Karnataka election results 2023: ಜನರಿಗೆ ನಿಮ್ಮನ್ನು‌ನೋಡಿ ನೋಡಿ ವಾಂತಿ ಬರೋಂಗಾಗಿದೆ: ಖರ್ಗೆ

Published : May 13, 2023, 07:58 PM ISTUpdated : May 13, 2023, 08:18 PM IST
Karnataka election results 2023: ಜನರಿಗೆ ನಿಮ್ಮನ್ನು‌ನೋಡಿ ನೋಡಿ ವಾಂತಿ ಬರೋಂಗಾಗಿದೆ: ಖರ್ಗೆ

ಸಾರಾಂಶ

ದೇಶದಲ್ಲಿ ಕಾಂಗ್ರೆಸ್‌ ಮುಕ್ತ ಮಾಡ್ತೀವಿ ಎಂದ ನಿಮನ್ನು ನಿಮ್ಮನ್ನು ನೋಡಿ, ವಾಂತಿ ಬರೋಂಗಾಗಿದೆ, ಆದ್ದರಿಂದ 30 ವರ್ಷದ ಬಳಿಕ ಕಾಂಗ್ರೆಸ್‌ಗೆ ಭಾರಿ ಬಹುಮತ ನೀಡಿದ್ದಾರೆ.

ಬೆಂಗಳೂರು (ಮೇ 13) : ಬಿಜೆಪಿಯವರು ಯಾವಾಗಲೂ ಕಾಂಗ್ರೆಸ್ ಪಾರ್ಟಿ ಬಾಗಿಲು ಮಚ್ಚಿದೆ, ನಾವು ಕಾಂಗ್ರೆಸ್ ಮುಕ್ತ ಭಾರತ ಮಾಡ್ತೀವಿ ಎನ್ನುತ್ತಿದ್ದರು. ಆದರೆ, ದಕಷಿಣ ಭಾರತದಲ್ಲಿ ಬಿಜೆಪಿ ಮುಕ್ತವಾಗಿದೆ ಇದು ನೈಜ ಪ್ರಜಾಪ್ರಭುತ್ವವಾಗಿದೆ. ಜನರಿಗೆ ನಿಮ್ಮನ್ನು ನೋಡಿ, ನೋಡಿ ವಾಂತಿ ಬರೋಂಗಾಗಿದೆ ಆದ್ದರಿಂದ 30 ವರ್ಷದ ಬಳಿಕ ಕಾಂಗ್ರೆಸ್‌ಗೆ ಭಾರಿ ಬಹುಮತ ನೀಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ತಿರುಗೇಟು ನೀಡದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತಿನ ಚುನಾವಣೆಯ ಸಂದರ್ಭದಲ್ಲಿ ನಾವು ಏನು ಕಾಂಗ್ರೆಸ್ ಪಕ್ಷದ ಜಯಬೇರೆ ಹೊಡೆದಿದ್ದೇವೆ. ಮತ್ತು ನಾವು ಪದೇ ಪದೇ ಎಲ್ಲರಿಗೂ ತಿಳಿಸುತ್ತ ಇದ್ದೇವೆ.. ಕಾಂಗ್ರೆಸ್ ಪಕ್ಷ ಈ ಬಾರಿ ಭಾರಿ ಬಹು ಮತದಿಂದ ಬರುತ್ತೆ ಅಂತ ತಿಳಿಸಿದ್ದೆವು. ಅದೇ ರೀತಿಯಾಗಿ ಇವತ್ತು ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಸಿಎಲ್ ಪಿ ಲೀಡರ್ , ಎಲ್ಲರೂ ಸೇರಿ ದೊಡ್ಡ ಗೆಲುವು ನಮಗೆ ಸಿಕ್ಕಿದೆ. ಇದರಿಂದ ಇಡೀ ದೇಶದಲ್ಲಿ ಹೊಸ ಉತ್ಸಾಹ ಬಂದಿದೆ. ಬಿಜೆಪಿ ಅವ್ರು ಯಾವಾಗ್ಲು ನಮಗೆ ಟಾಂಗ್ ಕೊಟ್ಟು ಮಾತನಾಡುತ್ತಿದ್ದರು. ಕಾಂಗ್ರೆಸ್ ಪಾರ್ಟಿ ಬಾಗಿಲು ಮಚ್ಚಿದೆ, ನಾವು ಕಾಂಗ್ರೆಸ್ ಮುಕ್ತ ಭಾರತ ಮಾಡ್ತಾ ಇದೀವಿ ಎನ್ನುತ್ತಿದ್ದರು. ಇವಾಗ ಬಿಜೆಪಿ ಮುಕ್ತ ದಕ್ಷಿಣ ಭಾರತ ಆಗಿದೆ. ಇದು ಪ್ರಜಾಪ್ರಭುತ್ವ ಎಂದು ಹೇಳಿದರು. 

