ಬೆಂಗಳೂರು ಕೇಂದ್ರ ವಿಭಾಗದ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ 4 ಹಾಗೂ ಬಿಜೆಪಿ 3 ಕ್ಷೇತ್ರಗಳನ್ನು ಪಡೆದು ಹಿಂದಿನ ಅಭ್ಯರ್ಥಿಗಳು ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ.
ಬೆಂಗಳೂರು (ಮೇ 13): ರಾಜ್ಯದಲ್ಲಿ ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ ಬೆಂಗಳೂರಿನಲ್ಲಿ ಬಹುಮತ ಪಡೆದ ಪಕ್ಷಕ್ಕೆ ಅಧಿಕಾರ ಹಿಡಿಯುವುದು ಸುಲಭದ ಮಾತಾಗಿದೆ. ಇನ್ನು ಬೆಂಗಳೂರು (ಬಿಬಿಎಂಪಿ) ಕೇಂದ್ರ ವಿಭಾಗದಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ 4 ಕ್ಷೇತ್ರಗಳನ್ನು ಕಾಂಗ್ರೆಸ್ ಹಾಗೂ 3 ಕ್ಷೇತ್ರಗಳನ್ನು ಬಿಜೆಪಿ ಬಾಕಿಕೊಂಡಿದೆ.
ಪ್ರಮುಖ ಅಭ್ಯರ್ಥಿಗಳಾಗಿದ್ದ ಮುನಿರತ್ನ, ಎಸ್. ಸುರೇಶ್ ಕುಮಾರ್, ಜಮೀರ್ ಅಹಮದ್ ಖಾನ್, ಎನ್.ಎ. ಹ್ಯಾರೀಶ್ ಸೇರಿ ಹಲವರು ಗೆಲುವು ಸಾಧಿಸಿದ್ದಾರೆ. ಆದರೆ, ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ದಿನೇಶ್ ಗುಂಡೂರಾವ್ ಹಾಗೂ ಬಿಜೆಪಿಯ ಸಪ್ತಗಿರಿಗೌಡ ನಡುವೆ ಭಾರಿ ಪೈಪೋಟಿ ನಡೆದಿದ್ದು, ಕೇವಲ 105 ಮತಗಳ ಅಂತರದಿಂದ ದಿನೇಶ್ ಗುಂಡೂರಾವ್ ಗೆಲುವು ಸಾಧಿಸಿದ್ದಾರೆ.
Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!
ಬಿಬಿಎಂಪಿ ಕೇಂದ್ರ (BBMP Central) ವಿಭಾಗದಲ್ಲಿ ಶೇ.55.50 ಮತದಾನವಾಗಿದೆ. ಬೆಂಗಳೂರು ಕೇಂದ್ರ ವಿಭಾಗದದಲ್ಲಿ ಶಿವಾಜಿನಗರ, ಆರ್.ಆರ್ ನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಹಾಗೂ ಚಿಕ್ಕಪೇಟೆ ಕ್ಷೇತ್ರ ಸೇರಿ 7 ಕ್ಷೇತ್ರಗಳ ಮತ ಎಣಿಕಾ ಕಾರ್ಯವು ನಗರದ ಬಿ.ಎಂ.ಎಸ್ ಮಹಿಳೆಯರ ಕಾಲೇಜಿನಲ್ಲಿ ಮತ ಎಣಿಕೆ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಪೂರ್ಣ ಫಲಿತಾಂಶ ಲಭ್ಯವಾಗಿದೆ. ಈ ಪೈಕಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಖಾನ್ 53 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಉಳಿದ ಆರು ಕ್ಷೇತ್ರದ ಅಭ್ಯರ್ಥಿಗಳು 15 ಸಾವಿರಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಸೋಲಿಗೆ ಕಾರಣವಾದ ಕೆಜಿಎಫ್ ಬಾಬು:
ಬೆಂಗಳೂರಿನ ಕೇಂದ್ರ ಭಾಗವಾದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಉದಯ್ ಬಿ. ಗರುಡಾಚಾರ್ ಅವರ ವಿರುದ್ಧ ಕಾಂಗ್ರೆಸ್‌ನಿಂದ ಆರ್.ವಿ. ದೇವರಾಜು ಪ್ರಭಲ ಪೈಪೋಟಿ ನೀಡಿದ್ದರು. ಆದರೆ, ಕಾಂಗ್ರೆಸ್‌ನಿಂದ ಟಿಕೆಟ್‌ಗಾಗಿ ಹೋರಾಟ ಮಾಡಿ, ಕೊನೆಗೂ ಕೆ.ಜಿ.ಎಫ್ ಬಾಬು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು. ಇದರಿಂದಾಗಿ ಕಾಂಗ್ರೆಸ್‌ಗೆ ಬೀಳಬೇಕಿದ್ದ ಮತಗಳು ವಿಭಜನೆಗೊಂಡು ದೇವರಾಜ್ ಹಾಗೂ ಕೆಜಿಎಫ್ ಬಾಬು ಇಬ್ಬರೂ ಸೋಲುಂಡಿದ್ದಾರೆ. ಕಾಂಗ್ರೆಸ್ ಮತಗಳ ವಿಭಜನೆಯ ಲಾಭಗಳಿಸಿದ ಉದಯ್ ಬಿ. ಗರುಡಾಚಾರ್ ಅವರು ಸುಲಭವಾಗಿ ಗೆಲುವು ದಾಖಲಿಸಿದ್ದಾರೆ.
