
ತುಮಕೂರು (ಮೇ.14): ಕರ್ನಾಟಕ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟಬಹುಮತ ಬಂದಿರುವ ಕಾರಣಕ್ಕೆ ತುಮಕೂರಿನ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸಿಎಂ ಸ್ಥಾನದ ಬಗ್ಗೆ ಮಾತನಾಡಿದ್ದಾರೆ. ಕೆಲವರು ನನಗೆ ಸಿದ್ದರಾಮಯ್ಯರ ನಡುವೆ ವ್ಯತ್ಯಾಸ ಇದೆ ಎಂದರು. ನಮ್ಮಿಬ್ಬಿರ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಹಲವು ಬಾರಿ ಪಕ್ಷದ ವಿಚಾರದಲ್ಲಿ ನಾನು ಸೋತಿದ್ದೇನೆ. ನಾನು ಸೋತು. ಸಿದ್ದರಾಮಯ್ಯರಿಗೆ ಸಹಕಾರ ಕೊಟ್ಟಿದ್ದೇನೆ. ಅವರೂ ಸಹಕಾರ ಕೊಡುವ ವಿಶ್ವಾಸ ಇದೆ. ಆರಂಭದಲ್ಲಿ ನನ್ನನ್ನು ಮಂತ್ರಿ ಮಾಡದೇ ಇದ್ದಾಗ ನಾನು ತಾಳ್ಮೆಯಿಂದ ಇರಲಿಲ್ವಾ? ಸಿದ್ದರಾಮಯ್ಯರಿಗೆ ನಾನು ಸಾಕಾರ ಕೊಟ್ಟಿದ್ದೇನೆ. ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರು ತಮಗೆ ಅವಕಾಶ ಕಲ್ಪಿಸಿಕೊಡುವಂತೆ ಡಿಕೆಶಿ ಹೇಳಿದ್ದಾರೆ.
ತಮಗೆಲ್ಲ ಗೊತ್ತಿರುವಂತೆ ಕಾಡಸಿದ್ದೇಶ್ವರ ಮಠ ನಮಗೊಂದು ಪುಣ್ಯ ದೈವದ ಕ್ಷೇತ್ರ. ಗಂಗಾದರ ಅಜ್ಜ ಶಿವಯೋಗಿ ಶ್ರೀ ಗಳ ಪ್ರತಿ ಸಂದರ್ಬದಲ್ಲಿ ಮಾರ್ಗದರ್ಶನ ಮಾಡಿಕೊಂಡು ಬಂದಿದ್ದಾರೆ. ಟಿಕೆಟ್ ನೀಡದರಿಂದ ಎಲ್ಲಾವೂ ಇಲ್ಲಿ ತಿರ್ಮಾನ ಮಾಡಿದ್ದೆ. ಸಂಪೂರ್ಣವಾಗಿ ಮಾರ್ಗದರ್ಶನ ಕೊಟ್ಟಿದ್ದಾರೆ. ಐಟಿ, ಜೈಲು ಎಲ್ಲಾವೂ ಬಗ್ಗೆ ಹೇಳಿದೆ. ಹೆಲಿಕಾಪ್ಟರ್ ಹೋಗುವಾಗ ಮುನ್ನ ನನ್ನ ಮಗಳನ್ನ ಕರೆಸಿ ಇಲ್ಲಿ ಮಾರ್ಗದರ್ಶನ ಕೊಟ್ಟಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಶಕ್ತಿ ಒಳ್ಳೆಯದಾಗಲಿ ಅಂತಾ ಮಾರ್ಗದರ್ಶನ ಶಕ್ತಿ ಕೊಟ್ಟಿದ್ದಾರೆ. 136 ಸೀಟ್ ಬಗ್ಗೆ ನಾನು ಕೇಳಿಕೊಂಡಿದ್ದೆ. ಆರಂಭದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕು ಎಂದಿದ್ದರು. ಹೀಗಾಗಿ ಎಲ್ಲಾ ಕಾರ್ಯಕ್ರಮ ಗಳನ್ನ ಜಾರಿ ಮಾಡ್ತಿವಿ. ಚೆಲುರಾಯಸ್ವಾಮಿ ಹಲವರು ಸಾಥ್ ನೀಡಿದ್ದಾರೆ. ಮಂಡ್ಯ ಜಿಲ್ಲೆಒಂದು ಸೀಟ್ ಬಿಟ್ಟು ಎಲ್ಲಾ ಕಾಂಗ್ರೆಸ್ ಬಂದಿದೆ. ಇದು ಮಂಡ್ಯ ಜಿಲ್ಲೆಯ ಗೆಲುವು. ಇದು ನನ್ನ ಅಥವಾ ಡಿಕೆಶಿ ಗೆಲುವಲ್ಲ ಮಂಡ್ಯ ಜನರ ಗೆಲುವು.
