Koppal Election Result 2023: ಬಿಜೆಪಿಗೆ ನೆರವಿಗೆ ಬಾರದ ಹನುಮ, ಕಾಂಗ್ರೆಸ್‌ ಹಂಗಾಮ!

By Govindaraj S  |  First Published May 13, 2023, 5:25 PM IST

5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೊಪ್ಪಳ ಜಿಲ್ಲೆಯು ಚುನಾವಣೆ ಘೋಷಣೆಗೂ ಮುನ್ನವೇ ಜನಾರ್ದನ ರೆಡ್ಡಿಯಿಂದಾಗಿ ಸದ್ದು ಮಾಡಿತ್ತು. ಗಂಗಾವತಿಯಿಂದ ರೆಡ್ಡಿ ಕಣಕ್ಕೆ ಇಳಿದಿದ್ದು 66213 ಮತಗಳನ್ನು ಗಳಿಸಿ ಗೆದಿದ್ದಾರೆ. 


ಕೊಪ್ಪಳ(ಮೇ.13): 5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೊಪ್ಪಳ ಜಿಲ್ಲೆಯು ಚುನಾವಣೆ ಘೋಷಣೆಗೂ ಮುನ್ನವೇ ಜನಾರ್ದನ ರೆಡ್ಡಿಯಿಂದಾಗಿ ಸದ್ದು ಮಾಡಿತ್ತು. ಗಂಗಾವತಿಯಿಂದ ರೆಡ್ಡಿ ಕಣಕ್ಕೆ ಇಳಿದಿದ್ದು 66213 ಮತಗಳನ್ನು ಗಳಿಸಿ ಗೆದಿದ್ದಾರೆ. ಕೊಪ್ಪಳದಿಂದ ಸಂಗಣ್ಣ ಕರಡಿ ಸೊಸೆ ಮಂಜುಳಾ ಹೊಸಮುಖವಾಗಿ ಕಣಕ್ಕೆ ಇಳಿದಿದ್ದರು. ಜಿಲ್ಲೆಯಲ್ಲಿರುವ ಅಂಜನಾದ್ರಿಯಿಂದಾಗಿ ಹಿಂದುತ್ವದ ಚರ್ಚೆಯೂ ನಡೆದಿತ್ತು. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಬಿಜೆಪಿ ನಡುವೆ ನೇರಾ ನೇರಾ ಹಣಾಹಣಿ ಇದ್ದು, ಕಾಂಗ್ರೆಸ್ 3, ಬಿಜೆಪಿ 1, ಕೆಆರ್‌ಪಿಪಿ 1 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ.

ಕೊಪ್ಪಳ ಕ್ಷೇತ್ರ: ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ್ ಗೆಲುವು
ಕೊಪ್ಪಳದಲ್ಲಿ ಕಳೆದ ಮೂರು ಚುನಾವಣೆಗಳಿಂದ ಕಾಂಗ್ರೆಸ್‌ ಮತ್ತು ಬಿಜೆಪಿಯದೆ ಕಾದಾಟವಾಗಿತ್ತು. ಎರಡು ಬಾರಿ ಕಮಲವನ್ನು ಸೋಲಿಸಿ, ಈ ಬಾರಿ ಹ್ಯಾಟ್ರಿಕ್‌ ಸಾಧಿಸುವ ಛಲದಲ್ಲಿ ಕಾಂಗ್ರೆಸ್‌ ಇತ್ತು. ಕಾಂಗ್ರೆಸ್ಸಿನಿಂದ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತೆ ಸ್ಫರ್ಧಿಸಿ 90430 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದಾರೆ. ಹಿಟ್ನಾಳ ವಿರುದ್ಧ ಸಂಸದ ಸಂಗಣ್ಣ ಕರಡಿ ಸೊಸೆ, ಹೊಸಮುಖ, ಮಂಜುಳಾ ಕರಡಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಿಜೆಪಿಯಲ್ಲಿ ಟಿಕೆಟ್‌ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಜೆಡಿಎಸ್‌ ಸೇರಿರುವ ಸಿ.ವಿ.ಚಂದ್ರಶೇಖರ, ಜೆಡಿಎಸ್‌ನಿಂದ ಅಖಾಡಕ್ಕೆ ಇಳಿದಿದ್ದರು. ಇನ್ನು 2018 ರಲ್ಲಿ  ರಾಘವೇಂದ್ರ ಹಿಟ್ನಾಳ್ ಅವರು ಕಾಂಗ್ರೆಸ್‌ನಿಂದ 1,79,328 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

