Karnataka Election Results 2023: ಗಂಭೀರ್‌ ರೀತಿ ಶಟ್‌ಅಪ್‌ ಎಂದ ರಾಹುಲ್‌, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌!

By Santosh Naik  |  First Published May 13, 2023, 5:59 PM IST

Karnataka Assembly Elections 2023 Results: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಚಂಡ ಗೆಲುವಿನ ಬಳಿಕ ರಾಹುಲ್‌ ಗಾಂಧಿ ಸುದ್ದಿಗಾರರ ಜೊತೆ ನವದೆಹಲಿಯಲ್ಲಿ ಮಾತನಾಡಿದರು. ಈ ವೇಳೆ ಅವರು ಗಂಭೀರ್‌ ರೀತಿ ಶಟ್‌ಅಪ್‌ ಎಂದು ಸನ್ನೆ ಮಾಡಿದ್ದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
 


ಬೆಂಗಳೂರು (ಮೇ.13): ಚಿನ್ನಸ್ವಾಮಿ ಸ್ಟೇಡಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಆರ್‌ಸಿಬಿ ವಿರುದ್ಧದ ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಲಕ್ನೋ ತಂಡದ ಮೆಂಟರ್‌ ಆಗಿದ್ದ ಗೌತಮ್‌ ಗಂಭೀರ್‌, ಆರ್‌ಸಿಬಿ ಆರ್‌ಸಿಬಿ ಎಂದು ಕೂಗುತ್ತಿದ್ದ ಅಭಿಮಾನಿಗಳಿಗೆ ಶಟ್‌ಅಪ್‌ ಎನ್ನುವ ರೀತಿಯಲ್ಲಿ ಸನ್ನೆ ಮಾಡಿದ್ದು ಸಾಕಷ್ಟು ವೈರಲ್‌ ಆಗಿತ್ತು. ಅದಕ್ಕೆ ವಿರಾಟ್‌ ಕೊಹ್ಲಿ, ಲಕ್ನೋದಲ್ಲಿ ಸೇಡು ತೀರಿಸಿಕೊಂಡಿದ್ದು, ಅದಾದ ಬಳಿಕ ನಡೆದ ಗಲಾಟೆಗಳೆಲ್ಲಾ ಈಗ ಹಳೆಯದಾಯಿತು. ಈಗ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಚಂಡ ಗೆಲುವು ದಾಖಲಿಸಿದ ಬೆನ್ನಲ್ಲಿಯೇ ನವದೆಹಲಿಯಲ್ಲಿ ರಾಹುಲ್‌ ಗಾಂಧಿ ಸುದ್ದಿಗಾರರ ಜೊತೆ ಮಾತನಾಡಿದರು. ಈ ಹಂತದಲ್ಲಿ ಕೂಗುತ್ತಿದ್ದ ತಮ್ಮ ಪಕ್ಷದ ಕಾರ್ಯಕರ್ತರಿಗೆ ರಾಹುಲ್‌ ಗಾಂಧಿ ಇದೇ ರೀತಿಯಲ್ಲಿ ಶಟ್‌ಅಪ್‌ ಎಂದು ಸನ್ನೆ ಮಾಡಿದ್ದಾರೆ. ಈ ಚಿತ್ರವೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಶೇಷವೆಂದರೆ, ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಸಾಗಿ ಬಂದ 20 ವಿಧಾನಸಭಾ ಕ್ಷೇತ್ರಗಳ ಪೈಕಿ 15ರಲ್ಲಿ ಕಾಂಗ್ರೆಸ್‌ ಪಕ್ಷ ಗೆಲುವು ಸಾಧಿಸಿದೆ. ಆ ನಿಟ್ಟಿನಲ್ಲಿ ಈ ಗೆಲುವಿಗೆ ರಾಹುಲ್‌ ಗಾಂಧಿಯ ಪಾತ್ರವೂ ಬಹಳ ಮುಖ್ಯವಾಗಿ ಕಾಣುತ್ತಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚಿನವರು ರಾಹುಲ್‌ ಗಾಂಧಿ ಶಟ್‌ಅಪ್‌ ಸನ್ನೆ ಮಾಡುವ ಮೂಲಕ ಬಿಜೆಪಿ ಸಂಸದರಾಗಿರುವ ಗೌತಮ್‌ ಗಂಭೀರ್‌ಗೆ ಟಾಂಗ್‌ ನೀಡಿದ್ದಾರೆ ಎಂದು ವಿಶ್ಲೇಷಣೆ ಮಾಡಿದ್ದಾರೆ. ಆದರೆ, ಮೂಲತಃ ಅಲ್ಲಿದ್ದ ತಮ್ಮ ಕಾರ್ಯಕರ್ತರಿಗೆ ರಾಹುಲ್‌ ಗಾಂಧಿ ಈ ರೀತಿಯ ಸನ್ನೆ ಮಾಡಿದ್ದಾರೆ. ವಿರಾಟ್‌ ಕೊಹ್ಲಿ ತೆಗೆದುಕೊಳ್ಳಬೇಕಾಗಿದ್ದ ರಿವೇಂಜ್‌ಅನ್ನು ಈಗ ರಾಹುಲ್‌ ಗಾಂಧಿ ಕೂಡ ತೆಗೆದುಕೊಂಡಿದ್ದಾರೆ ಎಂದು ಕೆಲವರು ಈ ಫೋಟೋಗೆ ಕಾಲೆಳೆದಿದ್ದಾರೆ.

'ಬಿಜೆಪಿ ಎಂಪಿ ಆಗಿರುವ ಗೌತಮ್‌ ಗಂಭೀರ್‌, ಬೆಂಗಳೂರಿನಲ್ಲಿ ವಿರಾಟ್‌ ಕೊಹ್ಲಿ ಜೊತೆ ಗಲಾಟೆ ಮಾಡಿದಾಗಲೇ ಈ ಚುನಾವಣೆಯಲ್ಲಿ ಸೋಲು ಕಾಣಲು ಆರಂಭಿಸಿದೆವು' ಎಂದು ಪ್ರಧಾನಿ ಮೋದಿ ಹೇಳುವ ರೀತಿಯಲ್ಲಿ ಮೀಮ್ಸ್‌ ಮಾಡಲಾಗಿದೆ.

Tap to resize

Latest Videos

Gandhi Nagar election results 2023: ಬರೀ 113 ಮತಗಳ ಅಂತರದಲ್ಲಿ ಗೆದ್ದು ಬೀಗಿದ ದಿನೇಶ್‌ ಗುಂಡೂರಾವ್‌!

ಈವರೆಗೂ ಕೇಂದ್ರ ಚುನಾವಣಾ ಆಯೋಗ 200 ಕ್ಷೇತ್ರಗಳ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟ ಮಾಡಿದ್ದು, 122 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, 56 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 18 ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆಲುವು ಕಂಡಿದೆ. ಇಬ್ಬರು ಪಕ್ಷೇತರ ಹಾಗೂ ಕೆಆರ್‌ಪಿಪಿ ಹಾಗೂ ಸರ್ವೋದಯ ಕರ್ನಾಟಕ ಪಕ್ಷ ಒಂದೊಂದು ಕ್ಷೇತ್ರದಲ್ಲಿ ಗೆಲುವು ಕಂಡಿದೆ. 16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯು ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

Karnataka Election Result 2023 ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಭರವಸೆ ಈಡೇರಿಕೆ;ಗೆಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಹೇಳಿಕೆ!

click me!