ಶಕ್ತಿ ಪೀಠದಲ್ಲಿ ನಡೆದ ಹೋಮದಿಂದ ಪೂರ್ಣ ಬಹುಮತದ ಸರ್ಕಾರ. ಡಿಕೆಶಿ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆದ ಹೋಮ. 2018ರಲ್ಲೂ ನಡೆದ ಹೋಮದ ಫಲ ಕುಮಾರಸ್ವಾಮಿ ಸಿಎಂ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ.19): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಆ ಹೋಮ ಕಾರಣನಾ ಎನ್ನುವ ಚರ್ಚೆ ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿದೆ. ಶಕ್ತಿ ಪೀಠದಲ್ಲಿ ನಡೆದ ಹೋಮದಿಂದ ಪೂರ್ಣ ಬಹುಮತದ ಸರ್ಕಾರ ಬರಲು ಕಾರಣ ಎನ್ನಲಾಗುತ್ತಿದೆ. ಕಾಂಗ್ರೆಸ್ ಮೇಲೆ ಶೃಂಗೇರಿಯ ಶಾರದೆಯ ಕೃಪಕಟಾಕ್ಷ ಉಂಟಾಗಿದೆಯೇ ಎಂದರೆ ಬಹುತೇಕ ಜನರು ಹೌದೆನ್ನುತ್ತಿದ್ದಾರೆ. ಶೃಂಗೇರಿಯಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆಯೋ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವ ಮಾತಿದೆ. ಇದು ಬಹುತೇಕ ನಿಜವೂ ಆಗಿದೆ. ಈ ಹಿಂದೆ ಜೀವರಾಜ್ ಗೆಲುವು ಸಾಧಿಸಿದಾಗ ಬಿಜೆಪಿಗೆ ಬಹುಮತವಿರಲಿಲ್ಲ ಆಗ ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರ ಹಿಡಿಯಿತು. ಸರ್ಕಾರದಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆಯ ಸಚಿವರೂ ಆದರು.ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶೃಂಗೇರಿಗೆ ಆಗಮಿಸಿ ಹೋಮಹವನದಲ್ಲಿ ಪಾಲ್ಗೊಂಡು ನಾಮಪತ್ರಗಳನ್ನು ಶಾರದೆಯ ಮುಂದಿಟ್ಟು ಪೂಜೆ ಮಾಡಿಸಿಕೊಂಡು ಹೋಗಿದ್ದರು ಆಗ ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಸರ್ಕಾರ ದೊಂದಿಗೆ ಅಧಿಕಾರಕ್ಕೆ ಬಂದಿತ್ತು.
2018ರಲ್ಲೂ ಶಕ್ತಿಪೀಠದಲ್ಲಿ ನಡೆದ ಹೋಮದ ಫಲ :
ಕಳೆದ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸಹೋದರ ರೇವಣ್ಣ ಅವರೊಂದಿಗೆ ಆಗಮಿಸಿ ಹೋಮ, ಹವನದಲ್ಲಿ ಪಾಲ್ಗೊಂಡು ಶಾರದೆ ದರ್ಶನ ಪಡೆದು ನಿನ್ನ ಕೃಪಕಟಾಕ್ಷ ನಮ್ಮ ಮೇಲಿರಲಿ ಎಂದು ಬೇಡಿಕೊಂಡಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲಿಲ್ಲ ಆದರೆ ಗೆದ್ದಿದ್ದು, ಟಿ.ಡಿ.ರಾಜೇಗೌಡ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ ಕಾಂಗ್ರೆಸ್ ಮತ್ತು ಜೆಡಿಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಪರಮೇಶ್ವರ್ ಉಪಮುಖ್ಯಮಂತ್ರಿಯಾದರು.ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಮರುಜನ್ಮನೀಡಿದ್ದ ಚಿಕ್ಕಮಗಳೂರು ಜಿಲ್ಲೆಯಿಂದ ಇಂದಿರಾಗಾಂಧಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹಾಗಾಗಿ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಚುನಾವಣೆ ಘೋಷಣೆಯಾದ ಬಳಿಕ ಜಿಲ್ಲೆಯಿಂದಲೇ ಚುನಾವಣಾ ಪ್ರಚಾರಕ್ಕೆ ಇಳಿದರು. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶೃಂಗೇರಿಗೆ ಆಗಮಿಸಿ ಶಾರದೆಯ ದರ್ಶನ ಪಡೆದು ಶೃಂಗೇರಿಯಿಂದ ಪಕ್ಷದ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರ ಪರವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಶಾರದೆಯ ನೆಲೆವೀಡು ಶೃಂಗೇರಿಯಿಂದಲೇ ಚುನಾವಣಾ ಪ್ರಚಾರ ಆರಂಭಿಸಿದರು.