Tap to resize

Latest Videos

undefined

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಮಂಜುಳಾ ಅಮರೇಶ್ (Manjula Amaresh)-54170    
ಕಾಂಗ್ರೆಸ್‌-ರಾಘವೇಂದ್ರ ಹಿಟ್ನಾಳ್ (Raghavendra Hitnal)-90430
ಜೆಡಿಎಸ್-ಸಿ.ವಿ.ಚಂದ್ರಶೇಖರ್ (CV Chandrashekhar)-45369

ಪುರುಷ ಮತದಾರರು-125954
ಮಹಿಳಾ ಮತದಾರರು-127963
ಇತರೆ-12 
ಒಟ್ಟು-253929

ಕೊಪ್ಪಳ ಜಾತಿ ಲೆಕ್ಕಾಚಾರ
ಲಿಂಗಾಯತ    60,000
ಕುರುಬ    44,000
ಎಸ್ಸಿ 45,000
ಎಸ್ಟಿ 25,000
ಕುರುಬ    25,000
ಬ್ರಾಹ್ಮಣ    8,000
ಕ್ರೈಸ್ತ    2,500

ಯಲಬುರ್ಗಾಕ್ಷೇತ್ರ: ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಗೆಲುವು
ಬಿಜೆಪಿ ಅಭ್ಯರ್ಥಿ ಸಚಿವ ಹಾಲಪ್ಪ ಆಚಾರ್‌ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ರಾಯರೆಡ್ಡಿ 94330 ಮತಗಳನ್ನು ಗಳಿಸಿ ಗೆದಿದ್ದಾರೆ. ಜಗದೀಶ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿಯವರು ಕಾಂಗ್ರೆಸ್‌ ಸೇರಿರುವುದು, ಕಾಂಗ್ರೆಸ್‌ಗೆ ಪ್ಲಸ್‌ ಪಾಯಿಂಟ್‌ ಆಗಿದ್ದು, ಹಾಲಪ್ಪ ಮತ್ತು ರಾಯರಡ್ಡಿ ನಡುವೆಯೇ ನೇರಾನೇರ ಸ್ಪರ್ಧೆ ಇತ್ತು.2018 ರಲ್ಲಿ ಹಾಲಪ್ಪ ಆಚಾರ್ ಅವರು ಬಿಜೆಪಿಯಿಂದ 1,63,157 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಹಾಲಪ್ಪ ಬಸಪ್ಪ ಆಚಾರ್ (Halappa Basappa Achar)-77149
ಕಾಂಗ್ರೆಸ್‌-ಬಸವರಾಜ ರಾಯರೆಡ್ಡಿ (Basavaraja Rayareddy)-94330
ಜೆಡಿಎಸ್-ಮಲ್ಲನಗೌಡ ಸಿದ್ದಪ್ಪ (Mallanagouda Siddappa)-1038

ಪುರುಷ ಮತದಾರರು-111884
ಮಹಿಳಾ ಮತದಾರರು-111144
ಇತರೆ-8
ಒಟ್ಟು-223036

ಯಲಬುರ್ಗಾ ಜಾತಿ ಲೆಕ್ಕಾಚಾರ
ಲಿಂಗಾಯತ    80,000
ಕುರುಬ    35,000
ಎಸ್ಸಿ 30,000
ಎಸ್ಟಿ 15,000
ಮುಸ್ಲಿಂ    18,000
ಇತರೆ    40,000

