
ನವದೆಹಲಿ(ಮೇ.14): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಕಾಂಗ್ರೆಸ್ ಇದೀಗ ಮುಖ್ಯಮಂತ್ರಿ ಆಯ್ಕೆ ಕಸರತ್ತು ನಡೆಸುತ್ತಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸುತ್ತಿದ್ದರೆ. ಅತ್ತ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹತ್ವದ ಸಭೆ ನಡೆಸಿದ್ದಾರೆ. ಇದರ ನಡುವೆ ಕಾಂಗ್ರೆಸ್ ಹೈಕಮಾಂಡ್ ತಲೆನೋವು ಹೆಚ್ಚಾಗಿದೆ. ಸಿಎಂ ಆಯ್ಕೆ ಕಗ್ಗಂಟಿನ ನಡುವೆ ಇದೀಗ ಕಾಂಗ್ರೆಸ್ ನಾಯಕರು ದೆಹಲಿ ಪರೇಡ್ ನಡೆಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಸಚಿವ ಸ್ಥಾನಕ್ಕಾ ಲಾಬಿ ಶುರುಮಾಡಿದ್ದಾರೆ.
ಮುಖ್ಯಮಂತ್ರಿ ಯಾರು ಅನ್ನೋದು ಇನ್ನೂ ಅಂತಿಮವಾಗಿಲ್ಲ. ಇದಕ್ಕೂ ಮೊದಲು ಸಚಿವ ಸ್ಥಾನಕ್ಕೆ ಭರ್ಜರಿ ಲಾಬಿ ನಡೆಯುತ್ತಿದೆ. ಎಂಎಲ್‌ಸಿ ಪ್ರಕಾಶ್ ಹುಕ್ಕೇರಿ ಈಗಾಗಲೇ ದೆಹಲಿಗೆ ತೆರಳಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ದಾರೆ. ತಮಗೆ ಅಥವಾ ಪುತ್ರ ಗಣೇಶ್ ಹುಕ್ಕೇರಿಗೆ ಸಚಿವ ಸ್ಛಾನ ನೀಡುವಂತೆ ಒತ್ತಾಯಿಸಿದ್ದಾರೆ. ಇಬ್ಬರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕು ಎಂದು ಪ್ರಕಾಶ್ ಹುಕ್ಕೇರಿ ಲಾಬಿ ಶುರುಮಾಡಿದ್ದಾರೆ.
KARNATAKA ELECTION RESULT 2023 ಸಿಎಂ ಆಯ್ಕೆಗೆ ಸೋನಿಯಾ, ರಾಹುಲ್ ನಿರ್ಧಾರ ಕೇಳಿದ ಖರ್ಗೆ!
ಇಬ್ಬರಲ್ಲಿ ಯಾರಿಗಾದರೂ ಮೊದಲ ಕ್ಯಾಬಿನೆಟ್‌ನಲ್ಲೇ ಸಚಿವ ಸ್ಥಾನ ನೀಡಲು ಹುಕ್ಕೇರಿ ಲಾಬಿ ಆರಂಭಿಸಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ರಚನೆಯಾದಾಗಲೂ ಹುಕ್ಕೇರಿ ಇದೇ ರೀತಿ ಲಾಭಿ ನಡೆಸಿದ್ದರು. ಇದೀಗ ಸಚಿವ ಸ್ಥಾನಕ್ಕಾಕಾಗಿ ಬಹಿರಂಗವಾಗಿ ಲಾಬಿ ಆರಂಭಿಸಿದ ನಾಯಕರಲ್ಲಿ ಪ್ರಕಾಶ್ ಹುಕ್ಕೇರಿ ಮೊದಲಿಗರಾಗಿ ಕಾಣಿಸಿಕೊಂಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದೆ. 135 ಸ್ಥಾನ ಗೆದ್ದಿರುವ ಕಾಂಗ್ರೆಸ್ ಅದ್ವಿತೀಯ ಗೆಲುವಿನ ಸಂಭ್ರಮ ಆಚರಿಸಿದೆ. ಬಿಜೆಪಿ 65 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಜೆಡಿಎಸ್ 19 ಸ್ಥಾನಕ್ಕೆ ಕುಸಿದಿದೆ. ಬಿಜೆಪಿಯಿಂದ 224 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದರೆ, ಕಾಂಗ್ರೆಸ್‌ನಿಂದ 223 ಕ್ಷೇತ್ರದಲ್ಲಿ ಹುರಿಯಾಳುಗಳಿದ್ದರು. ಜೆಡಿಎಸ್‌ನಿಂದ 209 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಎಎಪಿಯಿಂದ 209, ಸಿಪಿಎಂನಿಂದ 4, ಬಿಎಸ್‌ಪಿಯಿಂದ 133, ಎನ್‌ಪಿಪಿ 2 ಅಭ್ಯರ್ಥಿಗಳು ಕಣದಲ್ಲಿದ್ದರು. ನೊಂದಾಯಿತ ಮಾನ್ಯತೆ ಪಡೆಯದ ಪಕ್ಷದಿಂದ 254 ಮತ್ತು ಪಕ್ಷೇತರರು 918 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
Karnataka Election Results 2023 ಎಲ್ಲಾ ನೋವುಂಡ ಡಿಕೆಶಿಗೆ ನಮ್ಮ ಬೆಂಬಲ: ನಂಜಾವಧೂತ ಸ್ವಾಮೀಜಿ
ತೀವ್ರ ಕತೂಹಲ ಕೆರಳಸಿ ರಾಜ್ಯದ ಪ್ರತಿಷ್ಠಿತ ಕೇಂದ್ರಗಳಲ್ಲಿ ಒಂದಾದ ವರುಣ ವಿಧಾನಸಭಾ ಕ್ಷೇತ್ರದ ಮತದಾರರು ಸ್ಥಳೀಯ ಅಭ್ಯರ್ಥಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಮಣೆ ಹಾಕಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಮಣಿಸಲು ಬಿಜೆಪಿ ವರಿಷ್ಠರು ಎಣೆದಿದ್ದ ತಂತ್ರ ವಿಫಲವಾಗಿದೆ.ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಸಿದ್ದರಾಮಯ್ಯ ಅವರನ್ನು ಹಿಂದಿಕ್ಕುವಲ್ಲಿ ವಸತಿ ಸಚಿವ ವಿ. ಸೋಮಣ್ಣ ವಿಫಲರಾದರು. 1,19,816 ಮತ ಪಡೆದ ಸಿದ್ದರಾಮಯ್ಯ ಅವರು, ಬಿಜೆಪಿಯ ವಿ. ಸೋಮಣ್ಣ ವಿರುದ್ಧ 46,163 ಮತಗಳ ಅಂತರದಲ್ಲಿ ಜಯಗಳಿಸಿದರು. ಇದೀಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಅನ್ನೋ ಕೂಗು ಹೆಚ್ಚಾಗುತ್ತಿದೆ.ಇತ್ತ ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದು ಬೆಂಬಲಿಗರು ಸಂಭ್ರಮ ಶುರು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.