ನಾನು ನನ್ನ ಗೆಲುವನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ರಿಗೆ ಅರ್ಪಿಸುತ್ತೇನೆ. ಕುಂದಾಪುರದಲ್ಲಿ ಈ ಬಾರಿ ಜಾತಿ ಚುನಾವಣೆ ಎಂದು ಹೇಳಿದವರಿಗೆ ಈ ಫಲಿತಾಂಶವೇ ಉತ್ತರ. ನಾನು ಯಾವುದೇ ವಿಮರ್ಶೆಗಳನ್ನ ಉತ್ತರ ಕೊಡಲು ಹೋಗೋದಿಲ್ಲ ಎಂದು ಕುಂದಾಪುರದ ನೂತನ ಶಾಸಕ ಬಿಜೆಪಿಯ ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಉಡುಪಿ (ಮೇ.14): ನಾನು ನನ್ನ ಗೆಲುವನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ರಿಗೆ ಅರ್ಪಿಸುತ್ತೇನೆ. ಕುಂದಾಪುರದಲ್ಲಿ ಈ ಬಾರಿ ಜಾತಿ ಚುನಾವಣೆ ಎಂದು ಹೇಳಿದವರಿಗೆ ಈ ಫಲಿತಾಂಶವೇ ಉತ್ತರ. ನಾನು ಯಾವುದೇ ವಿಮರ್ಶೆಗಳನ್ನ ಉತ್ತರ ಕೊಡಲು ಹೋಗೋದಿಲ್ಲ ಎಂದು ಕುಂದಾಪುರದ ನೂತನ ಶಾಸಕ ಬಿಜೆಪಿಯ ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ನಾನು ಕುಂದಾಪುರದ ಜನತೆಗೆ ಕೃತಜ್ಞತೆ ತಿಳಿಸುತ್ತೇನೆ ಹಾಲಾಡಿ ಶ್ರೀನಿವಾಸ ಶೆಟ್ಟರ ಬೆಂಬಲದಿಂದ ನನಗೆ ಗೆಲುವಾಗಿದೆ ಅವರಿಗೆ ನನ್ನ ಗೆಲುವನ್ನು ಸಮರ್ಪಿಸುತ್ತೇನೆ ಈ ಕ್ಷೇತ್ರದ ಎಲ್ಲಾ ಬಿಜೆಪಿ ಕಾರ್ಯಕರ್ತರು ಹಾಗಾ ಇರುಳು ಶ್ರಮಿಸಿದ್ದಾರೆ. ಪರಿವಾರದ ಕಾರ್ಯಕರ್ತರು ಕೋಟ ಶ್ರೀನಿವಾಸ ಪೂಜಾರಿಯವರ ಶ್ರಮಕ್ಕೆ ಧನ್ಯವಾದ ಎಂದರು. ಫಲಿತಾಂಶ ನೋಡಿದರೆ ಗೊತ್ತಾಗುತ್ತದೆ ಕುಂದಾಪುರದಲ್ಲಿ ಜಾತಿಯ ವಿಷಯವೇ ಇಲ್ಲ.
ಮೈಸೂರು ಜಿಲ್ಲೆಯಲ್ಲಿ ಅಪ್ಪ- ಮಗ ಒಟ್ಟಿಗೆ ವಿಧಾನಸಭೆ ಪ್ರವೇಶ ಇದೇ ಪ್ರಥಮ
undefined
ಜಾತಿಯ ವಿಚಾರ ನನ್ನತ್ರ ಪ್ರಶ್ನೆ ಮಾಡಬೇಡಿ ಎಂದು ಮೊದಲೇ ಹೇಳಿದ್ದೆ ಕುಂದಾಪುರ ಒಂದು ಜಾತ್ಯಾತೀತ ಕ್ಷೇತ್ರ ಎಂಬುದು ಸ್ಪಷ್ಟವಾಗಿದೆ. ಜಾತಿಯ ಗಾಬು ಹಬ್ಬಿಸಿದ್ದು ಕಾಂಗ್ರೆಸ್ನವರು. ಜಾತಿಯ ವಿಚಾರವನ್ನು ಯಾಕೆ ಶುರು ಮಾಡಿದ್ದು ಎಂದು ಕಾಂಗ್ರೆಸ್ ನವರೇ ಉತ್ತರಿಸಬೇಕು. ಪ್ರಚಾರದ ಸಂದರ್ಭದಲ್ಲಿ ನಾನು ಈ ವಿಚಾರವನ್ನು ತೆಗೆಯಲೇ ಇಲ್ಲ.
ನನ್ನದು ಮತ್ತು ಹಾಲಾಡಿ ಅವರದ್ದು 40 ವರ್ಷಗಳ ಸ್ನೇಹ ಅವರ ಎಲ್ಲಾ ನಡೆ-ನುಡಿಗಳನ್ನು ನಾನು ಬಲ್ಲವನು. ಕಾಲೇಜು ಜೀವನ ಮುಗಿತ ಕೂಡಲೇ ನಾನು ಜನರ ಜೊತೆಗೆ ಇದ್ದವನು. ಹಾಲಾಡಿ ಅವರ ಸಾಮಾಜಿಕ ನ್ಯಾಯವನ್ನು ಅವರು ಹೇಗೆ ಜನಗಳ ಜೊತೆ ಕ್ಷೇತ್ರದಲ್ಲಿ ನಡೆದುಕೊಂಡಿದ್ದಾರೆ ಎಂಬುದನ್ನು ನಾನು ಬಲ್ಲವನಾಗಿದ್ದೇನೆ. ಉಡುಪಿ ಜಿಲ್ಲೆಯಲ್ಲಿ ನಾವು 5 ಐದು ಸ್ಥಾನವನ್ನೂ ಗೆದ್ದಿದ್ದೇವೆ.
Hunsur Election Results 2023: ಮೊದಲ ಯತ್ನದಲ್ಲೇ ಜಯ ಸಾಧಿಸಿದ ಜಿ.ಡಿ.ಹರೀಶ್‌ಗೌಡ!
ಶಾಸಕನಾಗಿ ಆಯ್ಕೆಯಾಗಿದ್ದೇನೆ ರಾಜ್ಯದಲ್ಲಿ ಸರಕಾರ ಇಲ್ಲದಿದ್ದರೂ ಕೆಲಸ ಮಾಡಲು ಯಾವುದೇ ಅಡ್ಡಿಗಳು ಅಡಚಣೆಗಳು ಇರುವುದಿಲ್ಲ. ಈವರೆಗೆ ಹಾಲಾಡಿ ಮಾಡಿದ ಅಭಿವೃದ್ಧಿಯನ್ನು ಮುಂದುವರಿಸುತ್ತೇನೆ ಕ್ಷೇತ್ರದ ಜನತೆಯ ಆಶ್ವತರಗಳ ಕೆಲಸ ಮಾಡುತ್ತೇನೆ ಕುಂದ ಕನ್ನಡ ತಜ್ಞರ ಜೊತೆ ಮಾತನಾಡಿ ಭಾಷೆಗೆ ಸೂಕ್ತ ಸ್ಥಾನಮಾನ ಕೊಡುತ್ತೇನೆ.