ಗಂಗಾವತಿ ಕ್ಷೇತ್ರ: ಕೆಆರ್‌ಪಿಪಿ ಪಕ್ಷದ ಜನಾರ್ದನ ರೆಡ್ಡಿ ಗೆಲುವು
ಆಂಜನೇಯನ ಜನ್ಮಸ್ಥಳ ಆಂಜನಾದ್ರಿಯ ಮೂಲಕ ಈಗಾಗಲೇ ವಿಶ್ವಪ್ರಸಿದ್ಧಿಯಾಗುತ್ತಿರುವ ಗಂಗಾವತಿ ಕ್ಷೇತ್ರದಲ್ಲಿ, ಹಿಂದುತ್ವದ ಆಧಾರದಲ್ಲಿಯೇ ಚುನಾವಣೆ ನಡೆದಿದ್ದು, ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತ ಸಮುದಾಯದ ಇಕ್ಬಾಲ್‌ ಅನ್ಸಾರಿ ಹಾಗೂ ಬಿಜೆಪಿಯಿಂದ ಶಾಸಕ ಪರಣ್ಣ ಮುನವಳ್ಳಿ ಸ್ಪರ್ಧೆ ಇತ್ತು. ಆದರೆ ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿಯವರು 66213 ಮತಗಳನ್ನು ಗಳಿಸುವ ಮೂಲಕ ಫುಟ್‌ಬಾಲ್ ಆಡಿದ್ದಾರೆ. ಇನ್ನು 2018 ರಲ್ಲಿ ಪಾರಣ್ಣ ಮುನವಳ್ಳಿ ಅವರು ಬಿಜೆಪಿಯಿಂದ 1,39,933 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ- ಪರಣ್ಣ ಮನವಳ್ಳಿ (Paranna Manavalli)-29167
ಕಾಂಗ್ರೆಸ್‌- ಇಕ್ಬಾಲ್ ಅನ್ಸಾರಿ (Iqbal Ansari)-57947
ಜೆಡಿಎಸ್-ಎಚ್.ಆರ್.ಚನ್ನಕೇಶವ (HR Channakeshava)-1212
ಕೆಆರ್‌ಪಿಪಿ-ಜನಾರ್ದನ ರೆಡ್ಡಿ (Janardhana Reddy)-66213

ಪುರುಷ ಮತದಾರರು-100295
ಮಹಿಳಾ ಮತದಾರರು-101899
ಇತರೆ-12
ಒಟ್ಟು-202206

ಗಂಗಾವತಿ ಜಾತಿ ಲೆಕ್ಕಾಚಾರ
ಲಿಂಗಾಯತ    55,000
ಮುಸ್ಲಿಂ    44,000
ಕುರುಬ    25,000
ಎಸ್ಸಿ 30,000
ಎಸ್ಟಿ 25,000
ಆಂಧ್ರ ನಾಯ್ಡು    6,000
ಕ್ರಿಶ್ಚಿಯನ್
5,000
ಇತರೆ    10,000

Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!

ಕುಷ್ಟಗಿ ಕ್ಷೇತ್ರ: ಬಿಜೆಪಿಯ ದೊಡ್ಡನಗೌಡ ಪಾಟೀಲ್ ಗೆಲುವು
ಕುಷ್ಟಗಿ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೊಮ್ಮೆ ಗೆಲ್ಲುವುದಿಲ್ಲ. ಈ ಸಂಪ್ರದಾಯ ಎಷ್ಟು ಬೇರೂರಿದೆಯೆಂದರೆ 1952ರಿಂದ ಇಲ್ಲಿಯವರೆಗೂ ಇದು ಮುಂದುವರಿದಿದ್ದು, ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ 89596 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು. ಇಲ್ಲಿ ಲಿಂಗಾಯತರು ಮತ್ತು ಹಿಂದುಳಿದ ವರ್ಗಗಳ ನಡುವೆಯೇ ಫೈಟ್‌ ಇತ್ತು. ಕಾಂಗ್ರೆಸ್‌ ಲಿಂಗಾಯತ ಸಮುದಾಯದ ಹಾಲಿ ಶಾಸಕ ಅಮರೇಗೌಡ ಭಯ್ಯಾಪುರ ಸ್ಫರ್ಧಿಸಿದ್ದರು. ಬಿಜೆಪಿ ಹಿಂದುಳಿದ ಸಮುದಾಯದ ಕುರುಬ ಸಮಾಜಕ್ಕೆ ಸೇರಿದ ದೊಡ್ಡನಗೌಡ ಪಾಟೀಲ್‌ ಅವರು ಸ್ಫರ್ಧಿಸಿದ್ದರು. ಇನ್ನು 2018 ರಲ್ಲಿ ಅಮರೇಗೌಡ ಬಯ್ಯಾಪುರ ಅವರು ಕಾಂಗ್ರೆಸ್‌ನಿಂದ 1,64,189 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ದೊಡ್ಡನಗೌಡ ಪಾಟೀಲ್ (Dodhanagouda Patil)-89596
ಕಾಂಗ್ರೆಸ್‌-ಅಮರೇಗೌಡ ಪಾಟೀಲ್ (Amaregouda Patil)-80521
ಜೆಡಿಎಸ್-ಶರಣಪ್ಪ ಕಂಬಾರ (Sharanappa Kambara)-999

