Karnataka Election Result: ಸಿಎಂ ಕುರ್ಚಿ ಫೈಟ್‌ಗೆ ಪ್ರಬಲ ಸಮುದಾಯಗಳ ಎಂಟ್ರಿ: ಹೈಕಮಾಂಡ್‌ಗೆ ಟೆನ್ಶನ್‌ ಶುರು

By Sathish Kumar KH  |  First Published May 14, 2023, 6:11 PM IST

ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತ ಪಡೆಯುತ್ತಿದ್ದಂತೆಯೇ ಪ್ರಬಲ ಸಮುದಾಯಗಳು ತಮ್ಮ ಸಮುದಾಯದ ನಾಯಕರನ್ನೇ ಮುಖ್ಯಮಂತ್ರಿ ಮಾಡುವಂತೆ ಪಟ್ಟು ಹಿಡಿದಿವೆ.


ಬೆಂಗಳೂರು (ಮೇ 14) : ರಾಜ್ಯ ವಿಧಾನಸುಭಾ ಚುನಾವಣಾ ಕಾವು ಮುಕ್ತಾಯಗೊಂಡು ಕಾಂಗ್ರೆಸ್‌ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆ ಆಯ್ಕೆಗೆ ಸಮುದಾಯಗಳು ಹಾಗೂ ಅದರ ಮುಖಂಡರು ಭಾರಿ ಕಸರತ್ತು ಮುಂದುವರೆಸಿದ್ದಾರೆ. ರಾಜ್ಯದ ಪ್ರಬಲ ಸಮುದಾಯಗಳಾದ, ಲಿಂಗಾಯತ, ಒಕ್ಕಲಿಗ, ಕುರುಬ ಹಾಗೂ ದಲಿತ ಸಮುದಾಯಗಳು ತಮ್ಮವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಪಟ್ಟು ಹಿಡಿದ್ದಾರೆ. ಇದರಿಂದ ಕಾಂಗ್ರೆಸ್‌ ಹೈಕಮಾಂಡ್‌ಗೆ ಟೆನ್ಶನ್‌ ಆರಂಭವಾಗಿದ್ದು, ಇಂದು ನಡೆಯುವ ಶಾಸಕಾಂಗ ಸಭೆಯಲ್ಲಿಯೂ ಸಿಎಂ ಆಯ್ಕೆಗೆ ಅಂತಿಮ ತೀರ್ಮಾನ ಹೊರಬರುವ ಸಾಧ್ಯತೆಯೂ ಕೂಡ ಕಡಿಮೆಯಾಗಿದೆ. 

ಡಿಕೆಶಿ‌ ಬೆನ್ನಿಗೆ ನಿಂತ ಒಕ್ಕಲಿಗ ಸಮುದಾಯ: ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್‌ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಒಕ್ಕಲಿಗ ಸಮುದಾಯದ ಮುಖಂಡರಿಂದ ಸಭೆ ಮಾಡಲಾಗಿದೆ. ವಿಜಯನಗರ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸಭೆ ನಡೆಸಲಾಗಿದ್ದು, ಒಕ್ಕಗಲಿರ ಸಂಘದ ಪದಾಧಿಕಾರಿಗಳು, ಒಕ್ಕಲಿಗಪರ ಸಂಘಟನೆಗಳು, ಸರ್ಕಾರಿ ನಿವೃತ್ತ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಸಿಎಂ ಸ್ಥಾನ ನೀಡುವಂತೆ ಒತ್ತಡ ಹೇರಲು ನಿರ್ಧಾರ ಮಾಡಲಾಯಿತು. ಎಸ್.ಎಂ.ಕೃಷ್ಣ ನಂತರ ಒಕ್ಕಲಿಗೆ ಸಮುದಾಯಕ್ಕೆ ಸಿಎಂ ಆಗುವ ಅವಕಾಶವಿದ್ದು, ಕಾಂಗ್ರೆಸ್‌ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಸಿಎಂ ಸ್ಥಾನ ನೀಡಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ. 