ಬಿಜೆಪಿಯಿಂದ ಸುರೇಶ್ 8 ಬಾರಿ ಗೆಲುವು: ಬಿಜೆಪಿಯ ಹುರಿಯಾಳಾಗಿ ಈವರೆಗೆ 8 ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸುರೇಶ್ ಕುಮಾರ್, ಎರಡು ಬಾರಿ ಸೋಲುಂಡು 6 ಬಾರಿ ಗೆಲುವಿನ ಮಾಲೆ ಧರಿಸಿದ್ದಾರೆ. ಕಳೆದ ಮೂರು ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿ 'ಹ್ಯಾಟ್ರಿಕ್ ಹೀರೋ' ಎನಿಸಿದ್ದರು. ಈಗ ಮತ್ತೊಮ್ಮೆ ಗೆಲ್ಲುವ ಮೂಲಕ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದಾರೆ. ಆದರೆ, ಬಿಜೆಪಿಯಿಂದ ಆಯ್ಕೆಯಾಗಿದ್ದ ವಿಧಾನ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಪುಟ್ಟಣ್ಣ ಕೂಡ ಸೋಲುಂಡಿದ್ದಾರೆ. ಈ ಬಾರಿ ವೈದ್ಯ ವೃತ್ತಿಯನ್ನೇ ಮಾಡಿಕೊಂಡು ಜನಮನ್ನಣೆ ಗಳಿಸಿದ್ದ ಡಾ. ಆಂಜನಪ್ಪ ಕೂಡ ಸೋಲನುಭವಿಸಿದ್ದಾರೆ.
Karnataka Assembly Election 2023 Result: ಪಕ್ಷಾಂತರಿಗಳನ್ನು ಮನೆಯಲ್ಲೇ ಕೂರಿಸಿದ ಮತದಾರ ಪ್ರಭು
ವಿಧಾನಸಭಾ ಕ್ಷೇತ್ರವಾರು ಅಭ್ಯರ್ಥಿಗಳ ಸೋಲು- ಗೆಲುವಿನ ವಿವರ:
ಶಿವಾಜಿನಗರ (Shivajinagar) - ಕಾಂಗ್ರೆಸ್
ಕಾಂಗ್ರೆಸ್- ರಿಜ್ವಾನ್ ಅರ್ಷದ್ -64913
ಬಿಜೆಪಿ- ಎನ್.ಚಂದ್ರ 41719
ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ - 23,194 ಮತಗಳ ಅಂತರದ ಗೆಲುವು
ಗಾಂಧಿನಗರ (GandhiNagar) - ಕಾಂಗ್ರೆಸ್
ಕಾಂಗ್ರೆಸ್- ದಿನೇಶ್ ಗುಂಡೂರಾವ್ 54118
ಬಿಜೆಪಿ- ಎ.ಆರ್.ಸಪ್ತಗಿರಿಗೌಡ 54013
105 ಮತಗಳ ಅಂತರದಲ್ಲಿ ದಿನೇಶ್ ಗುಂಡೂರಾವ್ ಗೆಲುವು
ಚಾಮರಾಜಪೇಟೆ (Chamrajapet) - ಕಾಂಗ್ರೆಸ್
ಕಾಂಗ್ರೆಸ್- ಜಮೀರ್ ಅಹಮದ್ 77,631
ಬಿಜೆಪಿ- ಭಾಸ್ಕರ್ ರಾವ್- 23,678
ಜೆಡಿಎಸ್- ಗೋವಿಂದರಾಜು- 19,086
ಕಾಂಗ್ರೆಸ್ ನ ಜಮೀರ್ ಅಹ್ಮದ್ ಖಾನ್ ಗೆ 53,953 ಮತಗಳ ಅಂತರದ ಗೆಲುವು