ಪುರುಷ ಮತದಾರರು-117661
ಮಹಿಳಾ ಮತದಾರರು-115955
ಇತರೆ-9
ಒಟ್ಟು-233625

ಕುಷ್ಟಗಿ ಜಾತಿ ಲೆಕ್ಕಾಚಾರ
ಲಿಂಗಾಯತ    48,000
ಕುರುಬ    45,000
ಎಸ್ಸಿ 30,000 
ಎಸ್ಟಿ 15,000
ಮುಸ್ಲಿಂ    21,000
ಉಪ್ಪಾರ    12,000
ಬ್ರಾಹ್ಮಣ    10,000
ನೇಕಾರ    8,000
ಇತರೆ    35,000

ಕನಕಗಿರಿ ಕ್ಷೇತ್ರ: ಕಾಂಗ್ರೆಸ್‌ನ ಶಿವರಾಜ್ ತಂಗಡಗಿ ಗೆಲುವು
ಜಿಲ್ಲೆಯಲ್ಲಿರುವ ಏಕೈಕ ಮೀಸಲು ಕ್ಷೇತ್ರ ಕನಕಗಿರಿ. ಆದರೂ ಇಲ್ಲಿ ಜಿಲ್ಲೆಯ ಇತರ ಕ್ಷೇತ್ರಗಳಿಗಿಂತಲೂ ತುರುಸಾಗಿಯೇ ಚುನಾವಣೆ ನಡೆಯತ್ತಾ ಬಂದಿದೆ. ಈ ಕ್ಷೇತ್ರದ ವಿಶೇಷ ಎಂದರೆ, ಗೆದ್ದವರು ಬಹುತೇಕರು ಸಚಿವರಾಗಿರುವುದು. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಶಿವರಾಜ್ ತಂಗಡಗಿ 106164 ಮತಗಳನ್ನು ಗಳಿಸಿ ಜಯಭೇರಿ ಸಾಧಿಸಿದ್ದಾರೆ. ಇನ್ನು 2018 ರಲ್ಲಿ ಬಸವರಾಜ್ ದಡೇಸಗೂರ್ ಅವರು ಬಿಜೆಪಿಯಿಂದ 1,65,829 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಬಸವರಾಜ ದಡೇಸುಗೂರ್ (Basavaraj Dadhesugur)-63532
ಕಾಂಗ್ರೆಸ್‌-ಶಿವರಾಜ್ ತಂಗಡಗಿ (Shivarj Tangadagi)-106164
ಜೆಡಿಎಸ್-ರಾಜಗೋಪಾಲ್ (Rajgopal)-709

ಪುರುಷ ಮತದಾರರು-110587
ಮಹಿಳಾ ಮತದಾರರು-113446
ಇತರೆ-9
ಒಟ್ಟು-22404

ಕನಕಗಿರಿ ಜಾತಿ ಲೆಕ್ಕಾಚಾರ
ಲಿಂಗಾಯತ    70,000
ಎಸ್ಸಿ 50,000
ಎಸ್ಟಿ 20,000
ಕುರುಬ    25,000
ಮುಸ್ಲಿಂ    18,000
ತೆಲುಗು ಭಾಷಿಗರು    15,000
ಉಪ್ಪಾರ    5,000
ಗಂಗಾಮತಸ್ಥ    6,000
ಗೊಲ್ಲ    8,000
ಇತರೆ    15,000

click me!