Tap to resize

Latest Videos

Karnataka election result 2023: ಶಾಸಕರಿಂದ ಸಿದ್ದುಗೆ ಜೈ, ಹೈಕಮಾಂಡ್‌ನಿಂದ ಡಿಕೆಶಿಗೆ ಕೈ

ನಮ್ಮ ಡಿಕೆಶಿ ಹುಟ್ಟು ಹಬ್ಬಕ್ಕೆ ಸಿಎಂ ಹುದ್ದೆಯೂ ಸಿಗಲಿ: 
ಇಂದು ಎಲ್ಲರ ಹೃದಯದಲ್ಲೇ ಒಕ್ಕಲಿಗ ಮುಖಂಡರೇ ಸಿಎಂ ಆಗಬೇಕೆನ್ನುವುದು ಇದೆ. ನಮ್ಮವರೆಯಾದ ವ್ಯಕ್ತಿ ಡಿಕೆ ಶಿವಕುಮಾರ್, ಪಕ್ಷವನ್ನ ಮೇಲೆ ಎತ್ತಿ ಅಧಿಕಾರ ಹಿಡುವಂತೆ ಮಾಡಿದ್ದಾರೆ. ಸಂಪ್ರದಾಯದಂತೆ  ಮನೆಯ ಅಧ್ಯಕ್ಷ ಯಾರ್  ಇರುತ್ತಾರೋ, ಅವರೇ ರಾಜ್ಯವನ್ನ ಮುನ್ನಡೆಸುತ್ತಾರೆ. ಹಾಗೇ ಮುಂದುವರೆಸಿಕೊಂಡು ಹೋಗಿ ಅನ್ನೋದು ನಮ್ಮ ಅಶಯ. ಎಲ್ಲಾ ಮಾನದಂಡಗಳಿಂದಲ್ಲೂ ಅರ್ಹರಿದ್ದಾರೆ ನಮ್ಮ ಡಿಕೆಶಿವಕುಮಾರ್. ಸೋನಿಯಾ, ಸಿದ್ದರಾಮಯ್ಯ ಖರ್ಗೆಯವರು ಡಿಕೆಶಿಯವರಿಗೆ ಕೊಡಬೇಕು ಕೊಡ್ತಾರೆ ಅಂತ ಭಾವಿಸಿದ್ದೇನೆ. ಶ್ರಮಫಟ್ಟವರಿಗೆ ಫಲ ಸಿಗಬೇಕು. ಸಹಜವಾಗಿ ಅಧ್ಯಕ್ಷರಾದರನ್ನ ಮುಖ್ಯಮಂತ್ರಿ ಮಾಡಬೇಕು ಅದು ಮಾಡ್ತಾರೆ ಅಂತ ನಾನು ಭಾವಿಸುತ್ತೇನೆ. ಸಹಜವಾಗಿ ಅವರಿಗೆ ಸಿಗುವ ಸ್ಥಾನ ಸಿಗಲಿ. ನಾಳೆ ಅವರ ಹುಟ್ಟು ಹಬ್ಬ ಜೊತೆ ಸಿಎಂ ಹುದ್ದೆ ಸಹ ಸಿಗಲಿ.
- ಶ್ರೀ ನಿರ್ಮಾಲನಂದನಾಥ ಸ್ವಾಮೀಜಿ,ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ

ಒಕ್ಕಲಿಗರಿಗೆ ಗೌರವ ಸಿಗಬೇಕಂದ್ರೆ ಡಿಕೆಶಿ ಸಿಎಂ ಆಗ್ಬೇಕು: ಸಭೆಯ ನಂತರ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಉಮಾಪತಿ ಶ್ರೀನಿವಾಸ್ ಗೌಡ, ಮತದಾರರ ತೀರ್ಪು ಹೊರಬಂದಿದೆ. ಈ ಬಾರಿ ಸಿಎಂ ಆಗಿ ಒಕ್ಕಲಿಗರೇ ಆಗಬೇಕೆಂದು ಮನವಿ ಮಾಡುತ್ತಿದ್ದೇವೆ. ಹೀಗಾಗಿ, ಡಿ.ಕೆ. ಶಿವಕುಮಾರ್ ಅವರಿಗೆ ಬೆಂಬಲ ಸೂಚಿಸತ್ತೇವೆ. ಈವರೆಗೆ ಅವರಿಗೆ ಯಾವುದೇ ದೊಡ್ಡ ಅವಕಾಶ ಸಿಕ್ಕಿಲ್ಲ, ಅವರ ಶ್ರಮ ಪಕ್ಷಕ್ಕೆ ದೊಡ್ಡದಿದೆ. ರಾಜ್ಯ ಒಕ್ಕಲಿಗರ ಪದಾಧಿಕಾರಿಗಳ ಸಂಘದಿಂದ ಸಭೆ ಮೂಲಕ ಮನವಿ ಮಾಡ್ತಾ ಇದ್ದೇವೆ ಹೊರತು ಡಿಮ್ಯಾಂಡ್ ಮಾಡ್ತಿಲ್ಲ. ಶಿವಕುಮಾರ್ ಅವರು ನಮ್ಮ ಸಮುದಾಯದ ಧ್ವನಿಯಾಗಿದ್ದಾರೆ. ನಮ್ಮ ಸಮುದಾಯಕ್ಕೆ ಗೌರವ ಸಿಗಬೇಕಾದ್ರೇ ಡಿಕೆಶಿ ಮುಖ್ಯಮಂತ್ರಿಯಾಗಲೇ ಬೇಕು ಎಂದರು.

ಸಿದ್ದರಾಮಯ್ಯರನ್ನು ಸಿಎಂ ಮಾಡುವಂತೆ ಕುರುಬರ ಪಟ್ಟು: ಕುರುಬ ಸಮುದಾಯದಿಂದಲೂ ಕೂಡ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಪಟ್ಟು ಹಿಡಿದು ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದಲೇ ಕುರುಬ ಸಮುದಾಯದ ಎಲ್ಲ ಜನರೂ ಕೂಡ ಒಕ್ಕೂರಲಾಗಿ ಕಾಂಗ್ರೆಸ್‌ಗೆ ಮತವನ್ನು ಹಾಕಿದ್ದು, ಬಹುಮತ ತರಲು ಶ್ರಮಿಸಿದ್ದೇವೆ. ಈಗ ಅವರು ರಾಜ್ಯಾದ್ಯಂತ ಪಕ್ಷವನ್ನು ಸಂಘಟನೆ ಮಾಡಿ ಬಹುಮತ ಗಳಿಸಲು ಕಾರಣವಾಗಿದ್ದು, ಅವರಿಗೆ ಮೊದಲ ಹಂತದಲ್ಲಿ ಸಿಎಂ ಸ್ಥಾನ ಕೊಡಲೇಬೇಕು ಎಂದು ಪಟ್ಟು ಹಿಡಿದು ಹೈಕಮಾಂಡ್‌ಗೆ ಒತ್ತಡ ಹೇರಿದ್ದಾರೆ.