ಗುರು ಇಲ್ಲದೇ ಗುರಿ ಇಲ್ಲದೆ ತಲುಪಲು ಸಾಧ್ಯವಿಲ್ಲ. ಹೀಗಾಗಿ ಗುರು ದರ್ಶನಕ್ಕೆ ಬಂದಿದ್ದೇನೆ. ಕೆಲವು ನಾಯಕರು ಹೇಳುತ್ತಿದ್ದರು ಅವರು ಇವರಲ್ಲಿ ಮಾತನಾಡಬೇಕೆಂದು, ನಾನು ತಲೆಕೆಡಿಸಿಕೊಳ್ಳಬೇಡಿ ಅಂತಾ ಹೇಳಿದ್ದೆ. ಅವರು ಏನು ಹೇಳಿದ್ದಾರೋ ಅದನ್ನೇ ಪಾಲಿಸುತ್ತೇವೆ. ನನ್ನ ಈ ಪೀಠದ ಸಂಪರ್ಕ 18-20 ವರ್ಷದ್ದು. ಕೆಲವು ನಾನು ಕೇಳಿಲ್ಲ.8-10 ಬಗ್ಗೆ ನಾನೇ ಟಿಕೆಟ್ ಕೊಟ್ಟೆ ಅದೆಲ್ಲವೂ ಹೋದ್ವು. ಶಾಸಕಾಂಗ ಪಕ್ಷದ ಸಭೆ ವರಿಷ್ಠರ ತೀರ್ಮಾನ ಸಿಎಂ ಆಯ್ಕೆ ಆಗುತ್ತೆ ಎಂದಿದ್ದಾರೆ.
BELAGAVI ELECTION RESULT 2023: ಆಪ್ತರ ಸೋಲಿನ ಬಳಿಕ ರಮೇಶ ಜಾರಕಿಹೊಳಿ ಏಕಾಂಗಿ..!
ನಾನು ಪಕ್ಷಕ್ಕೆ ಜವಾಬ್ದಾರಿ ತೆಗೆದುಕೊಂಡಾಗ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ನನಗೆ ಮಾಡಲು ಆಗಲ್ಲ ಅಂತಾ ರಾಜೀನಾಮೆ ಕೊಟ್ಟಿದ್ದರು. ಆಗ ಜೈಲಿಗೆ ಬಂದು ಸೋನಿಯಾ ಶಕ್ತಿ ತುಂಬಿದ್ದರು. ಏನೇ ಮಾಡಿದ್ರು ಪಕ್ಷಕ್ಕೊಸ್ಕರ ದುಡಿದಿದ್ದೇನೆ. ಹಗಲು ರಾತ್ರಿ ದುಡಿದಿದ್ದೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನೇ ಸೋತಿದ್ದೇನೆ. ನಿಮಗೆ ಯಾಕೆ ಶ್ರಮ. ನಾನು ಮಂತ್ರಿ ಇಲ್ಲದಾಗ ತಾಳ್ಮೆ ಇರಲಿಲ್ಲವಾ. ಅವರಿಗೆ ನಾನು ಸಹಕಾರ ಕೊಟ್ಡಿದ್ದೆನೆ ಎಂದು ಪರೋಕ್ಷವಾಗಿ ಸಿಎಂ ನಾನೇ ಎಂದು ಡಿಕೆಶಿ ಹೇಳಿದ್ದಾರೆ.
Karnataka Election Results 2023: ಸುಮಲತಾ ಬೆಂಬಲ ಬಿಜೆಪಿಗೆ ಗೆಲುವು ತರಲಿಲ್ಲ
ಮಂಡ್ಯ ಜಿಲ್ಲೆಯ ಶಾಸಕರು ಎಲ್ಲಾ ಬಂದಿದ್ದಾರೆ. ಇದು ಪ್ಲಾನ್ ಅಲ್ಲ, ಇಲ್ಲಿಗೆ ಬರಲು ದಾರ ಹಾಕಿ ಎಳೆಯುತ್ತಿತ್ರು. ಗುರು ಪೀಠ ಸಿಕ್ಕಿದು ದೊಡ್ಡ ಭಾಗ್ಯ. ಎಷ್ಟೋ ಸಿಎಂ ಬಂದು ಹೋಗಿದ್ದಾರೆ. ಅಜ್ಜಯ್ಯ ಆಶಿರ್ವಾದದಿಂದ ಇನ್ನೂ ಎತ್ತರಕ್ಕೆ ಹೋಗುವ ನಂಬಿಕೆ ಇದೆ ಎಂದು ಡಿಕೆಶಿ ಹೇಳಿದ್ದಾರೆ. ____
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.