Karnataka election results 2023: ಬೊಮ್ಮಾಯಿ ಸಂಪುಟದ 12 ಸಚಿವರ ಸೋಲು !

Published : May 14, 2023, 02:32 AM IST
Karnataka election results 2023: ಬೊಮ್ಮಾಯಿ ಸಂಪುಟದ 12 ಸಚಿವರ ಸೋಲು !

ಸಾರಾಂಶ

ಬೊಮ್ಮಾಯಿ ಸಂಪುಟದ 12 ಸಚಿವರ ಸೋಲು  ಕಾರಜೋಳ, ನಿರಾಣಿ, ಸುಧಾಕರ್‌, ಸೋಮಣ್ಣ ಮನೆಗೆ ಮಾಧುಸ್ವಾಮಿ, ರಾಮುಲು, ಎಂಟಿಬಿ, ಬಿಸಿಪಾ ಪರಾಜಿತ ಮುನೇನಕೊಪ್ಪ, ಕೆಸಿಎನ್‌, ನಾಗೇಶ್‌, ಆಚಾರ್‌ಗೆ ಮುಖಭಂಗ

ಬೆಂಗಳೂರು (ಮೇ.14) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಹಾಲಿ ಸಚಿವರ ಪೈಕಿ 12 ಮಂದಿ ಸೋಲು ಅನುಭವಿಸಿದ್ದು, ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡಿದೆ.

ಸಚಿವರಾಗಿದ್ದ ಗೋವಿಂದ ಕಾರಜೋಳ(Govind karjol) (ಮುಧೋಳ), ಮುರುಗೇಶ್‌ (Murugesh nirani) ನಿರಾಣಿ (ಬೀಳಗಿ), ಡಾ.ಕೆ.ಸುಧಾಕರ್‌ (ಚಿಕ್ಕಬಳ್ಳಾಪುರ), ವಿ.ಸೋಮಣ್ಣ (ಚಾಮರಾಜನಗರ ಮತ್ತು ವರುಣ), ಜೆ.ಸಿ.ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ), ಬಿ.ಶ್ರೀರಾಮುಲು (ಬಳ್ಳಾರಿ ಗಾಮಾಂತರ), ಎಂ.ಟಿ.ಬಿ.ನಾಗರಾಜ್‌ (ಹೊಸಕೋಟೆ), ಶಂಕರ ಪಾಟೀಲ ಮುನೇನಕೊಪ್ಪ (ನವಲಗುಂದ), ಬಿ.ಸಿ.ಪಾಟೀಲ್‌ (ಹಿರೇಕೆರೂರು), ಕೆ.ಸಿ.ನಾರಾಯಣಗೌಡ (ಕೆ.ಆರ್‌.ಪೇಟೆ), ಬಿ.ಸಿ.ನಾಗೇಶ್‌ (ತಿಪಟೂರು) ಮತ್ತು ಹಾಲಪ್ಪ ಆಚಾರ್‌ (ಯಲಬುರ್ಗ) ಸೋಲು ಅನುಭವಿಸಿದ್ದಾರೆ.

