Yadgir Election Result ಯಾದಗಿರಿಯಲ್ಲಿ ಗಿರಗಿರ ತಿರುಗಿದ ಬಿಜೆಪಿ, 3 ಕ್ಷೇತ್ರ ಕಾಂಗ್ರೆಸ್ ಪಾಲು!

By Suvarna NewsFirst Published May 13, 2023, 6:33 PM IST
Highlights

ಯಾದಗಿರಿ ಜಿಲ್ಲೆಯ 4 ಕ್ಷೇತ್ರಗಳ ಪೈಕಿ ಕಳೆದ ಚುನಾವಣೆಯಲ್ಲಿ 2 ಗೆದ್ದುಕೊಂಡಿದ್ದ ಬಿಜೆಪಿ, ಈ ಬಾರಿ ಎಲ್ಲಾ ಕ್ಷೇತ್ರಗಳನ್ನು ಕೈಚೆಲ್ಲಿದೆ. ಕಾಂಗ್ರೆಸ್ ಸುನಾಮಿಗೆ 4ರಲ್ಲಿ 3 ಕ್ಷೇತ್ರ ಗೆದ್ದುಕೊಂಡಿದ್ದರೆ, ಒಂದು ಕ್ಷೇತ್ರ ಜೆಡಿಎಸ್ ಪಾಲಾಗಿದೆ.

ಯಾದಗಿರಿ(ಮೇ.13): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ದಾಖಲಿಸಿದೆ.  136 ಸ್ಥಾನದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಇತ್ತ ಬಿಜೆಪಿ 65ಸ್ಥಾನಕ್ಕೆ ಕುಸಿತಗೊಂಡಿದೆ. ಜೆಡಿಎಸ್ 19 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಭರ್ಜರಿ ಗೆಲುವಿನೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಬಹುತೇಕ ಜಿಲ್ಲೆಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಇದರ ಪರಿಣಾಮ ಅಭೂತಪೂರ್ವ ಗೆಲುವು ಕಂಡಿದೆ. ಯಾದಗಿರಿಯ ನಾಲ್ಕು ಕ್ಷೇತ್ರಗಳ ಪೈಕಿ ಮೂರಲಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದರೆ, ಇನ್ನೊಂದು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಈ ಮೂಲಕ ಯಾದಗಿರಿ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಪಡೆದುಕೊಂಡಿದೆ. 2018ರ ಚುನಾವಣೆಯಲ್ಲಿ 2 ಕ್ಷೇತ್ರ ಬಿಜೆಪಿ ವಶಕ್ಕೆ ಪಡೆದುಕೊಂಡಿತ್ತು. ಆದರೆ ಈ ಬಾರಿ ಬಿಜೆಪಿ ಹೇಳಹೆಸರಿಲ್ಲದಂತಾಗಿದೆ. 

ಯಾದಗಿರಿ ಕ್ಷೇತ್ರ
ಗೆಲುವು: ಚೆನ್ನರೆಡ್ಡಿ ತುನ್ನೂರು (ಕಾಂಗ್ರೆಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ವೆಂಕಟರೆಡ್ಡಿ ಮುದ್ನಾಳ್‌
ಕಾಂಗ್ರೆಸ್: ತುನ್ನೂರು ಚೆನ್ನಾರೆಡ್ಡಿ
ಜೆಡಿಎಸ್:ಡಾ. ಮಾಲಕರೆಡ್ಡಿ
 
ಸುರಪುರ ಕ್ಷೇತ್ರ
ಗೆಲುವು:ರಾಜಾ ವೆಂಕಟಪ್ಪ ನಾಯ್ಕ್(ಕಾಂಗ್ರೆಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ನರಸಿಂಹ ನಾಯಕ್‌ (ರಾಜೂಗೌಡ) 
ಕಾಂಗ್ರೆಸ್:ರಾಜಾ ವೆಂಕಟಪ್ಪ 
ಜೆಡಿಎಸ್:ಶ್ರವಣಕುಮಾರ ನಾಯಕ್‌
ಆಪ್: ಮಂಜುನಾಥ್‌ ನಾಯಕ್‌ 