ಲಿಂಗಾಯತರಿಂದ ಎಂ.ಬಿ. ಪಾಟೀಲ್‌ಗೆ ಸಿಎಂ ಸ್ಥಾನಕ್ಕೆ ಆಗ್ರಹ: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಲಿಂಗಾಯತ ಸಮುದಾಯದ 51 ಜನರಿಗೆ ಟಿಕೆಟ್‌ ಕೊಡಲಾಗಿದ್ದು, ಈ ಪೈಕಿ 39 ನಾಯಕರು ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ಕಳೆದ 30 ವರ್ಷಗಳಿಂದ ಬಿಜೆಪಿಗೆ ಬೆಂಬಲ ಕೊಡುತ್ತಾ ಬಂದಿದ್ದ ಲಿಂಗಾಯತ ಸಮುದಾಯ, ಬಿಜೆಪಿಯಿಂದ ಬಿ.ಎಸ್. ಯಡಿಯೂರಪ್ಪ ಹಾಗೂ ಜಗದೀಶ್‌ ಶೆಟ್ಟರ್‌ ಅವರನ್ನು ಕಡೆಗಣಿಸಿದ್ದರಿಂದಾಗಿ ಈ ಬಾರಿ ಕಾಂಗ್ರೆಸ್‌ಗೆ ಭಾರಿ ಬೆಂಬಲ ನೀಡಿದ್ದಾರೆ. ಆದ್ದರಿಂದ ಲಿಂಗಾಯತ ಸಮುದಾಯದ ನಾಯಕ ಎಂ.ಬಿ. ಪಾಟೀಲ್‌ ಅವರನ್ನು ಮುಖ್ಯಮಂತ್ರಿ ಮಾಡಲೇಬೇಕು ಎಂದು ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದಾರೆ. ಆದರೆ, ಇದನ್ನು ಹೈಕಮಾಂಡ್‌ ಎಷ್ಟು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಕಾದುನೋಡಬೇಕಿದೆ.

Karnataka election results 2023: ನಾನೇ ಸಿಎಂ 'ಆಗ್ಬೇಕು', ಹೈಕಮಾಂಡ್‌ ಮುಂದೆ ಡಿಕೆಶಿ ಪಟ್ಟು

ದಲಿತ ಪರಮೇಶ್ವರ್‌ಗೆ ಸಿಎಂ ಹುದ್ದೆ ಕೊಡಿ: ರಾಜ್ಯದಲ್ಲಿ 2013ರಲ್ಲಿಯೇ ಕಾಂಗ್ರೆಸ್‌ ಬಹುಮತ ಬಂದಾಗ ದಲಿತ ಮುಖ್ಯಮಂತ್ರಿ ಆಗಬೇಕಿದ್ದ ಜಿ. ಪರಮೇಶ್ವರ್‌ ಅವರನ್ನು ಕುಂತ್ರ ಮಾಡಿ ಸೋಲಿಸಿ, ಸಿಎಂ ಹುದ್ಎಯಿಮದ ವಂಚಿರಾಗುವಂತೆ ಮಾಡಲಾಯಿತು. ಆದರೆ, ಈಗ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು, ದಲಿತ ಮುಖ್ಯಮಂತ್ರಿ ಮಾಡಬೇಕು ಎಂದು ದಲಿತ ಸಮುದಾಯಗಳು ಪಟ್ಟು ಹಿಡಿದಿವೆ. ಇಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ದಲಿತ ಸಿಎಂ ಕೂಗು ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ದಲಿತರು, ಸಂವಿಧಾನದ ಮೇಲೆ ಪ್ರೀತಿ ಇದ್ದರೆ ದಲಿತರನ್ನೇ ಸಿಎಂ ಮಾಡಲಿ. ರಾಜ್ಯದಲ್ಲಿ ಕಾಂಗ್ರೆಸ್ 136 ಸೀಟ್ ಗಳನ್ನು ಗೆದ್ದಿದೆ. ಪ್ರಿಯಾಂಕ ಖರ್ಗೆ, ಪರಮೇಶ್ವರ್, ಮುನಿಯಪ್ಪ ಅವರಲ್ಲಿ ಒಬ್ಬರನ್ನ ಸಿಎಂ ಮಾಡಲಿ ಎಂದು ಚಿಕ್ಕಮಗಳೂರಿನಲ್ಲಿ ದಲಿತ ಮುಖಂಡ ಮೋಹನ್ ಒತ್ತಾಯಿಸಿದ್ದಾರೆ. 

click me!