Karnataka Election Results 2023: ಬಿಜೆಪಿಯ 61 ಹಾಲಿ ಶಾಸಕರಿಗೆ ಸೋಲಿನ ಏಟು

ಇನ್ನು ಆರ್‌.ಅಶೋಕ್‌ (ಪದ್ಮನಾಭನಗರದಲ್ಲಿ ಗೆಲುವು ಮತ್ತು ಕನಕಪುರದಲ್ಲಿ ಸೋಲು), ಡಾ.ಸಿ.ಎನ್‌.ಅಶ್ವತ್ಥನಾರಾಯಣ (ಮಲ್ಲೇಶ್ವರ), ಎಸ್‌.ಟಿ.ಸೋಮಶೇಖರ್‌ (ಯಶವಂತಪುರ), ಬೈರತಿ ಬಸವರಾಜ (ಕೆ.ಆರ್‌.ಪುರ), ಕೆ.ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್‌), ಮುನಿರತ್ನ (ರಾಜರಾಜೇಶ್ವರಿನಗರ), ಆರಗ ಜ್ಞಾನೇಂದ್ರ (ತೀರ್ಥಹಳ್ಳಿ), ವಿ.ಸುನೀಲ್‌ಕುಮಾರ್‌ (ಕಾರ್ಕಳ), ಶಿವರಾಂ ಹೆಬ್ಬಾರ್‌ (ಯಲ್ಲಾಪುರ), ಪ್ರಭು ಚವಾಣ್‌ (ಔರಾದ್‌) ಮತ್ತು ಶಶಿಕಲಾ ಜೊಲ್ಲೆ (ನಿಪ್ಪಾಣಿ) ಗೆಲುವು ಸಾಧಿಸಿದ್ದಾರೆ. ಈ ಪೈಕಿ ಕೆಲವರು ಹೇಳಿಕೊಳ್ಳುವಂಥ ಅಂತರದಿಂದ ಗೆದ್ದಿಲ್ಲ ಎನ್ನುವುದೂ ಗಮನಾರ್ಹ.

ಸಚಿವರ ಪೈಕಿ ಎಸ್‌.ಅಂಗಾರ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಆನಂದ್‌ ಸಿಂಗ್‌ ಅವರು ತಮ್ಮ ಬದಲು ಪುತ್ರ ಸಿದ್ಧಾರ್ಥ ಸಿಂಗ್‌ ಅವರನ್ನು ಕಣಕ್ಕಿಳಿಸಿದರೂ ಸೋಲು ಅನುಭವಿಸಬೇಕಾಯಿತು. ಕೋಟ ಶ್ರೀನಿವಾಸ ಪೂಜಾರಿ ಅವರು ವಿಧಾನಪರಿಷತ್‌ ಸದಸ್ಯರಾಗಿದ್ದರಿಂದ ಕಣದಲ್ಲಿರಲಿಲ್ಲ.

ಗೆದ್ದ ಸಚಿವರು:

  • ಆರ್‌.ಅಶೋಕ್‌
  • ಡಾ.ಸಿ.ಎನ್‌.ಅಶ್ವತ್ಥನಾರಾಯಣ
  • ಎಸ್‌.ಟಿ.ಸೋಮಶೇಖರ್‌
  • ಬೈರತಿ ಬಸವರಾಜ
  • ಕೆ.ಗೋಪಾಲಯ್ಯ
  • ಮುನಿರತ್ನ
  • ಆರಗ ಜ್ಞಾನೇಂದ್ರ
  • ವಿ.ಸುನೀಲ್‌ಕುಮಾರ್‌
  • ಶಿವರಾಂ ಹೆಬ್ಬಾರ್‌
  • ಪ್ರಭು ಚವಾಣ್‌
  • ಶಶಿಕಲಾ ಜೊಲ್ಲೆ

ಸೋತ ಸಚಿವರು:

  • ಗೋವಿಂದ ಕಾರಜೋಳ
  • ಮುರುಗೇಶ್‌ ನಿರಾಣಿ
  • ಡಾ.ಕೆ.ಸುಧಾಕರ್‌
  • ವಿ.ಸೋಮಣ್ಣ
  • ಜೆ.ಸಿ.ಮಾಧುಸ್ವಾಮಿ
  • ಬಿ.ಶ್ರೀರಾಮುಲು
  • ಎಂ.ಟಿ.ಬಿ.ನಾಗರಾಜ್‌
  • ಶಂಕರ ಪಾಟೀಲ ಮುನೇನಕೊಪ್ಪ
  • ಬಿ.ಸಿ.ಪಾಟೀಲ್‌
  • ಕೆ.ಸಿ.ನಾರಾಯಣಗೌಡ
  • ಬಿ.ಸಿ.ನಾಗೇಶ್‌
  • ಹಾಲಪ್ಪ ಆಚಾರ್‌

Karnataka election results 2023: ಕಿತ್ತೂರು ಕರ್ನಾಟಕದಲ್ಲಿ ಮುದುಡಿದ ತಾವರೆ, ಕೈ ಮೇಲುಗೈ!...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್