ಡಿಕೆಶಿ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆದ ಹೋಮ:
2023 ರ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶೃಂಗೇರಿಗೆ ಆಗಮಿಸಿ ಶಾರದೆಯ ದರ್ಶನ ಪಡೆದು ಶೃಂಗೇರಿಯಿಂದ ಪಕ್ಷದ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರ ಪರವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಶಾರದೆಯ ನೆಲೆವೀಡು ಶೃಂಗೇರಿಯಿಂದಲೇ ಚುನಾವಣಾ ಪ್ರಚಾರ ಆರಂಭಿಸಿದರು.ಅಲ್ಲದೆ ಎರಡು ದಿನಗಳ ಕಾಲ ಶೃಂಗೇರಿಯಲ್ಲೇ ವ್ಯಾಸ್ತವ್ಯ ಮಾಡಿ ಹೋಮ ಹವನವನ್ನು ನಡೆಸಿದರು.
ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಯಾರಿಗೆ ಕೊಡಬೇಕು ಸಚಿವ ಸ್ಥಾನ?
ಜನರನ್ನು ಆಕರ್ಷಿದ ಪ್ರಿಯಾಂಕ:
ಇಂದಿರಾಗಾಂಧಿಯ ಮೊಮ್ಮಗಳು ಪ್ರಿಯಾಂಕಗಾಂಧಿಯೂ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿ ಶೃಂಗೇರಿಗೆ ಆಗಮಿಸಿ ಶಾರದೆಯ ದರ್ಶನ ಪಡೆದು ಮಠದ ಆನೆಗಳಿಂದಲೂ ಆಶೀರ್ವಾದ ಪಡೆದುಕೊಂಡು ಪಕ್ಷದ ಪರವಾಗಿ ಪ್ರಚಾರ ನಡೆಸಿದರು. ಇವರು ಜನರ ಆಕರ್ಷಣೆಯ ಕೇಂದ್ರವಾಗಿದ್ದರು, ಪಕ್ಷದ ಕಾರ್ಯಕರ್ತರೊಂದಿಗಿದ್ದು, ಅವರ ಆಸೆಯಂತೆ ಪೊಟೋ ತೆಗೆಸಿಕೊಂಡರು ಪಕ್ಕದಲ್ಲಿದ್ದ ಮಗುವನ್ನು ಎತ್ತಿಕೊಂಡು ಮುತ್ತಿಕ್ಕಿದರು.ಇತ್ತ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಬಿಜೆಪಿಯ ಡಿ.ಎನ್.ಜೀವರಾಜ್ ವಿರುದ್ದ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅತ್ತ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತಪಡೆದುಕೊಂಡಿದ್ದು ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಹೊರಹೊಮ್ಮಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ.
Siddaramaiah Oath Ceremony: ಸಿದ್ದರಾಮಯ್ಯ ಎಂಬ ಹೆಸರಿನ ನಾನು.....
ಮಂತ್ರಿಸ್ಥಾನ ದೊರೆಯುವುದೇ?:
ಬಹಳ ವರ್ಷಗಳ ನಂತರ ಜಿಲ್ಲೆಯಲ್ಲಿ 5ಕ್ಕೆ 5 ಸ್ಥಾನಗಳನ್ನು ಗೆದ್ದಿದ್ದು, ಎರಡನೇ ಅವಧಿಗೆ ಶಾಸಕ ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ ಎರಡನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೊದಲ ಅವಧಿಗೆ ಶಾಸಕರಾಗಿದ್ದ ರಾಜೇಗೌಡ ಅವರಿಗೆ ಮಲೆನಾಡು ಪ್ರದೇಶಾಭಿವೃದ್ಧಿ ಅಧ್ಯಕ್ಷ ಸ್ಥಾನ ದೊರೆತ್ತಿದ್ದು, ಈಗ ಸಚಿವ ಸ್ಥಾನ ದೊರೆಯುವುದೇ ಎಂಬುದನ್ನು ಕಾದುನೋಡಬೇಕಿದೆ.