Karnataka election results 2023: ನಾನೇ ಸಿಎಂ 'ಆಗ್ಬೇಕು', ಹೈಕಮಾಂಡ್‌ ಮುಂದೆ ಡಿಕೆಶಿ ಪಟ್ಟು

ಮೊದಲ ಕ್ಯಾಬಿನೆಟ್‌ನಲ್ಲೇ ಗ್ಯಾರಂಟಿ ಘೋಷಿಸಲು ಕಿವಿಮಾತು:  ಪ್ರಜಾಪ್ರಭುತ್ವದಲ್ಲಿ ನಾವು ಜನರ ನೋವನ್ನು ಅರ್ಥ ಮಾಡಿಕೊಂಡು, ತಗ್ಗಿ ಬಗ್ಗೆ ಸೇವೆ ಮಾಡಿದ್ರೆ ಮಾತ್ರ ಜನರ ಮನಸ್ಸು ಗೆಲ್ಲಬಹುದು. ಇವತ್ತಿನ ಗೆಲುವು ಕರ್ನಾಟಕ ಜನರ ಗೆಲುವು. ಕರ್ನಾಟಕ ಜನ ನಿರ್ಧಾರ ಮಾಡಿದರು. ಈ ಬಾರಿ ನಾವು ಕಾಂಗ್ರೆಸ್ ಪಕ್ಷ ಅಧಿಕಾರಿಕ್ಕೆ ತರಲೇ ಬೇಕು ಅಂತ ನಿರ್ಧಾರ ಮಾಡಿದ್ದೆವು, ಹಾಗಾಗಿಯೇ ನಮಗೆ 30 ವರ್ಷಗಳ ನಂತರ ಬಾರಿ ಬಹುಮತ ಸಿಕ್ಕಿದೆ. ಸಾಮೂಹಿಕ ಪ್ರಯತ್ನ ಗೆಲುವು ತಂದುಕೊಟ್ಟಿದೆ. ಏನಾದರೂ ವ್ಯತ್ಯಾಸ ಆಗಿದ್ದರೆ, ಸರ್ವಾಧಿಕಾರ ಹತ್ತಿರವಾಗುತ್ತಿತ್ತು. ಆದರೆ ಎಲ್ಲರ ಶ್ರಮದಿಂದ ಇಂತಹ ದೊಡ್ಡ ಗೆಲುವಾಗಿದೆ. ನಾವು ಕೊಟ್ಟ ಗ್ಯಾರಂಟಿ ಭರವಸೆಯನ್ನು ಮೊದಲನೇ ಕ್ಯಾಬಿನೆಟ್ ನಲ್ಲಿ ಮಾಡಬೇಕು. ನಾನು ಸೋನಿಯಾ, ರಾಹುಲ್ ಜೊತೆ ಮಾತನಾಡಿದೆ, ಅವರು ರಾಜ್ಯದ ಜನರ ಮಾತು ಉಳಿಸಬೇಕು ಅಂದಿದ್ದಾರೆ. ದಯವಿಟ್ಟು ಇದರ ಕಡೆ ಲಕ್ಷ್ಯ ಕೊಡಬೇಕು ಎಂದು ರಾಜ್ಯ ನಾಯಕರಿಗೆ ಖರ್ಗೆ ಕಿವಿಮಾತು ಹೇಳಿದರು. 

ಬೆಂಗಳೂರು ಕೇಂದ್ರದಲ್ಲಿ ಕೈ- ಕಮಲ ರಿಪೀಟ್‌, ಸೋತ ಮುಖಗಳು ಮಾತ್ರ ಬದಲು

ಗುಜರಾತ್‌ ಮಗನಿಗೆ ಬಿಟ್ಟು, ಕನ್ನಡ ಪುತ್ರನಿಗೆ ಮತ ನೀಡಿದ್ರು: ಮೋದಿ ಅವರಿಗೆ ನಾನು ಹೇಳಿದ್ದೆ ಗುಜರಾತ್ ನಲ್ಲಿ ಹೋಗಿದ್ದಾಗ ಹೇಳಿದ್ದೆನು. ಎಲ್ಲ ಕಡೆ ಇಲ್ಲಿ ಬಂದು ಮಾಡಿದ್ರಲ್ಲ ರೋಡ್ ಶೋ ಮಾಡುತ್ತಿದ್ದರು. ಆ ನಂತರ ಒಂದು ಕಡೆ ಸಮಾವೇಶದಲ್ಲಿ ಮಾತನಾಡೋರು, ನಿಮಗೆ ಸ್ವಾಭಿಮಾನದಿಂದ ಜನ ವೋಟ್ ನೀಡಿದರು. ಆದರೆ, ನನ್ನ ಕರ್ನಾಟಕದ ಜನ ನನಗೆ ವೋಟ್ ಕೊಡ್ತಾರೋ ಹೊರತು ನಿಮಗಲ್ಲ ಅಂತ ಪಿಎಂಗೆ ಹೇಳಿದ್ದೆನು. ಮೋದಿ ಬಂದು ನಾನು ಗುಜರಾತ್ ಪುತ್ರ ವೋಟ್ ಕೊಡಿ ಅಂತಾ ಕೇಳಿದ್ದರು. ನಾನು ಕರ್ನಾಟಕದ ಪುತ್ರ ನನಗೆ ವೋಟ್ ಕೊಡಿ ಅಂತಾ ನಾನು ಕೇಳಿದ್ದೆನು. ಜನರು ನಮಗೆ ವೋಟ್‌ ಕೊಟ್ಟು ಗೆಲ್ಲಿಸಿದದಾರೆ. ಮೋದಿನಾ ನೋಡಿ ನೋಡಿ ವಾಂತಿ ಆಗಿದೆ. ಮೇಕೆದಾಟು, ಭಾರತ್ ಜೋಡೋ ಪಾದಯಾತ್ರೆಯೇ ನಮ್ಮ ಗೆಲುವಿಗೆ ಕಾರಣ. ಎಲ್ಲೆಲ್ಲಿ ಪಾದಯಾತ್ರೆ ಮಾಡಿದ್ದೇವೋ, ಅಲ್ಲೆಲ್ಲ ನಾವು ಗೆದ್ದಿದ್ದೇವೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!