Srinivasapura Election Result 2023: ಕೈ ಅಬ್ಬರದ ನಡುವೆ ಸಿದ್ದು ಆಪ್ತ ರಮೇಶ್ ಕುಮಾರ್‌ಗೆ ಸೋಲು!

By Suvarna NewsFirst Published May 13, 2023, 1:12 PM IST
Highlights

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಾಳಯದ ಸಂಭ್ರಮ ಮುಗಿಲು ಮುಟ್ಟಿದೆ. ಬಹುತೇಕ ಕಾಂಗ್ರೆಸ್ ನಾಯಕರು ಜಯಭೇರಿ ಭಾರಿಸಿದ್ದಾರೆ. ಆದರೆ ಕಾಂಗ್ರೆಸ್ ಹಿರಿಯ ಹಾಗೂ ಪ್ರಮುಖ ನಾಯಕ, ಸಿದ್ದರಾಮಯ್ಯ ಆಪ್ತ ರಮೇಶ್ ಕುಮಾರ್ ಸೋಲು ಕಂಡಿದ್ದಾರೆ. 

ಕೋಲಾರ(ಮೇ.13): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಕಾಂಗ್ರೆಸ್ ಕೈಹಿಡಿದ್ದಾರೆ. ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಲು ಸಜ್ಜಾಗಿದೆ. ಕಾಂಗ್ರೆಸ್ ನಾಯಕರು ಭಾರಿ ಅಂತರದ ಗೆಲುವು ದಾಖಲಿಸಿದ್ದರೆ, ಇತ್ತ ಕೋಲಾರದ ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಸೋಲು ಕಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ ವಿರುದ್ಧ ರಮೇಶ್ ಕುಮಾರ್ ಮುಗ್ಗರಿಸಿದ್ದಾರೆ. ಸದ್ಯ ರಮೇಶ್ ಕುಮಾರ್ 51817 ಮತಗಳನ್ನು ಪಡೆದಿದ್ದರೆ, ಜೆಡಿಎಸ್‌ನ ಜಿಕೆ ವೆಂಕಟಶಿವಾ ರೆಡ್ಡಿ 56841 ಮತಗಳನ್ನು ಪಡೆದು ಮುನ್ನಡೆ ಪಡೆದಿದ್ದಾರೆ. ಅಂಚೆ ಮತಗಳ ಎಣಿಕೆ ಬಾಕಿ ಇದ್ದು, ಬಹುತೇಕ ವೆಂಕಟಶಿವಾ ರೆಡ್ಡಿ ಗೆಲುವು ಸಾಧಿಸುವುದು ಖಚಿತವಾಗುತ್ತಿದೆ.

ಸಿದ್ದರಾಮಯ್ಯ ಆಪ್ತ ರಮೇಶ್ ಕುಮಾರ್ ಶ್ರೀನಿವಾಸಪುರದಲ್ಲಿ ಗೆಲುವು ಖಚಿತ ಎಂದೇ ಹೇಳಲಾಗುತ್ತಿತ್ತು. ಆದರೆ ಜೆಡಿಎಸ್ ಅಭ್ಯರ್ಥಿ ವೆಂಕಟೇಶಿವಾ ರೆಡ್ಡಿ ಮುಂದೆ ರಮೇಶ್ ಕುಮಾರ್ ಮತ ಪಡೆಯುವಲ್ಲಿ ವಿಫಲವಾಗಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಗುಂಜೂರು ವಿ ಶ್ರೀನಿವಾಸರೆಡ್ಡಿ ಕೇವಲ 2503 ಮತಗಳನ್ನು ಪಡೆದಿದ್ದಾರೆ. ಶ್ರೀನಿವಾಸಪುರದಲ್ಲಿ 10 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 

Karnataka Election 2023 Live: 130 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಭಾರಿ ಮುನ್ನಡೆ, ಸಂಭ್ರಮ ಎಲ್ಲೆಡೆ ಸಂಭ್ರಮ

ಆಮ್ ಆದ್ಮಿ ಪಾರ್ಟಿಯಿಂದ ಸ್ಪರ್ಧಿಸಿದ್ದ ವೈವಿ ವೆಂಕಟಾಚಲ 1145 ಮತಗಳನ್ನು ಪಡೆದಿದ್ದಾರೆ. ಇದೀಗ ಶ್ರೀನಿವಾಸಪುರದಲ್ಲಿ ಜೆಡಿಎಸ್ ಅಭಿಮಾನಿಗಳ ಸಂಭ್ರಮಾಚರಣೆ ಆರಂಭಗೊಂಡಿದೆ. ಜೆಡಿಎಸ್ ಕಚೇರಿ, ವೆಂಕಟಶಿವಾರೆಡ್ಡಿ ಮನೆ ಮುಂದೆ ಭಾರಿ ಸಂಭ್ರಮಾಚರಣೆ ನಡೆಯುತ್ತಿದೆ. ಕಾಂಗ್ರೆಸ್ ಬಹುತೇಕ ನಾಯಕರು ಗೆಲುವಿನ ಸಂಭ್ರಮ ಆಚರಿಸುತ್ತಿದ್ದರೆ, ಇತ್ತ ರಮೇಶ್ ಕುಮಾರ್ ಮೌನಕ್ಕೆ ಜಾರಿದ್ದಾರೆ.

ಕೋಲಾರ ಹಲವು ಕಾರಣಗಳಿಂದ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖವಾಗಿತ್ತು. ಆರಂಭಿಕ ಹಂತದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆಯಿಂದ ಹೈವೋಲ್ಟೇಜ್ ಕದನವಾಗಿತ್ತು ಮಾರ್ಪಟ್ಟಿತ್ತು. ಬಳಿಕ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಇತ್ತ ಕೋಲಾರ ಜಿಲ್ಲೆಯ ಶ್ರಿನಿವಾಸಪುರ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿತು. ಆದರೆ ರಮೇಶ್ ಕುಮಾರ್ ಗೆಲುವಿನ ನೆಗೆ ಬೀರುವಲ್ಲಿ ವಿಫಲರಾಗಿದ್ದಾರೆ.

Varuna V Somanna election results 2023 LIVE: ಎರಡೂ ಕ್ಷೇತ್ರದಲ್ಲಿ ವಿ ಸೋಮಣ್ಣಗೆ ಸೋಲು, ರಾಜಕೀಯ ಭವಿಷ್ಯವೇ ಅತಂತ್ರ!

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕಿತ್ತು.

click me!