ಗುರುಮಠಕಲ್ ಕ್ಷೇತ್ರ
ಗೆಲುವು: ಶರಣಗೌಡ ಕಂದಕೂರು(ಜೆಡಿಎಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ಲಲಿತಾ ಅನಪುರ 
ಕಾಂಗ್ರೆಸ್:ಬಾಬುರಾವ್‌ ಚಿಂಚನಸೂರು
ಜೆಡಿಎಸ್:  ಶರಣಗೌಡ ಕಂದಕೂರ

ಶಹಾಪರ ಕ್ಷೇತ್ರ
ಗೆಲುವು: ಶರಣಬಸಪ್ಪ ದರ್ಶನಾಪುರ್(ಜೆಡಿಎಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ಅಮೀನರೆಡ್ಡಿ
ಕಾಂಗ್ರೆಸ್:ಶರಣಬಸಪ್ಪಗೌಡ ದರ್ಶನಾಪುರ
ಜೆಡಿಎಸ್:ಗುರು ಪಾಟೀಲ್‌ ಶಿರವಾಳ

ಯಾದಿಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಚನ್ನರೆಡ್ಡಿ ತುನ್ನೂರು 53440     ಮತ ಪಡೆದು ಗೆಲುವು ಸಾಧಿಸಿದ್ದಾರೆ. ತೀವ್ರ ಪ್ರತಿಸ್ಪರ್ಧೆ ಒಡ್ಡಿದ ಬಿಜೆಪಿ ನಾಯಕ ವೆಂಕಟರೆಡ್ಡಿ ಮುದ್ನಾಳ್ 49768 ಮತ ಪಡೆದು ಸೋಲು ಕಂಡಿದ್ದಾರೆ. ಪಕ್ಷೇತ್ರ ಅಭ್ಯರ್ಥಿ ಹನಮಗೌಡ ಬೀರಾಂಕಲ್ 36648 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.ಸುರಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯ್ಕ್ 112922 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇನ್ನು ಬಿಜೆಪಿ ನಾಯಕ ರಾಜುಗೌಡ 87746 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ. ಗುರಮಿಟ್ಕಲ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ 71784 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಶಹಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಶರಣಬಸಪ್ಪ ದರ್ಶನಾಪುರ್ 77543 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 9,99,959 ಮತದಾರರಿದ್ದಾರೆ. ಇದರಲ್ಲಿ 5,01,254 ಲಕ್ಷ ಪುರುಷ ಹಾಗೂ 498648 ಮಹಿಳಾ ಮತದಾರರಾಗಿದ್ದಾರೆ. ಇತರರ 57 ಮತದಾರರು 4 ವಿಧಾನಸಭಾ ಕ್ಷೇತ್ರದಲ್ಲಿದ್ದಾರೆ. ಈ ಪೈಕಿ 350172 ಪುರುಷ ಮತದಾರರು, 337490 ಮಹಿಳಾ ಮತದಾರರು ಹಾಗೂ 10 ಇತರೆ ಮತದಾರರು ಮೇ.10 ರಂದು ಮತದಾನ ಮಾಡಿದ್ದಾರೆ. ಯಾದಗಿರಿಯಲ್ಲಿ ಶೇಕಡಾ 68.77 ರಷ್ಟು ಮತದಾನವಾಗಿದೆ.

ಕಳೆದ ವಿಧಾನಭಾ ಚುನಾವಣೆಯಲ್ಲಿ ಯಾದಗಿರಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಪ್ರಾಬಲ್ಯ ಸಾಧಿಸಿತ್ತು. ಯಾದಗಿರಿ ಹಾಗೂ ಸುರಪುರ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿತ್ತು. ಇನ್ನುಳಿದ ಒಂದೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಯಜಭೇರಿ ಭಾರಿಸಿತ್ತು. ಆದರೆ ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಸೃಷ್ಟಿಯಾದ ಬಂಡಾಯ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆ ತರಲಿದೆ. ಇದರ ಲಭಾ ಜೆಡಿಎಸ್ ಪಡೆದುಕೊಳ್ಳಲಿದೆ ಅನ್ನೋ ಲೆಕ್ಕಾಚಾರವೇ ಜೋರಾಗಿತ್ತು.  

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

click me!