿನ ನಗೆ ಬೀರಿದ್ದಾರೆ.  ಜೆಡಿಎಸ್‌ನಿಂದ ನಾಪಂಡ ಮುತ್ತಪ್ಪನವರು ನಿಂತಿದ್ದರು.    ಅಪ್ಪಚ್ಚು ರಂಜನ್‌ ಅವರು 1994 ಹಾಗೂ 1998ರಲ್ಲಿ ಸೋಮವಾರಪೇಟೆ ಕ್ಷೇತ್ರದಿಂದ ಎರಡು ಬಾರಿ ಹಾಗೂ ಪುನರ್‌ ವಿಂಗಡಣೆಗೊಂಡಿರುವ ಮಡಿಕೇರಿ ಕ್ಷೇತ್ರದಿಂದ 2008, 2013 ಹಾಗೂ 2018ರಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ್ದರು. ಈ ಬಾರಿ ಸೋಲು ಕಂಡಿದ್ದು, ಜನತೆ ಹೊಸ ಮುಖ ಡಾ.ಮಂಥರ್‌ ಗೌಡಗೆ ಅವಕಾಶ ನೀಡಿ ವಿಧಾನಸಭೆ ಗೆ ಆಯ್ಕೆ ಮಾಡಿದ್ದಾರೆ.

Latest Videos

undefined

Karnataka Election 2023 Live: 130 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಭಾರಿ ಮುನ್ನಡೆ, ಸಂಭ್ರಮ ಎಲ್ಲೆಡೆ

ಬೋಪಯ್ಯಗೆ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಿದ ಕಾಂಗ್ರೆಸ್:
ವಿರಾಜಪೇಟೆಯಲ್ಲಿ ಕೆಜಿ ಬೋಪಯ್ಯ ಅವರಿಗೆ ಸೋಲಾಗಿದೆ. ಕಾಂಗ್ರೆಸ್ ನ ಎ.ಎಸ್‌.ಪೊನ್ನಣ್ಣ ಅವರು ಸುಮಾರು  4291 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಕಳೆದ 20 ವರ್ಷದಿಂದ ಬಿಜೆಪಿಯೇ ಇಲ್ಲಿ ಗೆಲುವು ಸಾಧಿಸುತ್ತಿತ್ತು, ಮಾಜಿ ಸ್ಪೀಕರ್‌ ಹಾಗೂ ಹಾಲಿ ಶಾಸಕ ಕೆ.ಜಿ.ಬೋಪಯ್ಯ ಅವರು ಈ ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ಸ್ಪರ್ಧಿಸಿದ್ದರು. ಕ್ಷೇತ್ರದಲ್ಲಿ ಸತತ ಹ್ಯಾಟ್ರಿಕ್‌ ಗೆಲುವು ಕಂಡಿರುವ ಬೋಪಯ್ಯ, ಅವರ ಗೆಲುವಿನ ನಾಗಾಲೋಟಕ್ಕೆ ಎ.ಕೆ.ಸುಬ್ಬಯ್ಯ ಅವರ ಪುತ್ರ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್‌.ಪೊನ್ನಣ್ಣ ಬ್ರೇಕ್‌ ಹಾಕಿದ್ದಾರೆ.

ಕೊಡಗಿನಲ್ಲಿ ಒಟ್ಟು ಒಟ್ಟು ಮತದಾರರು : 456313 ಮಂದಿ
ಪುರುಷ ಮತದಾರರು: 224875 ಮಂದಿ
ಮಹಿಳಾ ಮತದಾರರು : 231415 ಮಂದಿ
ಇತರ : 23 ಮಂದಿ
ಈ ಬಾರಿ ಶೇಕಡಾವಾರು ಮತದಾನ : 74.73%

KARNATAKA ELECTION RESULTS 2023: ಖರ್ಗೆ ವಿವಾಹ ವಾರ್ಷಿಕೋತ್ಸವಕ್ಕೆ ಕಾಂಗ್ರೆಸ್‌ ಗೆಲುವಿನ ಗಿಫ್ಟ್

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

click me!